• Home
  • »
  • News
  • »
  • entertainment
  • »
  • Divya Sridhar: ಮಂಗಳಮುಖಿಯನ್ನೂ ಮದ್ವೆಯಾಗಿ, ಮೋಸ ಮಾಡಿದ್ದ ಅರ್ನವ್! ದಿವ್ಯಾ ಶ್ರೀಧರ್ ಬಾಳಲ್ಲೂ ಈತ ಖಳನಾಯಕನೇ!

Divya Sridhar: ಮಂಗಳಮುಖಿಯನ್ನೂ ಮದ್ವೆಯಾಗಿ, ಮೋಸ ಮಾಡಿದ್ದ ಅರ್ನವ್! ದಿವ್ಯಾ ಶ್ರೀಧರ್ ಬಾಳಲ್ಲೂ ಈತ ಖಳನಾಯಕನೇ!

ದಿವ್ಯಾ ಶ್ರೀಧರ್, ಅರ್ನವ್

ದಿವ್ಯಾ ಶ್ರೀಧರ್, ಅರ್ನವ್

ಕಿರುತೆರೆ ನಟನೂ ಆಗಿರುವ ಪತಿ ಅರ್ನವ್ ಅಮ್ಜದ್ ಮೇಲೆ ದಿವ್ಯಾ ಶ್ರೀಧರ್ ಮಾಡಿರುವ ಎಲ್ಲಾ ಆರೋಪಗಳೂ ನಿಜ ಎನ್ನುವುದು ಒಂದೊಂದೇ ಸಾಬೀತಾಗುತ್ತಿದೆ. ಈಗಾಗಲೇ ಅರ್ನವ್ ಅಮ್ಜದ್ ಅವರನ್ನು ಚೆನ್ನೈ ಪೊಲೀಸರು (Chennai Police) ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ಅರ್ವನ್ ಅಮ್ಜದ್ ಬರೀ ದಿವ್ಯಾ ಶ್ರೀಧರ್ ಅವರಿಗೊಂದೇ ಅಲ್ಲ, ಮಂಗಳಮುಖಿ (Transgender) ಒಬ್ಬರಿಗೆ ಮೋಸ ಮಾಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಮುಂದೆ ಓದಿ ...
  • News18 Kannada
  • Last Updated :
  • Chennai, India
  • Share this:

ಚೆನ್ನೈ: ಕಿರುತೆರೆ ನಟಿ ದಿವ್ಯಾ ಶ್ರೀಧರ್ (TV actress Divya Sridhar) ಹಾಗೂ ಪತಿ ಅರ್ನವ್ ಅಮ್ಜದ್‌ (Arnav Amjad) ನಡುವಿನ ಸಂಘರ್ಷದ ಕೇಸ್‌ಗೆ (Case) ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ. ಕಿರುತೆರೆ ನಟನೂ ಆಗಿರುವ ಪತಿ ಅರ್ನವ್ ಅಮ್ಜದ್ ಮೇಲೆ ದಿವ್ಯಾ ಶ್ರೀಧರ್ ಮಾಡಿರುವ ಎಲ್ಲಾ ಆರೋಪಗಳೂ ನಿಜ ಎನ್ನುವುದು ಒಂದೊಂದೇ ಸಾಬೀತಾಗುತ್ತಿದೆ. ಈಗಾಗಲೇ ಅರ್ನವ್ ಅಮ್ಜದ್ ಅವರನ್ನು ಚೆನ್ನೈ ಪೊಲೀಸರು (Chennai Police) ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಈ ನಡುವೆ ಅರ್ವನ್ ಅಮ್ಜದ್ ಬರೀ ದಿವ್ಯಾ ಶ್ರೀಧರ್ ಅವರಿಗೊಂದೇ ಅಲ್ಲ, ಮಂಗಳಮುಖಿ (Transgender) ಒಬ್ಬರಿಗೆ ಮೋಸ ಮಾಡಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ನನ್ನ ಜೊತೆ ಮದುವೆ (Marriage) ಆಗಿ, ನನಗೂ ಮೋಸ ಮಾಡಿದ್ದಾನೆ ಅಂತ ಖುದ್ದು ಮಂಗಳಮುಖಿಯೇ ಹೇಳಿರುವ ಆಡಿಯೋ ಈಗ ವೈರಲ್ (Viral Audio) ಆಗಿದೆ.


ಮಂಗಳಮುಖಿ ಜೊತೆ ಅರ್ನವ್ ಅಮ್ಜದ್ ಪ್ರೇಮ ಸಂಬಂಧ


ಅರ್ನವ್ ಅಮ್ಜದ್ ಜೊತೆ ಸಂಬಂಧ ಹೊಂದಿದ್ದರು ಎನ್ನಲಾದ ಮಂಗಳಮುಖಿ ಹೆಸರು ಪ್ರಿಯದರ್ಶಿನಿ. ಸದ್ಯ ಅವರು ದೂರದ ಮಲೇಷ್ಯಾದಲ್ಲಿದ್ದಾರೆ. ಈಕೆಯ ಜೊತೆಯೇ ಅಮ್ಜಾದ್ ಗೆ ಸಂಬಂಧವಿತ್ತು ಎಂದು ಆ ಆಡಿಯೋದಲ್ಲಿ ಹೇಳಲಾಗಿದೆ. ‘ಅವನು ನನ್ನನ್ನು ಪ್ರೀತಿಸಿದ. ಆನಂತರ ಗೊತ್ತಾಯಿತು ಅವನೊಬ್ಬ ಹೆಣ್ಣುಬಾಕ ಅಂತ ಎಂದು ಆಡಿಯೋದಲ್ಲಿ ಮಂಗಳಮುಖಿ ಪ್ರಿಯದರ್ಶಿನಿ ಹೇಳಿದ್ದಾರೆ.


ದಿವ್ಯಾ ಹಾಗೂ ಅರ್ನವ್


ಮಂಗಳಮುಖಿ ಜೊತೆ ಸಹಜೀವನ, ಬಳಿಕ ಮದುವೆ


ಚೆನ್ನೈನಲ್ಲಿ ಪ್ರಿಯದರ್ಶಿನಿ ಜೊತೆ ಅರ್ನವ್ ಅಮ್ಜದ್ ಸಹಜೀವನ ನಡೆಸಿದ್ದನಂತೆ. ಅವನು ನನ್ನ ಜೊತೆ ಲಿವಿಂಗ್ ಟು ಗೆದರ್‌ ಸಂಬಂಧದಲ್ಲಿದ್ದ. ಬಳಿಕ ನಾವಿಬ್ಬರು ವಿವಾಹವಾಗಿ, ಎರಡು ವರ್ಷ ಒಟ್ಟಿಗೆ ಇದ್ದೆವು. ಆಮೇಲೆ ನನ್ನನ್ನು ಅವನು ದೂರ ಮಾಡಿದ. ಈ ನೋವು ತಾಳಲಾರದೇ ನಾನು ಮಲೇಶಿಯಾಗೆ ಹೊರಟೆ’ ಎಂದು ಪ್ರಿಯದರ್ಶಿನಿ ಆಡಿಯೋದಲ್ಲಿ ಆರೋಪಿಸಿದ್ದಾರೆ.


ಇದನ್ನೂ ಓದಿ: Serial Actress: ಲವ್ ಜಿಹಾದ್ ಬಲೆಗೆ ಸಿಲುಕಿದ್ರಾ ಕನ್ನಡ ಸೀರಿಯಲ್ ನಟಿ!? ಮದುವೆಯಾಗಿ ಚಿತ್ರ ಹಿಂಸೆ ಕೊಟ್ಟ ಅಮ್ಜದ್ ಖಾನ್!


ಪತಿ ವಿರುದ್ಧ ದೂರು ನೀಡಿದ್ದ ದಿವ್ಯಾ ಶ್ರೀಧರ್


ಪತಿ ವಿರುದ್ಧ ದೂರು ನೀಡಿದ್ದ ದಿವ್ಯಾ ‘ಆಕಾಶ ದೀಪ’, ‘ಅಮ್ಮ’ ಧಾರಾವಾಹಿ ಸೇರಿದಂತೆ ಹಲವು ಧಾರಾವಾಹಿಗಳನ್ನಿ ನಟಿಸಿ ಜನಪ್ರಿಯರಾಗಿದ್ದವರು. ಅವರ ಪತಿ ಅರ್ವನ್ ಅಮ್ಜದ್ ಕೂಡ  ಕಿರುತೆರೆ ನಟ. ಇಬ್ಬರೂ ಪ್ರೀತಿಸಿ, ಕೆಲ ಸಮಯದ ಹಿಂದಷ್ಟೇ ಮದುವೆಯಾಗಿದ್ದರು. ಈ ನಡುವೆ ದಿವ್ಯಾ ಶ್ರೀದರ್ ಅವರು ಗರ್ಭಿಣಿಯಾಗಿದ್ದರು. ಈ ಸಂದರ್ಭದಲ್ಲಿ ಅರ್ನವ್ ಕಿರುಕುಳ ನೀಡುತ್ತಿದ್ದರು ಎಂಬ ಆರೋಪ ಕೇಳಿ ಬಂದಿದೆ. ಪತಿ ಅರ್ನವ್ ಹಲ್ಲೆ ಮಾಡಿದ ನಂತರದಲ್ಲಿ ದಿವ್ಯಾ ಅವರು ಚೆನ್ನೈನ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಅದಾದ ನಂತರದಲ್ಲಿ ಅರ್ನವ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು, ಮಾಧ್ಯಮದ ಮುಂದೆ ಬಂದು ಏನೇನಾಯ್ತು ಎಂದು ಹೇಳಿದ್ದರು.


ಅರ್ನವ್ ಅಮ್ಜದ್ ಬಂಧಿಸಿದ್ದ ಪೊಲೀಸರು


ಇನ್ನು ದಿವ್ಯಾ ನೀಡಿದ ದೂರಿನ ಆಧಾರದ ಮೇಲೆ ಅರ್ನವ್ ಅವರನ್ನು ಪೊಲೀಸರು ಬಂಧಿಸಿದ್ದರು. ಅರ್ನವ್ ಕೂತಂಬಕ್ಕಂನ ಆರ್‌ವಿ ಗಾರ್ಡನ್ ಶೂಟಿಂಗ್‌ ಹೌಸ್‌ನಲ್ಲಿ ಭಾಗಿಯಾಗಿದ್ದಾಗ ಪೊಲೀಸರು ಅರ್ನವ್ ಅವರನ್ನು ಬಂಧಿಸಿದ್ದರು.


ಇದನ್ನೂ ಓದಿ: Serial Actress Suicide: ಜನಪ್ರಿಯ ಕಿರುತೆರೆ ನಟಿ ಸೂಸೈಡ್! ಪ್ರೇಮ ವೈಫಲ್ಯದಿಂದ ನೊಂದು ಆತ್ಮಹತ್ಯೆ ಶಂಕೆ


ಮಧ್ಯಪ್ರವೇಶಿಸಿದ್ದ ಕರ್ನಾಟಕ ಮಹಿಳಾ ಆಯೋಗ


ಈ ಮಧ್ಯೆ ಇದೇ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಕೂಡ ಮಧ್ಯಪ್ರವೇಶ ಮಾಡಿತ್ತು. ದಿವ್ಯಾ ಶ್ರೀಧರ್ ಕರ್ನಾಟಕದವರಾಗಿದ್ದು, ಸೂಕ್ತ ನ್ಯಾಯ ಒದಗಿಸುವಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಆಗ್ರಹಿಸಿದ್ದರು. ಈ ಕುರಿತಂತೆ ತಮಿಳು ನಾಡು ಮಹಿಳಾ ಆಯೋಗದ ಜೊತೆ ದೂರವಾಣಿ ಮೂಲಕವೂ ಮಾತನಾಡಿದ್ದರು.

Published by:Annappa Achari
First published: