Haripriya: ಕನ್ನಡದ ಅಭಿಮಾನಿಗಳಿಗೆ ಹರಿಪ್ರಿಯಾ ಕೊಟ್ರು ಒಂದು ಚಾಲೆಂಜ್​: ಹೊಸ ದಾಖಲೆ ಮಾಡಿದ ನೀರ್​ ದೋಸೆ ಬೆಡಗಿ..!

Kannad Gottilla Movie: ಕನ್ನಡ್​ ಗೊತ್ತಿಲ್ಲ ಸಿನಿಮಾದ ಪ್ರಚಾರಕ್ಕಾಗಿ ಹರಿಪ್ರಿಯಾ ಹೊಸ ದಾರಿ ಹುಡುಕಿದ್ದಾರೆ. ಅದಕ್ಕಾಗಿಯೇ ಅವರು ಇತ್ತೀಚೆಗಷ್ಟೇ ತಮ್ಮ ಅಭಿಮಾನಿಗಳಿಗೆ ಒಂದು ಚಾಲೆಂಜ್ ನೀಡಿದ್ದಾರೆ.

Anitha E | news18-kannada
Updated:November 8, 2019, 8:33 AM IST
Haripriya: ಕನ್ನಡದ ಅಭಿಮಾನಿಗಳಿಗೆ ಹರಿಪ್ರಿಯಾ ಕೊಟ್ರು ಒಂದು ಚಾಲೆಂಜ್​: ಹೊಸ ದಾಖಲೆ ಮಾಡಿದ ನೀರ್​ ದೋಸೆ ಬೆಡಗಿ..!
ಹರಿಪ್ರಿಯಾ
Anitha E | news18-kannada
Updated: November 8, 2019, 8:33 AM IST
ಸಂಪಂಗಪ್ಪನ ಮಗ ಮರಿ ಸಂಪಂಗಪ್ಪ... ಇದನ್ನ ನಿಲ್ಲಿಸದಂತೆ ಮೂರು ಬಾರಿ ಹೇಳಿ... ಓ ಆಗ್ತಿಲ್ವಾ? ಓಕೆ ಹಾಗಾದ್ರೆ ಕಾಗೆ ಪುಕ್ಕ, ಗೂಪೆ ಪುಕ್ಕ... ಇದನ್ನ ಹೇಳಿ. ಇದೂ ಆಗ್ತಿಲ್ವಾ... ನೋಡಿ ನಮ್ಮ'ನೀರ್​ ದೋಸೆ' ಸುಂದರಿ ಹರಿಪ್ರಿಯಾನೇ ಪರವಾಗಿಲ್ಲ. ಎಂತಹ ಕಷ್ಟದ ಟಂಗ್‍ಟ್ವಿಸ್ಟರನ್ನೂ ಸುಲಭವಾಗಿ ಹೇಳುತ್ತಾರೆ.

ಅಚ್ಚ ಕನ್ನಡತಿ, ಎಲ್ಲರೂ ಮೆಚ್ಚುವಂತೆ ಕನ್ನಡ ಮಾತಾಡೋ ಚೆಲುವೆ ಹರಿಪ್ರಿಯಾ. ಇಂತಹ ನಟಿ ನಟಿಸಿರುವ ಹೊಸ ಸಿನಿಮಾನೇ 'ಕನ್ನಡ್ ಗೊತ್ತಿಲ್ಲ'. 'ಡಾಟರ್ ಆಫ್ ಪಾರ್ವತಮ್ಮ' ಚಿತ್ರದ ಬಳಿಕ ಮತ್ತೆ ಕ್ರೈಮ್‍ ಒಂದರ ಬೆನ್ನು ಹತ್ತುವ ಸೂಪರ್ ಕಾಪ್ ಪಾತ್ರದಲ್ಲಿ ಹರಿಪ್ರಿಯಾ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಹಾಗೂ ಹಾಡುಗಳು ಸಾಕಷ್ಟು ಸದ್ದು ಮಾಡಿವೆ.



ಈ ಸಿನಿಮಾದ ಪ್ರಮೋಷನ್‍ಗಾಗಿಯೇ ಹರಿಪ್ರಿಯಾ ಇತ್ತೀಚೆಗಷ್ಟೇ ತಮ್ಮ ಅಭಿಮಾನಿಗಳಿಗೆ ಒಂದು ಚಾಲೆಂಜ್ ನೀಡಿದ್ದಾರೆ. ಅದೇನಂದ್ರೆ ಕನ್ನಡದ ಟಂಗ್ ಟ್ವಿಸ್ಟರ್​ಗಳನ್ನು ಮೂರು ಬಾರಿ ತಪ್ಪಿಲ್ಲದೇ ಉಚ್ಚರಿಸಿ, ಅವರಿಹಗೆ ಟ್ವೀಟ್ ಮಾಡಬೇಕು ಅನ್ನೋದು.



 
Loading...





View this post on Instagram




 

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು 😍🙏🏻 ಸಿರಿಗನ್ನಡಂ ಗೆಲ್ಗೆ ❤️🙏🏻 A tongue twister challenge to you all 😁


A post shared by Hariprriya (@iamhariprriya) on






ಹರಿಪ್ರಿಯಾರ ಈ ಚಾಲೆಂಜ್‍ಅನ್ನು ಒಪ್ಪಿಕೊಂಡಿರುವ ಕೆಲ ಅಭಿಮಾನಿಗಳು ತಾವೇ ಟಂಗ್ ಟ್ವಿಸ್ಟರ್​ಗಳನ್ನು ಪ್ರಯೋಗಿಸಿದ್ದಾರೆ. ಕೆಲ ವಿಡಿಯೋಗಳು ವೈರಲ್ ಕೂಡ ಆಗಿವೆ.

ಸಾಹಿತಿ, ಹಿರಿಯ ನಿರ್ದೇಶಕ ಬರಗೂರು ರಾಚಂದ್ರಪ್ಪ ಅವರ 'ಅಮೃತಮತಿ' ಚಿತ್ರದಲ್ಲೂ ಹರಿಪ್ರಿಯಾ ನಟಿಸುತ್ತಿದ್ದಾರೆ. ಅದರ ಡಬ್ಬಿಂಗ್‍ ಅನ್ನೂ ಹರಿಪ್ರಿಯಾ ಕೇವಲ ಒಂದೇ ದಿನದಲ್ಲಿ ಪೂರ್ಣಗೊಳಿಸುವ ಮೂಲಕ ತಮ್ಮ ಸಿನಿಕರಿಯರ್​ನ ಹೊಸ ದಾಖಲೆ ಮಾಡಿದ್ದಾರೆ ಹರಿಪ್ರಿಯಾ.

 




ಇನ್ನು ಹರಿಪ್ರಿಯಾರ 'ಕನ್ನಡ್ ಗೊತ್ತಿಲ್ಲ' ಸಿನಿಮಾ ಇದೇ ತಿಂಗಳ 15ರಂದು ರಿಲೀಸ್ ಆಗಲಿದ್ದು, ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಕರೆತರುವಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎಂದು ಕಾದು ನೋಡಬೇಕಿದೆಯಷ್ಟೆ.

ಅವಕಾಶಗಳ ಕೊರತೆಯಿಂದಾಗಿ ಬೋಲ್ಡ್​ ಫೋಟೋಶೂಟ್​ ಮೊರೆ ಹೋದ ಖ್ಯಾತ ಸ್ಯಾಂಡಲ್​ವುಡ್​ ನಟಿಯ ಮಗಳು..!


 

 

 
First published:November 8, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...