• Home
  • »
  • News
  • »
  • entertainment
  • »
  • Breast Cancer: 16 ಬಾರಿ ಕೀಮೋಥೆರಪಿಗೆ ಒಳಗಾದ ನಟಿ, ಸ್ತನ ಕ್ಯಾನ್ಸರ್ ವಿರುದ್ಧ ನಗುಮುಖದಲ್ಲೇ ಹೋರಾಡ್ತಿರೋ ನಂದಿನಿ!

Breast Cancer: 16 ಬಾರಿ ಕೀಮೋಥೆರಪಿಗೆ ಒಳಗಾದ ನಟಿ, ಸ್ತನ ಕ್ಯಾನ್ಸರ್ ವಿರುದ್ಧ ನಗುಮುಖದಲ್ಲೇ ಹೋರಾಡ್ತಿರೋ ನಂದಿನಿ!

ನಟಿ ಹಂಸ ನಂದಿನಿ

ನಟಿ ಹಂಸ ನಂದಿನಿ

ನಟಿ ಹಂಸ ನಂದಿನಿ ಪೋಟೋಗಳನ್ನು ಹಂಚಿಕೊಳ್ಳುವ ಜೊತೆಗೆ 16 ಕೀಮೋಥೆರಪಿಯನ್ನು ಪೂರೈಸಿದ್ದೇನೆ. ನಾನು ಈಗ ಅಧಿಕೃತವಾಗಿ ಕೀಮೋ ಸರ್ವೈವರ್ ಆಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

  • Share this:

ತೆಲುಗಿನ ಜನಪ್ರಿಯ ನಟಿ(Telugu Famous Actress) ಹಂಸ ನಂದಿನಿ(Hamsa Nandini) ಅವರಿಗೆ ಕಳೆದ ವರ್ಷ ಸ್ತನ ಕ್ಯಾನ್ಸರ್(Breast Cancer) ಇರುವುದು ಪತ್ತೆಯಾಗಿದ್ದು, ಸದ್ಯ ಚಿಕಿತ್ಸೆ(Treatment) ಪಡೆಯುತ್ತಿದ್ದಾರೆ. ಪ್ರಸ್ತುತ ಹಂಸ ನಂದಿನಿ ಸ್ತನ ಕ್ಯಾನ್ಸರ್‌ಗಾಗಿ 16 ಬಾರಿ ಕೀಮೋಥೆರಪಿ( 16 Cycles of Chemotherapy)ಯನ್ನು ಪೂರ್ಣಗೊಳಿಸಿದ್ದಾರೆ. ಈ ವಿಷಯವನ್ನು ಹಂಸ ನಂದಿನಿ ತಮ್ಮ ಸೋಶಿಯಲ್ ಮೀಡಿಯಾ(Social Media) ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಹಂಸ ನಂದಿನಿ ಅವರು ಆಸ್ಪತ್ರೆಯಲ್ಲಿ ಕ್ಲಿಕ್ಕಿಸಿದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, 16 ಬಾರಿ ಕೀಮೋಥೆರಪಿಯನ್ನು ಪೂರ್ಣಗೊಳಿಸುವ ಉತ್ಸಾಹವನ್ನು ಫೋಟೋ(Photo)ದಲ್ಲಿ ತೋರಿಸಿಕೊಂಡಿದ್ದಾರೆ. ಈ ಹಿಂದೆಯೂ ಕೂಡ ಹಲವು ಬಾರಿ ತಮ್ಮ ಬೋಳು ತಲೆ(Bald Head)ಯ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಇತರೆ ಕ್ಯಾನ್ಸರ್ ರೋಗಿಗಳಿಗೆ ಧೈರ್ಯ ತುಂಬಿದ್ದಾರೆ.


16 ಬಾರಿ ಕೀಮೋಥೆರಪಿಗೆ ಒಳಗಾದ ನಂದಿನಿ!


ನಟಿ ಹಂಸ ನಂದಿನಿ ಪೋಟೋಗಳನ್ನು ಹಂಚಿಕೊಳ್ಳುವ ಜೊತೆಗೆ 16 ಕೀಮೋಥೆರಪಿಯನ್ನು ಪೂರೈಸಿದ್ದೇನೆ. ನಾನು ಈಗ ಅಧಿಕೃತವಾಗಿ ಕೀಮೋ ಸರ್ವೈವರ್ ಆಗಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಆದರೆ ಇದು ಇನ್ನೂ ಮುಗಿದಿಲ್ಲ, ನಾನು ಇನ್ನೂ ಗೆದ್ದಿಲ್ಲ. ಇದು ಮುಂದಿನ ಯುದ್ಧಕ್ಕೆ ತಯಾರಾಗುವ ಸಮಯ, ಇದು ಶಸ್ತ್ರಚಿಕಿತ್ಸೆಗಳ ಸಮಯ ಎಂದು ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ವಿಷಯ ಹಂಚಿಕೊಂಡಿದ್ದಾರೆ.ಡಿಸೆಂಬರ್ 2021ರ ಕೊನೆಯಲ್ಲಿ, ನಟಿ ತನಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದೆ ಎಂದು ಬೋಳಿಸಿಕೊಂಡ ತಲೆಯ ಚಿತ್ರವನ್ನು ಹಂಚಿಕೊಳ್ಳುವುದರ ಮೂಲಕ ವಿಷಯವನ್ನು ಬಹಿರಂಗ ಪಡಿಸಿದ್ದರು.


ಇದನ್ನೂ ಓದಿ: ಸ್ಟಾರ್ ನಟಿಯಲ್ವಾ? ರೀಲ್ಸ್ ಮಾಡ್ಬೇಡ ಎನ್ನುವವರಿಗೆ ಮಾಧುರಿ ಉತ್ತರವಿದು


ನಾನು ಹೋರಾಟದಿಂದ ಹಿಂದೆ ಸರಿಯಲ್ಲ ಎಂದ ನಟಿ!


“ನಾನು ಹೋರಾಟದಿಂದ ಹಿಂದೆ ಸರಿಯುವುದನ್ನು ನಿರಾಕರಿಸುತ್ತೇನೆ. ಆದರೆ, ಧೈರ್ಯ ಮತ್ತು ಪ್ರೀತಿಯಿಂದ, ನಾನು ಮುಂದೆ ಹೋಗುತ್ತೇನೆ. ನಾಲ್ಕು ತಿಂಗಳ ಹಿಂದೆ, ನನ್ನ ಸ್ತನದಲ್ಲಿ ಸಣ್ಣ ಗಡ್ಡೆಯೊಂದು ಇರುವುದು ಗೊತ್ತಾಯಿತು. ನನ್ನ ಜೀವನ ಒಂದೇ ರೀತಿ ಇರುವುದಿಲ್ಲ ಎಂದು ಆ ಕ್ಷಣವೇ ನನಗೆ ತಿಳಿಯಿತು. ಒಂದೆರಡು ಗಂಟೆಗಳಲ್ಲಿ ಎಲ್ಲ ರೀತಿಯ ಪರೀಕ್ಷೆಗಳನ್ನು ಮಾಡಲಾಯಿತು. ನನಗೆ ಸ್ತನ ಕ್ಯಾನ್ಸರ್ ಮೂರನೇ ಸ್ಟೇಜ್‌ನಲ್ಲಿರುವುದು ಗೊತ್ತಾಯಿತು. 18 ವರ್ಷಗಳ ಹಿಂದೆ ಭೀಕರ ಕಾಯಿಲೆಯಿಂದಾಗಿ ನನ್ನ ತಾಯಿಯನ್ನು ನಾನು ಕಳೆದುಕೊಂಡಿದ್ದೆ. ಅದರ ಕರಾಳ ನೆರಳಿನಲ್ಲೇ ಅಂದಿನಿಂದ ನಾನು ವಾಸಿಸುತ್ತಿದ್ದೆ ಮತ್ತು ನಾನು ಭಯಗೊಂಡಿದ್ದೆ'' ಎಂದಿದ್ದರು ಹಂಸ ನಂದಿನಿ.



ನಗುವಿನೊಂದಿಗೆ ಹೋರಾಡುತ್ತೇನೆ ಎಂದಿದ್ದ ನಟಿ!


'ಸದ್ಯ ನಾನು 9 ಬಾರಿ ಕೀಮೋಥೆರಪಿಗೆ ಒಳಗಾಗಿದ್ದೇನೆ. ಇನ್ನೂ 7 ಬಾರಿ ಕೀಮೋಥೆರಪಿ ಮಾಡಿಸಿಕೊಳ್ಳಬೇಕಿದೆ. ನಾನು ಕೆಲವು ಭರವಸೆಗಳನ್ನು ನೀಡುತ್ತೇನೆ. ಈ ರೋಗವು ನನ್ನ ಜೀವನವನ್ನು ವ್ಯಾಪಿಸಿಕೊಳ್ಳಲು ನಾನು ಬಿಡುವುದಿಲ್ಲ ಮತ್ತು ನಾನು ಅದರ ವಿರುದ್ಧ ನಗುವಿನೊಂದಿಗೆ ಹೋರಾಡುತ್ತೇನೆ, ಗೆಲ್ಲುತ್ತೇನೆ. ನಾನು ಉತ್ತಮ ಮತ್ತು ಬಲಶಾಲಿಯಾಗಿ ಮತ್ತೆ ತೆರೆಯ ಮೇಲೆ ಬರುತ್ತೇನೆ ಎಂದು ಕ್ಯಾನ್ಸರ್ ಪತ್ತೆಯಾದ ದಿನ ಭಾವುಕವಾಗಿ ಮತ್ತು ಧೈರ್ಯದಿಂದ ಹೇಳಿದ್ದರು.


ಬೇಗ ಹುಷಾರಾಗಿ ಬನ್ನಿ ಎಂದ ಅಭಿಮಾನಿಗಳು!


ಪ್ರಸ್ತುತ 16 ಬಾರಿ ಕೀಮೋಥೆರಪಿ ಮುಗಿಸಿರುವ ಹಂಸ ನಂದಿನಿ ಕಾಯಿಲೆ ವಿರುದ್ಧ ಎದೆಗುಂದದೇ ಹೋರಾಡುತ್ತಿದ್ದಾರೆ. ತಮ್ಮ ಅನುಭವ ಮತ್ತು ಧೈರ್ಯದ ನುಡಿಗಳ ಮೂಲಕ ಇತರೆ ರೋಗಿಗಳಿಗೂ ಸ್ಪೂರ್ತಿಯಾಗಿದ್ದಾರೆ. ಹಂಸ ನಂದಿನಿ ಕಾಯಿಲೆ ಗೆದ್ದು ಮತ್ತೆ ತೆರೆ ಮೇಲೆ ಬರಲಿ ಎಂಬುವುದು ಎಲ್ಲರ ಆಶಯವಾಗಿದೆ.


ಇದನ್ನೂ ಓದಿ: ಮದ್ವೆ ಟ್ರೋಲ್ಸ್​ಗೆಲ್ಲ ಟಕ್ಕರ್​ ಕೊಟ್ರಾ ರಶ್ಮಿಕಾ? ಇದನ್ನು ಕುಡಿದು ಆರಾಮಾಗಿರಿ ಅಂದಿದ್ಯಾಕೆ ಕಿರಿಕ್​ ಬ್ಯೂಟಿ?


ಹಂಸ ನಂದಿನಿಯ ಜನ್ಮ ಹೆಸರು ಪೂನಂ, ಆ ಹೆಸರಿನ ಮೂಲಕ ಅವರು ಕೆಲವು ಚಿತ್ರಗಳಲ್ಲಿ ಕಾಣಿಸಿಕೊಂಡರು. ಆದರೆ ಚಲನಚಿತ್ರೋದ್ಯಮದಲ್ಲಿ ಪೂನಂ ಎಂಬ ಹೆಸರಿನ ಜನರು ಇದ್ದುದರಿಂದ, ನಿರ್ದೇಶಕ ವಂಶಿ ಅವರಿಗೆ ಹಂಸ ನಂದಿನಿ ಎಂದು ಮರುನಾಮಕರಣ ಮಾಡಿದರು. ಅದರ ನಂತರ, ಅವರು ಮಿರ್ಚಿ, ಭಾಯ್, ಅಥಾರಿಂಟಿಕಿ ದಾರೇದಿ ಮತ್ತು ರಾಮಯ್ಯ ವಸ್ತಾವಯ್ಯದಂತಹ ಚಲನಚಿತ್ರಗಳಲ್ಲಿ ನಟಿಸಿದರು.

Published by:Vasudeva M
First published: