Kangana-Taapsee: ‘ತಪ್ಪಡ್’ ನಟಿ ತಾಪ್ಸಿಯ ಒಂದೇ ಮಾತಿಗೆ ತಣ್ಣಗಾದ್ರಾ ಬಾಲಿವುಡ್ ಕ್ವೀನ್ ಕಂಗನಾ..!?

ನನಗೆ ಹೆಚ್ಚಿನ ಸಂಭಾವನೆ ಕೊಡಲು ಸಾಧ್ಯವಿಲ್ಲದ ನಿರ್ಮಾಪಕರು ತಾಪ್ಸಿಯನ್ನು ತಮ್ಮ ಚಿತ್ರಕ್ಕೆ ತೆಗೆದುಕೊಳ್ಳುತ್ತಾರೆ. ತಾಪ್ಸಿ ಬಾಲಿವುಡ್​ನ ಬಿ ಗ್ರೇಡ್ ನಟಿ ಎಂದು ಕಿಚಾಯಿಸಿದ್ದರು. ಇದಕ್ಕೆ ತಾಪ್ಸಿ ಕೂಡ ಖಾರವಾಗೇ ಪ್ರತಿಕ್ರಿಯಿಸಿ ಕಂಗನಾಳ ಕಾಲೆಳೆದಿದ್ದರು. ಈಗ ಅದೆಲ್ಲಾ ಇತಿಹಾಸ. ಹಳೆಯದನ್ನೆಲ್ಲಾ ಮರೆತು ಇಬ್ಬರು ನಟಿಯರು ಒಂದಾಗಿರೋದು ಮಾತ್ರ ಸಿನಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

ಕಂಗನಾ ರನಾವತ್ ಮತ್ತು ತಾಪ್ಸಿ ಪನ್ನು

ಕಂಗನಾ ರನಾವತ್ ಮತ್ತು ತಾಪ್ಸಿ ಪನ್ನು

 • Share this:
  ಸಿನಿ ದುನಿಯಾದಲ್ಲಿ ನಟಿಯರ ನಡುವಿನ ಕೋಳಿ ಜಗಳ ಹೊಸದೇನು ಅಲ್ಲ. ಬಾಲಿವುಡ್​ ಫೇಮಸ್ ನಟಿಯರ ನಡುವಿನ ಕ್ಯಾಟ್ ಫೈಟ್ ಕೂಡ ಗೊತ್ತಿರುವ ವಿಷಯ. ಆದ್ರೆ ಹೊಸ ವಿಚಾರ ಏನಂದ್ರೆ ಮೊನ್ನೆವರೆಗು ಟ್ವೀಟ್ ಮೂಲಕವೇ ಒಬ್ಬರಿಗೊಬ್ಬರು ಟಾಂಗ್ ಕೊಡ್ತಿದ್ದ ಬಾಲಿವುಡ್ ನಟಿಯರಾದ ಕಂಗನಾ ರನಾವತ್ ಹಾಗೂ ತಾಪ್ಸಿ ಪನ್ನು ತಮ್ಮ ಮುನಿಸು ಮರೆತು ಒಂದಾಗಿದ್ದಾರೆ. ಪರಸ್ಪರ ಮೆಚ್ಚುಗೆಯ ಮಾತುಗಳನ್ನಾಡುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. 

  ನಟಿ ತಾಪ್ಸಿ ಪನ್ನು ತಮ್ಮ ತಪ್ಪಡ್ ಸಿನಿಮಾದ ನಟನೆಗಾಗಿ ಫಿಲಂಫೇರ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಪ್ರಶಸ್ತಿ ಸ್ವೀಕರಿಸಿ ವೇದಿಕೆ ಮೇಲೆ ಮಾತನಾಡಿದ ತಾಪ್ಸಿ, ನಟಿ ಕಂಗನಾರನ್ನು ಹೆಸರಿಸಿ ಧನ್ಯವಾದ ತಿಳಿಸಿದ್ದಾರೆ. ಇದಕ್ಕೆ ನಟಿ ಕಂಗನಾ ರನಾವತ್ ಕೂಡ ಹಳೆಯ ಜಗಳವನ್ನೆಲ್ಲಾ ಮರೆತು ಪ್ರತಿಕ್ರಿಯಿಸಿದ್ದು, ಈ ಪ್ರಶಸ್ತಿಗೆ ನೀನು ನಿಜವಾಗಿ ಅರ್ಹಳು ಎಂದು ಹೊಗಳಿದ್ದಾರೆ.

  ಹಿಂದಿ ಚಿತ್ರರಂಗದ ಪ್ರತಿಭಾನ್ವಿತ ನಟಿ ಎನಿಸಿಕೊಂಡಿರುವ ತಾಪ್ಸಿ ತಪ್ಪಡ್ ಸಿನಿಮಾದ ಮನೋಜ್ಞ ಅಭಿನಯಕ್ಕಾಗಿ 66ನೇ ಫಿಲಂಫೇರ್ ಅತ್ಯುತ್ತಮ ನಟಿ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅತ್ಯುತ್ತಮ ನಟಿ ಪ್ರಶಸ್ತಿಗಾಗಿ ತಾಪ್ಸಿ ಜೊತೆ ನಟಿ ದೀಪಿಕಾ ಪಡುಕೋಣೆ (ಚಪಾಕ್), ಕಂಗನಾ ರನಾವತ್ (ಪಂಗಾ), ಜಾಹ್ನವಿ ಕಪೂರ್ (ಗುಂಜನ್ಸಕ್ಸೆನಾ) ವಿದ್ಯಾ ಬಾಲನ್ (ಶಕುಂತಲಾ ದೇವಿ) ಕೂಡ ನಾಮನಿರ್ದೇಶನಗೊಂಡಿದ್ದರು. ಇವರನ್ನೆಲ್ಲಾ ಹಿಂದಿಕ್ಕಿ ಪ್ರಶಸ್ತಿ ಗೆದ್ದುಕೊಂಡ ಪನ್ನು ನಾಮನಿರ್ದೇಶನಗೊಂಡಿದ್ದ ಎಲ್ಲಾ ನಟಿಯರಿಗೂ ಧನ್ಯವಾದ ತಿಳಿಸಿದ್ದಾರೆ. ಈ ವೇಳೆ ಕಂಗನಾ ಹೆಸರನ್ನೂ ಉಲ್ಲೇಖಿಸಿ ಉತ್ತಮ ನಟನೆಯ ಮಿತಿಯನ್ನು ಮತ್ತಷ್ಟು ಹಿಗ್ಗಿಸಿದ್ದಕ್ಕೆ ಧನ್ಯವಾದ. ನಿಮ್ಮ ನಟನೆಯ ಸಾಮರ್ಥ್ಯ ವರ್ಷದಿಂದ ವರ್ಷಕ್ಕೆ ಅತ್ಯುತ್ತಮಗೊಳ್ಳುತ್ತಿದ್ದು, ಅದು ನನ್ನನ್ನು ಇನ್ನಷ್ಟು ಒಳ್ಳೆಯ ನಟನೆಗೆ ಪ್ರೇರೇಪಿಸಿದೆ ಎಂದಿದ್ದಾರೆ. ತಾಪ್ಸಿಯ ಈ ವಿಡಿಯೋವನ್ನು ಅಭಿಮಾನಿಯೊಬ್ಬರು ಕಂಗನಾಗೆ ಟ್ಯಾಗ್ ಮಾಡಿದ್ದರು. ಇದನ್ನು ಕಂಡಕೂಡಲೇ ಪ್ರತಿಕ್ರಿಯಿಸಿದ ಕಂಗನಾ ಹಳೆಯ ಜಗಳವನ್ನೆಲ್ಲಾ ಮರೆತು ತಾಪ್ಸಿಯನ್ನು ಹೊಗಳಿದ್ದಾರೆ.  ಇದನ್ನು ಓದಿ: Kangana Ranaut: ಸೀಕ್ರೆಟ್ ಕಾಲ್ ಮೂಲಕ ತಲೈವಿ ಸಿನಿಮಾ ಹೊಗಳಿದ ಅಕ್ಷಯ್ ಕುಮಾರ್; ಮೂವಿ ಮಾಫಿಯಾ ವಿರುದ್ಧ ಗುಡಗಿದ ಕಂಗನಾ

  ಫಿಲಂಫೇರ್ ಪ್ರಶಸ್ತಿಗೆ ದೀಪಿಕಾ, ಜಾಹ್ನವಿ, ವಿದ್ಯಾ ಬಾಲನ್ ಹಾಗೂ ನನಗಿಂತ ನೀನೇ ಹೆಚ್ಚು ಅರ್ಹಳು ಎಂದು ಮನತುಂಬಿ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದಾರೆ. ಕಂಗನಾ ರನಾವತ್ ಇತ್ತೀಚೆಗಷ್ಟೇ ಪಂಗಾ ಹಾಗೂ ಮಣಿಕರ್ನಿಕಾ ಸಿನಿಮಾದ ನಟನೆಗಾಗಿ ಅತ್ಯುತ್ತಮ ನಟಿ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದು ಅವರ 4ನೇ ರಾಷ್ಟ್ರೀಯ ಪ್ರಶಸ್ತಿಯಾಗಿದೆ.

  ಸುಶಾಂತ್ ವಿಷಯದಲ್ಲಿ ಕಿತ್ತಾಡಿಕೊಂಡಿದ್ದ ನಟಿಮಣಿಯರು!

  ಸದ್ಯ ತಾಪ್ಸಿ ಹಾಗೂ ಕಂಗನಾ ಪರಸ್ಪರ ಹೊಗಳುತ್ತಿದ್ದಾರೆ. ಆದರೆ ಕೆಲ ತಿಂಗಳುಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಇಬ್ಬರು ನಟಿಯರು ಪರಸ್ಪರ ಕಿತ್ತಾಡಿಕೊಂಡಿದ್ದರು. ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ವಿಚಾರದಲ್ಲಿ ತಾಪ್ಸಿ ಹಾಗೂ ಕಂಗನಾ ಮಧ್ಯೆ ಟ್ವೀಟ್ ವಾರೇ ನಡೆದಿತ್ತು. ಇನ್ನು ಪಾಪ್ಸಿ ಕಡಿಮೆ ಬೆಲೆಗೆ ಸಿಗುವ (ಸಸ್ಸಿ ಕಾಪಿ) ಕಂಗನಾ ಎಂಬರ್ಥದಲ್ಲಿ ಕ್ವೀನ್ ನಟಿ ಜರಿದಿದ್ದರು. ನನಗೆ ಹೆಚ್ಚಿನ ಸಂಭಾವನೆ ಕೊಡಲು ಸಾಧ್ಯವಿಲ್ಲದ ನಿರ್ಮಾಪಕರು ತಾಪ್ಸಿಯನ್ನು ತಮ್ಮ ಚಿತ್ರಕ್ಕೆ ತೆಗೆದುಕೊಳ್ಳುತ್ತಾರೆ. ತಾಪ್ಸಿ ಬಾಲಿವುಡ್​ನ ಬಿ ಗ್ರೇಡ್ ನಟಿ ಎಂದು ಕಿಚಾಯಿಸಿದ್ದರು. ಇದಕ್ಕೆ ತಾಪ್ಸಿ ಕೂಡ ಖಾರವಾಗೇ ಪ್ರತಿಕ್ರಿಯಿಸಿ ಕಂಗನಾಳ ಕಾಲೆಳೆದಿದ್ದರು. ಈಗ ಅದೆಲ್ಲಾ ಇತಿಹಾಸ. ಹಳೆಯದನ್ನೆಲ್ಲಾ ಮರೆತು ಇಬ್ಬರು ನಟಿಯರು ಒಂದಾಗಿರೋದು ಮಾತ್ರ ಸಿನಿ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದೆ.

  ವರದಿ: ಕಾವ್ಯಾ ವಿ
  Published by:HR Ramesh
  First published: