ಸ್ಯಾಂಡಲ್ವುಡ್ನ ನಟಿ ಹರಿಪ್ರಿಯಾ (Haripriya) ಹಾಗೂ ನಟ ವಸಿಷ್ಠ ಸಿಂಹ (Vasishta Simha) ಎಂಗೇಜ್ ಆಗಿರುವುದು ಗೊತ್ತೇ ಇದೆ. ಡಿಸೆಂಬರ್ 3 ರಂದು ಹರಿಪ್ರಿಯಾ ನಿವಾಸದಲ್ಲಿ ನಿಶ್ಚಿತಾರ್ಥ ನಡೆದಿದೆ. ಕುಟುಂಬಸ್ಥರು, ಸ್ನೇಹಿತರು ಮಾತ್ರ ಈ ನಿಶ್ಚಿತಾರ್ಥದಲ್ಲಿ (Engagement) ಭಾಗವಹಿಸಿದ್ದರು. ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಹರಿಪ್ರಿಯಾ ಅಧಿಕೃತವಾಗಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ರು. ಇದೀಗ ವಸಿಷ್ಠ ಸಿಂಹ ಕೊಟ್ಟ ಪ್ರೀತಿಯ ಗಿಫ್ಟ್ ಬಗ್ಗೆ ಹರಿಪ್ರಿಯಾ ವಿಡಿಯೋ ಹಂಚಿಕೊಂಡಿದ್ದಾರೆ. ತನ್ನ ಪ್ರೀತಿಯ ಸಿಂಹ ಅಂದ್ರೆ ವಸಿಷ್ಠ ಸಿಂಹ ಕೊಟ್ಟ ಗಿಫ್ಟ್ನಿಂದ (Gift) ಸ್ನೇಹ, ಪ್ರೀತಿಯಾಗಿ (Love Story) ಬೆಳೆದಿದ್ದು ಹೇಗೆ ಅನ್ನೋದನ್ನು ಸಹ ಹೇಳಿದ್ದಾರೆ. ಈ ವೇಳೆ ಹರಿಪ್ರಿಯಾ ನಾಚಿ ನೀರಾಗಿದ್ದಾರೆ.
ವಿಡಿಯೋ ಮೂಲಕ ಲವ್ ಸ್ಟೋರಿ ಹೇಳಿ ಹರಿಪ್ರಿಯಾ
1 ವರ್ಷದ ಹಿಂದೆ ನಟ ವಸಿಷ್ಠ ಸಿಂಹ ಅವರು ಮುದ್ದಾದ ನಾಯಿ ಮರಿಯನ್ನು ಹರಿಪ್ರಿಯಾ ಅವರಿಗೆ ಗಿಫ್ಟ್ ಆಗಿ ನೀಡಿದ್ದರಂತೆ. ಇದೀಗ ನಾಯಿ ಮರಿ ಕ್ರಿಸ್ಟಲ್ಗೆ 1 ವರ್ಷ ಪೂರೈಸಿದೆ. ಹೀಗಾಗಿ ನಟಿ ಹರಿಪ್ರಿಯಾ ಕ್ರಿಸ್ಟಲ್ಗೆ ಹುಟ್ಟುಹಬ್ಬದ ಶುಭಾಷಯವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಜೊತೆಗೆ ಪ್ರೀತಿಯ ಬರಹದ ಪೋಸ್ಟ್ ಕೂಡ ಮಾಡಿದ್ದಾರೆ.
ವಸಿಷ್ಠ ಸಿಂಹ ಕೊಟ್ಟ ಗಿಫ್ಟ್ ಕ್ರಿಸ್ಟಲ್
ಕ್ರಿಸ್ಟಲ್ ನನ್ನ ಜೀವನಕ್ಕೆ ಬಂದ ನಂತರ ಒಂದು ವರ್ಷವಾಗಿದೆ. ಲಕ್ಕಿ (ನನ್ನ ಗೋಲ್ಡನ್ ರಿಟ್ರೈವರ್) ಹೋದ ಬಳಿಕ ಅವನು ವಾಪಸ್ ಬರ್ತಾನೆ ಎಂದು ಕನಸು ಕಂಡಿದ್ದೆ, ಹಾಗೇ ಕ್ರಿಸ್ಟಲ್ ಮೂಲಕ ನಮ್ಮ ಮನೆಗೆ ಬಂದ, ವಸಿಷ್ಠ ಸಿಂಹ ಅವರು ಕ್ರಿಸ್ಟಲ್ ಅನ್ನು ನನಗೆ ಉಡುಗೊರೆಯಾಗಿ ನೀಡಿದ್ರು ಎಂದು ಹರಿಪ್ರಿಯಾ ಬರೆದುಕೊಂಡಿದ್ದಾರೆ.
ಕ್ರಿಸ್ಟಲ್ ಅತ್ಯಂತ ಸ್ಪೆಷಲ್
ಮತ್ತೊಂದು ಆಶ್ಚರ್ಯ ಅಂದ್ರೆ ಕ್ರಿಸ್ಟಲ್ ಕೂಡ ಲಕ್ಕಿ ಹುಟ್ಟಿದ ದಿನವೇ ಜನಿಸಿದ್ದಾನೆ. ಹೀಗಾಗಿ ಕ್ರಿಸ್ಟಲ್ ಅತ್ಯಂತ ವಿಶೇಷವಾಗಿದೆ. ಮನೆಗೆ ಅವನ ಆಗಮನ ಕೂಡ ಸ್ಪೆಷಲ್ ಆಗಿತ್ತು ಎಂದು ಹರಿಪ್ರಿಯಾ ಹೇಳಿದ್ದಾರೆ.
View this post on Instagram
ವಸಿಷ್ಠ ಸಿಂಹ ಕೊಟ್ಟ ಕ್ರಿಸ್ಟಲ್ನ ಎದೆಯ ಮೇಲೆ ಲವ್ ಸಿಂಬಲ್ ಹೊತ್ತು ತಂದಿದೆ. ಅದು ಕ್ರಿಸ್ಟಲ್ನ ಎದೆಯ ಮೇಲಿದ್ದ ಬರ್ತ್ ಮಾರ್ಕ್, ಆಗಾಲೇ ನನಗೆ ಸಿಂಹನ ಮೊದಲ ಗಿಫ್ಟ್ ಹಿಂದಿನ ಬಿಗ್ ಸೀಕ್ರೇಟ್ ತಿಳಿಯಿತು ಎಂದು ಹೇಳುತ್ತಾ ಹರಿಪ್ರಿಯಾ ನಾಚಿಕೊಂಡಿದ್ದಾರೆ.
ಇದನ್ನೂ ಓದಿ: Vasishta Simha: ಜೊತೆಯಾಗಿ ಒಂದೇ ಒಂದು ಸಿನಿಮಾ ಮಾಡಿಲ್ಲ! ವಸಿಷ್ಠ-ಹರಿಪ್ರಿಯಾ ಲವ್ ಸ್ಟಾರ್ಟ್ ಆಗಿದ್ದು ಹೇಗೆ?
ಕ್ರಿಸ್ಟಲ್ ಬೆಳೆದಿದ್ದಾನೆ, ಜೊತೆಗೆ ನಮ್ಮ ಸ್ನೇಹ, ಪ್ರೀತಿಯಾಗಿದೆ
ಸಿಂಹ ಕೊಟ್ಟ ಕ್ರಿಸ್ಟಲ್ ನಮ್ಮ ಮನೆ ಮನಕ್ಕೆ ಬಂದು ವರ್ಷವಾಗಿದೆ. ನಮ್ಮ ಜೊತೆಯೇ ಕ್ರಿಸ್ಟಲ್ ಬೆಳೆದಿದ್ದಾನೆ, ಹಾಗೇ ನಮ್ಮ ಸ್ನೇಹ ಕೂಡ ಪ್ರೀತಿಯಾಗಿ ಬೆಳೆದಿದೆ. ಹುಟ್ಟುಹಬ್ಬದ ಶುಭಾಷಯಗಳು ಹ್ಯಾಪಿ ಮತ್ತು ಕ್ರಿಸ್ಟಲ್.. ನೀವು ಪ್ರತಿದಿನ ನನ್ನ ಮುಖದ ಮೇಲೆ ತರುವ ನಗುವಿಗೆ ಧನ್ಯವಾದಗಳು. ನಿಮ್ಮಿಬ್ಬರನ್ನೂ ನಾನು ತುಂಬಾ ಪ್ರೀತಿಸುತ್ತೇನೆ ಎಂದು ನಟಿ ಹರಿಪ್ರಿಯಾ ಬರೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಇವರೇ ನಮ್ಮ ಪ್ರೀತಿಗೆ ಕನ್ನಡಿ ಹಿಡಿದವರು ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ