ಅಕ್ರಮ ಹಣ ವರ್ಗಾವಣೆ ಪ್ರಕರಣ; ಮತ್ತೆ ಇಡಿ ವಿಚಾರಣೆಯಿಂದ ತಪ್ಪಿಸಿಕೊಂಡ ನಟಿ Jacqueline Fernandez

ಕೆಲವು ಅನಿವಾರ್ಯ ಹಾಗೂ ವೈಯುಕ್ತಿಕ ಕಾರಣಗಳಿಂದಾಗಿ ತಾನು ಶುಕ್ರವಾರ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಕೊನೆಯ ಕ್ಷಣದಲ್ಲಿ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ತಿಳಿಸಿದ್ದರಂತೆ.

ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್​

ಬಾಲಿವುಡ್​ ನಟಿ ಜಾಕ್ವೆಲಿನ್​ ಫರ್ನಾಂಡಿಸ್​

  • Share this:
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದ ವಿಚಾರಣೆಗೆ  ಜಾರಿ ನಿರ್ದೇಶನಾಲಯವು ನೀಡಿದ್ದ ಸಮನ್ಸ್‍ಗೆ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್  (Actress Jacqueline Fernandez) ಶನಿವಾರ ಗೈರು ಹಾಜರಾಗಿದ್ದಾರೆ. ಸುಕೇಶ್ ಚಂದ್ರಶೇಖರ್ ಅವರನ್ನು ಒಳಗೊಂಡಿರುವ  200 ಕೋಟಿ ರೂಪಾಯಿ ವಂಚನೆ  (Money Laundering Case) ಪ್ರಕರಣದ ವಿಚಾರಣೆಗೆ ಆಕೆ ತಪ್ಪಿಸಿಕೊಳ್ಳುತ್ತಿರುವುದು ಇದು ಮೂರನೇ ಬಾರಿಯಾಗಿದೆ. ಕೆಲವು ವೃತ್ತಿಪರ ಕಮಿಟ್‍ಮೆಂಟ್‍ಗಳ ಕಾರಣದಿಂದ ತಾನು ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ನಟಿ ಜಾಕ್ವೆಲಿನ್​ ಫರ್ನಾಂಡಿಸ್ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಮೂಲ ಹೇಳಿವೆ. ಆದರೆ, ಸೋಮವಾರ ದೆಹಲಿಯಲ್ಲಿ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಆಕೆಗೆ ಸೂಚಿಸಲಾಗಿದೆ  ಎನ್ನುವ ಮಾಹಿತಿ ಸದ್ಯಕ್ಕೆ ಲಭ್ಯವಾಗಿದೆ. 

ಮುಂದಿನ ತಿಂಗಳ ಮೊದಲನೇ ವಾರದವರೆಗೆ ತನ್ನ ವಿಚಾರಣೆಯನ್ನು ಮುಂದೂಡುವಂತೆ ಶ್ರೀಲಂಕಾ ಬೆಡಗಿ ಜಾಕ್ವೆಲಿನ್​ ಫರ್ನಾಂಡಿಸ್ ಅವರು ಶುಕ್ರವಾರ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೂ, ಅಧಿಕಾರಿಗಳನ್ನು ಶೀಘ್ರವಾಗಿ ಅವರ ವಿಚಾರಣೆ ನಡೆಸಲು ಬಯಸಿದ್ದರು.

Money Laundering Case, Jacqueline Fernandez and Nora Fatehi again summoned by ED, ಜಾಕ್ವೆಲಿನ್​ಗೆ ಸಮನ್ಸ್​ ಜಾರಿ ಮಾಡಿದ ಜಾರಿ ನಿರ್ದೇಶನಾಲಯ, ನೋರಾ ಫತೇಹಿಗೂ ಸಮನ್ಸ್​ ಜಾರಿ ಮಾಡಿದ ಇಡಿ, Jacqueline Fernandez in blue contemporary saree, Jacqueline Fernandez latest photoshoot, Jacqueline Fernandez latest movies, Jacqueline Fernandez in Vikranth Rona, Jacqueline Fernandez Tollywood Movies, Jacqueline Fernandez latest Album Song, Jacqueline Fernandez new telugu movies, Happy Birthday Kichcha Sudeep, Vikrant Rona Glimpse, The Dead Mans Anthem, Anup Bhandhari, Jacqueline Fernandes, Sandalwood, Vikarant Rona, ವಿಕ್ರಾಂತ್ ರೋಣ, ಕಿಚ್ಚ ಸುದೀಪ್​, ಹುಟ್ಟುಹಬ್ಬದ ಸಂಭ್ರಮದಲ್ಲಿ ಕಿಚ್ಚ ಸುದೀಪ್​, , Money Laundering Case Jacqueline Fernandez and Nora Fatehi again summoned by ED ae
ಜಾಕ್ವೆಲಿನ್​​ ಫರ್ನಾಂಡಿಸ್ ಹಾಗೂ ನೋರಾ ಫತೇಹಿ


ಕೆಲವು ಅನಿವಾರ್ಯ ವೈಯುಕ್ತಿಕ ಕಾರಣಗಳಿಂದಾಗಿ, ತಾನು ಶುಕ್ರವಾರ ವಿಚಾರಣೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಎಂದು ಕೊನೆಯ ಕ್ಷಣದದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್​ ಅವರು ಜಾರಿ ನಿರ್ದೇಶನಾಲಯದ ಅಧಿಕಾರಿಗಳಿಗೆ ತಿಳಿಸಿದ್ದರಂತೆ.

ಇದನ್ನೂ ಓದಿ: Jacqueline Fernandez: ಅರೆನಗ್ನವಾಗಿ ಫೋಟೋಶೂಟ್​ಗೆ ಪೋಸ್​ ಕೊಟ್ಟ ಬಾಲಿವುಡ್​ ನಟಿ ಜಾಕ್ವೆಲಿನ್​..!

ಸುಕೇಶ್ ಚಂದ್ರಶೇಖರ್ ವಿರುದ್ಧ ದಾಖಲಾಗಿರುವ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಗುರುವಾರ ನಟಿ ಜಾಕ್ವೆಲಿನ್​ ಫರ್ನಾಂಡಿಸ್ ಮತ್ತು ನೋರಾ ಫತೇಹಿ ಅವರಿಗೆ ಸಮನ್ಸ್ ನೀಡಿತ್ತು. ಸುದ್ದಿ ಮೂಲಗಳ ಪ್ರಕಾರ, ಏಜೆನ್ಸಿಯು , ಸುಕೇಶ್ ಚಂದ್ರಶೇಖರ್ ಮತ್ತು ಜಾಕ್ವೆಲಿನ್​ ಫರ್ನಾಂಡಿಸ್​ ಹಾಗೂ ನೋರಾ ಫತೇಹಿ ನಡುವೆ ಯಾವುದೇ ರೀತಿಯ ಹಣಕಾಸಿನ ವಹಿವಾಟು ನಡೆದಿದೆಯೇ ಎಂದು ತನಿಖೆ ನಡೆಸುತ್ತಿದೆ.

ಈ ಮೊದಲು, ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ , ಜಾರಿ ನಿರ್ದೇಶನಾಲಯವು ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಹಲವು ಸಂದರ್ಭಗಳಲ್ಲಿ ಜಾಕ್ವೆಲಿನ್ ಅವರ ಹೇಳಿಕೆಯನ್ನು ದಾಖಲಿಸಿತ್ತು. ತನ್ನ ಮೊದಲ ಹೇಳಿಕೆಯಲ್ಲಿ ನಟಿಯು, ತಾನು ಕೂಡ ಸುಕೇಶ್ ಚಂದ್ರಶೇಖರ್‍ನ ಬಲಿಪಶು ಮತ್ತು ತಾನು ಯಾವುದೇ ತಪ್ಪನ್ನು ಮಾಡಿಲ್ಲ ಎಂದು ತನಿಖಾಧಿಕಾರಿಗಳಿಗೆ ತಿಳಿಸಿದ್ದರು.

ಉದ್ಯಮಿಗಳಿಗೆ 200 ಕೋಟಿ ರೂಪಾಯಿ ವಂಚಿಸಿದ ಪ್ರಕರಣದಲ್ಲಿ ಸುಕೇಶ್ ಆರೋಪ ಎದುರಿಸುತ್ತಿದ್ದಾರೆ. ಅವರ ಜೊತೆ ಸಂಪರ್ಕದಲ್ಲಿ ಇದ್ದರು ಎಂಬ ಕಾರಣಕ್ಕಾಗಿ ಜಾಕ್ವೆಲಿನ್ ಮತ್ತು ನೋರಾ ಫತೇಹಿ ಅವರ ಮೇಲೆಯೂ ಅನುಮಾನ ವ್ಯಕ್ತವಾಗಿದೆ. ಹಾಗಾಗಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಕೇಶ್ ಚಂದ್ರಶೇಖರ್ , ಅವರ ಪತ್ನಿ ಲೀನಾ ಮತ್ತು ಇತರ ಆರು ಮಂದಿ ಜಾರಿ ನಿರ್ದೇಶನಾಲಯದ ವಶದಲ್ಲಿ ಇದ್ದಾರೆ.

ಇದನ್ನೂ ಓದಿ: ಈ ಬಾಲಿವುಡ್ ನಟಿಯ ಹೊಸ ಮನೆಯ ಬೆಲೆ 175 ಕೋಟಿ: ಬಾಯ್‌ಫ್ರೆಂಡ್ ಜತೆ ಹೊಸ ಬಂಗಲೆಗೆ ಜಾಕ್ವೆಲಿನ್ ಶಿಫ್ಟ್?

ಶ್ರೀಲಂಕಾ ಮೂಲದ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಬಾಲಿವುಡ್‍ನಲ್ಲಿ ಅತ್ಯಂತ ಬೇಡಿಕೆಯ ನಟಿಯರಲ್ಲಿ ಒಬ್ಬರು. ಅಷ್ಟು ಮಾತ್ರವಲ್ಲ, ಬಾಲಿವುಡ್‍ನ ಭಾಯಿಜಾನ್ ಎಂದೇ ಹೆಸರುವಾಸಿ ಆಗಿರುವ ಸಲ್ಮಾನ್ ಖಾನ್ ಬಣದಲ್ಲಿ ಜಾಕ್ವೆಲಿನ್ ಗುರುತಿಸಿಕೊಂಡಿದ್ದಾರೆ. ಕಿಚ್ಚ ಸುದೀಪ್ ಅವರ “ವಿಕ್ರಾಂತ್ ರೋಣ” ಸಿನಿಮಾದ ಮೂಲಕ ಅವರು ಸ್ಯಾಂಡಲ್‍ವುಡ್‍ಗೂ ಕಾಲಿಡುತ್ತಿದ್ದಾರೆ. ಕೆನಡಾ ಮೂಲದ ನೋರಾ ಫತೇಹಿ ಅವರು ತಮ್ಮ ನೃತ್ಯದ ಮೂಲಕ ಬಣ್ಣದ ಲೋಕದಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಅವರ ಬೆಲ್ಲಿ ಡ್ಯಾನ್ಸ್‍ಗೆ ಅಧಿಕ ಸಂಖ್ಯೆಯ ಅಭಿಮಾನಿಗಳು ಇದ್ದಾರೆ.
Published by:Anitha E
First published: