ಬಿಗ್ ಬಾಸ್ ಮನೆಯಲ್ಲಿ ಶುರುವಾದ ದಿವ್ಯಾ ಉರುಡುಗ (Divya Uruduga) ಹಾಗೂ ಅರವಿಂದ್ ಕೆಪಿ (Arvind KP) ಪ್ರೇಮಕಥೆ ಒಟ್ಟಿಗೆ ಸಿನಿಮಾ ಮಾಡುವ ಹಂತಕ್ಕೆ ಬೆಳೆದಿದೆ. ಈ ಲವ್ ಬರ್ಡ್ಸ್ ಇತ್ತೀಚಿಗೆ ಭಾರೀ ಸುದ್ದಿಯಲ್ಲಿದ್ದಾರೆ. ನಟಿ ದಿವ್ಯಾ ಉರುಡುಗ ಹಾಗೂ ಅರವಿಂದ್ ವಿಶೇಷ ದಿನಗಳನ್ನು ಸಂಭ್ರಮದಿಂದ ಆಚರಿಸುತ್ತಾರೆ. ಇಬ್ಬರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ (Social Media) ಸಖತ್ ಆ್ಯಕ್ಟಿವ್ ಆಗಿದ್ದು, ಫೋಟೋಗಳನ್ನು ಹಂಚಿಕೊಳ್ತಾರೆ. ಇದೀಗ ವ್ಯಾಲೆಂಟೈನ್ಸ್ ಡೇ ಕೂಡ ಜೋಡಿಯ ಪ್ರೀತಿಗೆ (Love) ಮತ್ತಷ್ಟು ಸಂಭ್ರಮ ತುಂಬಿದೆ. ದಿವ್ಯಾ ಉರುಡುಗ ತನ್ನ ಮನ ಮೆಚ್ಚಿದ ಹುಡುಗನಿಗೆ ಪ್ರೇಮಿಗಳ ದಿನದ (Valentines Day) ಶುಭಕೋರಿದ್ದಾರೆ. ಹಾಗೇ ಅರವಿಂದ್ ಕೆಪಿ ಅವರ ವಿಡಿಯೋ ಶೇರ್ ಮಾಡಿದ ದಿವ್ಯಾ ಇದು ಅರವಿಂದ್ ಪ್ರೀತಿಯ ಭಾಷೆ ಎಂದಿದ್ದಾರೆ.
ಪ್ರೀತಿ ಸೆಲಬ್ರೇಟ್ ಮಾಡಿದ ಪ್ರೇಮಿಗಳು
ದಿವ್ಯಾ ಉರುಡುಗ ಹಾಗೂ ಅರವಿಂದ್ ಕೆಪಿ ವ್ಯಾಲೆಂಟೈನ್ಸ್ ಡೇ ದಿನ ತಮ್ಮ ಪ್ರೀತಿಯನ್ನು ಸೆಲಬ್ರೇಟ್ ಮಾಡ್ತಿದ್ದಾರೆ. ಬೈಕ್ ರೈಡರ್ ಅರವಿಂದ್ಗೆ ಬೈಕ್‌ಗಳ ಮೇಲೆ ವಿಶೇಷ ಪ್ರೀತಿ ಇದೆ. ದಿವ್ಯಾ ಉರುಡುಗ ಪ್ರೇಮಿಗಳ ದಿನಕ್ಕೆ ಅರವಿಂದ್ಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ. ಇದು ನನ್ನ ಹುಡುಗನ ಪ್ರೀತಿಯ ಭಾಷೆಯೆಂದು ದಿವ್ಯಾ ಹೇಳಿದ್ದಾರೆ.
View this post on Instagram
ವಿಡಿಯೋ ಶೇರ್ ಮಾಡಿದ ದಿವ್ಯಾ, ಅರವಿಂದ್ ಕೆಪಿಗೆ ಬೈಕ್‌ಗಳ ಮೇಲಿನ ನಿಮ್ಮ ಪ್ರೀತಿಯನ್ನು ನಾನು ನೋಡಿದ್ದೇನೆ, ಅರ್ಥಮಾಡಿಕೊಳ್ಳಬಲ್ಲೆ! ರೈಡಿಂಗ್ ಹಾಗೂ ಸ್ಪೀಡ್ ನಿಮ್ಮ ರಕ್ತದಲ್ಲಿದೆ . ಹೀಗಾಗಿ ನಿಮ್ಮದೇ ಶೈಲಿಯಲ್ಲಿ ನಿಮಗೆ ವಿಶ್ ಮಾಡೋದ್ದೇನೆ ವ್ರೂಮ್ ವ್ರೂಮ್ ಅರವಿಂದ್ ಕೆಪಿ ಎಂದು ದಿವ್ಯಾ ಉರುಡುಗ ಬರೆದುಕೊಂಡಿದ್ದಾರೆ.
ಅರ್ಧಂಬರ್ಧ ಪ್ರೇಮಕಥೆಯ ಪೋಸ್ಟರ್ ರಿಲೀಸ್
ಬಿಗ್ಬಾಸ್ ಜೋಡಿ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ.ಪಿ ನಟನೆಯ ಅರ್ಧಂಬರ್ಧ ಪ್ರೇಮಕಥೆಯ ಮೊದಲ ಪೋಸ್ಟರ್ ರಿಲೀಸ್ ಆಗಿದೆ. ಬಿಗ್ ಬಾಸ್‍ನ ಪ್ರೇಮ ಪಕ್ಷಿಗಳು ಎಂದೇ ಗುರುತಿಸಿಕೊಂಡಿದ್ದ ದಿವ್ಯಾ ಉರುಡುಗ ಮತ್ತು ಅರವಿಂದ್ ಕೆ.ಪಿ ಅವರು ಒಟ್ಟಿಗೆ ಅರ್ಧಂಬರ್ಧ ಪ್ರೇಮಕಥೆ ಸಿನಿಮಾ ಮಾಡಿದ್ದಾರೆ. ಅರ್ಧಂಬರ್ಧ ಪ್ರೇಮಕಥೆ ಎಂಬ ಪ್ರೀತಿಯ ಈ ಪ್ರಯಾಣವನ್ನು ಆಚರಿಸುವ ನಮ್ಮ ಮೊದಲ ಪೋಸ್ಟರ್ ಇದು. ಎಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳು ಎಂದು ದಿವ್ಯಾ ಉರುಡುಗ ತಿಳಿಸಿದ್ದಾರೆ.
ಬಿಗ್ ಬಾಸ್ ಸೀಸನ್ 8 ರಲ್ಲಿ ಆತ್ಮೀಯರಾಗಿದ್ದ ಅರವಿಂದ್ ಕೆ.ಪಿ ಮತ್ತು ದಿವ್ಯಾ ಉರುಡುಗ ಒಟ್ಟಿಗೆ ಸಿನಿಮಾ ಮಾಡಿದ್ದಾರೆ. ಸಿನಿಮಾ ಹಾಡು ಜಿಂಗಲಕಾ ಲಕಾ ಲಕಾ ಈಗಾಗಲೇ ಫೇಮಸ್ ಆಗಿದೆ.ಅರ್ಧಂಬರ್ಧ ಪ್ರೇಮ ಕಥೆಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಈ ವಿಶೇಷ ಹಾಡನ್ನ ಸ್ವತಃ ಅರ್ಜುನ್ ಜನ್ಯ ಅವರೇ ಹಾಡಿದ್ದಾರೆ. ಚಿತ್ರದ ನಿರ್ದೇಶಕ ಅರವಿಂದ್ ಕೌಶಿಕ್ ಸಾಹಿತ್ಯ ಬರೆದಿದ್ದಾರೆ.
ಅರ್ಧಂಬರ್ಧ ಪ್ರೇಮ ಕಥೆಯ ಸಿನಿಮಾದಲ್ಲಿ ಅರವಿಂದ್ ಕೆ.ಪಿ. ಅದ್ಭುತವಾದ ಪಾತ್ರವನ್ನೇ ಮಾಡಿದ್ದಾರೆ. ನಾಯಕನನ್ನ ಪರಿಚಯಿಸೋ ಟೀಸರ್ ನೋಡಿದಾಗ, ಅರವಿಂದ್ ಕೆ.ಪಿ. ಇಲ್ಲೂ ಬೈಕ್ ರೈಡರ್ ಪಾತ್ರವನ್ನೇ ಮಾಡ್ತಿರಬಹುದು ಎನ್ನಲಾಗ್ತಿದೆ. ನಿರ್ದೇಶಕ ಅರವಿಂದ್ ಕೌಶಿಕ್ ತಮ್ಮ ಈ ಹಿಂದಿನ ಸಿನಿಮಾಗಳಲ್ಲಿ ಬೇರೆ ರೀತಿಯಲ್ಲಿಯೇ ಕಥೆಗಳನ್ನ ಹೇಳಿದ್ದರು. ಆದರೆ ಅರ್ಧಂಬರ್ಧ ಪ್ರೇಮ ಕಥೆ ಚಿತ್ರದಲ್ಲಿ ಹೊಸದನ್ನೆ ಹೇಳೋಕೆ ಮುಂದಾಗಿದ್ದಾರೆ. ಬಿಗ್ ಬಾಸ್ ಮೂಲಕ ಮೋಡಿ ಮಾಡಿದ್ದ ಜೋಡಿ, ಸಿನಿಮಾ ಮೂಲಕವೂ ಮೋಡಿ ಮಾಡುತ್ತಾ ನೋಡಬೇಕು. ಆಲ್ ದಿ ಬೆಸ್ಟ್ ಎಂದು ಅಭಿಮಾನಿಗಳು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ