Jacqueline Fernandez: 200 ಕೋಟಿ ರೂ. ವಂಚನೆ ಉರುಳು; ವಿಚಾರಣೆಗೆ ಗೈರಾದ ಕಿಚ್ಚನ ನಾಯಕಿ

ಕಳೆದ ತಿಂಗಳಷ್ಟೇ ಬರೋಬ್ಬರಿ ಐದು ತಾಸುಗಳ ಕಾಲ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಾಕ್‍ಲೀನ್‍ರನ್ನು ವಿಚಾರಣೆ ನಡೆಸಿದ್ದರು.

Jacqueline Fernandez

Jacqueline Fernandez

  • Share this:
ಶ್ರೀಲಂಕಾದ ಮಾಜಿ ಮಿಸ್ ಯೂನಿವರ್ಸ್ ಸದ್ಯ ಬಾಲಿವುಡ್‍ನಲ್ಲಿ ಸಖತ್ ಬ್ಯುಸಿಯಾಗಿರುವ ಸುಂದರಿ ಜಾಕ್ವೆಲಿನ್ ಫರ್ನಾಂಡಿಸ್ (Jacqueline Fernandez). ಹಿಂದಿ ಜತೆಗೆ ಶ್ರೀಲಂಕಾ ಹಾಗೂ ಬ್ರಿಟಿಷ್ ಸಿನಿಮಾಗಳಲ್ಲೂ ಮಿಂಚಿರುವ ಜಾಕ್ವೆಲಿನ್ ಫರ್ನಾಂಡಿಸ್ 'ವಿಕ್ರಾಂತ್ ರೋಣ' (vikrant rona)  ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೂ ಮೊದಲ ಬಾರಿ ಪಾದರ್ಪಣೆ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರದಲ್ಲಿನ ಅವರ ರಾಖೆಲ್ ಡಿಸೋಜಾ ಅಲಿಯಾಸ್ ಗಡಂಗ್ ರಕ್ಕಮ್ಮ ಪಾತ್ರದ ಫಸ್ಟ್ ಲುಕ್ ಸಾಕಷ್ಟು ಕುತೂಹಲ ಹಾಗೂ ನಿರೀಕ್ಷೆಗಳನ್ನು ಮೂಡಿಸಿದೆ.

ಇಡಿ ವಿಚಾರಣೆ

ಹಾಗಂತ ಭಾರತದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಕೇವಲ ಸಿನಿಮಾಗಳಲ್ಲಿ, ಕಿರುತೆರೆ ಕಾರ್ಯಕ್ರಮಗಳಲ್ಲಿ, ಜಾಹೀರಾತುಗಳಲ್ಲಿ ಮಾತ್ರ ನಟಿಸುತ್ತಿದ್ದಾರೆ. ಗ್ಲಾಮರ್ ಲೋಕದಲ್ಲಿ ಕೆಲಸ ಮಾಡುತ್ತಾ ಹಣ ಗಳಿಸುತ್ತಿದ್ದಾರೆ ಅಂತಿದ್ದರೆ, ಅಲ್ಲೊಂದು ಕಹಾನಿ ಮೇ ಟ್ವಿಸ್ಟ್ ಇದೆ. ಹೌದು, ನೂರಾರು ಕೋಟಿ ರೂಪಾಯಿ ವಂಚಿಸಿರುವ ಕುಖ್ಯಾತ ವಂಚಕ ಸುಖೇಶ್ ಚಂದ್ರಶೇಖರ್ ಜತೆಗೆ ಸಂಪರ್ಕದಲ್ಲಿದ್ದರು ಎಂಬ ಕಾರಣಕ್ಕೆ ಜಾರಿ ನಿರ್ದೇಶನಾಲಯ ಜಾಕ್ವೆಲಿನ್ ಫರ್ನಾಂಡಿಸ್ ಅವರನ್ನು ಎರಡನೇ ಬಾರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಕಳೆದ ತಿಂಗಳಷ್ಟೇ ಬರೋಬ್ಬರಿ ಐದು ತಾಸುಗಳ ಕಾಲ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಜಾಕ್‍ಲೀನ್‍ರನ್ನು ವಿಚಾರಣೆ ನಡೆಸಿದ್ದರು. ಈ ಪ್ರಕರಣ ಸಂಬಂಧ ಇಂದು ಕೂಡ ಅವರನ್ನು ವಿಚಾರಣೆಗೆ ಕರೆಯಲಾಗಿತ್ತು. ಆದರೆ, ನಟಿ ಮಾತ್ರ ವಿಚಾರಣೆಗೆ ಹಾಜರಾಗಿಲ್ಲ.

ಇದನ್ನು ಓದಿ: ಏನಿದು ಸಾರಾ ಅವತಾರ! ತೆಂಡೂಲ್ಕರ್ ಮಗಳ ಹೊಸ ಲುಕ್​ಗೆ ಮನಸೋತ ಅಭಿಮಾನಿಗಳು

ನೂರಾರು ಕೋಟಿ ವಂಚನೆ

ಇನ್ನು ಈ ಸುಖೇಶ್ ಚಂದ್ರಶೇಖರ್ ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಬಹುದು. 17ನೇ ವಯಸ್ಸಿನಲ್ಲಿಯೇ ವಂಚನೆಯನ್ನು ವೃತ್ತಿ ಮಾಡಿಕೊಂಡಿರುವ ಸುಖೇಶ್ ಇದುವರೆಗೆ ನೂರಾರು ಕೋಟಿ ರೂಪಾಯಿ ವಂಚಿಸಿರುವ ಮಾಹಿತಿಯಿದೆ. ಕೆಲ ತಿಂಗಳ ಹಿಂದೆ ರಾನ್‍ಬ್ಯಾಕ್ಸಿ ಕಂಪನಿಯ ಮಾಜಿ ಪ್ರಮೋಟರ್‍ಗಳಾದ ಶಿವಿಂದರ್ ಸಿಂಗ್ ಹಾಗೂ ಮಾಳ್ವಿಂದರ್ ಸಿಂಗ್‍ರಿಗೆ ಬರೋಬ್ಬರಿ 200 ಕೋಟಿ ರೂಪಾಯಿ ವಂಚಿಸಿದ್ದ ಈ ಖತರ್ನಾಕ್ ಸುಖೇಶ್ ಚಂದ್ರಶೇಖರ್. ಈ ಕುರಿತು ದೆಹಲಿ ಪೊಲೀಸರ ಆರ್ಥಿಕ ಅಪರಾಧ ದಳದವರು ದೂರು ದಾಖಲಿಸಿದ್ದರು. ಸುಖೇಶ್ ಚಂದ್ರಶೇಖರ್ ಮತ್ತು ಆತನ ವಂಚಕ ಜಾಲದ ಬೆನ್ನು ಹತ್ತಿದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಚೆನ್ನೈನಲ್ಲ ಆತನ ಹೆಸರಿನಲ್ಲಿದ್ದ ಸೀಫೇಸಿಂಗ್ ಬಂಗಲೆ, ಬರೋಬ್ಬರಿ 82.50 ಲಕ್ಷ ರೂಪಾಯಿ ನಗದು ಹಾಗೂ ಒಂದು ಡಜನ್‍ಗೂ ಹೆಚ್ಚು ಐಶಾರಾಮಿ ಕಾರುಗಳನ್ನು ವಶ ಪಡಿಸಿಕೊಂಡಿದ್ದಾರೆ. ಇದಲ್ಲದೇ ಆತನ ಮೇಲೆ ಹಲವಾರು ದೂರುಗಳು ದಾಖಲಾಗಿದ್ದು, ಹಲವು ವಂಚನೆ ಪ್ರಕರಣಗಳ ತನಿಖೆ ನಡೆಯುತ್ತಿದೆ.

ಇದನ್ನು ಓದಿ: ನೆಟ್​ಫ್ಲಿಕ್ಸ್​ನಲ್ಲಿ ಇಂದಿನಿಂದ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ ಕಂಗನಾರ Thalaivii

ಸುಖೇಶ್​ ಚಂದ್ರಶೇಖರ್​ ಕುರಿತ ವಿಚಾರಣೆ

ಸುಖೇಶ್ ಚಂದ್ರಶೇಖರ್ ಪತ್ನಿ ಲೀನಾ ಪೌಲ್ ಮೂಲಕ ನಟಿ ಜಾಕ್‍ಲೀನ್ ಫರ್ನಾಂಡಿಸ್ ಕೂಡ ಆತನ ಸಂಪರ್ಕಕ್ಕೆ ಬಂದಿದ್ದರು ಎನ್ನಲಾಗಿದೆ. ಮಾತ್ರವಲ್ಲದೇ ಆತನ ಜತೆ ದೂರವಾಣಿ ಕರೆಗಳ ಮೂಲಕ ಹಾಗೂ ಎಸ್‍ಎಮ್‍ಎಸ್‍ಗಳ ಮೂಲಕ ಜಾಕ್‍ಲೀನ್ ಫರ್ನಾಂಡಿಸ್ ನಿರಂತರವಾಗಿ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಹೀಗಾಗಿಯೇ ಯಾಕಾಗಿ ಆತನ ಜೊತೆ ಸಂಪರ್ಕದಲ್ಲಿದ್ದರು? ಹಣದ ವ್ಯವಹಾರ ಏನಾದರೂ ಇತ್ತಾ? ಆತನ ವಂಚನೆ ಹಿನ್ನೆಲೆ ಬಗ್ಗೆ ಮೊದಲೇ ತಿಳಿದಿತ್ತಾ? ಸುಖೇಶ್ ಚಂದ್ರಶೇಖರ್ ಪತ್ನಿ ಲೀನಾ ಪೌಲ್ ಪರಿಚಯವಾಗಿದ್ದು ಹೇಗೆ? ಹೀಗೆ ಹತ್ತು ಹಲವು ಪ್ರಶ್ನೆಗಳು ಜಾರಿ ನಿರ್ದೇಶನಾಲಯದ ಅಧಿಕಾರಿಗಳನ್ನು ಕಾಡುತ್ತಿದ್ದು, ಎಲ್ಲದಕ್ಕೂ ಜಾಕ್ವೆಲಿನ್​ ಫರ್ನಾಂಡಿಸ್‍ರಿಂದ ಉತ್ತರ ಪಡೆಯುತ್ತಿದ್ದಾರೆ.

ಇನ್ನು ಜಾಕ್ವೆಲಿನ್ ಫರ್ನಾಂಡಿಸ್​ರ ಸಿನಿಮಾಗಳ ವಿಷಯಕ್ಕೆ ಬರುವುದಾದರೆ ಈ ವರ್ಷ ಅವರು ನಟಿಸಿರುವ ರಾಧೇ ಹಾಗೂ ಭೂತ್ ಪೊಲೀಸ್ ಚಿತ್ರಗಳು ರಿಲೀಸ್ ಆಗಿವೆ. ಸದ್ಯ ಕಿಚ್ಚ ಸುದೀಪ್‍ಗೆ ಜೋಡಿಯಾಗಿರುವ ವಿಕ್ರಾಂತ್ ರೋಣ ತೆರೆಗೆ ಬರಲು ಸಿದ್ಧತೆ ನಡೆಸುತ್ತಿದ್ದೆ. ಉಳಿದಂತೆ ಸರ್ಕಸ್, ತೆಲುಗಿನ ಹರಿ ಹರ ವೀರ ಮಲ್ಲು, ಬಚ್ಚನ್ ಪಾಂಡೆ ಹಾಗೂ ರಾಮ್ ಸೇತು ಚಿತ್ರಗಳಲ್ಲೂ ಜಾಕ್ವೆಲಿನ್​ ಫರ್ನಾಂಡಿಸ್ ಕಾಣಿಸಿಕೊಳ್ಳಲಿದ್ದಾರೆ.
Published by:Seema R
First published: