ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದರೆ ಮದುವೆ ನಂತರ ಮಾಡಲು ಏನು ಉಳಿದಿರುತ್ತೆ?; ವೈರಲ್​ ಆಯ್ತು ದೀಪಿಕಾ ಪಡುಕೋಣೆ ಪ್ರಶ್ನೆ

ದಾಂಪತ್ಯ ಜೀವನಕ್ಕೂ ಕಾಲಿಡುವ ಮೊದಲು ಅನೇಕರು ಲಿವ್ ಇನ್​ ರಿಲೇಶನ್​ಶಿಪ್​ನಲ್ಲಿರುತ್ತಾರೆ. ತೆಲುಗಿನ ಸ್ಟಾರ್​ ಜೋಡಿ ಸಮಂತಾ ಹಾಗೂ ನಾಗಚೈತನ್ಯ ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ, ದೀಪಿಕಾಗೆ ಇದು ತಪ್ಪು ಎನ್ನುವ ಭಾವನೆ ಕಾಡಿತ್ತಂತೆ.

Rajesh Duggumane | news18-kannada
Updated:October 16, 2019, 3:28 PM IST
ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದರೆ ಮದುವೆ ನಂತರ ಮಾಡಲು ಏನು ಉಳಿದಿರುತ್ತೆ?; ವೈರಲ್​ ಆಯ್ತು ದೀಪಿಕಾ ಪಡುಕೋಣೆ ಪ್ರಶ್ನೆ
ದೀಪಿಕಾ-ರಣವೀರ್
  • Share this:
ದೀಪಿಕಾ ಪಡುಕೋಣೆ ಹಾಗೂ ರಣವೀರ್​ ಸಿಂಗ್​ ಶೀಘ್ರವೇ ಮೊದಲು ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಳ್ಳಲಿದ್ದಾರೆ. ಮದುವೆಗೂ ಮೊದಲು ಈ ಜೋಡಿ ಒಟ್ಟಿಗೆ ಕಾಣಿಸಿಕೊಂಡಿದ್ದು ತೀರಾ ಅಪರೂಪ. ಹೀಗೆ ಕಾಣಿಸಿಕೊಂಡಿದ್ದರೂ ಈ ಜೋಡಿ ಮದುವೆ ಆಗುತ್ತಿದ್ದೇವೆ ಎನ್ನುವ ವಿಚಾರವನ್ನು ಅಲ್ಲ ಗಳೆಯುತ್ತಲೇ ಬಂದಿತ್ತು. ಮದುವೆ ನಂತರ ಒಂದೊಂದೇ ವಿಚಾರವನ್ನು ದೀಪಿಕಾ ಹಂಚಿಕೊಳ್ಳುತ್ತಿದ್ದಾರೆ.

ದಾಂಪತ್ಯ ಜೀವನಕ್ಕೂ ಕಾಲಿಡುವ ಮೊದಲು ಅನೇಕರು ಲಿವ್ ಇನ್​ ರಿಲೇಶನ್​ಶಿಪ್​ನಲ್ಲಿರುತ್ತಾರೆ. ತೆಲುಗಿನ ಸ್ಟಾರ್​ ಜೋಡಿ ಸಮಂತಾ ಹಾಗೂ ನಾಗಚೈತನ್ಯ ಕೂಡ ಇದಕ್ಕೆ ಹೊರತಾಗಿಲ್ಲ. ಆದರೆ, ದೀಪಿಕಾಗೆ ಇದು ತಪ್ಪು ಎನ್ನುವ ಭಾವನೆ ಕಾಡಿತ್ತಂತೆ.

“ನನಗೆ ಯಾವುದು ಖುಷಿಕೊಡುತ್ತದೆಯೋ ಆ ವಿಚಾರ ನನಗೂ ಖುಷಿ ಕೊಡುತ್ತದೆ ಎಂದು ರಣವೀರ್​ ಹೇಳುತ್ತಲೇ ಇರುತ್ತಾನೆ. ಹೀಗಾಗಿ ಲಿವಿಂಗ್​ ರಿಲೇಶನ್​ಶಿಪ್​ ಬೇಡ ಎಂದಾಗ ರಣವೀರ್​ ಒಪ್ಪಿಕೊಂಡಿದ್ದ. ಯಾವ ಸಮಯದಲ್ಲಿ ಏನು ಆಗಬೇಕೋ ಆಗ ಜರುಗಿದರೆ ಮಾತ್ರ ಚೆಂದ ಎನ್ನುವ ಉದ್ದೇಶ ನನ್ನದಾಗಿತ್ತು. ಹಾಗೆಯೇ ಮಾಡಿದ್ದೇನೆ,”  ಎನ್ನುತ್ತಾರೆ ದೀಪಿಕಾ.

ಇದನ್ನೂ ಓದಿ: ಪಬ್ಲಿಕ್​ನಲ್ಲಿ ಹೆಂಡತಿ ಸೊಂಟ ನೋಡಿದ ರಣವೀರ್​ ಸಿಂಗ್​ಗೆ ದೀಪಿಕಾ ಪಡುಕೋಣೆ ಹೇಳಿದ್ದೇನು?

“ಒಟ್ಟಿಗೆ ಉಳಿದುಕೊಂಡರೆ ಒಬ್ಬರನ್ನೊಬ್ಬರು ಅರಿತುಕೊಳ್ಳುತ್ತೇವೆ ನಿಜ. ಆದರೆ, ಮದುವೆಯಾದ ನಂತರ ನಾವು ಮಾಡುವುದೇನು? ನಾವು ಅತ್ಯುತ್ತಮ ನಿರ್ಧಾರ ಮಾಡಿದ್ದೇವೆ. ನನಗೆ ಮದುವೆ ಬಗ್ಗೆ ನಂಬಿಕೆ ಇದೆ. ದಾಂಪತ್ಯ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದೇವೆ,” ಎಂದರು ಅವರು.

First published:October 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading