Gehana Vasisth: ಶೂಟಿಂಗ್​ ನಡೆಯುವಾಗಲೇ ಕುಸಿದುಬಿದ್ದ ನಟಿ; ಐಸಿಯುನಲ್ಲಿರುವ ಗೆಹನಾ ವಸಿಷ್ಠ ಸ್ಥಿತಿ ಗಂಭೀರ

Actress Gehana Vasisth Health Condition: ಹೃದಯಾಘಾತದಿಂದ ಕುಸಿದು ಬಿದ್ದ ಕೂಡಲೇ ಗೆಹನಾ ವಸಿಷ್ಠ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟಕ್ಕಾಗಿ ವೆಂಟಿಲೇಟರ್ ಅಳವಡಿಸಲಾಗಿದ್ದು, ಅವರು ಯಾವುದೇ ಚಿಕಿತ್ಸೆಗೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

Sushma Chakre | news18-kannada
Updated:November 23, 2019, 9:58 AM IST
Gehana Vasisth: ಶೂಟಿಂಗ್​ ನಡೆಯುವಾಗಲೇ ಕುಸಿದುಬಿದ್ದ ನಟಿ; ಐಸಿಯುನಲ್ಲಿರುವ ಗೆಹನಾ ವಸಿಷ್ಠ ಸ್ಥಿತಿ ಗಂಭೀರ
ಗೆಹನಾ ವಸಿಷ್ಠ
  • Share this:
ಹಿಂದಿ ಕಿರುತೆರೆ ನಟಿ ಮತ್ತು ರೂಪದರ್ಶಿ ಗೆಹನಾ ವಸಿಷ್ಠ ಗುರುವಾರ ಶೂಟಿಂಗ್​ ಮಾಡುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಸರಿಯಾದ ಪೌಷ್ಠಿಕಾಂಶದ ಆಹಾರವಿಲ್ಲದೆ, ವಿಶ್ರಾಂತಿಯಿಲ್ಲದೆ ಕೆಲಸ ಮಾಡಿದ್ದರಿಂದ ಹೃದಯಾಘಾತ ಸಂಭವಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ. ಗೆಹನಾ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ವೆಬ್​ ಸರಣಿಯೊಂದರಲ್ಲಿ ನಟಿಸುತ್ತಿದ್ದ ಗೆಹನಾ ವಸಿಷ್ಠ ಬಿಡುವಿಲ್ಲದೆ ಕೆಲ ದಿನಗಳಿಂದ ಅದರ ಶೂಟಿಂಗ್​​ನಲ್ಲಿ ಭಾಗಿಯಾಗಿದ್ದರು. ಶೂಟಿಂಗ್​ನಲ್ಲಿ ಭಾಗಿಯಾಗಿದ್ದ ಗೆಹನಾ 2 ದಿನಗಳ ಕಾಲ ನಿರಂತರವಾಗಿ ಶೂಟಿಂಗ್​​ನಲ್ಲಿ ಭಾಗಿಯಾಗಿದ್ದರು. ಯಾವುದೇ ರೀತಿಯ ಆಹಾರ ಸೇವನೆ ಮಾಡಿರದ ಅವರಿಗೆ ಶೂಟಿಂಗ್ ತಂಡದವರು ಕೂಡ ಊಟ ತರಿಸದೆ ಕೇವಲ ಶಕ್ತಿವರ್ಧಕ ಪಾನೀಯ ನೀಡಿದ್ದರು ಎಂದು ತಿಳಿದುಬಂದಿದೆ. ಅದರ ಸೈಡ್ ಎಫೆಕ್ಟ್​ನಿಂದಲೂ ಹೃದಯಾಘಾತ ಸಂಭವಿಸಿರಬಹುದು ಎಂದು ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ತಮಿಳುನಾಡು ರಾಜಕೀಯದಲ್ಲಿ ಶುರುವಾಗುತ್ತಾ ಕಮಲ್ ಹಾಸನ್- ರಜನಿಕಾಂತ್ ಪರ್ವ?; ಮೈತ್ರಿ ಸುಳಿವು ನೀಡಿದ ಸ್ಟಾರ್​ ನಟರು

ಹೃದಯಾಘಾತದಿಂದ ಕುಸಿದು ಬಿದ್ದ ಕೂಡಲೇ ಅವರನ್ನು ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟಕ್ಕಾಗಿ ವೆಂಟಿಲೇಟರ್ ಅಳವಡಿಸಲಾಗಿದ್ದು, ಗೆಹನಾ ವಸಿಷ್ಠ ಯಾವುದೇ ಚಿಕಿತ್ಸೆಗೂ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಮಧುಮೇಹದಿಂದ ಬಳಲುತ್ತಿದ್ದ ಅವರು ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡದ ಕಾರಣ ನಿಶ್ಯಕ್ತಿ ಉಂಟಾಗಿರಬಹುದು. ಹಾಗೇ, ಕಡಿಮೆ ರಕ್ತದೊತ್ತಡದಿಂದ ಹೃದಯಾಘಾತ ಸಂಭವಿಸಿದೆ ಎಂದು ಹೇಳಲಾಗಿದೆ.

ತೀವ್ರ ಉಸಿರಾಟದ ತೊಂದರೆ ಅನುಭವಿಸುತ್ತಿರುವ ಗೆಹನಾ ವಸಿಷ್ಠ ಅವರ ಮೆದುಳಿಗೆ ಸರಿಯಾದ ಆಮ್ಲಜನಕ ಪೂರೈಕೆಯಾಗುವ ಉದ್ದೇಶದಿಂದ ವೆಂಟಿಲೇಟರ್​ ಅಳವಡಿಕೆ ಮಾಡಲಾಗಿದ್ದು, ಸಂಪೂರ್ಣ ರಿಪೋರ್ಟ್​ ಬಂದ ನಂತರ ಆಕೆಯ ಚೇತರಿಕೆ ಬಗ್ಗೆ ಖಚಿತವಾಗಿ ಹೇಳಲು ಸಾಧ್ಯ ಎಂದು ವೈದ್ಯರು ಹೇಳಿದ್ದಾರೆ.

31 ವರ್ಷದ ಗೆಹನಾ ವಸಿಷ್ಠ ಮೂಲತಃ ಛತ್ತೀಸ್​ಗಢದವರು. ಕಿರುತೆರೆ ನಿರೂಪಕಿಯಾಗಿಯೂ ಕೆಲವು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿರುವ ಇವರು 70ಕ್ಕೂ ಅಧಿಕ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹಲವು ತೆಲುಗು, ಹಿಂದಿ ಸಿನಿಮಾಗಳಲ್ಲೂ ಗೆಹನಾ ನಟಿಸಿದ್ದಾರೆ.
First published: November 23, 2019, 9:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading