• Home
  • »
  • News
  • »
  • entertainment
  • »
  • Haripriya-Vasishta Simha: ಮೈಸೂರಲ್ಲಿ ವೆಡ್ಡಿಂಗ್​, ಬೆಂಗಳೂರಲ್ಲಿ ಹರಿಪ್ರಿಯಾ-ವಸಿಷ್ಠ ಸಿಂಹ ಅದ್ಧೂರಿ ರಿಸೆಪ್ಷನ್​!

Haripriya-Vasishta Simha: ಮೈಸೂರಲ್ಲಿ ವೆಡ್ಡಿಂಗ್​, ಬೆಂಗಳೂರಲ್ಲಿ ಹರಿಪ್ರಿಯಾ-ವಸಿಷ್ಠ ಸಿಂಹ ಅದ್ಧೂರಿ ರಿಸೆಪ್ಷನ್​!

ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ

ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ

ಇದೇ ತಿಂಗಳ 26ರಂದು ಮೈಸೂರಿನಲ್ಲಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿ ಹೊಸ ಜೀವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಜೊತೆಗೆ ಇದೇ ತಿಂಗಳ 28ರಂದು ಬೆಂಗಳೂರಿನಲ್ಲಿ ಆರತಕ್ಷತೆಯನ್ನು ಹಮ್ಮಿಕೊಂಡಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಸ್ಯಾಂಡಲ್​ವುಡ್​ನ ಲವ್​ ಬರ್ಡ್ಸ್​ಗಳ ಪಟ್ಟಿ ಸೇರಿದ​ ನಟಿ ಹರಿಪ್ರಿಯಾ (Haripriya) ಹಾಗೂ ನಟ ವಸಿಷ್ಠ ಸಿಂಹ (Vasishta Simha) ಹಸೆಮಣೆ ಏರಲು ದಿನಾಂಕ ಫಿಕ್ಸ್ ಆಗಿದೆ.  ಹೊಸ ವರ್ಷದ ಆರಂಭದಲ್ಲೇ ಹೊಸ ಜೀವನಕ್ಕೆ ಕಾಲಿಡಲು ಜೋಡಿ ರೆಡಿಯಾಗಿದೆ ಜನವರಿ 26 ರಂದು ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡಲಿದೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ವಿವಾಹ ಜರುಗಲಿದೆ. ಇದೇ ತಿಂಗಳ 28ರಂದು ಬೆಂಗಳೂರಿನಲ್ಲಿ ವಸಿಷ್ಠ ಸಿಂಹ-ಹರಿಪ್ರಿಯಾ ರಿಸೆಪ್ಷನ್​ ಅದ್ಧೂರಿಯಾಗಿ ನಡೆಯಲಿದೆ. 


ಜನವರಿ 28 ರಂದು ಅದ್ಧೂರಿ ರಿಸೆಪ್ಷನ್​


ಇದೇ ತಿಂಗಳ 26ರಂದು ಮೈಸೂರಿನಲ್ಲಿ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿ ಹೊಸ ಜೀವನಕ್ಕೆ ಹೆಜ್ಜೆ ಇಡುತ್ತಿದ್ದಾರೆ. ಬಾಳ ಸಂಗಾತಿಗಳಾಗ್ತಿರುವ ಸ್ಯಾಂಡಲ್​ ವುಡ್​ ಜೋಡಿ ಇದೇ ತಿಂಗಳ 28ರಂದು ಬೆಂಗಳೂರಿನಲ್ಲಿ ಆರತಕ್ಷತೆಯನ್ನು ಹಮ್ಮಿಕೊಂಡಿದ್ದಾರೆ. ನಟ-ನಟಿಯ ಅದ್ಧೂರಿ ರಿಸೆಪ್ಷನ್​ಗೆ ಮಾಧ್ಯಮಗಳಿಗೆ ಆಹ್ವಾನ ನೀಡಲು ನಾಳೆ ಪ್ರೆಸ್ ಮೀಟ್ ಕೂಡ ಕರೆದಿದ್ದಾರೆ. ಬೆಂಗಳೂರಲ್ಲಿ ಯಾವ ಸ್ಥಳದಲ್ಲಿ ಎಷ್ಟು ಗಂಟೆಗೆ ಎನ್ನುವುದನ್ನು ನಾಳೆ ತಿಳಿಸಲಿದ್ದಾರೆ.




ಸಿಂಹ-ಪ್ರಿಯಾ ಮದುವೆ ಡೇಟ್ ಘೋಷಿಸಿದ ಪ್ರತಾಪ್​ ಸಿಂಹ


ವಸಿಷ್ಠ ಸಿಂಹ, ಹರಿಪ್ರಿಯಾ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾರೆ. ಸಿನಿಮಾ ವಿಚಾರಗಳನ್ನು ಮಾತ್ರವಲ್ಲ ತಮ್ಮ ವೈಯಕ್ತಿಕ ವಿಚಾರಗಳನ್ನು ಸಹ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿಕೊಳ್ತಾರೆ. ಆದ್ರೆ ಮದುವೆ ದಿನಾಂಕ ಬಗ್ಗೆ ಈ ಜೋಡಿ ಅಧಿಕೃತವಾಗಿ ಘೋಷಣೆ ಮಾಡಿರಲಿಲ್ಲ.  ಈ ಜೋಡಿಗಿಂತ ಮೊದಲೇ ಮದುವೆ ದಿನಾಂಕವನ್ನು ಸಂಸದ ಪ್ರತಾಪ್ ಸಿಂಹ ಪೋಸ್ಟ್ ಮಾಡಿದ್ರು.


ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ವಿವಾಹ


ಸೆಲೆಬ್ರೆಟಿಗಳು ಅದ್ಧೂರಿ ವಿವಾಹವಾಗೋದು ಕಾಮನ್​, ಸಾಮಾನ್ಯವಾಗಿ ಸಿನಿಮಾ ಸ್ಟಾರ್​ ಗಳು ದೊಡ್ಡ ದೊಡ್ಡ ಕಲ್ಯಾಣ ಮಂಟಪ, ರೆಸಾರ್ಟ್​ ಗಳಲ್ಲಿ ವಿವಾಹವಾಗ್ತಾರೆ. ಆದ್ರೆ ನಮ್ಮ ವರಿಷ್ಠ ಸಿಂಹ ಹಾಗೂ ಹರಿಪ್ರಿಯಾ ಜೋಡಿ  ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆಯಾಗಲು ನಿರ್ಧರಿಸಿದ್ದಾರೆ. ಹೊಸ ವರ್ಷ ಆರಂಭದಲ್ಲೇ ವೈವಾಹಿಕ ಜೀವನಕ್ಕೆ ಕಾಲಿಡ್ತಿರುವ ಈ ಜೋಡಿಗೆ ಗಣ್ಯರು ಹಾಗೂ ಅಭಿಮಾನಿಗಳು ಶುಭಕೋರಿದ್ದಾರೆ. ಜೊತೆ ನಟ-ನಟಿಯರು ಸಹ ಬೆಸ್ಟ್​ ವಿಶಸ್​ ತಿಳಿಸಿದ್ದಾರೆ.


ಡಿಸೆಂಬರ್​ 3 ರಂದು  ನಿಶ್ಚಿತಾರ್ಥ


ಡಿಸೆಂಬರ್​ 3 ರಂದು ಹರಿಪ್ರಿಯಾ ನಿವಾಸದಲ್ಲಿ ಇಬ್ಬರಿಗೂ ನಿಶ್ಚಿತಾರ್ಥ ನಡೆದಿತ್ತು. ಕುಟುಂಬಸ್ಥರು, ಸ್ನೇಹಿತರು ಮಾತ್ರ ಈ ನಿಶ್ಚಿತಾರ್ಥದಲ್ಲಿ (Engagement) ಭಾಗವಹಿಸಿದ್ದರು. ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಹರಿಪ್ರಿಯಾ ಅಧಿಕೃತವಾಗಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ರು. ಬಳಿಕ ವಸಿಷ್ಠ ಸಿಂಹ  ತನ್ನ ಪ್ರೀತಿ ಹುಡುಗಿ ಹರಿಪ್ರಿಯಾ ಜೊತೆ  ಇಯರ್​ ಎಂಡ್​ಗೆ​ ಹಾಲಿ ಡೇ ಟ್ರಿಪ್​ ಹೋಗಿದ್ರು. ಈ ಜೋಡಿ ಮಲ್ಪೆಯಲ್ಲಿ ಸನ್​ ಸೆಟ್​ ನೋಡಿ ಎಂಜಾಯ್ ಮಾಡಿದ್ದರು.


ಇದನ್ನೂ ಓದಿ: Vasishta Simha: ಜೊತೆಯಾಗಿ ಒಂದೇ ಒಂದು ಸಿನಿಮಾ ಮಾಡಿಲ್ಲ! ವಸಿಷ್ಠ-ಹರಿಪ್ರಿಯಾ ಲವ್ ಸ್ಟಾರ್ಟ್ ಆಗಿದ್ದು ಹೇಗೆ?


ಮಲ್ಪೆ ಸಮುದ್ರದ ದಡದಲ್ಲಿ ಮುದ್ದಾದ ಜೋಡಿ


ಸ್ಯಾಂಡಲ್​ವುಡ್​ನ ತಾರಾ ಜೋಡಿಗಳ ಲಿಸ್ಟ್​ಗೆ ಹರಿಪ್ರಿಯಾ ಹಾಗೂ ವಶಿಷ್ಠ ಸಿಂಹ ಕೂಡ ಸೇರ್ಪಡೆಗೊಳ್ಳುತ್ತಿದ್ದಾರೆ. ಬ್ಯುಟಿಫುಲ್​ ಜೋಡಿ ಇದೀಗ ಕರಾವಳಿಯ ಕಡಲತೀರದಲ್ಲಿ ಸನ್​ ಸೆಟ್​ ನೋಡಿ ಖುಷಿ ಪಟ್ಟಿದ್ದರು. ಮಲ್ಪೆ ಬೀಚ್​ನಲ್ಲಿ ಕೈ ಕೈ ಹಿಡಿದು ಓಡಾಡಿದ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ, ವಿಡಿಯೋ ಕೂಡ ಮಾಡಿದ್ದಾರೆ. ಈ ವಿಡಿಯೋಗೆ ಸುಂದರವಾದ ಸಾಂಗ್​ ಸೆಟ್​ ಮಾಡಿ ವಸಿಷ್ಠ ಸಿಂಹ ನಮ್ಮ ಇನ್ಸ್ಟಾ ಗ್ರಾಮ್​ನಲ್ಲಿ ಹಂಚಿಕೊಂಡಿದ್ದರು.

Published by:ಪಾವನ ಎಚ್ ಎಸ್
First published: