Kajol: ಆನ್​ಸ್ಕ್ರೀನ್ ಸೊಸೆಗೆ ಜಯಾ, ಅಮಿತಾಭ್ ಬಚ್ಚನ್ ಬಗ್ಗೆ ಐಶ್​ಗಿಂತ ಹೆಚ್ಚು ಕಾಳಜಿ!

ಇಲ್ಲಿ ಒಂದು ವಿಡಿಯೋ ಸುದ್ದಿ ಭಾರಿ ಮಾಡುತ್ತಿದ್ದು ಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಹಾಗೂ ಕಾಜೋಲ್ ಅವರದ್ದು. ಹೌದು.. ಈ ವಿಡಿಯೋದಲ್ಲಿ ಜಯಾ ಬಚ್ಚನ್ ಮತ್ತು ಅಮಿತಾಭ್ ಬಚ್ಚನ್ ಇಬ್ಬರು ಒಂದು ಪೂಜೆ ಕಾರ್ಯಕ್ರಮಕ್ಕೆ ಬಂದಿದ್ದು, ಅಲ್ಲಿ ನಟಿ ಕಾಜಲ್ ಅವರಿಬ್ಬರ ಬಗ್ಗೆ ವಿಶೇಷವಾದ ಕಾಳಜಿ ವಹಿಸುತ್ತಿರುವುದನ್ನು ನಾವು ನೋಡಬಹುದು.

ಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಹಾಗೂ ಕಾಜೋಲ್

ಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಹಾಗೂ ಕಾಜೋಲ್

  • Share this:
ಈ ಚಲನಚಿತ್ರಗಳಲ್ಲಿ ಅತ್ತೆ ಮಾವನ ಪಾತ್ರದಲ್ಲಿ ಹೆಚ್ಚಾಗಿ ಅಭಿನಯಿಸುವ ಹಿರಿಯ ನಟ ಮತ್ತು ನಟಿಯರ ಬಗ್ಗೆ ಆ ಚಿತ್ರದಲ್ಲಿ (Movies) ಅವರ ಮಗ ಅಥವಾ ಮಗಳ ಪಾತ್ರದಲ್ಲಿ ಮತ್ತು ಅಳಿಯ ಅಥವಾ ಸೊಸೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟ ಮತ್ತು ನಟಿಯರಿಗೆ ಒಂದು ಬೇರೆ ರೀತಿಯ ಪ್ರೀತಿ (Love) ಹುಟ್ಟುತ್ತದೆ. ಇನ್ನೂ ಕೆಲವು ಸಂದರ್ಭಗಳಲ್ಲಿ ಒಬ್ಬ ನಟ ಅಥವಾ ನಟಿಗೆ ಒಂದಲ್ಲ, ಎರಡಲ್ಲ ಅನೇಕ ಚಿತ್ರಗಳಲ್ಲಿ ಆ ಹಿರಿಯ ನಟ ಮತ್ತು ನಟಿಯರೊಂದಿಗೆ ಅಭಿನಯಿಸುವ (Acting) ಅವಕಾಶ ಸಿಕ್ಕಿರುತ್ತದೆ. ಹೀಗಾದಲ್ಲಿ ಆ ಯುವ ನಟ ಮತ್ತು ನಟಿಯರಿಗೆ ಅವರಿಂದ ಕಲಿತುಕೊಳ್ಳಲು ಸಹ ತುಂಬಾನೇ ಸಿಗುತ್ತದೆ ಮತ್ತು ಅವರ ಮಧ್ಯೆ ಒಂದು ಅವಿನಾಭಾವ ಸಂಬಂಧ (Relationship) ಸಹ ಏರ್ಪಡುತ್ತದೆ. 

ಆನ್‌ಸ್ಕ್ರೀನ್ ಅತ್ತೆ ಮಾವನ ಕಾಳಜಿ ವಹಿಸಿದ ನಟಿ 
ಹೀಗೆ ಎಲ್ಲಾ ಚಿತ್ರೋದ್ಯಮದಲ್ಲಿಯೂ ಸಹ ಇಂತಹ ಆನ್‌ಸ್ಕ್ರೀನ್ ತಂದೆ-ಮಗ, ತಂದೆ-ಮಗಳು, ತಾಯಿ-ಮಗ, ತಾಯಿ-ಮಗಳು, ಅತ್ತೆ-ಮಾವ ಮತ್ತು ಸೊಸೆ-ಅಳಿಯ ಹೀಗೆ ಜೋಡಿಗಳು ತುಂಬಾನೇ ಇರುತ್ತವೆ. ಬಾಲಿವುಡ್ ಅಂತ ಬಂದರೆ ಅಲ್ಲಿ ಬಿಗ್ ಬಿ ಅಮಿತಾಭ್ ಬಚ್ಚನ್ ಮತ್ತು ಜಯಾ ಬಚ್ಚನ್ ಇಬ್ಬರು ನಿಜ ಜೀವನದಲ್ಲಿ ಗಂಡ ಹೆಂಡತಿಯಾಗಿದ್ದು, ಕೆಲವು ಚಿತ್ರಗಳಲ್ಲಿಯೂ ಗಂಡ ಹೆಂಡತಿ ಆಗಿ ನಟಿಸಿದ್ದಾರೆ.

ಇದನ್ನೂ ಓದಿ: Bigg Boss 16: ಹೇಗಿರಲಿದೆ ಗೊತ್ತಾ ಬಿಗ್ ಬಾಸ್ 16? ಪ್ರೋಮೋದಲ್ಲಿ ಸಲ್ಲು ಕೊಟ್ರು ನೋಡಿ ಟ್ವಿಸ್ಟ್

ಇವರ ಜೊತೆ ಸ್ವಲ್ಪ ಹೆಚ್ಚಾಗಿ ಕಾಣಿಸಿಕೊಂಡಂತಹ ಒಬ್ಬ ನಟಿ ಎಂದರೆ ಅವರು ಕಾಜೋಲ್. ಇಲ್ಲಿ ಒಂದು ವಿಡಿಯೋ ಸುದ್ದಿ ಮಾಡಿರುವುದು ಸಹ ಈ ಮೂವರು ಜನಪ್ರಿಯ ನಟರದ್ದೇ. ಹೌದು.. ಈ ವಿಡಿಯೋದಲ್ಲಿ ಜಯಾ ಬಚ್ಚನ್ ಮತ್ತು ಅಮಿತಾಭ್ ಬಚ್ಚನ್ ಇಬ್ಬರು ಒಂದು ಪೂಜೆ ಕಾರ್ಯಕ್ರಮಕ್ಕೆ ಬಂದಿದ್ದು, ಅಲ್ಲಿ ನಟಿ ಕಾಜಲ್ ಅವರಿಬ್ಬರ ಬಗ್ಗೆ ವಿಶೇಷವಾದ ಕಾಳಜಿ ವಹಿಸುತ್ತಿರುವುದನ್ನು ನಾವು ನೋಡಬಹುದು.

ಅಮಿತಾಬ್ ಬಚ್ಚನ್ ಜೊತೆ ಪ್ರೀತಿಯಿಂದ ಮಾತನಾಡಿಸಿದ ಕಾಜೋಲ್ 
ನಟಿ ಕಾಜೋಲ್ ಅವರು ಈ ಇಬ್ಬರೂ ಹಿರಿಯ ನಟರೊಂದಿಗೆ ಕೆಲವು ಗಮನಾರ್ಹ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಈ ಮೂರು ನಿಮಿಷದ ವಿಡಿಯೋದಲ್ಲಿ ಕಾಜೋಲ್ ಅವರು ತನ್ನ ಸ್ವಂತ ಹೆತ್ತವರಂತೆ ಈ ಇಬ್ಬರನ್ನು ನೋಡಿಕೊಳ್ಳುವುದನ್ನು ನಾವು ನೋಡಬಹುದು. ವಿಡಿಯೋದ ಪ್ರಾರಂಭದಲ್ಲಿ ಅಮಿತಾಭ್ ಅವರ ಜೊತೆ ಕಾಜೋಲ್ ಪ್ರೀತಿಯಿಂದ ಮಾತಾಡಿಸಿದ ನಂತರ ಅಲ್ಲಿ ಪೂಜೆಯಲ್ಲಿ ಬಂದು ಕುಳಿತುಕೊಳ್ಳುವಾಗ ಜಯಾ ಬಚ್ಚನ್ ಅವರ ಕೈ ಹಿಡಿದುಕೊಂಡು ನೆಲದ ಮೇಲೆ ಕುಳಿತುಕೊಳ್ಳಲು ಸಹಾಯ ಮಾಡುತ್ತಿರುವುದನ್ನು ನಾವು ನೋಡಬಹುದು.

[embed]https://youtu.be/H8qu9GIbUJQ[/embed]

ಕಾಜೋಲ್ ಅವರ ಸಿನಿರಂಗದ ಬಗ್ಗೆ ಒಂದಿದ್ತು ಮಾಹಿತಿ 
ನಟಿ ಕಾಜೋಲ್ ಅವರು 1992 ರಲ್ಲಿ ‘ಬೆಖುದೀ’ ಚಿತ್ರದಲ್ಲಿ ನಟಿಸುವುದರೊಂದಿಗೆ ಬಾಲಿವುಡ್ ಗೆ ಪಾದಾರ್ಪಣೆ ಮಾಡಿದ್ದು, 2020 ರಲ್ಲಿ ತೆರೆಕಂಡಂತಹ ‘ತಾನಾಜೀ’ ಚಿತ್ರದವರೆಗೆ ಅನೇಕ ರೀತಿಯ ವಿಭಿನ್ನವಾದ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಮೊದಲೆಲ್ಲಾ ಕಾಜೋಲ್ ಅವರು ‘ಕುಚ್ ಕುಚ್ ಹೋತಾ ಹೈ’ ಚಿತ್ರದ ಅಂಜಲಿ ಪಾತ್ರ ಮತ್ತು ‘ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ’ ಚಿತ್ರದ ಸಿಮ್ರನ್ ಪಾತ್ರಗಳಲ್ಲಿ ಅಭಿನಯಿಸಿ ನಂತರ ‘ಕಭೀ ಖುಷಿ ಕಭೀ ಘಮ್’ ಚಿತ್ರದಲ್ಲಿ ಅಮಿತಾಭ್ ಮತ್ತು ಜಯಾಗೆ ಸೊಸೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

ಇದನ್ನೂ ಓದಿ: Urfi Javed: ಇಲ್ನೋಡ್ರಿ ಈಕೆಗೆ​ ಉರ್ಫಿನೇ ಸ್ಫೂರ್ತಿ ಅಂತೆ! 12 ವರ್ಷದ ಹುಡುಗಿ ಅವತಾರ ಕಂಡು ನೆಟ್ಟಿಗರು ಶಾಕ್​

ಇವರಿಗೆ ಆರು ಫಿಲ್ಮ್‌ಫೇರ್ ಪ್ರಶಸ್ತಿಗಳು ಲಭಿಸಿದ್ದು, ಭಾರತ ಸರ್ಕಾರದಿಂದ ಇವರಿಗೆ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಸಹ ಗೌರವಿಸಲಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಈಗ ಮತ್ತೊಮ್ಮೆ ಕಾಜೋಲ್ ಅವರು ಅಮೆರಿಕನ್ ವೆಬ್ ಸಿರೀಸ್ ಆದ ‘ಗುಡ್ ವೈಫ್’ ಅನ್ನು ಭಾರತದ ಹಿನ್ನಲೆಯ ಕಥೆಯ ಮೂಲಕ ಮತ್ತೆ ತಮ್ಮ ನಟನೆಯ ವೃತ್ತಿಯನ್ನು ಪ್ರಾರಂಭಿಸಲಿದ್ದಾರೆ ಎಂದು ಈ ಹಿಂದೆ ಪಿಂಕ್ ವಿಲ್ಲಾ ವರದಿ ಮಾಡಿತ್ತು.
Published by:Ashwini Prabhu
First published: