• Home
  • »
  • News
  • »
  • entertainment
  • »
  • Kajal Aggarwal ಪ್ರೆಗ್ನೆನ್ಸಿ ವರ್ಕೌಟ್‌ ವಿಡಿಯೋ ನೋಡಿ! ಅಮ್ಮನಾಗುವ ಬಗ್ಗೆ ಆಕೆ ಹೇಳಿದ್ದೇನು?

Kajal Aggarwal ಪ್ರೆಗ್ನೆನ್ಸಿ ವರ್ಕೌಟ್‌ ವಿಡಿಯೋ ನೋಡಿ! ಅಮ್ಮನಾಗುವ ಬಗ್ಗೆ ಆಕೆ ಹೇಳಿದ್ದೇನು?

ಕಾಜಲ್ ಅಗರ್ವಾಲ್ ವರ್ಕೌಟ್ ಫೋಟೋಸ್

ಕಾಜಲ್ ಅಗರ್ವಾಲ್ ವರ್ಕೌಟ್ ಫೋಟೋಸ್

ಕಾಜಲ್ ಅಗರ್ವಾಲ್ ಪ್ರೆಗ್ನೆನ್ಸಿ ವರ್ಕ್‌ಔಟ್ಮಾಡುತ್ತಾ, ತಮ್ಮ ಹಾಗೂ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಇದೀಗ ಅವರ ಪ್ರೆಗ್ನೆನ್ಸಿ ವರ್ಕ್ಔಟ್ ವಿಡಿಯೋ ಹಾಗೂ ಫೋಟೋಗಳು ಸಖತ್ ವೈರಲ್ ಆಗಿವೆ.

  • Share this:

ತೆಲುವು ಚಿತ್ರರಂಗದ ಸುರಸುಂದರಿಯರಲ್ಲಿ ಒಬ್ಬರಾದ, ಬ್ಯೂಟಿ ಕ್ವೀನ್ ಕಾಜಲ್ ಅಗರ್ವಾಲ್ (Kajal Aggarwal) ಸಿನಿಮಾ (Cinema) ಮಾಡದಿದ್ದರೂ ಸಖತ್ ಸುದ್ದಿ ಮಾಡುತ್ತಲೇ ಇದ್ದಾರೆ. ಅವರು ಅವರು ಒಂದು ಕಾಲದಲ್ಲಿ ಎಲ್ಲ ಚಿತ್ರರಂಗವನ್ನು ರೂಲ್​ ಮಾಡಿದವರು. ಮಗಧೀರನ ಬೆಡಗಿ ಬಹುಬೇಡಿಕೆಯ ನಟಿಯಾಗಿ ಮಿಂಚಿದವರು. ಆಕೆಯ ಸೌಂದರ್ಯಕ್ಕೆ ಸಿನಿರಸಿಕರು ಮನಸೋತಿದ್ದರು. ಮದುವೆ (Marriage) ಆದ ಬಳಿಕವೂ ಕಾಜಲ್​ ಅಗರ್​ವಾಲ್​ ಕೆಲ ಚಿತ್ರಗಳಲ್ಲಿ ನಟಿಸಿದ್ದರು. ಆದರೆ, ಇತ್ತೀಚೆಗೆ ಸಿನಿಮಾರ ರಂಗದಿಂದ ಬ್ರೇಕ್ ​(Break) ತೆಗೆದುಕೊಂಡಿದ್ದರು. ಕಾಜಲ್​ ಅಗರ್​ವಾಲ್​ ತಾಯಿಯಾಗ್ತಿದ್ದಾರೆ ಎಂಬ ವಂದತಿಗಳು ಕೇಳಿಬಂದಿತ್ತು.  ಕೆಲ ದಿನಗಳ ಹಿಂದಷ್ಟೇ ಕಾಜಲ್​ ಅಗರ್​ವಾಲ್​ ಹಾಗೂ ಅವರ ಪತಿ ಗೌತಮ್ (Gautham)​ ಅಧಿಕೃತವಾಗಿ ಗುಡ್ ನ್ಯೂಸ್ (Good News) ಕೊಟ್ಟಿದ್ದರು. ಇದೀಗ ಕಾಜಲ್ ಅಗರ್ವಾಲ್ ಪ್ರೆಗ್ನೆನ್ಸಿ ವರ್ಕ್‌ಔಟ್ (Pregnancy Workout) ಮಾಡುತ್ತಾ, ತಮ್ಮ ಹಾಗೂ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿದ್ದಾರೆ. ಇದೀಗ ಅವರ ಪ್ರೆಗ್ನೆನ್ಸಿ ವರ್ಕ್ಔಟ್ ವಿಡಿಯೋ ಹಾಗೂ ಫೋಟೋಗಳು ಸಖತ್ ವೈರಲ್ ಆಗಿವೆ.


ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಾಜಲ್, ಗೌತಮ್ ದಂಪತಿ


ನಟಿ ಕಾಜಲ್ ಅಗರ್ವಾಲ ಅವರು ಉದ್ಯಮಿ ಗೌತಮ್ ರಿಚ್ಲು ಅವರನ್ನು ವರಿಸಿದ್ದರು. ಸಿನಿಮಾ ಬಳಿಕ ಅಲ್ಲೊಂದು, ಇಲ್ಲೊಂದು ಸಿನಿಮಾದಲ್ಲಿ ನಟಿಸಿ, ಸಕ್ರಿಯ ನಟನೆಯಿಂದ ದೂರವಾಗಿದ್ದರು. ಇದೀಗ ತಮ್ಮ ಪತಿ ಗೌತಮ್ ಕಿಚ್ಲು ಅವರೊಂದಿಗೆ ತನ್ನ ಮೊದಲ ಮಗುವನ್ನು ಸ್ವಾಗತಿಸಲು ಕಾಜಲ್ ಅಗರ್ವಾಲ್ ಸಜ್ಜಾಗಿದ್ದಾರೆ. ಇದಕ್ಕಾಗಿ ಹೆರಿಗೆ ಪೂರ್ವ ವ್ಯಾಯಾಮದ ಅಥವಾ ಪ್ರೆಗ್ನೆನ್ಸಿ ವರ್ಕ್ಔಟ್‌  ವ್ಯಾಯಾಮದಲ್ಲಿ ತೊಡಗಿದ್ದಾರೆ.


ಇನ್ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡ ಕಾಜಲ್ ಅಗರ್ವಾಲ್


ನಟಿ ಕಾಜಲ್ ಅಗರ್ವಾಲ್ ತಮ್ಮ ಪ್ರೆಗ್ನೆನ್ಸಿ ವರ್ಕೌಟ್ ವಿಡಿಯೋಗಳನ್ನು ತಮ್ಮ ಇನ್ಸ್ಟಾದಲ್ಲಿ ಹಂಚಿ ಕೊಂಡಿದ್ದಾರೆ. “ನಾನು ಯಾವಾಗಲೂ ತುಂಬಾ ಸಕ್ರಿಯ ವ್ಯಕ್ತಿಯಾಗಿದ್ದೇನೆ ಮತ್ತು ನನ್ನ ಇಡೀ ಜೀವನವನ್ನು ಕೆಲಸ ಮಾಡುತ್ತಲೇ ಕಳೆದಿದ್ದೇನೆ. ಇದೀಗ ಗರ್ಭಾವಸ್ಥೆ ಎನ್ನುವುದು ವಿಭಿನ್ನ ಚೆಂಡಿನ ಆಟ ಅಂತ ನನಗೆ ಅನಿಸುತ್ತಿದೆ” ಅಂತ ಹೇಳಿದ್ದಾರೆ.


ಇದನ್ನೂ ಓದಿ: Amulya: ಗುಡ್​​ನ್ಯೂಸ್​.. ಡಬಲ್​ ಧಮಾಕ! ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ನಟಿ ಅಮೂಲ್ಯ


ಗರ್ಭಿಣಿಯರಿಗೆ ಕಾಜಲ್ ಕಿವಿಮಾತು


ತೊಡಕುಗಳಿಲ್ಲದೆ ಗರ್ಭಿಣಿಯಾಗಿರುವ ಎಲ್ಲಾ ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ಆರೋಗ್ಯಕರ ಜೀವನಶೈಲಿಯ ಭಾಗವಾಗಿ ಏರೋಬಿಕ್ ಮತ್ತು ಶಕ್ತಿ ಕಂಡೀಷನಿಂಗ್ ವ್ಯಾಯಾಮಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕು ಅಂತ ಕಾಜಲ್ ಹೇಳಿದ್ದಾರೆ. ಗರ್ಭಾವಸ್ಥೆಯಲ್ಲಿ ಏರೋಬಿಕ್ ಕಂಡೀಷನಿಂಗ್‌ನ ಗುರಿಯು ಗರಿಷ್ಠ ಫಿಟ್‌ನೆಸ್ ಅನ್ನು ತಲುಪಲು ಪ್ರಯತ್ನಿಸದೆ ಹೆರಿಗೆ ಹಾಗೂ ಅದರ ನಂತರವೂ ಉತ್ತಮ ಫಿಟ್‌ನೆಸ್ ಮಟ್ಟವನ್ನು ಕಾಪಾಡಿಕೊಳ್ಳುವುದಾಗಿದೆ ಅಂತ ಹೇಳಿದ್ದಾರೆ.


“ನನ್ನ ಈ ಪೋಸ್ಟ್ ಜಾಹೀರಾತು ಅಲ್ಲ, ಇದೊಂದು ಸಲಹೆ”


ತನ್ನ ಪೋಸ್ಟ್ ಜಾಹೀರಾತು ಅಲ್ಲ ಎಂದು ದೃಢಪಡಿಸಿದ ಕಾಜಲ್ ಅಗರ್ವಾಲ್, ಶೀಘ್ರದಲ್ಲೇ ತಾಯಂದಿರಾಗಲಿರುವ ಮಹಿಳೆಯರಿಗೆ ಟಿಪ್ಸ್ ನೀಡುತ್ತಿದ್ದೇನೆ ಎಂದಿದ್ದಾರೆ. ಯಾವುದೇ ತೊಂದರೆಗಳಿಲ್ಲದ, ಏರೋಬಿಕ್ ಮತ್ತು ಶಕ್ತಿ ಕಂಡೀಷನಿಂಗ್ ವ್ಯಾಯಾಮಗಳನ್ನು ತೆಗೆದುಕೊಳ್ಳುವಂತೆ ಗರ್ಭಿಣಿಯರಿಗೆ ಕಾಜಲ್ ಕಿವಿಮಾತು ಹೇಳಿದ್ದಾರೆ.


ಇದನ್ನೂ ಓದಿ: Priyanka Chopra: ಮಗಳಿಗೆ ಮುದ್ದಾದ ಹೆಸರು ಹುಡುಕ್ತಿದ್ದಾರಂತೆ ಪ್ರಿಯಾಂಕಾ ಚೋಪ್ರಾ-ನಿಕ್​!


ನೇರಳೆ ಜಾಕೆಟ್‌ನಲ್ಲಿ ಮಿಂಚಿದ ಮುದ್ದು ಮುಖದ ನಟಿ


ಕಾಜಲ್ ಅಗರ್ವಾಲ್ ತಮ್ಮ ಪ್ರೆಗ್ನೆನ್ಸಿ ವಿಡಿಯೋದಲ್ಲಿ ತಾಲೀಮು ಅವಧಿಗಾಗಿ ನೀಲಿಬಣ್ಣದ ನೇರಳೆ ಬಣ್ಣದ ಜಾಕೆಟ್‌ನೊಂದಿಗೆ ಪುಡಿ ನೀಲಿ ವರ್ಕ್‌ಔಟ್ ಗೇರ್‌ ಧರಿಸಿ ಮಿಂಚಿದ್ದಾರೆ.


ವಿಡಿಯೋ ನೋಡಿ:



ಈ ವಿಡಿಯೋ ಹಾಗೂ ಫೋಟೋಗಳು ಇದೀಗ ವೈರಲ್ ಆಗಿವೆ. ಇದನ್ನು ನೋಡಿದ ಕಾಜಲ್ ಅಭಿಮಾನಿಗಳು ಲೈಕ್ ಮಾಡುತ್ತಿದ್ದಾರೆ. ಹಲವರು ಕಾಮೆಂಟ್‌ ಮಾಡಿ, ಮೊದಲ ಕಂದನ ಆಗಮನಕ್ಕೆ ತಮ್ಮ ನೆಚ್ಚಿನ ನಟಿಗೆ ಶುಭಾಶಯ ಕೋರಿದ್ದಾರೆ.

Published by:Annappa Achari
First published: