ಸ್ಯಾಂಡಲ್ವುಡ್ನ ಮುದ್ದಾದ ಜೋಡಿ ನಟಿ ಹರಿಪ್ರಿಯಾ (Haripriya) ಹಾಗೂ ನಟ ವಸಿಷ್ಠ ಸಿಂಹ (Vasishta Simha) ಸಪ್ತಪದಿ ತುಳಿದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೊಸ ವರ್ಷದ ಆರಂಭದಲ್ಲೇ ಲವ್ ಬರ್ಡ್ಸ್ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಜನವರಿ 26 ರಂದು ಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ (Haripriya Marriage) ಜೋಡಿ ಅದ್ಧೂರಿಯಾಗಿ ಮದುವೆಯಾಗಿದೆ. ಸಿಂಹಪ್ರಿಯಾ ಕಲ್ಯಾಣಕ್ಕೆ ಸ್ಯಾಂಡಲ್ವುಡ್ನ (Sandalwood) ಗಣ್ಯಾತಿಗಣ್ಯರು ಸಾಕ್ಷಿಯಾಗಿದ್ರು. ನವಜೋಡಿಗೆ ಅತಿಥಿಗಳು ಹಾಗೂ ಅಭಿಮಾನಿಗಳು ಶುಭಕೋರಿದ್ರು.
ಮದುವೆ ವಿಡಿಯೋ ಹಂಚಿಕೊಂಡ ಹರಿಪ್ರಿಯಾ
ಚಂದವನದ ಮುದ್ದಾದ ಜೋಡಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿ ಹೊಸ ಬಾಳಿಗೆ ಕಾಲಿಟ್ಟಿದ್ದಾರೆ. ಶಾಸ್ತ್ರೋಕ್ತವಾಗಿ ನಡೆದ ಕಲ್ಯಾಣ ಕಾರ್ಯದಲ್ಲಿ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಸತಿಪತಿಗಳಾಗಿದ್ದಾರೆ. ಇದೀಗ ಹರಿಪ್ರಿಯಾ ತಮ್ಮ ಮದುವೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇನ್ಮುಂದೆ ನಾವು Mr & Mrs ಸಿಂಹ ಎಂದು ಬರೆದುಕೊಂಡಿದ್ದಾರೆ.
View this post on Instagram
ವಸಿಷ್ಠ ಸಿಂಹ ಆಸೆಯಂತೆ ಮೈಸೂರಿನಲ್ಲಿ ಮದುವೆ ಮಾಡಿಕೊಂಡ ಜೋಡಿ ಬೆಂಗಳೂರಲ್ಲಿ ರಿಸೆಪ್ಷನ್ ಮಾಡಿಕೊಳ್ತಿದೆ. ಜನವರಿ 28 ರಂದು ಹರಿಪ್ರಿಯಾ ಹಾಗೂ ವಸಿಷ್ಠ ಸಿಂಹ ಅದ್ಧೂರಿ ಅರತಕ್ಷತೆ ನಡೆಯಲಿದೆ. ಅರತಕ್ಷತೆ ಕಾರ್ಯಕ್ರಮದಲ್ಲೂ ಅನೇಕ ಸಿನಿಮಾ ತಾರೆಯರು ಹಾಗೂ ರಾಜಕೀಯ ಗಣ್ಯರು ಭಾಗಿಯಾಗಲಿದ್ದಾರೆ.
View this post on Instagram
ನಮ್ಮ ಸ್ನೇಹ ಪ್ರೀತಿಯಾಗಿ ಬದಲಾಯ್ತು
ಇಬ್ಬರ ಪ್ರೀತಿ ಬಗ್ಗೆ ಮಾತಾಡಿದ್ದ ವಸಿಷ್ಠ ಸಿಂಹ ನಾನು ನಾಯಿ ಮರಿ ಕೊಟ್ಟು ಪಟಾಯಿಸಿ ಬಿಟ್ಟೆ ಅಂತ ಅಂದ್ರು, ನಾನು ಪ್ರೀತಿಸಿದ ಬಳಿಕ ನಾಯಿಮರಿ ಕೊಟ್ಟೆ ಎಂದು ತಮಾಷೆ ಮಾಡಿದ್ರು. 2016 ರಲ್ಲಿ ಇಬ್ಬರ ಸ್ನೇಹ ಶುರುವಾಯ್ತು. ನನ್ನ ಗೋಧಿ ಬಣ್ಣ ಸಿನಿಮಾ ನೋಡಿ ಬಂದು ಹರಿಪ್ರಿಯಾ ವಿಶ್ ಮಾಡಿದ್ರು. ಆ ನಂತರ ಇಬ್ಬರ ನಡುವಿನ ಸ್ನೇಹ, ಪ್ರೀತಿಯಾಗಿ ಬದಲಾಯ್ತು ಎಂದು ವಸಿಷ್ಠ ಸಿಂಹ ಹೇಳಿದ್ರು.
ಕಷ್ಟದಿನದಲ್ಲಿ ನನ್ನ ಕೈ ಹಿಡಿದ್ರು ಹರಿಪ್ರಿಯಾ
ಇನ್ನು ಮದುವೆ ಹಾಗೂ ಪ್ರೀತಿ ವಿಚಾರದಲ್ಲಿ ನಮ್ಮದೇ ಪ್ಯಾಟ್ರನ್ ರೂಢಿಸಿಕೊಂಡಿದ್ದೇವೆ. ನಾನು ಮೈಸೂರು ಹುಡುಗ ಹಾಗಾಗಿ ಅಲ್ಲೇ ಮದುವೆ ಮಾಡಿಕೊಂಡೆ. ನನ್ನ ಜೀವನದಲ್ಲಿ ಕಷ್ಟದ ದಿನಗಳಲ್ಲಿ ಗೆಳತಿಯಾಗಿ ಹರಿಪ್ರಿಯಾ ಶಕ್ತಿ ತುಂಬಿದ್ದಾರೆ ಎಂದು ನಟ ವಸಿಷ್ಠ ಸಿಂಹ ಹೇಳಿದ್ರು.
3 ವರ್ಷಗಳಿಂದ ನಾವು ಪ್ರೀತಿಸ್ತಿದ್ದೀವಿ
ನಮ್ಮ ಎಂಗೇಜ್ ಮೆಂಟ್ ಪ್ರೀತಿನ ಹೇಳಿಕೊಳ್ಳೋಣ ಅಂತ ಅಂದುಕೊಂಡ್ವಿ ಆದರೆ ಅದು ಆಗಲಿಲ್ಲ. ನನ್ನ ತಂದೆಯಲ್ಲಿ ಇರುವ ಎಷ್ಟೋ ಕ್ವಾಲಿಟೀಸ್ ನ ನಾನು ನನ್ನ ಸಿಂಹನಲ್ಲಿ ಕಂಡೆ. 3 ವರ್ಷಗಳಿಂದ ನಾವು ಪ್ರೀತಿಸ್ತಿದ್ದೀವಿ, ನಮ್ಮ ಪ್ರೀತಿಯನ್ನು ಯಾರಿಗೂ ಗೊತ್ತಾಗದಂತೆ ಕಾಪಾಡಿಕೊಳ್ಳಲು ತುಂಬಾ ಶ್ರಮ ಪಟ್ಟಿದ್ದೇವೆ ಆದ್ರೆ ಆಗಲಿಲ್ಲ ಎಂದು ಹರಿಪ್ರಿಯಾ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ