ನಟ ಶರಣ್​ಗೆ ಶರಣಾದ ಹರಿಪ್ರಿಯಾ!; ಫಿಶ್ ಫ್ರೈ ರುಚಿ, ಹೊಸ ಕುರ್ಚಿ ಕಥೆ!

ಲಾಕ್ ಡೌನ ಸಮಯದಲ್ಲಿ ಬ್ಲಾಗಿಂಗ್ ಪ್ರಾರಂಭಿಸಿರುವ ನಟಿ ಹರಿಪ್ರಿಯಾ, ಕಳೆದ ಹಲವು ದಿನಗಳಿಂದ ತಮ್ಮ ಜೀವನಾನುಭವಗಳನ್ನು ಅಕ್ಷರ ರೂಪದಲ್ಲಿ ತಮ್ಮ ಅಭಿಮಾನಿಗಳ ಮುಂದಿಡುತ್ತಿದ್ದಾರೆ. ಅದೇ ರೀತಿ ಈಗ ನಟ ಶರಣ್ ಅವರ ಜೊತೆಗಿನ ಒಡನಾಟ, ಗೆಳೆತನ, ಅವರ ಜತೆ ನಟಿಸಿದ ಸಿನಿಮಾಗಳು, ಅವರ ಪತ್ನಿ ಮಾಡಿದ ಫಿಶ್ ಫ್ರೈ ಕೈ ರುಚಿ, ಮಾತುಗಳು, ಹರಟೆ, ನಗು, ಬದಲಿಸಿದ ಕುರ್ಚಿಗಳು... ಹಲವಾರು ವಿಷಯಗಳ ಬಗ್ಗೆ ಬರೆದುಕೊಂಡಿದ್ದಾರೆ...

ಶರಣ್- ಹರಿಪ್ರಿಯಾ

ಶರಣ್- ಹರಿಪ್ರಿಯಾ

  • Share this:
ಶರಣು ಶರಣು...
ನನ್ನ ಕನ್ನಡದ ಎರಡನೇ ಸಿನಿಮಾ ‘ವಸಂತ ಕಾಲ’, ಆ ಸಿನಿಮಾದಲ್ಲಿ ಶರಣ್ ಅವ್ರು ಕಾಮಿಡಿಯನ್ ಆಗಿ ಆ್ಯಕ್ಟ್ ಮಾಡಿದ್ರು. ನಾವು ಸೆಟ್‍ನಲ್ಲಿ ಸ್ವಲ್ಪ ಫ್ರೀ ಸಿಕ್ಕಿದ್ರೂ ಚೇರ್ ಹಾಕೊಂಡು ಕೂತು ಮಾತಾಡ್ತಿದ್ವಿ.. ಅಲ್ಲ ಅಲ್ಲ ಅವ್ರು ಮಾತಾಡ್ತಿದ್ರು, ನಾನು ನಗ್ತಿದ್ದೆ. ಆ ಸಿನಿಮಾ ರಿಲೀಸ್ ಆಗಿದ್ದು 2008ರಲ್ಲಿ. ಅದಾದ್ಮೇಲೆ ನಾನೂ ಶರಣ್ ಅವರು ಮತ್ತೆ ಜೊತೆಗೆ ಆ್ಯಕ್ಟ್ ಮಾಡಿದ್ದು ‘ಬುಲೆಟ್ ಬಸ್ಯಾ’ದಲ್ಲಿ. ಈ ಸಿನಿಮಾ ಬಿಡುಗಡೆ ಆಗಿದ್ದು, 2015ರಲ್ಲಿ. ಆಗ ಶರಣ್ ಅವ್ರು ಹೀರೋ, ನಾನೇ ಹೀರೋಯಿನ್. ಆಗ್ಲೂ ನಾವು ಸೆಟ್‍ನಲ್ಲಿ ಬಿಡುವು ಸಿಕ್ದಾಗ ಕುರ್ಚಿ ಹಾಕೊಂಡು ಕೂತು ಸಿಕ್ಕಾಪಟ್ಟೆ ಮಾತಾಡ್ತಿದ್ವಿ. ಅದು ಮಾತುಕತೆಗಿಂತ ಜಾಸ್ತಿ ಲಾಫಿಂಗ್ ಸೆಷನ್ ಥರನೇ ಇರ್ತಿತ್ತು. ಅದ್ರಲ್ಲೂ ಶರಣ್ ಅವ್ರು ಸಾಂಗ್ ಹಾಡಿದ್ರೆ ಅದು ಸಂಗೀತ ಕಚೇರಿ ಥರನೇ ಇರ್ತಿತ್ತು. ನಿಮ್ಗೂ ಗೊತ್ತು.. ಅವ್ರು ಎಂಥ ಒಳ್ಳೇ ಸಿಂಗರ್ ಅಂತ. ಡೈರೆಕ್ಟರ್ ಜಯತೀರ್ಥ ಸರ್ ಹಾಗೂ ಶರಣ್ ಅವ್ರ ಶಾಸ್ತ್ರೀಯ ಸಂಗೀತದ ಜುಗಲ್‍ಬಂದಿಯಂತೂ ಸಖತ್ ಇರ್ತಿತ್ತು. ಇಷ್ಟೆಲ್ಲ ನೆನಪಾಗ್ತಿದ್ದಂತೆ ಶರಣ್‍ ಅವರಿಗೆ ಕಾಲ್ ಮಾಡಿಯೇ ಮಾತಾಡೋಣ ಅನಿಸ್ತು.

ಕಾಲ್ ಮಾಡಿ ಹೇಗಿದಿರಿ ಅಂತ ಕೇಳ್ದೆ, ಯೋಗಕ್ಷೇಮ ವಿಚಾರಿಸಿಕೊಂಡ್ವಿ. “ನೋಡಿ ‘ವಸಂತ ಕಾಲ’, ‘ಬುಲೆಟ್ ಬಸ್ಯಾ’ ಸೆಟ್‍ನಲ್ಲೆಲ್ಲ ಎಷ್ಟೆಲ್ಲ ನಗ್ತಾ ಮಾತಾಡ್ತ ಕೂತಿರ್ತಿದ್ವಿ. ನಾವು ಆಗ್ಲೂ ಈಗ್ಲೂ ಹಾಗೇ ಇದೀವಿ” ಅಂದೆ. “ಅದು ಯಾಕಂದ್ರೆ ಪ್ರತಿ ಸಲ ಕುರ್ಚಿ ಮಾತ್ರ ಬದಲಾಗ್ತಿತ್ತು, ನಾವು ಬದಲಾಗಿಲ್ಲ ನೋಡಿ”. ಅಂತ ಶರಣ್ ಅವ್ರು ಅಂದ್ರು. ಅವ್ರು ಹೇಳಿದ್ ಮಾತು ನನಗೆ ತುಂಬಾ ನಿಜ ಅನಿಸ್ತು. ಹಾಗೇ ಮತ್ತೆ ಮಾತಾಡ್ತ ಲಾಕ್‍ಡೌನ್ ವಿಚಾರ ಬಂತು. ಹೇಳಿ, ಲಾಕ್‍ಡೌನ್ ಅಲ್ಲಿ ಹೇಗ್ ಕಾಲ ಕಳೆದ್ರಿ ಅಂತ ಕೇಳ್ದೆ.

“ನಮ್ ಲೈಫ್‍ನಲ್ಲಿ ಹೀಗೆ ಅದೆಷ್ಟ್ ಲಾಕ್‍ಡೌನ್ ಕಳೆದಿಲ್ಲ. ಆರಂಭದ ದಿನಗಳಲ್ಲಿ ಕೆಲಸ, ಅವಕಾಶ ಕಡಿಮೆ ಇದ್ದಾಗ ಆ ಟೈಮ್ ಕೂಡ ಒಂಥರ ಲಾಕ್‍ಡೌನ್ ಅಲ್ವಾ? ಇಲ್ಲಿ ಮೈನಸ್ ಅಂದ್ರೆ ಒಂದಷ್ಟು ಸಿನಿಮಾ ಮಾಡಿರ್ತಿದ್ವಿ, ಒಂದಷ್ಟು ಸಂಪಾದನೆ ಮಾಡಿರ್ತಿದ್ವಿ, ಅದು ಮಿಸ್ ಆಯ್ತು. ಆದ್ರೆ ಅದ್ನೆಲ್ಲ ಮರೆಸೋ ಪ್ಲಸ್ ಆಗಿದೆ. ಈ ಕೊರೊನಾ ನಮಗೆಲ್ರಿಗೂ ಒಬ್ಬ ಬೆಸ್ಟ್ ಪರ್ಸನ್‌ ಮೀಟ್ ಮಾಡ್ಸಿದೆ. ಅದು ಯಾರಂದ್ರೆ ನಮಗೆ ನಾವೇ” ಅಂದ್ರು. ಹಾಗೆ ನಮ್ ಫ್ಯಾಮಿಲಿ ಜೊತೆ ಹೆಚ್ಚು ಟೈಮ್ ಸ್ಪೆಂಡ್ ಮಾಡೋಕಾಯ್ತು” ಅಂತ ಹೇಳಿದ್ರು. ‘ನಿಜ..’ ಅಂತ ಹೇಳ್ತ, ‘ಫಿಷ್ ಕೊಟ್ಟ ನಿಮ್ ವೈಫ್ ಹೇಗಿದ್ದಾರೆ?’ ಅಂತ ಕೇಳ್ದೆ. ಒಂದಿನ ಶರಣ್ ಅವ್ರ ಮನೆ ಹತ್ರದ ಸ್ಟುಡಿಯೋದಲ್ಲಿ ಶೂಟಿಂಗ್ ಇತ್ತು. ಅವ್ರ ಹೆಂಡ್ತಿ ಸೂಪರ್ ಆಗಿರೋ ಫಿಷ್ ಫ್ರೈ ಮಾಡಿಕೊಟ್ಟಿದ್ರು. ತಕ್ಷಣಕ್ಕೆ ಅವ್ರ ಹೆಸ್ರು ನೆನಪಾಗಿಲ್ಲ, ಅದ್ಕೆ ಹಂಗಂದೆ, ಕ್ಷಮಿಸಿ, ಹಹಹ.

ಇನ್ನೊಮ್ಮೆ ಏನಾಗಿತ್ ಗೊತ್ತಾ? ‘ಬುಲೆಟ್ ಬಸ್ಯಾ’ ಸಿನಿಮಾದ ‘ತುತ್ತೂರಿ ತಳವಾರಯ್ಯ’ ಸಾಂಗ್ ಶೂಟಿಂಗ್ ಇತ್ತು. ಅದು ಹೀರೋಯಿನ್ ಸೌಂದರ್ಯ ವರ್ಣಿಸೋ ಹಾಡು. ಆದ್ರೆ ಅದೇ ಟೈಮಲ್ಲಿ ನಂಗೆ ಒಂದು ಪಿಂಪಲ್ ಬಂದಿತ್ತು. ಒಂದು ವಾರ ಹೋದ್ರೆ ಸರಿ ಹೋಗೋ ಥರ ಇತ್ತು. ಇನ್ನು ಅದೇ ಟೈಮಲ್ಲಿ ನೀರಲ್ಲಿ ಶೂಟಿಂಗ್‌ ಮಾಡಿದ್ರಿಂದ ಶರಣ್ ಅವರಿಗೆ ಸ್ವಲ್ಪ ಜ್ವರ ಬಂದಿತ್ತು. ಅದಕ್ಕೆ ಒಂದು ಪ್ಲ್ಯಾನ್ ಮಾಡ್ದೆ. ನಿಮ್ಗೆ ಹೇಗೂ ಜ್ವರ ಬಂದಿದೆ, ಒಂದು ವಾರ ಬಿಟ್ಟು ಶೂಟಿಂಗ್ ಮಾಡಿದ್ರೆ, ನೀವು ಹುಷಾರಾಗಿರ್ತೀರ, ನನ್ ಮೊಡವೆ ಕೂಡ ಮಾಯ ಆಗಿರುತ್ತೆ’ ಅಂದೆ. ಅವ್ರು ಓಕೆ ಅಂದ್ರು. ಆಮೇಲೆ, ‘ಶರಣ್ ಅವರಿಗೆ ಸಿಕ್ಕಾಪಟ್ಟೆ ಜ್ವರ’ ಅಂತ ಸೆಟ್‌ನಲ್ಲೆಲ್ಲ ಸುದ್ದಿ. ಸೋ ಶೂಟಿಂಗ್ ಒಂದು ವಾರ ಮುಂದಕ್ಕೆ ಹೋಯ್ತು, ಹಹಹ.

ನಮ್ ಶೂಟಿಂಗ್ ದಿನಗಳ ಬಗ್ಗೆ ಮಾತಾಡ್ತ ‘ನಿಮ್ ಕರಿಯರ್‌ನ ಬೆಸ್ಟ್ ಮೆಮೊರಿ ಯಾವ್ದು?’ ಅಂತ ಕೇಳ್ದೆ. ಅವ್ರಿಗೆ ತಕ್ಷಣ ನೆನಪಿಗೆ ಬಂದಿದ್ದು ಹೇಳಿದ್ರು. “ಅದು ‘ತನನಂ ತನನಂ’ ಸಿನಿಮಾ ಶೂಟಿಂಗ್. ರಕ್ಷಿತಾ ಮೇಡಂ ಅವ್ರದ್ದು ಸಿನಿಮಾದಲ್ಲೂ ಹೀರೋಯಿನ್ ಕ್ಯಾರೆಕ್ಟರ್, ನಂದು ಫೋಟೋಗ್ರಾಫರ್ ಪಾತ್ರ. ಅವ್ರ ಅಭಿಮಾನಿ ಆಗಿರ್ತೀನಿ. ಒಂದಿನ ಒಂದೂರಲ್ಲಿ ಅವ್ರ ಡ್ಯಾನ್ಸ್ ಪರ್‌ಫಾರ್ಮೆನ್ಸ್ ಇರುತ್ತೆ. ಅಲ್ಲಿಗೆ ನಾನು ಸೈಕಲಲ್ಲಿ ಹೋಗಿ ನೋಡೋ ಸೀನ್. ಸಿನಿಮಾದಲ್ಲಿ ನಾನೊಂಥರ ಫ್ಲರ್ಟ್. ಅದ್ಕೆ ಹೆಂಗಸ್ರ ಮಧ್ಯೆ ಕೂತ್ಕೋಬೇಕಿತ್ತು. ಆಗ ಸೀನ್ ಇಂಪ್ರೂವ್‌ ಮಾಡೋಕೆ ಒಂದು ಸೀಕ್ವೆನ್ಸ್ ಹೇಳ್ದೆ. ಅಲ್ಲಿದ್ದ ಒಬ್ಬ ಗಂಡಸನ್ನ ಕರ್ದು ಹೆಂಗಸ್ರ ಜೊತೆ ಕೂರಿಸ್ದೆ. ‘ನಾನು ಮೊದಲು ಈ ಹೆಂಗಸಿನ ಹೆಗಲ ಮೇಲೆ ಕೈ ಹಾಕ್ತೀನಿ, ನೀನು ಕೈ ತೆಗಿ. ಆಮೇಲೆ ಪುನಃ ಹಾಕ್ತೀನಿ, ಆಗ್ಲೂ ಕೈ ತೆಗಿ. ಮೂರನೇ ಸಲ ಕೈ ಹಾಕ್ದಾಗ ನೀನು ಕೈ ಕಚ್ಬಿಡ್ಬೇಕು, ಅಷ್ಟೇ ಸೀನ್’ ಅಂತ ಹೇಳಿ ಮತ್ತೆ ಮತ್ತೆ ರಿಹರ್ಸಲ್ ಮಾಡಿಸಿ, ಟೇಕಲ್ಲಿ ಇನ್ನೂ ಚೆನ್ನಾಗ್ ಮಾಡು ಅಂದ್ವಿ. ಅವನು ಕೊನೇಲಿ ಕಚ್ತಿದ್ದಂಗೆ ಡೈರೆಕ್ಟರ್ ಕಟ್ ಅಂದ್ರು, ಎಲ್ರೂ ಕ್ಲ್ಯಾಪ್ಸ್ ಮಾಡಿ, ನಿಮ್ ರಿಯಾಕ್ಷನ್ ಸೂಪರ್, ಸಖತ್ ನ್ಯಾಚುರಲ್ ಆಗಿ ಬಂದಿದೆ ಅಂದ್ರು. ಯಾಕ್ ನ್ಯಾಚುರಲ್ ಆಗಿ ಬಂತು ಅಂದ್ರೆ ಅವ್ನು ನಿಜವಾಗ್ಲೂ ಕಚ್ಬಿಟ್ಟಿದ್ದ. ತಮಾಷೆ ಅಂದ್ರೆ ಪಕ್ಕದಲ್ಲಿ ಕೂರ್ಸಿದ್ ಹೆಂಗಸು ಅವ್ನ ಹೆಂಡ್ತಿನೇ ಆಗಿದ್ಲು..” ಅಂತಂದ್ರು ಶರಣ್. ಅದನ್ನ ಕೇಳಿ ನಾನೂ ಜೋರಾಗಿ ನಕ್ಬಿಟ್ಟೆ.

ಇದನ್ನೂ ಓದಿ: ಗಣಿ ಹುಟ್ಟುಹಬ್ಬಕ್ಕೆ ಸಿಂಪಲ್​ ಸುನಿ ನೀಡಿದ ಡಬಲ್​ ಗಿಫ್ಟ್​​!

ಶರಣ್ ಅಂದ್ರೆನೇ ಹಾಗೇ.. ಅವರಿದ್ದಲ್ಲಿ ಸಿಕ್ಕಾಪಟ್ಟೆ ನಗು ಇರುತ್ತೆ. ತುಂಬಾ ಜೋವಿಯಲ್ ಮನುಷ್ಯ. ಹಾಗೆ ಅವ್ರು ತುಂಬಾ ವಿಷ್ಯ ತಿಳ್ಕೊಂಡಿರೋ ವ್ಯಕ್ತಿ. ಇನ್ನೊಂದ್ಸಲ ಅದೇ ‘ಬುಲೆಟ್ ಬಸ್ಯಾ’ ಶೂಟಿಂಗ್‌ಗೆ ಶ್ರೀರಂಗಪಟ್ಟಣಕ್ಕೆ ಹೋಗಿದ್ವಿ. ಅಲ್ಲಿನ ಬರ್ಡ್ ಸ್ಯಾಂಕ್ಚುರಿಗೆ ಜಗತ್ತಿನ ಯಾವ್ ಯಾವ್ದೋ ಮೂಲೆಗಳಿಂದ ಪಕ್ಷಿಗಳು ಬರುತ್ತೆ. ಅಂಥ ಪಕ್ಷಿಗಳ ಬಗ್ಗೆನೂ ಶರಣ್ ಹೇಳ್ತಿದ್ರು. ಮಧ್ಯ ಯಾವುದೇ ಅಪರೂಪದ ಪಕ್ಷಿ ಕಾಣಿಸಿದ್ರೂ, “ನೋಡು ಈ ಪಕ್ಷಿ ಹೆಸರು ಇದು, ಆ ಪಕ್ಷಿ ಹೆಸ್ರು ಅದು..” ಅಂತ ಎಲ್ಲ ಹಕ್ಕಿಗಳ ವಿವರ ಹೇಳೋರು. ನಾನು ಕ್ಯೂರಿಯಾಸಿಟಿಯಿಂದ ಕೇಳ್ತಿದ್ದೆ.ಅವರ ಜೊತೆ ಯಾವುದೇ ವಿಚಾರ ಬಗ್ಗೆ ಬೇಕಿದ್ರೂ ಮಾತಾಡಬಹುದು. ನೇಚರ್, ಫಿಲಾಸಫಿ, ಪಾಲಿಟಿಕ್ಸ್ ಎಲ್ಲನೂ. ಅವ್ರ ಜೊತೆ ಮಾತಾಡೋದು ತುಂಬಾ ಖುಷಿ ಕೊಡುತ್ತೆ. ಆದಷ್ಟು ಬೇಗ ಮತ್ತೆ ಸಿಗೋಣ. ಮತ್ತೆ ಹೊಸ ಕುರ್ಚಿಲಿ ಫಿಷ್ ಫ್ರೈ ತಿಂತಾ ಹರಟೋಣ’ ಅಂತ ಬೈ ಹೇಳ್ಕೊಂಡ್ವಿ.

ನಗ್ಸಿ ನಗ್ಸಿನೇ ಲಕ್ಷಾಂತರ ಜನರ ಆಯುಷ್ಯ ಜಾಸ್ತಿ ಮಾಡಿದ ನಿಮ್ಮ ಆಯುಷ್ಯನೂ ಜಾಸ್ತಿ ಆಗ್ಲಿ. ನೀವೂ ನಗ್ ನಗ್ತ ಇರಿ. ನಿಮ್ಮ ಸೆನ್ಸ್ ಆಫ್ ಹ್ಯೂಮರ್‌ಗೆ ಶರಣು
First published: