ಕನ್ನಡ ಕಿರುತೆರೆ ನಟಿ ದಿವ್ಯಾ ಉರುಡುಗ (Divya Uruduga) ಹಾಗೂ ಕೆಪಿ ಅರವಿಂದ್ (KP Aravind) ಪ್ರೀತಿಗೆ 2 ವರ್ಷ ತುಂಬಿದೆ. ಬಿಗ್ಬಾಸ್ (Bigg Boss) ಮೂಲಕ ಒಂದಾದ ಈ ಜೋಡಿ ಕನ್ನಡ ಕಿರುತೆರೆ ಪ್ರೇಕ್ಷಕರ ಫೇವರಿಟ್ ಆದರು. ಈಗ ಅವರಿಗೆ ಅಪಾರ ಅಭಿಮಾನಿಗಳು ಇದ್ದಾರೆ. ದಿವ್ಯಾ ಹಾಗೂ ಅರವಿಂದ್ ಪ್ರೀತಿಗೆ (Love) ಮನಸೋತು ಬಹಳಷ್ಟು ಜನರು ಅವರ ಅಭಿಮಾನಿಗಳಾಗಿದ್ದಾರೆ. ಅವರನ್ನು ಸೋಷಿಯಲ್ ಮೀಡಿಯಾದಲ್ಲಿ (Social Media) ಫಾಲೋ ಮಾಡುವವರ ಸಂಖ್ಯೆಯೂ ಹೆಚ್ಚಾಗಿದೆ. ಇದೀಗ ಈ ಜೋಡಿ ತಮ್ಮ ಪ್ರೀತಿಗೆ ಎರಡು ವರ್ಷ ತುಂಬಿದ ಖುಷಿಯಲ್ಲಿದ್ದಾರೆ. ಈ ಸಂದರ್ಭ ಒಂದು ಸ್ಪೆಷಲ್ ವಿಡಿಯೋವನ್ನು ಕೂಡಾ ಶೇರ್ ಮಾಡಿದ್ದಾರೆ.
ವಿಡಿಯೋದಲ್ಲಿ ಬಿಗ್ಬಾಸ್ ಸೀಸನ್ನ ಕೆಲವು ಆಕರ್ಷಕ ಮೊಮೆಂಟ್ಸ್ಗಳನ್ನು ಎಡಿಟ್ ಮಾಡಿ ಸೇರಿಸಲಾಗಿದೆ. ಅವನು ನಂಗೆ ತುಂಬಾ ಸ್ಪೆಷಲ್. ಅವನು ಲೈಫ್ಟೈಮ್ ನನ್ನ ಜೊತೆ ಇರಬೇಕು ಎಂದು ದಿವ್ಯಾ ಉರುಡುಗ ಹೇಳಿದ ಮಾತುಗಳನ್ನು ಇಲ್ಲಿ ವಿಡಿಯೋದಲ್ಲಿ ತೋರಿಸಲಾಗಿದೆ. ಇದಕ್ಕೆ ಕೆಪಿ ಅರವಿಂದ್ ಅವರು ಮಾತು ಇಲ್ಲದೇನೆ ಅರ್ಥ ಆಗುತ್ತೆ ಅವಳಿಗೆ ಎಂದಿರುವ ವಿಡಿಯೋ ಕ್ಲಿಪ್ ಸೇರಿಸಲಾಗಿದೆ.
View this post on Instagram
ವೈರಲ್ ಆಗ್ತಿದೆ ವಿಡಿಯೋ
ದಿವ್ಯಾ ಹಾಗೂ ಅರವಿಂದ್ ಅವರ ವಿಡಿಯೋವನ್ನು ಅಭಿಮಾನಿಗಳು ಇಷ್ಟಪಟ್ಟಿದ್ದಾರೆ. ವಿಡಿಯೋ ಪೋಸ್ಟ್ ಮಾಡಿ 2 ಗಂಟೆಗಳಲ್ಲಿ ಇದಕ್ಕೆ 30 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದೆ.
ಏನಂತಿದ್ದಾರೆ ಫ್ಯಾನ್ಸ್?
ನೀವಿಬ್ರು ಐ ಲವ್ ಯು ಅಂತ ಹೇಳಿಕೊಂಡಿದ್ದೀರಾ ಗೊತ್ತಿಲ್ಲ. ಆದರೆ ಪ್ರತಿ ದಿನ ನಾವು ವಿ ಲವ್ ಯು ಅಂತ ಹೇಳೋದು ಮರೆಯಲ್ಲ. ಎರಡು ವರ್ಷ ಆಗಲಿ 200 ವರ್ಷ ಆಗಲಿ ನಮ್ ಪ್ರೀತಿ ನಿಮ್ದೇ ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: Divya Uruduga: ದಿವ್ಯಾ ಉರುಡುಗ ಅವರ ಎಲ್ಲಾ ಸೀರೆಗಳಲ್ಲಿ ಇದು ತುಂಬಾ ಸ್ಪೆಷಲ್! ಸೀರೆಯ ಹಿಂದಿನ ಕಥೆ ಗೊತ್ತಾ?
ಧನ್ಯವಾದಗಳು ಅರ್ವಿಯಾ ನಿಷ್ಕಲ್ಮಷ ಅನುಬಂಧದ ಅಭಿಮಾನದ ಮೇಲಿನ ನಿಮ್ಮ ಅಂತರಾಳದ ಪ್ರೀತಿಗೆ. ಪ್ರೀತಿ + ಅಭಿಮಾನ ಅಕ್ಷಯವಾಗಲಿ. ನಮ್ಮ ಕಣ್ಮಣಿಗಳು ನೀವು ಅಂದು + ಇಂದು + ಎಂದೆಂದೂ ಎಂದಿದ್ದಾರೆ ಇನ್ನೊಬ್ಬರು.
ದಿವ್ಯಾ ಅವರ ಬರ್ತ್ಡೇಯನ್ನು ಇತ್ತೀಚೆಗೆ ಗ್ರ್ಯಾಂಡ್ ಆಗಿ ಆಚರಿಸಿದ್ದರು ಅರವಿಂದ್. ಅವರ ಬರ್ತ್ಡೇ ಫೋಟೋಗಳು ಹಾಗೂ ವಿಡಿಯೋವನ್ನು ನಟಿ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದರು. ಇವರಿಬ್ಬರೂ ಜೊತೆಯಾಗಿ ಸಿನಿಮಾ ಕೂಡಾ ಮಾಡುತ್ತಿದ್ದಾರೆ. ಅರ್ಧಂಬರ್ಧ ಪ್ರೇಮಕಥೆ ಎನ್ನುವ ಸಿನಿಮಾ ಮೂಲಕ ಸ್ಯಾಂಡಲ್ವುಡ್ನಲ್ಲಿ ಮಿಂಚಲು ರೆಡಿಯಾಗಿದ್ದಾರೆ.
ದಿವ್ಯಾ ಅವರ ಸ್ಪೆಷಲ್ ಸೀರೆ
ಪ್ರತಿ ಸೀರೆಯೂ ಒಂದು ಕಥೆ ಹೇಳುತ್ತದೆ ಎನ್ನುತ್ತಾರೆ. ಅದರಲ್ಲಿ ಮುಂದಿರುವ ಸೀರೆ ಇದು. ನನ್ನ ವಾರ್ಡ್ರೋಬ್ನ ರಾಜಕುಮಾರಿ ಈ ಸೀರೆ. ಅಂದ ಹಾಗೆ ಈ ಸ್ಪೆಷಲ್ ಸೀರೆಯ ಹಿಂದಿನ ಕಥೆ ನಿಮಗೆಲ್ಲರಿಗೂ ಗೊತ್ತು. ನೆನಪಿಸಿಕೊಳ್ಳಿ. ಈ ಸಲ ಈ ಸೀರೆ ಉಟ್ಟಾಗ ನಾಚಿಗೆ ಆಗುತ್ತಿದೆ ಎಂದು ನಾನು ಹೇಳಿಲ್ಲ.
ಹಾಗೆಯೇ ಯಾರು ನನ್ನ ಬಳಿ ಜಸ್ಟ್ ಚೋಕರ್ ಮಾತ್ರ ಹಾಕು ಎಂದು ಹೇಳಿಲ್ಲ ಎಂದಿದ್ದಾರೆ ದಿವ್ಯಾ ಉರುಡುಗ. ನಟಿ ಈ ರೀತಿ ಪೋಸ್ಟ್ ಹಾಕಿ ತಮ್ಮ ಹಳೆ ಘಟನೆಯನ್ನು ಇತ್ತೀಚೆಗೆ ನೆನಪಿಸಿಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ