ಬಾಲಿವುಡ್ನ (Bollywood) ಲವ್ ಬರ್ಡ್ಸ್ ಎಂದೇ ಟೈಗರ್ ಶ್ರಾಫ್ (Tiger Shroff) ಮತ್ತು ದಿಶಾ ಪಟಾನಿ (Disha Patani) ಹೆಸರು ವಾಸಿಯಾಗಿದ್ದರು. ಇತ್ತೀಚೆಗೆ ಈ ಜೋಡಿಯ ಬ್ರೇಕಪ್ ಮಾಡಿಕೊಂಡಿದೆ. ನಂತರ ಮಾಡೆಲ್ ಅಲೆಕ್ಸಾಂಡರ್ ಅಲೆಕ್ಸ್ (Aleksandar Alex) ಜೊತೆ ದಿಶಾ ಪಟಾನಿ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಬಿಟೌನ್ನಲ್ಲಿ ಸದ್ದು ಮಾಡ್ತಿದೆ. ಟೈಗರ್ ಶ್ರಾಫ್ ಮತ್ತು ದಿಶಾ ಸಾಕಷ್ಟು ವರ್ಷಗಳಿಂದ ಪ್ರೀತಿ ಮಾಡ್ತಾ ಇದ್ದರು. ಆದರೆ ಏಕಾಏಕಿ ಇಬ್ಬರ ನಡುವೆ ಅದೇನು ಆಯ್ತೋ ಗೊತ್ತಿಲ್ಲ. ತಮ್ಮ ಪ್ರೀತಿಗೆ ಗುಡ್ ಬೈ ಹೇಳಿದ್ದರು. ಟೈಗರ್ ಶ್ರಾಫ್ ಜೊತೆಗಿನ ಬ್ರೇಕಪ್ ನಂತರ ನಟಿ ದಿಶಾ, ಮಾಡೆಲ್ ಕಮ್ ಆಕ್ಟರ್ ಅಲೆಕ್ಸಾಂಡರ್ ಅಲೆಕ್ಸ್ ಜೊತೆ ಮತ್ತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನಲಾಗುತ್ತಿದೆ. ಅವರ ಜೊತೆ ಮುಂಬೈ ಸುತ್ತುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಅವರ ಡೇಟಿಂಗ್ (Dating) ಬಗ್ಗೆ ಏನ್ ಹೇಳಿದ್ದಾರೆ ನೋಡಿ.
ಶಾಕ್ ಆಗಿದ್ದ ಫ್ಯಾನ್ಸ್
ಟೈಗರ್ ಶ್ರಾಫ್ ಜೊತೆಗಿನ ದಿಶಾ ಬ್ರೇಕಪ್ ಸುದ್ದಿ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದರು. ಈ ನಡುವೆ ಅಲೆಕ್ಸಾಂಡರ್ ಜೊತೆ ಡೇಟಿಂಗ್ ಸುದ್ದಿ ಕೇಳಿ ಇದು ನಿಜಾನಾ ಎಂದು ಕೇಳ್ತಾ ಇದ್ದಾರೆ. ಭಾಘಿ ಜೋಡಿ ಬೇರೆ ಆಗಿದ್ದೇಕೆ ಎನ್ನು ಚರ್ಚೆಗಳು ಎದ್ದಿವೆ. ಅಲೆಕ್ಸಾಂಡರ್ ನಿಜಕ್ಕೂ ದಿಶಾ ಪಠಾನಿಗೆ ಮೋಡಿ ಮಾಡಿದ್ರಾ?
ಅಲೆಕ್ಸಾಂಡರ್ ಅಲೆಕ್ಸ್ ಬಗ್ಗೆ ವದಂತಿ!
ಅಲೆಕ್ಸಾಂಡರ್ ಅಲೆಕ್ಸ್ ಇಲಿಕ್ ಅವರನ್ನು ಕೆಲವರು ದಿಶಾ ಪಟಾನಿಯ ಫಿಟ್ನೆಸ್ ತರಬೇತುದಾರ ಎಂದುಕೊಂಡಿದ್ದಾರೆ. ಆದ್ರೆ ಇಬ್ಬರು ಮುಂಬೈನಲ್ಲಿ ಹಲವು ಬಾರಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಅವರ ನೆಚ್ಚಿನ ರೆಸ್ಟೋರೆಂಟ್ಗಳಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: Olavina Nildana: ಧೀರಜ್ ಜೊತೆ ತಾರಿಣಿ ನಿಶ್ಚಿತಾರ್ಥ, ಸಿದ್ಧಾಂತ್ ಮುಂದಿನ ನಡೆ ಏನು?
ವದಂತಿ ಬಗ್ಗೆ ಅಲೆಕ್ಸಾಂಡರ್ ಅಲೆಕ್ಸ್ ಏನ್ ಹೇಳ್ತಾರೆ?
'ನಾನು ಸೆರ್ಬಿಯಾದಿಂದ ಬಂದಿದ್ದೇನೆ. ಮತ್ತು ಕಳೆದ ಏಳು ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದೇನೆ. ನಾನು ಮಾಡೆಲ್ ಆಗಿ ವೃತ್ತಿ ಜೀವನ ಪ್ರಾರಂಭಿಸಿ ನಂತರ ನಟನೆಗೆ ತೊಡಗಿದೆ. ಮುಂಬೈನಲ್ಲಿ ಆರಂಭಿಕ ದಿನಗಳಲ್ಲಿ ದಿಶಾ ಅವರನ್ನು ಭೇಟಿಯಾಗಿದ್ದೇನೆ' ಎಂದು ಅಲೆಕ್ಸಾಂಡರ್ ಹೇಳಿದ್ದಾರೆ.
ದಿಶಾ ಮತ್ತು ನಾನು ಫ್ಲಾಟ್ಮೇಟ್ಗಳು
'ನಾವು 2015 ರಲ್ಲಿ ಒಟ್ಟಿಗೆ ವಾಸಿಸುತ್ತಿದ್ದೆವು. ದಿಶಾ, ನಾನು ಮತ್ತು ಇತರ ಒಂದೆರಡು ಮಾಡೆಲ್ಗಳು ಫ್ಲಾಟ್ಮೇಟ್ಗಳಾಗಿದ್ದೇವೆ. ಫಿಟ್ನೆಸ್ ಎನ್ನುವುದು ನಾವಿಬ್ಬರೂ ಉತ್ಸಾಹದಿಂದಿರುವ ವಿಷಯ ಮತ್ತು ಅದು ನಮಗೆ ಬಾಂಧವ್ಯಕ್ಕೆ ಸಹಾಯ ಮಾಡಿತು. ಆದ್ದರಿಂದ, ನಾವು ಒಟ್ಟಿಗೆ ಜಿಮ್ಗೆ ಹೋಗಲು ಪ್ರಾರಂಭಿಸಿದ್ದೇವೆ. ಒಟ್ಟಿಗೆ ಮನೆಯಲ್ಲಿ ಸಾಕಷ್ಟು ಸಮಯ ಕಳೆದಿದ್ದೇವೆ. ನಾವು ನಿಕಟ ಸ್ನೇಹಿತರಾಗಿದ್ದೇವೆ'. ಎಂದು ಅಲೆಕ್ಸಾಂಡರ್ ಹೇಳಿದ್ದಾರೆ.
ನನಗೆ ಸತ್ಯ ಗೊತ್ತಿದೆ
"ಕೆಲವು ವಾರಗಳಿಂದ ಈ ಊಹೆಯ ಹೇಗೆ ನಡೆಯುತ್ತಿದೆ ಎಂಬುದನ್ನು ನಾನು ನೋಡಿದ್ದೇನೆ. ವಿಷಯವೆಂದರೆ ನಮಗೆ ಸತ್ಯ ತಿಳಿದಿದೆ. ಏನು ನಡೆಯುತ್ತಿದೆ ಎಂಬುದರ ಕುರಿತು ಜನರು ಏಕೆ ಊಹಿಸಬೇಕು ಎಂದು ನನಗೆ ಅರ್ಥವಾಗುತ್ತಿಲ್ಲ? ಇತರ ಜನರು ತಮ್ಮ ಜೀವನವನ್ನು ಶಾಂತಿಯುತವಾಗಿ ಬದುಕಲು ಏಕೆ ಅನುಮತಿಸುವುದಿಲ್ಲ? ಬೇರೆಯವರ ಜೀವನದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ' ಎಂದು ಅಲೆಕ್ಸಾಂಡರ್ ಹೇಳಿದ್ದಾರೆ.
ನಟನೆ ಇಷ್ಟ ಆಗಿದೆ
ನಾನು ಮಾಡೆಲ್ ಆಗಿ ವೃತ್ತಿ ಜೀವನ ಪ್ರಾರಂಭಿಸಿದೆ. ಆದರೆ ನಾನು ಈಗ ನಟನೆಯತ್ತ ನನ್ನ ಗಮನವನ್ನು ಬದಲಾಯಿಸಿದ್ದೇನೆ. ಮಾಡೆಲಿಂಗ್ ಜಗತ್ತಿನಲ್ಲಿ ವಿಷಯಗಳು ವಿಭಿನ್ನವಾಗಿವೆ. ಅಂತರಾಷ್ಟ್ರೀಯ ಮಾಡೆಲ್ ಗಳಿಗೆ ಭಾರೀ ಬೇಡಿಕೆಯಿತ್ತು, ಆದರೆ ಈಗ ಗಮನ ಭಾರತೀಯ ಮಾದರಿಗಳತ್ತ ನೆಟ್ಟಿದೆ.
ಇದನ್ನೂ ಓದಿ: Rajinikanth Birthday: ಹ್ಯಾಪಿ ಬರ್ತ್ಡೇ ರಜನಿಕಾಂತ್, ಸೂಪರ್ ಸ್ಟಾರ್ ನಟನೆಯ ಐಕಾನಿಕ್ ಚಿತ್ರಗಳ ಪಟ್ಟಿ ಇಲ್ಲಿದೆ
ಹಾಗಾಗಿ ಈಗ ನಟನೆಯತ್ತ ಗಮನ ಹರಿಸಿದ್ದೇನೆ. ಒಂದೆರಡು ಮ್ಯೂಸಿಕ್ ವಿಡಿಯೋ ಮಾಡಿದ್ದೇನೆ. ನನ್ನ ವೆಬ್ ಶೋ ಈ ವರ್ಷ ಬಿಡುಗಡೆಯಾಗಿದೆ. ನಾನು ಹಿಂದಿ ಚಿತ್ರವೊಂದಕ್ಕೆ ಶೂಟಿಂಗ್ ಮಾಡಿದ್ದೇನೆ, ಅದು ಮುಂದಿನ ವರ್ಷ ತೆರೆಗೆ ಬರಲಿದೆ ಎಂದು ಅಲೆಕ್ಷಾಂಡರ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ