Gauhar Khan: ಹೆರಿಗೆಯ ನಂತರ ಹತ್ತೇ ದಿನದಲ್ಲಿ 10 ಕೆಜಿ ತೂಕ ಕಳೆದುಕೊಂಡ ನಟಿ ಗೌಹರ್ ಖಾನ್

ನಟಿ ಗೌಹರ್​ ಖಾನ್​

ನಟಿ ಗೌಹರ್​ ಖಾನ್​

ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ ನಟಿ ಗೌಹರ್ ಖಾನ್ ಕೇವಲ 10 ದಿನಗಳಲ್ಲಿ 10 ಕೆಜಿ ತೂಕವನ್ನು ಕಳೆದುಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

  • Share this:

ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದ ನಟಿ ಗೌಹರ್ ಖಾನ್ (Gauhar Khan) ಕೇವಲ 10 ದಿನಗಳಲ್ಲಿ 10 ಕೆಜಿ ತೂಕವನ್ನು ಕಳೆದುಕೊಳ್ಳುವ ಮೂಲಕ (Weight Loss) ತಮ್ಮ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಕೇವಲ 10 ದಿನಗಳಲ್ಲಿ 10 ಕೆಜಿ ತೂಕ ಇಳಿದಿರೋದರ ಬಗ್ಗೆ ಯಾರಿಗೆ ಆಶ್ಚರ್ಯ ಆಗಲ್ಲ ಹೇಳಿ. ಬುಧವಾರದಂದು ಗೌಹರ್ ಅವರು ತಮ್ಮ ಸೋಷಿಯಲ್ ಮೀಡಿಯಾ (Social Media) ಇನ್​​ಸ್ಟಾಗ್ರಾಮ್​ (Instagram) ಸ್ಟೋರೀಸ್‌ ಅಲ್ಲಿ ತಮ್ಮ ತೂಕ ನಷ್ಟದ ನಂತರ ಹೇಗೆ ಕಾಣುತ್ತಿದ್ದಾರೆ ಎಂದು ತೋರಿಸುತ್ತಿರುವ ವಿಡಿಯೋವೊಂದನ್ನು ಮಾಡಿ ಶೇರ್ ಮಾಡಿದ್ದಾರೆ


ಗೌಹರ್ ಮತ್ತು ಅವರ ಪತಿ ಝೈದ್ ದರ್ಬಾರ್ ಅವರು ಮೇ 10 ರಂದು ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ.


ಪ್ರಸವದ ನಂತರ 10 ದಿನಗಳಲ್ಲಿ 10 ಕೆಜಿ ತೂಕ ಕಳೆದುಕೊಂಡ ನಟಿ ಗೌಹರ್


ಗೌಹರ್ ಅವರು "ಪ್ರಸವಾನಂತರದ 10 ದಿನಗಳಲ್ಲಿ 10 ಕೆಜಿ ತೂಕವನ್ನು ಕಳೆದುಕೊಂಡಿದ್ದೇನೆ. ಅಲ್ಲಾ ನ ದಯೆ..ಇನ್ನು 6 ಕೆಜಿ ತೂಕ ಕಳೆದುಕೊಳ್ಳುವುದು ಇದೆ. ದಿಸ್ ಈಸ್ ನ್ಯೂ ಮಾಮ್ ಲೈಫ್ " ಎಂದು ಗೌಹರ್ ತಮ್ಮ Instagram ಸ್ಟೋರೀಸ್‌ನಲ್ಲಿ ಬರೆದಿದ್ದಾರೆ.ಅವರು ಆ ವಿಡಿಯೋದಲ್ಲಿ ಬಿಳಿ ಪೈಜಾಮಾವನ್ನು ಧರಿಸಿದ್ದರು. ಈಗ ತಾನೇ ಸ್ನಾನ ಮಾಡಿದವರಂತೆ ಕಾಣುತ್ತಿದ್ದರು.


ಇದನ್ನೂ ಓದಿ: ಈ ವಾರ ವೀಕೆಂಡ್ ವಿತ್ ರಮೇಶ್ ಇಲ್ವಾ? ಪ್ರೊಮೋ ಬಿಟ್ಟಿಲ್ಲ ಎಂದು ಕೇಳ್ತಿರುವ ಅಭಿಮಾನಿಗಳು!

ಸಂತೋಷದ ನಿಜವಾದ ಅರ್ಥ ಸಿಕ್ಕಿರೋದೆ ಈ ಮಗುವಿನ ಆಗಮನದ ನಂತರ - ಗೌಹರ್


ಮೇ ತಿಂಗಳ ಆರಂಭದಲ್ಲಿ, "ತಮ್ಮ ಮಗುವಿನ ಆಗಮನ" ಎಂದು ಗೌಹರ್ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದರು.ಈಗ ಕೆಲವು ದಿನಗಳ ಹಿಂದೆ "ನಮಗೆ ಜನಿಸಿರುವ ಮಗು ಹುಡುಗ. ಅಸ್-ಸಲಾಮು-ಅಲೈಕುಮ್ ಸುಂದರ ಜಗತ್ತು, ನಮ್ಮ ಸಂತೋಷದ ಬಂಡಲ್ ಹೆಚ್ಚಾಗಿದೆ.


ಸಂತೋಷದ ನಿಜವಾದ ಅರ್ಥವೇನೆಂದು ನಮಗೆ ಅರಿವು ಮೂಡಿಸಲು 2023 ರ ಮೇ 10 ರಂದು ಈ ಮಗು ನಮ್ಮ ಮಡಿಲಿಗೆ ಆಗಮಿಸಿದೆ. ಈ ಬೇಬಿಗೆ ತೋರಿದ ಎಲ್ಲರಿಗೂ ಅವರ ಪ್ರೀತಿ ಮತ್ತು ಪ್ರಾರ್ಥನೆಗಳಿಗಾಗಿ ಧನ್ಯವಾದಗಳನ್ನು ಅರ್ಪಿಸುತ್ತೆನೆ. ಕೃತಜ್ಞತೆ ಸಲ್ಲಿಸುತ್ತಿರುವವರು ಮತ್ತು ನಗುತ್ತಿರುವ ಹೊಸ ಹೆತ್ತವರಾದ ಜೈದ್ ಮತ್ತು ಗೌಹರ್." ಎಂದು ಪೋಸ್ಟ್ ಮಾಡಿದ್ದಾರೆ.



ನಟಿ ಗೌಹರ್​

ಗೌಹರ್ ಮತ್ತು ಜೈದ್ ಅವರ ಪ್ರೇಮಕಥೆ


ಗೌಹರ್ ಮತ್ತು ಜೈದ್ ಡಿಸೆಂಬರ್ 25, 2020 ರಂದು ವಿವಾಹವಾಗಿದ್ದರು. ಕೆಲವು ವರದಿಗಳ ಪ್ರಕಾರ, ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ ದಿನಸಿ ಸಾಮಾನುಗಳಿಗಾಗಿ ಶಾಪಿಂಗ್ ಮಾಡುವಾಗ ಇಬ್ಬರೂ ಭೇಟಿಯಾದರು. ನಂತರ ಇಬ್ಬರೂ ಚಾಟ್ ಮಾಡಲು ಪ್ರಾರಂಭಿಸಿದರು. ಆ ಸಮಯದಲ್ಲಿ ಸ್ನೇಹ ಪ್ರೀತಿಗೆ ತಿರುಗಿ ಇಬ್ಬರೂ 2020 ರ ಡಿಸೆಂಬರ್‌ನಲ್ಲಿ ಮದುವೆಯಾದರು.


ಕಳೆದ ವರ್ಷ ಇಬ್ಬರೂ ಅಡೋರಬಲ್ ಅನಿಮೇಟೆಡ್ ವಿಡಿಯೋದೊಂದಿಗೆ ತಾವು ತಂದೆ ತಾಯಿ ಆಗುತ್ತಿದ್ದೇವೆ ಎಂಬ ಸುದ್ದಿಯನ್ನು ಘೋಷಿಸಿದರು.


ಆ ಫನ್ ವಿಡಿಯೋದಲ್ಲಿ, "ಝೈದ್ ಗೌಹರ್ ಅನ್ನು ಭೇಟಿಯಾದಾಗ ಅಲ್ಲಿಯವರೆಗೂ ಒಬ್ಬನೇ ಇದ್ದವ ನಂತರ ಇಬ್ಬರೂ ಆದೆವು. ಈಗ ನಾವು ಮೂವರು ಆಗುತ್ತಿದ್ದೇವೆ. ಇನ್ ಶಾ ಅಲ್ಲಾಹ್ ಈ ಸುಂದರ ಪ್ರಯಾಣದಲ್ಲಿ ನಿಮ್ಮೆಲ್ಲರ ಪ್ರಾರ್ಥನೆ ಮತ್ತು ಆಶೀರ್ವಾದಗಳನ್ನು ನಾನ ಬಯಸುತ್ತೇನೆ." ಎಂದಿದ್ದರು.ಚ


 


ಮಗುವಿನೊಂದಿಗೆ ಗೌಹರ್ ಅವರ ಈದ್ ಹಬ್ಬದ ಆಚರಣೆ


ಈದ್ ಸಮಯದಲ್ಲಿ, ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, ಗೌಹರ್ ಖಾನ್ ತಮ್ಮ ಮಗುವಿನ ಬಗ್ಗೆ ಮಾತನಾಡಿದ್ದಾರೆ. ಅವರು “ಈ ರಂಜಾನ್ ಹಬ್ಬದಲ್ಲಿ ನಾನು 3 ತಿಂಗಳ ಗರ್ಭಿಣಿಯಿದ್ದೇನೆ. ನನಗೆ ಈಗ ಉಪವಾಸ ಮಾಡಲು ಸಾಧ್ಯವಾಗಲಿಲ್ಲ. ರೋಜಾ ಮಾಡಲು ಆಗಲಿಲ್ಲ.


ಆದರೆ ಉಳಿದಂತೆ ಎಲ್ಲ ಒಂದೇ ಆಗಿತ್ತು. ನಾನು ಝೈದ್ ಮತ್ತು ಇಫ್ತಾರ್‌ಗೆ ಅಡುಗೆ ಮಾಡಬೇಕಿರುವುದರಿಂದ ಬೆಳಿಗ್ಗೆ ಬೇಗ ಏಳಬೇಕಿತ್ತು" ಎಂದಿದ್ದರು. ಈದ್ ಆಚರಣೆ ಬಗ್ಗೆ ಸಂತಸದಿಂದ ಸಂದರ್ಶನದ ವೇಳೆ ತಮ್ಮ ದಿನಚರಿ ಬಗ್ಗೆ ಹೇಳಿ ಖುಷಿ ಪಟ್ಟಿದ್ದರು.


First published: