ಸ್ಯಾಂಡಲ್ವುಡ್ನ ನಟಿ ಹರಿಪ್ರಿಯಾ (Haripriya) ಹಾಗೂ ನಟ ವಸಿಷ್ಠ ಸಿಂಹ (Vasishta Simha) ಹಸೆಮಣೆ ಏರಲು ದಿನಾಂಕ ಫಿಕ್ಸ್ ಆಗಿದೆ. ಹೊಸ ವರ್ಷದ ಆರಂಭದಲ್ಲೇ ಹೊಸ ಜೀವನಕ್ಕೆ ಕಾಲಿಡಲು ಜೋಡಿ ರೆಡಿಯಾಗಿದೆ ಜನವರಿ 26 ರಂದು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಎಂಗೇಜ್ಮೆಂಟ್ ಬಳಿಕ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ (Bengaluru) ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಒಟ್ಟಿಗೆ ಸುದ್ದಿಗೋಷ್ಠಿ ನಡೆಸಿ ಮದುವೆ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ವಿವಾಹ ಜರುಗಲಿದೆ. ಇದೇ ತಿಂಗಳ 28ರಂದು ಬೆಂಗಳೂರಿನಲ್ಲಿ ವಸಿಷ್ಠ ಸಿಂಹ-ಹರಿಪ್ರಿಯಾ ರಿಸೆಪ್ಷನ್ (Reception) ಅದ್ಧೂರಿಯಾಗಿ ನಡೆಯಲಿದೆ.
ನಮ್ದು ಸಿಂಪಲ್ ಮದುವೆಯಲ್ಲ ಅದ್ಧೂರಿ ವಿವಾಹ
ಬೆಂಗಳೂರಿನ ಕೆ.ಸಿ ಪ್ಯಾಲೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಹರಿಪ್ರಿಯಾ, ವಸಿಷ್ಠ ಸಿಂಹ ಜೋಡಿ, ನಾವು ಸರಳವಾಗಿ ಮದುವೆ ಆಗುತ್ತಿಲ್ಲ. ತುಂಬಾ ಅದ್ಧೂರಿಯಾಗಿ ಮದುವೆ ಆಗುತ್ತಿದ್ದೇವೆ ಎಂದಿದ್ದಾರೆ. ಜನವರಿ 26ಕ್ಕೆ ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆ ನಡೆಯುತ್ತೆ. 28ಕ್ಕೆ ಬೆಂಗಳೂರಿನಲ್ಲಿ ಆರತಕ್ಷತೆ ಇರುತ್ತೆ ಎಂದು ಹರಿಪ್ರಿಯಾ ಜೋಡಿ ತಿಳಿಸಿದೆ.
ಮನೆಯವರು ಸೇರಿ ಅರೆಂಜ್ ಮ್ಯಾರೇಜ್ ಮಾಡ್ತಿದ್ದಾರೆ
ಲವ್ ಮಾಡಿದ್ದು ನಾವು, ಆದರೆ ಈಗ ಅರೆಂಜ್ ಮ್ಯಾರೇಜ್ ಆಗಿದೆ. ನಮ್ಮ ಮನೆಯವರು ಜಾಸ್ತಿ ಆಸಕ್ತಿ ತೋರಿಸಿ ಮದುವೆ ಮಾಡುತ್ತಿದ್ದಾರೆ. ಹರಿಪ್ರಿಯಾ ನನ್ನ ಸಿನಿಮಾ ಸೆಟ್ ಗೆ ವಿಸಿಟ್ ಮಾಡಿ ಸರ್ ಪ್ರೈಸ್ ಕೊಟ್ರು, ಏರ್ಪೋರ್ಟ್ ಫೋಟೋ ಎಂಗೇಜ್ಮೆಂಟ್ ಫೋಟೋ ಹೊರ ಬಂದ ಬಳಿಕ ಎಲ್ಲರಿಗೂ ವಿಷಯ ತಿಳಿಯಿತು ಎಂದು ವಸಿಷ್ಠ ಸಿಂಹ ಹೇಳಿದ್ದಾರೆ.
ನಮ್ಮ ಸ್ನೇಹ ಪ್ರೀತಿಯಾಗಿ ಬದಲಾಯ್ತು
ನಾನು ನಾಯಿ ಮರಿ ಕೊಟ್ಟು ಪಟಾಯಿಸಿ ಬಿಟ್ಟೆ ಅಂತ ಅಂದ್ರು,ನಾನು ಪ್ರೀತಿಸಿದ ಬಳಿಕ ನಾಯಿಮರಿ ಕೊಟ್ಟೆ ಎಂದು ನಟ ವಸಿಷ್ಠ ಸಿಂಹ ತಮಾಷೆ ಮಾಡಿದ್ರು. 2016 ರಲ್ಲಿ ಇಬ್ಬರ ಸ್ನೇಹ ಶುರುವಾಯ್ತು. ನನ್ನ ಗೋಧಿ ಬಣ್ಣ ಸಿನಿಮಾ ನೋಡಿ ಬಂದು ಹರಿಪ್ರಿಯಾ ವಿಶ್ ಮಾಡಿದ್ರು. ಆ ನಂತರ ಇಬ್ಬರ ನಡುವಿನ ಸ್ನೇಹ, ಪ್ರೀತಿಯಾಗಿ ಬದಲಾಯ್ತು ಎಂದು ಹರಿಪ್ರಿಯಾ ಹೇಳಿದ್ದಾರೆ.
ಕಷ್ಟದಿನದಲ್ಲಿ ನನ್ನ ಕೈ ಹಿಡಿದ್ರು ಹರಿಪ್ರಿಯಾ
ಮದುವೆ ಪ್ರೀತಿ ವಿಚಾರದಲ್ಲಿ ನಮ್ಮದೇ ಪ್ಯಾಟ್ರನ್ ರೂಢಿಸಿಕೊಂಡಿದ್ದೇವೆ. ನಾನು ಮೈಸೂರು ಹುಡುಗ ಹಾಗಾಗಿ ಅಲ್ಲೇ ಮದುವೆ ಆಗುತ್ತೇನೆ. ನನ್ನ ಜೀವನದಲ್ಲಿ ಕಷ್ಟದ ದಿನಗಳಲ್ಲಿ ಗೆಳತಿಯಾಗಿ ಹರಿಪ್ರಿಯಾ ಶಕ್ತಿ ತುಂಬಿದ್ದಾರೆ ಎಂದು ನಟ ವಸಿಷ್ಠ ಸಿಂಹ ಹೇಳಿದ್ದಾರೆ.
ಮದುವೆ ಬಗ್ಗೆ ಮಾತಾಡೋಕೆ ಭಯವಾಗ್ತಿದೆ
ಹರಿಪ್ರಿಯಾ ಬಗ್ಗೆ ಮಾತಾಡೋಕೆ ನನಗೆ ತುಂಬಾ ಖುಷಿ ಆಗುತ್ತಿದೆ. ಹಾಗೇ ಇವತ್ತು ಮದುವೆ ಬಗ್ಗೆ ಮಾತಾಡೋಕೂ ತುಂಬಾ ಭಯ ಆಗ್ತಿದೆ ಎಂದು ನಟ ವಸಿಷ್ಠ ಸಿಂಹ ಹೇಳಿದ್ದಾರೆ. ನಮ್ಮಿಬ್ಬರ ಬೆಳವಣಿಗೆಯಲ್ಲಿ ಮಾಧ್ಯಮ ದೊಡ್ಡ ಪಾತ್ರ ವಹಿಸಿದೆ ಎಂದು ಹರಿಪ್ರಿಯಾ ಕೂಡ ಮಾತು ಆರಂಭಿಸಿದ್ರು.
3 ವರ್ಷಗಳಿಂದ ನಾವು ಪ್ರೀತಿಸ್ತಿದ್ದೀವಿ
ನಮ್ಮ ಎಂಗೇಜ್ ಮೆಂಟ್ ಪ್ರೀತಿನ ಹೇಳಿಕೊಳ್ಳೋಣ ಅಂತ ಅಂದುಕೊಂಡ್ವಿ ಆದರೆ ಅದು ಆಗಲಿಲ್ಲ. ನನ್ನ ತಂದೆಯಲ್ಲಿ ಇರುವ ಎಷ್ಟೋ ಕ್ವಾಲಿಟೀಸ್ ನ ನಾನು ನನ್ನ ಸಿಂಹನಲ್ಲಿ ಕಂಡೆ. 3 ವರ್ಷಗಳಿಂದ ನಾವು ಪ್ರೀತಿಸ್ತಿದ್ದೀವಿ, ನಮ್ಮ ಪ್ರೀತಿಯನ್ನು ಯಾರಿಗೂ ಗೊತ್ತಾಗದಂತೆ ಕಾಪಾಡಿಕೊಳ್ಳಲು ತುಂಬಾ ಶ್ರಮ ಪಟ್ಟಿದ್ದೇವೆ ಅದ್ರೆ ಆಗಲಿಲ್ಲ ಎಂದು ಹರಿಪ್ರಿಯಾ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ