• Home
  • »
  • News
  • »
  • entertainment
  • »
  • Jaya Bachchan: ಮಹಿಳೆಯರಿಗೆ ಮಹಿಳೆಯರೇ ವೈರಿಗಳು ಅಂತ ನಟಿ ಜಯಾ ಬಚ್ಚನ್ ಹೇಳಿದ್ದೇಕೆ? ಇಲ್ಲಿದೆ ನೋಡಿ ಕಾರಣ

Jaya Bachchan: ಮಹಿಳೆಯರಿಗೆ ಮಹಿಳೆಯರೇ ವೈರಿಗಳು ಅಂತ ನಟಿ ಜಯಾ ಬಚ್ಚನ್ ಹೇಳಿದ್ದೇಕೆ? ಇಲ್ಲಿದೆ ನೋಡಿ ಕಾರಣ

ಜಯಾ ಬಚ್ಚನ್​

ಜಯಾ ಬಚ್ಚನ್​

ಜನರು ತಮ್ಮ ಗಂಡು ಮಕ್ಕಳನ್ನು ಮನೆಯಲ್ಲಿ ಹೇಗೆ ಬೆಳೆಸುತ್ತಾರೋ, ಅದೇ ರೀತಿಯಲ್ಲಿಯೇ ತಮ್ಮ ಹೆಣ್ಣುಮಕ್ಕಳನ್ನು ಸಹ ಬೆಳೆಸಬೇಕು ಎಂಬ ವಿಚಾರದ ಬಗ್ಗೆ ಜಯಾ ಅವರ ಮೊಮ್ಮಗಳು ನವ್ಯಾ ಮಾತನಾಡಿದ್ದಾರೆ.

  • Share this:

ಬಾಲಿವುಡ್ ನಲ್ಲಿ (Bollywood) ಸ್ವಲ್ಪವೂ ಭಯವಿಲ್ಲದೆ, ತಮ್ಮ ಮನಸ್ಸಿಗೆ ತೋಚಿದ ಹಾಗೆ ಮಾತಾಡುವವರ ಪೈಕಿ ನಟಿ ಜಯಾ ಬಚ್ಚನ್ ಸಹ ಒಬ್ಬರು ಅಂತ ಹೇಳಬಹುದು. ಹೌದು ಜಯಾ ಅವರು ಆಗಾಗ್ಗೆ ತಮ್ಮ ಮನಸ್ಸಿನಲ್ಲಿ (Mind) ಏನಿದೆಯೋ, ಅದನ್ನೆ ಎಲ್ಲರ ಮುಂದೆ ಓಪನ್ (Open) ಆಗಿ ಮಾತಾಡುತ್ತಾರೆ. ಹೀಗೆ ತಮಗೆ ಅನ್ನಿಸಿದ್ದನ್ನ ಹಾಗೆಯೇ ಹೇಳುವುದರಿಂದಲೇ ಅನ್ನಿಸುತ್ತೆ ಜಯಾ ಅನೇಕ ಬಾರಿ ಜನರ (People) ಕೋಪಕ್ಕೂ ಸಹ ಗುರಿಯಾಗುತ್ತಾರೆ.


ಈ ಹಿಂದೆ ಸಹ ಯಾವುದೋ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬರುತ್ತಿದ್ದ ಜಯಾ ಅವರ ಫೋಟೋಗಳನ್ನು ತೆಗೆಯಲು ಛಾಯಾಗ್ರಾಹಕರು ತಾ ಮುಂದು ನಾ ಮುಂದು ಅಂತ ಹೇಳಿ ಬರುತ್ತಿದ್ದಾಗ, ಜಯಾ ಖಡಕ್ ಆಗಿಯೇ ‘ನೀವು ಬೀಳುವುದು ಗ್ಯಾರೆಂಟಿ’ ಅಂತ ಹೇಳಿದ್ದು ನಮಗೆಲ್ಲಾ ನೆನಪಿರುತ್ತದೆ. ದೀಪಾವಳಿ ಹಬ್ಬದ ಸಂದರ್ಭದಲ್ಲೂ ಸಹ ಹೀಗೆ ಛಾಯಾಗ್ರಾಹಕರ ಮೇಲೆ ಯಾವುದೋ ಕೋಪಕ್ಕೆ ಗರಂ ಆಗಿದ್ದನ್ನು ನಾವು ಸುದ್ದಿಯಲ್ಲಿ ನೋಡಿದ್ದೆವು. ಆದರೆ ಈಗ ಮತ್ತೆ ಸುದ್ದಿಯಲ್ಲಿರುವುದು ಹೆಣ್ಣುಮಕ್ಕಳ ಬಗ್ಗೆ ಮಾತಾಡಿದ್ದಕ್ಕೆ ಅಂತ ಹೇಳಬಹುದು.


ಹೆಣ್ಣುಮಕ್ಕಳ ಬಗ್ಗೆ ನಟಿ ಜಯಾ ಹೇಳಿದ್ದೇನು?
ಇತ್ತೀಚೆಗೆ, ಅವರು ತಮ್ಮ ಮಗಳು ಶ್ವೇತಾ ಬಚ್ಚನ್ ಮತ್ತು ಮೊಮ್ಮಗಳು ನವ್ಯಾ ನವೇಲಿ ನಂದಾ ಅವರೊಂದಿಗೆ ಒಂದು ಪಾಡ್ಕಾಸ್ಟ್ ಗಾಗಿ ಮಾತನಾಡುತ್ತಿದ್ದಾಗ ಮಹಿಳೆಯರಿಗೆ ಮಹಿಳೆಯರೇ ಶತ್ರುಗಳು ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.


ಮೊಮ್ಮಗಳ ಮಾತಿನ ಮಧ್ಯ ಪ್ರವೇಶ
ಜನರು ತಮ್ಮ ಗಂಡು ಮಕ್ಕಳನ್ನು ಮನೆಯಲ್ಲಿ ಹೇಗೆ ಬೆಳೆಸುತ್ತಾರೋ, ಅದೇ ರೀತಿಯಲ್ಲಿಯೇ ತಮ್ಮ ಹೆಣ್ಣುಮಕ್ಕಳನ್ನು ಸಹ ಬೆಳೆಸಬೇಕು ಎಂಬ ವಿಚಾರದ ಬಗ್ಗೆ ಜಯಾ ಅವರ ಮೊಮ್ಮಗಳು ನವ್ಯಾ ಮಾತನಾಡುತ್ತಿದ್ದರು. ನಟಿ ಜಯಾ ಅವರು ತಮ್ಮ ಮೊಮ್ಮಗಳ ಮಾತಿನ ಮಧ್ಯ ಪ್ರವೇಶಿಸಿ "ವಿದ್ಯಾವಂತ ಮಹಿಳೆಯರೂ ಸಹ ದ್ವಂದ್ವ ಮಾನದಂಡಗಳನ್ನು ಹೊಂದಿದ್ದಾರೆ, ಇದು ತುಂಬಾ ದುಃಖಕರವಾಗಿದೆ. ನಾನು ಅದನ್ನು ಕೆಲವೊಮ್ಮೆ ಹೇಳಲು ಬಯಸುತ್ತೇನೆ, ಆದರೆ ಅದನ್ನು ಹೇಳುವುದರಲ್ಲಿ ನನಗೆ ಯಾವುದೇ ರೀತಿಯ ಸಂತೋಷವಿಲ್ಲ, ಆದರೆ ಕೆಲವೊಮ್ಮೆ ಮಹಿಳೆಯರಿಗೆ ಮಹಿಳೆಯರೇ ದೊಡ್ಡ ಶತ್ರುಗಳು" ಎಂದು ಹೇಳಿದರು.


ಇದನ್ನೂ ಓದಿ: ನಮ್ಮಮ್ಮ ಸೂಪರ್ ಸ್ಟಾರ್ ಸೀಸನ್ 2ಗೆ ವಂಶಿಯೇ ಬಾಸ್! ಸ್ಪರ್ಧಿಗಳ ಕಾಲೆಳೆದಿದ್ದು ಹೇಗೆ ಗೊತ್ತಾ?


ಮಗಳು ಶ್ವೇತಾಗೆ ತಾಯಿ ಜಯಾ ಅಷ್ಟು ಒಳ್ಳೆಯವರಲ್ವಂತೆ
ಶ್ವೇತಾ ಅವರು "ಮಹಿಳೆಯರು ಇತರ ಮಹಿಳೆಯರೊಂದಿಗೆ ಉತ್ತಮವಾಗಿರಬೇಕು ಮತ್ತು ಇತರ ಮಹಿಳೆಯರಿಗೆ ಹೆಚ್ಚು ಬೆಂಬಲವನ್ನು ಸಹ ನೀಡಬೇಕು" ಎಂದು ಈ ಹಿಂದೆ ಸಂಚಿಕೆಯಲ್ಲಿ ಹಂಚಿಕೊಂಡಂತೆ ತನ್ನ ತಾಯಿ ತನ್ನ ಜೊತೆಯಲ್ಲಿ ಅಷ್ಟೊಂದೇನು ಒಳ್ಳೆಯವಳಲ್ಲ ಎಂದು ಉಲ್ಲೇಖಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಜಯಾ ಬಚ್ಚನ್ ಅವರು "ನಾನು ನವ್ಯಾಗೆ ತುಂಬಾ ಒಳ್ಳೆಯವಳು. ನಾನು ಯಾವಾಗಲೂ ಇತರ ಮಹಿಳೆಯರಿಗೆ ಸಹಾಯ ಮಾಡುತ್ತೇನೆ ಮತ್ತು ಯಾವಾಗಲೂ ಅವರ ಪರವಾಗಿ ಮಾತನಾಡುತ್ತೇನೆ. ನಾವು ತಾಯಿ ಮತ್ತು ಮಗಳ ಬಗ್ಗೆ ಮಾತನಾಡಬಾರದು" ಎಂದು ಹೇಳಿದರು.


ಇಷ್ಟಕ್ಕೆ ಸುಮ್ಮನಾಗದ ಶ್ವೇತಾ "ಇತರ ಮಹಿಳೆಯರಿಗೆ ಸಹಾಯ ಮಾಡದ ಮಹಿಳೆಯರಿಗೆ ನರಕದಲ್ಲಿ ವಿಶೇಷ ಸ್ಥಾನವಿದೆ" ಎಂದು ಮೆಡಲೀನ್ ಕೆ ಆಲ್ಬ್ರೈಟ್ ಉಲ್ಲೇಖಿಸಿದ್ದಾರೆ. ದಾನವು ಮನೆಯಿಂದಲೇ ಪ್ರಾರಂಭವಾಗಬೇಕು, ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಜಯಾ "ಓಹ್ ಸಾಕು ಮಾಡು ಬಾಯಿ ಮುಚ್ಚು" ಅಂತ ಹೇಳಿದರು.


ತಾಯಿ ಶ್ವೇತಾ ಅಜ್ಜಿ ಜಯಾಗಿಂತ ಏನೂ ಭಿನ್ನವಾಗಿಲ್ವಂತೆ
ಜಯಾ ಅವರ ಮೊಮ್ಮಗಳು ನವ್ಯಾ ಮಧ್ಯಪ್ರವೇಶಿಸಿ, ತನ್ನ ತಾಯಿ ಶ್ವೇತಾ ಅವರು ಅಜ್ಜಿ ಜಯಾಗಿಂತ ಏನೂ ಭಿನ್ನವಾಗಿಲ್ಲ ಎಂದು ಹೇಳಿದರು. ಇದಕ್ಕೆ ಉತ್ತರಿಸಿದ ಜಯಾ ಅವರು ಶ್ವೇತಾ ತನ್ನ ಮಗಳು ನವ್ಯಾಳನ್ನು ತನ್ನ "ಪಂಚಿಂಗ್ ಬ್ಯಾಗ್" ಎಂದು ಪರಿಗಣಿಸುತ್ತಾಳೆ ಎಂದು ಹೇಳಿದರು. ಇದಕ್ಕೆ ನವ್ಯಾ "ನಾನು ತಪ್ಪು ಸ್ಥಳದಲ್ಲಿ, ತಪ್ಪು ಸಮಯದಲ್ಲಿ ಮತ್ತು ತಪ್ಪು ವಿಷಯಗಳನ್ನು ಹೇಳುತ್ತಿದ್ದೇನೆ” ಎಂದು ಹೇಳಿದರು.


ಜಯಾ, ಶ್ವೇತಾ ಮತ್ತು ನವ್ಯಾ ಅವರು ಪಾಡ್ಕಾಸ್ಟ್ ‘ವಾಟ್ ದಿ ಹೆಲ್ ನವ್ಯಾ’ ದಲ್ಲಿ ವಿವಿಧ ವಿಷಯಗಳ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳುತ್ತಿದ್ದಾರೆ. ಇದು ಪಾಡ್ಕಾಸ್ಟ್ ನ ಒಂಬತ್ತನೇ ಎಪಿಸೋಡ್ ಆಗಿತ್ತು.

First published: