ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ ಟಾಲಿವುಡ್ ಸುಂದರಿ ಕಾಜಲ್

news18
Updated:August 8, 2018, 8:44 PM IST
ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ ಟಾಲಿವುಡ್ ಸುಂದರಿ ಕಾಜಲ್
news18
Updated: August 8, 2018, 8:44 PM IST
-ನ್ಯೂಸ್ 18 ಕನ್ನಡ

ನಟ ರಮೇಶ್ ಅರವಿಂದ್ ನಿರ್ದೇಶನದ 'ಬಟರ್​ಫ್ಲೈ' ಚಿತ್ರದಲ್ಲಿ ಖ್ಯಾತ ನಟಿ ಕಾಜಲ್ ಅಗರ್ವಾಲ್ ಅಭಿಸುತ್ತಿರುವುದು ಗೊತ್ತಿದೆ. ಇತ್ತೀಚೆಗೆ ಮೈಸೂರಿಗೆ ಭೇಟಿ ನೀಡಿದ್ದ ಕಾಜಲ್ ಅಲ್ಲಿ ಕೆಲ ಕಾಲ ಶೂಟಿಂಗ್​ನಲ್ಲೂ ತೊಡಗಿಸಿಕೊಂಡಿದ್ದರು. ರಮೇಶ್ ನಿರ್ದೇಶನದ ಚಿತ್ರವಾಗಿದ್ದರಿಂದ ಕಾಜಲ್ ಶೀಘ್ರದಲ್ಲೇ ಕನ್ನಡದಲ್ಲೂ ಕಾಣಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

ಇದೀಗ ಮತ್ತೊಮ್ಮೆ ಬೆಂಗಳೂರಿಗೆ ಬರಲಿದ್ದೇನೆಂದು ನಟಿ ಕಾಜಲ್ ತಿಳಿಸಿದ್ದಾರೆ. ಆದರೆ ಇದು ಯಾವುದೇ ಚಿತ್ರೀಕರಣಕ್ಕಾಗಿ ಅಲ್ಲವಂತೆ. ಆಗಸ್ಟ್ 11 ರಂದು ರಾಜಾಜಿನಗರದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬರುತ್ತಿರುವುದಾಗಿ 'ಮಗಧೀರ'ನ ಪ್ರೇಯಸಿ ತಿಳಿಸಿದ್ದಾರೆ.  ಶನಿವಾರ ಸಂಜೆ 4.30ಕ್ಕೆ ತನ್ನ ನೆಚ್ಚಿನ ನಗರಕ್ಕೆ ಭೇಟಿ ಕೊಡುವುದನ್ನು ವಿಡಿಯೋ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ.


ಸದ್ಯ ಮೂರು ಭಾಷೆಯಲ್ಲಿ ತಯಾರಾಗುತ್ತಿರುವ 'ಬಟರ್​ಫ್ಲೈ' ಚಿತ್ರದ ತೆಲುಗು ಅವತರಣಿಕೆಯಲ್ಲಿ ಕಾಜಲ್ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇದೇ ಪಾತ್ರವನ್ನು ಕನ್ನಡದಲ್ಲಿ ಪ್ಯಾರ್​ಗೆ ಆಗ್ಬುಟೈತೆ ನಟಿ ಪಾರುಲ್ ಯಾದವ್ ಮಾಡಲಿದ್ದಾರೆ. ಈ ಚಿತ್ರವು ಹಿಂದಿ ಬ್ಲಾಕ್​ಬ್ಲಸ್ಟರ್​ 'ಕ್ವೀನ್'​ ಚಿತ್ರದ ರಿಮೇಕಾಗಿದ್ದು, ತುಂಬಾ ದಿನಗಳ ಬಿಡುವಿನ ಬಳಿಕ ನಟ ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿದ್ದಾರೆ.
First published:August 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ