Divya Uruduga: ಅಮ್ಮನ ಬರ್ತ್ ಡೇಗೆ ದಿವ್ಯಾ ಉರುಡುಗ ವಿಶ್ ಮಾಡಿದ್ದು ಹೀಗೆ, ಫ್ಯಾನ್ಸ್​​ ಫಿದಾ

ದಿವ್ಯಾ ಉರುಡುಗಗೆ ಅಮ್ಮ ಅಂದ್ರೆ ತುಂಬಾ ಪ್ರೀತಿ. ಇದನ್ನು ದಿವ್ಯಾ ಉರುಡುಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಮ್ಮ ಕುಸುಮಾ ಅವರ ಹಳೆಯ ಫೋಟೋಗಳು, ಅವರ ಜೊತೆ ಕಳೆದ ವಿಡಿಯೋಗಳನ್ನು ಜೋಡಿಸಿ ಅದನ್ನು ಇನ್‍ಸ್ಟಾಗ್ರಾಮ್‍ನಲ್ಲಿ ದಿವ್ಯಾ ಪೋಸ್ಟ್ ಮಾಡಿದ್ದಾರೆ.

ದಿವ್ಯಾ ಉರುಡುಗ

ದಿವ್ಯಾ ಉರುಡುಗ

  • Share this:
    ದಿವ್ಯಾ ಉರುಡುಗ (Divya Uruduga) ಅಂದಾಕ್ಷಣ ನೆನಪಾಗೋದ ಬಿಗ್ ಬಾಸ್ ಕನ್ನಡ ಸೀಸನ್ 8 (Bigg Boss season 8). ಅದರಲ್ಲಿ ಭಾಗವಹಿಸಿದ್ದ ಸ್ಪರ್ಧಿ. ಮತ್ತು ಅರವಿಂದ್ ಕೆ.ಪಿ (Aravind K P) ಅವರು. ಸದಾ ಜೊತೆಗೆ ಇರುತ್ತಿದ್ದ ಒಳ್ಳೆಯ ಸ್ನೇಹಿತರು. ಬಿಗ್ ಬಾಸ್ ಸೀಸನ್ 8 ರ ಟಾಪ್ 5 ಸ್ಪರ್ಧಿಗಳಲ್ಲಿ ಇವರು ಇದ್ದರು. ಬಿಗ್ ಬಾಸ್‍ಗೆ ಹೋದಾಗಿನಿಂದ ದಿವ್ಯಾ ಉರುಡುಗ ಹೆಚ್ಚು ಜನ ಪ್ರಿಯತೆಯನ್ನು ಹೊಂದಿದ್ದಾರೆ. 8 ಲಕ್ಷಕ್ಕೂ ಹೆಚ್ಚು ಮಂದಿ ದಿವ್ಯಾ ಅವರನ್ನು ಇನ್‍ಸ್ಟಾಗ್ರಾಮ್‍ನಲ್ಲಿ (Instagram) ಫಾಲೋ ಮಾಡ್ತಾ ಇದ್ದಾರೆ. ಈಗ ಇವರ ಬಗ್ಗೆ ಯಾಕಪ್ಪಾ ಹೇಳ್ತಾ ಇದ್ದಾರೆ ಅಂತೀರಾ? ಅದಕ್ಕೆ ಕಾರಣ ಇದೆ. ದಿವ್ಯಾ ಅವರು ತಮ್ಮ ತಾಯಿಯ ಹುಟ್ಟುಹಬ್ಬಕ್ಕೆ ವಿಶೇಷವಾದ ರೀಲ್ಸ್  (Reels) ಮಾಡಿ ಸಾಮಾಜಿಕ ಜಾಲತಾಣದಲ್ಲಿ (Social Media) ಪೋಸ್ಟ್ ಮಾಡಿದ್ದಾರೆ. ಆ ರೀಲ್ಸ್ ಹೆಚ್ಚು ಲೈಕ್‍ಗಳು ಬಂದಿವೆ.

    ಅಪ್ಪ-ಅಮ್ಮ ಅಂದ್ರೆ ಇಷ್ಟ
    ದಿವ್ಯಾ ಉರುಡುಗ ಅವರಿಗೆ ಅವರ ಅಪ್ಪ-ಅಮ್ಮ ಅಂದ್ರೆ ತುಂಬಾ ಇಷ್ಟ. ಎಲ್ಲ ಕೆಲಸಕ್ಕೂ ತನ್ನ ಪೋಷಕರು ಸಹಾಯ ಮಾಡುತ್ತಾರೆ ಎಂದು ಬಿಗ್ ಬಾಸ್‍ಗೆ ಬಂದಾಗ ಹೇಳಿದ್ದರು. ಅಂತೆಯೇ ದಿವ್ಯಾ ಯಾವುದೇ ಕೆಲಸಕ್ಕೆ ಕೈ ಹಾಕಿದ್ರೂ ಅವರ ಅಪ್ಪ-ಅಮ್ಮ ಬೆಂಬಲ ನೀಡ್ತಾರೆ.

    ದಿವ್ಯಾ ಅಮ್ಮ ಕುಸುಮಾ
    ದಿವ್ಯಾ ಉರುಡುಗಗೆ ಅಮ್ಮ ಅಂದ್ರೆ ತುಂಬಾ ಪ್ರೀತಿ. ಇದನ್ನು ದಿವ್ಯಾ ಉರುಡುಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅಮ್ಮ ಕುಸುಮಾ ಅವರ ಹಳೆಯ ಫೋಟೋಗಳು, ಅವರ ಜತೆ ಕಳೆದ ವಿಡಿಯೋಗಳನ್ನು ಜೋಡಿಸಿ ಅದನ್ನು ಇನ್‍ಸ್ಟಾಗ್ರಾಮ್‍ನಲ್ಲಿ ದಿವ್ಯಾ ಪೋಸ್ಟ್ ಮಾಡಿದ್ದಾರೆ.

    ಸಾಕಷ್ಟು ಪ್ರೀತಿಯ ಕ್ಷಣಗಳು ಈ  ಪೋಸ್ಟ್ ನಲ್ಲಿ ಇದೆ. ಅಭಿಮಾನಿಗಳು ಕೂಡ ಕುಸಮಾ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸುತ್ತಿದ್ದಾರೆ. ಈ ರೀಲ್ಸ್ ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ.

    ಇದನ್ನೂ ಓದಿ: Ranjani Raghavan: ಕನ್ನಡ ಅಕ್ಷರಮಾಲೆ ಬರೆದು ರೀಲ್ಸ್ ಮಾಡಿ; ಇದು ಕನ್ನಡತಿಯ ಕರೆ!

    'ಅರ್ಧಂಬರ್ಧ ಪ್ರೇಮ ಕಥೆ' ಚಿತ್ರದಲ್ಲಿ ನಟನೆ
    ದಿವ್ಯಾ ಉರುಡುಗ ಅವರು ಅರ್ಧಂಬರ್ಧ ಪ್ರೇಮ ಕಥೆ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ದಿವ್ಯಾ ಸ್ನೇಹಿತ ಅರವಿಂದ್ ಕೂಡ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಚಿತ್ರತಂಡದಿಂದ ಇನ್ನಷ್ಟೇ ಘೋಷಣೆ ಆಗಬೇಕಿದೆ. ಈ ವಿಚಾರದ ಬಗ್ಗೆ ಅಧಿಕೃತ ಮಾಹಿತಿ ತಿಳಿದುಕೊಳ್ಳಲು ಫ್ಯಾನ್ಸ್ ಕಾಯುತ್ತಿದ್ದಾರೆ.








    View this post on Instagram






    A post shared by DU✨ (@divya_uruduga)




    ದಿವ್ಯಾ ಉರುಡುಗ ಬಗ್ಗೆ ನಿಮಗೆಷ್ಟು ಗೊತ್ತು?
    ದಿವ್ಯಾ ಉರುಡುಗ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ಯುವ ಪ್ರತಿಭಾನ್ವಿತ ನಟಿ. ಕಿರುತೆರೆಯಲ್ಲಿ ಕೆಲವು ಸೀರಿಯಲ್‍ಗಳ ಮೂಲಕ ಮನೆಮಾತಾಗಿರುವ ದಿವ್ಯಾ `ಹುಲಿರಾಯ' ಚಿತ್ರದಿಂದ ಚಂದನವನದಲ್ಲಿ ಸಿನಿಪಯಣ ಆರಂಭಸಿದರು.

    ಮೂಲತಃ ಶಿವಮೊಗ್ಗದ ತೀರ್ಥಹಳ್ಳಿಯವರಾದ ದಿವ್ಯಾ ಶಾಲಾದಿನಗಳಲ್ಲಿ ಕ್ರೀಡೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುತ್ತಿದ್ದರು. ಶಿಕ್ಷಣಕ್ಕಾಗಿ ಮಂಗಳೂರಿನಲ್ಲಿದ್ದಾಗ ಇವರಿಗೆ ಕಿರುತೆರೆಯಲ್ಲಿ ನಟಿಸಿಲು ಆಫರ್ ಬಂತು.

    ಇದನ್ನೂ ಓದಿ: Kannadathi: ಹಬ್ಬದ ದಿನವೇ ಸಾನಿಯಾ ಪೊಲೀಸ್ ಠಾಣೆಯಲ್ಲಿ! ಎಲ್ಲ ಸತ್ಯ ಹೇಳ್ತಾರಾ ಅಮ್ಮಮ್ಮ?

    ಕಿರುತೆರೆಯಲ್ಲಿ ಚಿಟ್ಟೆ ಹೆಜ್ಜೆ, ಅಂಬಾರಿ, ಖುಷಿ, ಓಂ ಶಕ್ತಿ ಓಂ ಶಾಂತಿ ಸೀರಿಯಲ್‍ಗಳಲ್ಲಿ ನಟಿಸಿ ಕನ್ನಡ ಪ್ರೇಕ್ಷಕರಿಗೆ ಹತ್ತಿರವಾದರು. ಉದಯ ಟಿವಿಯಲ್ಲಿ ಪ್ರಸಾರವಾದ `ಸೂಪರ್ ಕಬ್ಬಡ್ಡಿ' ರಿಯಾಲಿಟಿ ಶೋನಲ್ಲಿ ಕೂಡ ಭಾಗಿಯಾಗಿದ್ದರು. 2017 ರಲ್ಲಿ ತೆರೆಕಂಡ ಅರವಿಂದ್ ಕೌಶಿಕ್ ನಿರ್ದೇಶನದ ಹುಲಿರಾಯ ಚಿತ್ರದಿಂದ ಸಿನಿಪಯಣ ಆರಂಭಿಸಿದ ದಿವ್ಯಾ ಈ ಚಿತ್ರದ ನಟನೆಗಾಗಿ ಸೈಮಾಗೆ ನಾಮ ನಿರ್ದೇಶನಗೊಂಡಿದ್ದರು. ರಾಜಕೀಯ ಆಧಾರಿತ ಧ್ವಜ ಮತ್ತು ಫೇಸ್ 2 ಪೇಸ್'ಎಂಬ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ.
    Published by:Savitha Savitha
    First published: