ಚಂದನ್​ ಶೆಟ್ಟಿ ಆಯ್ತು ಈಗ ನಟಿ ರಮ್ಯಾ ಸಾಮಾಜಿಕ ಜಾಲತಾಣ ಖಾತೆಯೂ ಹ್ಯಾಕ್?

ರ‍್ಯಾಪರ್ ಚಂದನ್​ ಶೆಟ್ಟಿ ಅವರ ಫೇಸ್​​ಬುಕ್​ ಖಾತೆ ನಿನ್ನೆ ಹ್ಯಾಕ್​ ಆಗಿತ್ತು. ವಿದೇಶಿ ವ್ಯಕ್ತಿಯೊಬ್ಬ ನಿರಂತರ ಲೈವ್​ ವಿಡಿಯೋ ಪ್ರಸಾರ ಮಾಡಿದ್ದಾನೆ. ಲೈವ್​ ಬಂದ ವ್ಯಕ್ತಿ ವಿಯೆಟ್ನಾಂ ಮೂಲದವನು ಎಂದು ಹೇಳಲಾಗಿದೆ.

 • Share this:
  ಸಿನಿಮಾದಲ್ಲಿ ಮಿಂಚಿದ ನಂತರ ನಟಿ ರಮ್ಯಾ ರಾಜಕೀಯಕ್ಕೆ ಕಾಲಿಟ್ಟಿದ್ದರು. ಕೆಲ ವರ್ಷ ರಾಜಕೀಯದಲ್ಲಿ ಸಕ್ರಿಯವಾಗಿದ್ದ ಅವರು ನಂತರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಆದರೆ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಅವರು ಸಾಕಷ್ಟು ಆಕ್ಟಿವ್ ಆಗಿದ್ದಾರೆ. ಈ ಮಧ್ಯೆ ಅವರ ಸಾಮಾಜಿಕ ಖಾತೆ ಹ್ಯಾಕ್ ಆಗಿರುವ ಭಯ ಕಾಡಿದೆ.

  ಒಂದು ಬ್ರೇಕ್ ಪಡೆದಿದ್ದ ನಟಿ ರಮ್ಯಾ ಟ್ವಿಟ್ಟರ್, ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಮತ್ತೆ ಬ್ಯುಸಿಯಾಗಿದ್ದಾರೆ. ನಿತ್ಯ ಸಾಕಷ್ಟು ಪೋಸ್ಟ್ಗಳನ್ನು ಕೂಡ ಹಾಕುತ್ತಿದ್ದಾರೆ. ಈಗ ರಮ್ಯಾ ಇನ್ಸ್ಟಾಗ್ರಾಂ ಖಾತೆಯಲ್ಲಿ ಸಮಸ್ಯೆ ಒಂದು ಕಾಣಿಸಿಕೊಂಡಿದೆಯಂತೆ.

  ರಮ್ಯಾ ಈವರೆಗೆ ಒಟ್ಟು 73 ಪೋಸ್ಟ್ಗಳನ್ನು ಹಾಕಿದ್ದಾರೆ. ಆದರೆ, ಅವರ ವಾಲ್ ಮೇಲೆ ಯಾವುದೇ ಪೋಸ್ಟ್ಗಳು ಕೂಡ ಕಾಣುತ್ತಿಲ್ಲ. ಈ ಬಗ್ಗೆ ಬರೆದುಕೊಂಡಿರುವ ರಮ್ಯಾ, ಇಡೀ ದೀನ ಇದೇ ರೀತಿ ಆಗುತ್ತಿದೆ. ಯಾವುದೇ ಪೋಸ್ಟ್ಗಳು ಕೂಡ ಕಾಣುತ್ತಿಲ್ಲ. ರಿಫ್ರೆಶ್ ಮಾಡಿದರೂ ಕೂಡ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದಿದ್ದಾರೆ.  ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆಗುತ್ತಿದೆ. ಕೆಲವರು ಇದು ಹ್ಯಾಕರ್ಸ್ಗಳ ಕಾಟ ಎಂದಿದ್ದಾರೆ. ಇನ್ನೂ ಕೆಲವರು ಇದು ತಾಂತ್ರಿಕ ಸಂಸ್ಯೆ ಇರಬಹುದು ಎಂದು ಬರೆದುಕೊಂಡಿದ್ದಾರೆ.

  ಇದನ್ನೂ ಓದಿ: Anushka Sharma: ವಿರಾಟ್​-ಅನುಷ್ಕಾ ಈಗ ಇಬ್ಬರಲ್ಲ ಮೂವರು; ತಾಯಿ ಆಗ್ತಿರೋ ಬಗ್ಗೆ ಖಚಿತಪಡಿಸಿದ ಸ್ಟಾರ್​ ನಟಿ

  ರ‍್ಯಾಪರ್ ಚಂದನ್​ ಶೆಟ್ಟಿ ಅವರ ಫೇಸ್​​ಬುಕ್​ ಖಾತೆ ನಿನ್ನೆ ಹ್ಯಾಕ್​ ಆಗಿತ್ತು. ವಿದೇಶಿ ವ್ಯಕ್ತಿಯೊಬ್ಬ ನಿರಂತರ ಲೈವ್​ ವಿಡಿಯೋ ಪ್ರಸಾರ ಮಾಡಿದ್ದಾನೆ. ಲೈವ್​ ಬಂದ ವ್ಯಕ್ತಿ ವಿಯೆಟ್ನಾಂ ಮೂಲದವನು ಎಂದು ಹೇಳಲಾಗಿದೆ. ಈ ಮೊದಲು ಆನೇಕ ಸೆಲೆಬ್ರಿಟಿಗಳ ಖಾತೆಗಳು ಹ್ಯಾಕ್​ ಆಗಿದ್ದವು.
  Published by:Rajesh Duggumane
  First published: