ಸೆಲೆಬ್ರಿಟಿಗಳು (Celebrities) ಜನರಲ್ಲಿ ಬೇರೆಯ ರೀತಿಯ ಭಾವನೆ ಇರುತ್ತದೆ. ಅವರಿಂದ ಬಯಸುವುದು ಸಹ ತುಸು ಹೆಚ್ಚೆ. ಅವರ ಬಿಂಕ, ಬಿನ್ನಣ ನೋಡಿ ಅವರ ಬಗ್ಗೆ ಪ್ರತಿಯೊಬ್ಬರಿಗೂ ಒಳ್ಳೆಯ ಅಭಿಪ್ರಾಯವಿರುವುದಿಲ್ಲ. ಅದರಲ್ಲೂ ಹೆಚ್ಚು ಪ್ರಸಿದ್ದರಲ್ಲದ ನಟ, ನಟಿಯರ (Actors) ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಅವರು ಏನೂ ಸಹಾಯ ಮಾಡುವುದಿಲ್ಲ ಎಂಬ ಭಾವನೆ ಇರುತ್ತದೆ. ಆದರೆ ಇದಕ್ಕೆ ವಿರುದ್ಧ ಎನ್ನುವಂತೆ ನಟಿಯೊಬ್ಬರು ಹೊಸ ಹೆಜ್ಜೆ ಇಟ್ಟಿದ್ದಾರೆ. ಹಿಂದಿ ಬಿಗ್ಬಾಸ್ನ ವಿಜೇತೆ, ಗೋಹರ್ ಖಾನ್ (Gauahar Khan) ಮಾಡಲು ಹೊರಟಿರುವ ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
ನಟಿ ಗೌಹರ್ ಖಾನ್ ಇತ್ತೀಚೆಗೆ ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ಮುಂದೆ ಶಿಕ್ಷಣಕ್ಕಾಗಿ ಮನವಿ ಮಾಡಿದ 11 ವರ್ಷದ ಬಾಲಕ ಸೋನು ಕುಮಾರ್ ಬಗ್ಗೆ ಟ್ವೀಟ್ ಮಾಡಿದ್ದು, ಅವರಿಗೆ ನಾನು ಆರ್ಥಿಕವಾಗಿ ಸಹಾಯ ಮಾಡಲು ಸಿದ್ದನಿದ್ದೇನೆ. ಯಾರಾದರೂ ನನಗೆ ಆ ಬಾಲಕನ ಸಂಪರ್ಕ ಮಾಡಿಸಿ, ಆತನ ನಂಬರ್ ಕೊಡಿ ಎಂದು ಮನವಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ"ಎಂತಹ ಪ್ರಕಾಶಮಾನವಾದ ಹುಡುಗ! ನಾನು ಅವನನ್ನ ಸಂಪರ್ಕಿಸಲು ಬಯಸುತ್ತೇನೆ. ಅವನ ಶಿಕ್ಷಣಕ್ಕೆ ಸಹಾಯ ಮಾಡಲು ನಾನುಸಿದ್ಧಳಿದ್ದೇನೆ. ಅವನಿಗೆ ಅದ್ಭುತ ದೃಷ್ಟಿ ಇದೆ, ಅವನು ಉತ್ತಮ ಭವಿಷ್ಯವನ್ನು ಹೊಂದಿದ್ದಾನೆ. ದಯವಿಟ್ಟು ಸಹಾಯ ಮಾಡಿ! ಎಂದು ಬರೆದುಕೊಂಡಿದ್ದಾರೆ.
ಗೌಹರ್ ಅವರು ಸೋನು ಕುಮಾರ್ ಅವರ ಭವಿಷ್ಯಕ್ಕೆ ಬೆಂಬಲ ನೀಡಲು ನಿರ್ಧರಿಸಿದ್ದು, ಅವರ ಶಿಕ್ಷಣಕ್ಕೆ ಆರ್ಥಿಕ ಸಹಾಯ ನೀಡಲು ಮುಂದೆ ಬಂದಿದ್ದಾರೆ. ಇತ್ತೀಚೆಗೆ, ತಮ್ಮ ದಿವಂಗತ ಪತ್ನಿ ಮಂಜು ಸಿನ್ಹಾ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಸಿಎಂ ನಿತೀಶ್ ಕುಮಾರ್ ಬಂದಿದ್ದ ಸಮಯದಲ್ಲಿ ಸೋನು ಕುಮಾರ್ ಅವರನ್ನು ಭೇಟಿಯಾಗಿದ್ದು, ಸ್ವಲ್ಪ ಸಮಯ ಮಾತನಾಡಿ, ಎಲ್ಲ ಗಣ್ಯರ ಸಮ್ಮುಖದಲ್ಲಿ ವಿದ್ಯಾಭ್ಯಾಸಕ್ಕೆ ಕೈ ಮುಗಿದು ಮನವಿ ಮಾಡಿದ್ದರು. ಈ ಹುಡುಗನ ವಿಡಿಯೋ ವೈರಲ್ ಆಗಿದ್ದು, ಎಲ್ಲರ ಗಮನ ಸೆಳೆದಿದೆ.
What a bright boy ! Can I pls get to know some contact of him , I would like to sponsor his education. This boy is amazing . He has a vision , he is the future . Pls help ! https://t.co/tTPSaPBqOF
— Gauahar Khan (@GAUAHAR_KHAN) May 15, 2022
ಸಿಎಂ ಸ್ಥಳೀಯ ಜನರ ಕುಂದುಕೊರತೆಗಳನ್ನು ಆಲಿಸುತ್ತಿರುವಾಗ, ಸೋನು ಕೈಮುಗಿದು ಅವರ ಬಳಿಗೆ ಬಂದು, “ಸರ್, ದಯವಿಟ್ಟು ನನ್ನ ಮಾತನ್ನು ಒಂದು ನಿಮಿಷ ಕೇಳಿ. ದಯವಿಟ್ಟು ನನ್ನ ಶಿಕ್ಷಣಕ್ಕೆ ಸಹಾಯ ಮಾಡಿ. ನನ್ನ ಪಾಲಕರು ನನ್ನ ಅಧ್ಯಯನದಲ್ಲಿ ನನಗೆ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ. ದಯವಿಟ್ಟು ನನ್ನನ್ನು ಖಾಸಗಿ ಶಾಲೆಗೆ ಸೇರಿಸಿಕೊಳ್ಳಿ ಏಕೆಂದರೆ ನನ್ನ ಸರ್ಕಾರಿ ಶಾಲೆಯಲ್ಲಿನ ಶಿಕ್ಷಣದ ಗುಣಮಟ್ಟವು ಸರಿಯಾಗಿಲ್ಲ. ನನಗೆ ಶಿಕ್ಷಣ ಪಡೆಯಲು ಸಮಸ್ಯೆಯಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಭಟ್ಟರ ಫಿಲ್ಮ್ ರೆಡಿಯಾಗೋಕೆ ಸುಧಾ ಮೂರ್ತಿ ಕಾರಣವಂತೆ - ಹೀಗೆಂದಿದ್ದೇಕೆ ಅನಂತ್ ನಾಗ್?
ಶಾಲಾ ಬಾಲಕನ ಕುಂದುಕೊರತೆ ಆಲಿಸಿದ ನಿತೀಶ್ ಒಂದು ಕ್ಷಣ ಬೆರಗಾಗಿದ್ದು, ಅವರು ತಕ್ಷಣ ತಮ್ಮ ಜೊತೆಗಿದ್ದ ಅಧಿಕಾರಿಯೊಬ್ಬರಿಗೆ ಹುಡುಗನ ಅಧ್ಯಯನಕ್ಕೆ ಬೇಕಾದ ವ್ಯವಸ್ಥೆ ಮಾಡುವಂತೆ ಆದೇಶ ನೀಡಿದ್ದಾರೆ. ರಾಜ್ಯ ಸರ್ಕಾರ ತನ್ನ ಅಧ್ಯಯನಕ್ಕೆ ಸಹಾಯ ಮಾಡಿದರೆ ತಾನೂ ಕೂಡ ಐಎಎಸ್ ಅಥವಾ ಐಪಿಎಸ್ ಅಧಿಕಾರಿಯಾಗಬಹುದು ಎಂದು ಸೋನು ನಂತರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದ್ದಾನೆ.
ನೀಮಾ ಗ್ರಾಮದ ನಿವಾಸಿ ಸೋನು ಶನಿವಾರ ಸಿಎಂ ತಮ್ಮ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ ಮತ್ತು ಸ್ಥಳೀಯ ಜನರನ್ನು ಭೇಟಿಯಾಗಲಿದ್ದಾರೆ ಎಂದು ತಿಳಿದ ನಂತರ ಕಲ್ಯಾಣಬಿಘಾಗೆ ತೆರಳಿದ್ದರು. ತನ್ನ ತಂದೆ ರಣವಿಜಯ್ ಯಾದವ್ ಸ್ಥಳೀಯ ಮಾರುಕಟ್ಟೆಯಲ್ಲಿ ಮೊಸರನ್ನು ವ್ಯಾಪರ ಮಾಡುತ್ತಾರೆ “ಆದರೆ ನನ್ನ ತಂದೆ ತನ್ನ ಎಲ್ಲಾ ಸಂಪಾದನೆಯನ್ನು ಮದ್ಯಪಾನಕ್ಕಾಗಿ ಖರ್ಚು ಮಾಡುತ್ತಾರೆ. ಅವರ ಬಳಿ ನನ್ನ ಶಿಕ್ಷಣಕ್ಕೆ ಬೇಕಾದಷ್ಟು ಹಣವಿಲ್ಲ. ತನ್ನ ಸ್ವಂತ ಖರ್ಚನ್ನು ಪೂರೈಸಲು ಪ್ರಸ್ತುತ 5 ನೇ ತರಗತಿಯ ಸುಮಾರು 40 ಮಕ್ಕಳಿಗೆ ಟ್ಯೂಷನ್ ನೀಡುತ್ತಿದ್ದೇನೆ ಎಂದು ಚಿಕ್ಕ ಹುಡುಗ ಹೇಳಿದ್ದಾನೆ.
ಇದನ್ನೂ ಓದಿ: ಮಾರುವೇಷದಲ್ಲಿ ಮಹೇಶ್ ಬಾಬು ಫಿಲ್ಮ್ ನೋಡಿದ ಗಾರ್ಗಿ ಸುಂದರಿ - ಫೋಟೋ ಫುಲ್ ವೈರಲ್
ಇದೀಗ ನಟಿ ಸಹ ಈ ಹುಡುಗನ ಶಿಕ್ಷಣಕ್ಕೆ ಸಹಾಯ ಮಾಡಲು ನಿರ್ಧರಿಸಿದ್ದು, ಈ ಹುಡುಗನ ಭವಿಷ್ಯ ಉಜ್ವಲವಾಗಬೇಕೆಂಬುದು ಎಲ್ಲರ ಆಸೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ