Deepika Padukone: ದೀಪಿಕಾ ಕೂಡಾ ಖಿನ್ನತೆಯಿಂದ ಬಳಲಿದ್ರಂತೆ, ಕಷ್ಟದ ದಿನಗಳನ್ನು ಮತ್ತೆ ನೆನೆದ ನಟಿ

ನಟಿ ದೀಪಿಕಾ ತನ್ನ ಖಿನ್ನತೆಯ ಪರಿಸ್ಥಿತಿಯಿಂದ ಹೊರ ಬರಲು ಸಹಾಯ ಮಾಡಿದ್ದು ಅವರ ತಾಯಿ ಉಜ್ಜಲಾ ಪಡುಕೋಣೆ ಅಂತ ಹೇಳಿಕೊಂಡರು. ಏಕೆಂದರೆ ದೀಪಿಕಾ ಅವರಲ್ಲಿ ಹಿಂದೆ ಖಿನ್ನತೆಯ ಲಕ್ಷಣಗಳನ್ನು ಗುರುತಿಸಿಕೊಳ್ಳಲು ಅವರ ತಾಯಿ ಸಹಾಯ ಮಾಡಿದ್ರಂತೆ. ನಂತರ ದೀಪಿಕಾಗೂ ಖಿನ್ನತೆಯ ಲಕ್ಷಣಗಳ ಬಗ್ಗೆ ಅರಿವಾದಾಗ, ತಾಯಿ ಅವರನ್ನು ವೃತ್ತಿಪರರ ಸಹಾಯವನ್ನು ಪಡೆಯಲು ಸಲಹೆ ನೀಡಿದ್ದರು ಎಂದು ಹೇಳಲಾಗುತ್ತಿದೆ.

ದೀಪಿಕಾ ಪಡುಕೋಣೆ

ದೀಪಿಕಾ ಪಡುಕೋಣೆ

  • Share this:
ಕೈ ತುಂಬಾ ಹಣವಿದ್ದು, ಐಷಾರಾಮಿ ಬಂಗಲೆಯಲ್ಲಿ ವಾಸಿಸುತ್ತಿದ್ದು, ದೊಡ್ಡ ದೊಡ್ಡ ಕಾರುಗಳಲ್ಲಿ ಕೂತು ಓಡಾಡುವ ಮತ್ತು ತುಂಬಾನೇ ಹೆಸರು ಮಾಡಿರುವವರ ಜೀವನ (Life) ಎಷ್ಟು ಖುಷಿಯಿಂದ ತುಂಬಿರುತ್ತದೆ ಅಲ್ಲವೇ ಅಂತ ನಮಗೆ ಅನೇಕ ಬಾರಿ ಅನ್ನಿಸುತ್ತದೆ. ಆದರೆ ಪ್ರತಿಯೊಬ್ಬರಿಗೂ ಅವರದೇ ಆದ ಕಷ್ಟಗಳು ಮತ್ತು ನೋವು (Pain) ಇದ್ದೇ ಇರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು.. ವ್ಯಕ್ತಿ ಎಷ್ಟೇ ಶ್ರೀಮಂತನಾಗಿದ್ದರೂ ಸಹ ಅವನಿಗಿರುವ ಕಷ್ಟ ಮತ್ತು ನೋವುಗಳನ್ನು ಪರಿಹರಿಸಿಕೊಳ್ಳುವುದಕ್ಕೆ ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ದೈಹಿಕವಾದ ನೋವನ್ನು ಹೇಗೋ ದುಡ್ಡು ಖರ್ಚು ಮಾಡಿ ಚಿಕಿತ್ಸೆ (Treatment) ಪಡೆದು ಗುಣಪಡಿಸಿಕೊಳ್ಳಬಹುದು. ಆದರೆ ಈ ಮಾನಸಿಕ ನೋವನ್ನು ನಿವಾರಿಸುವುದು ದುಡ್ಡಿನಿಂದ (Money) ಸಾಧ್ಯವಿಲ್ಲ ಬಿಡಿ.

ತುಂಬಾನೇ ಖಿನ್ನತೆಯಿಂದ ಬಳಲಿದ್ರಂತೆ ನಟಿ ದೀಪಿಕಾ ಪಡುಕೋಣೆ
ಈಗಾಗಲೇ ನಾವು ಅನೇಕ ಚಲನ ಚಿತ್ರೋದ್ಯಮದ ನಟ ಮತ್ತು ನಟಿಯರು ತಮ್ಮ ಬದುಕಿನಲ್ಲಿ ಒಮ್ಮೆಯಾದರೂ ಖಿನ್ನತೆಯಿಂದ ಬಳಲಿರುವುದು ಮತ್ತು ಕೆಲವೊಮ್ಮೆ ಆತ್ಮಹತ್ಯೆ ಅಂತಹ ಯೋಚನೆಗಳಿಗೆ ಬಿದ್ದು ಪ್ರಾಣ ಕಳೆದುಕೊಂಡ ಉದಾಹರಣೆಗಳು ಸಹ ಇವೆ. ಆದರೆ ಜೀವನ ಸಮಸ್ಯೆಗಳಿಗಿಂತಲೂ ತುಂಬಾನೇ ದೊಡ್ಡದು, ಎಂತಹ ಸಮಸ್ಯೆಯನ್ನು ಸಹ ತಾಳ್ಮೆ ಮತ್ತು ದೃಢ ನಿಶ್ಚಯದಿಂದ ಪರಿಹರಿಸಿಕೊಳ್ಳಬಹುದು ಅಂತ ಅನೇಕ ಉದಾಹರಣೆಗಳು ನಮ್ಮ ಕಣ್ಮುಂದೆ ಇರುತ್ತವೆ.

ಕೆಲವು ವರ್ಷಗಳ ಹಿಂದೆ ಒಬ್ಬ ಬಾಲಿವುಡ್ ನಟಿ ಸಹ ತುಂಬಾನೇ ಖಿನ್ನತೆಯಿಂದ ಬಳಲಿದ್ರಂತೆ ಮತ್ತು ಆತ್ಮಹತ್ಯೆಯ ಆಲೋಚನೆಗಳನ್ನು ಸಹ ತಮ್ಮ ತಲೆಯಲ್ಲಿ ತಂದು ಕೊಂಡಿದ್ದರಂತೆ. ಹೌದು.. ಆ ನಟಿ ದೀಪಿಕಾ ಪಡುಕೋಣೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.

‘ಲಿವ್ ಲವ್ ಲಾಫ್ ಫೌಂಡೇಶನ್' ಸ್ಥಾಪನೆ
ಈ ಮಾತನ್ನು ಬೇರೆ ಯಾರೋ ಹೇಳಿಲ್ಲ, ಖುದ್ದು ನಟಿ ದೀಪಿಕಾ ಅವರೇ ಹೇಗೆ ಖಿನ್ನತೆಯೊಂದಿಗೆ ಧೈರ್ಯದಿಂದ ಹೋರಾಡಿದೆ ಮತ್ತು ಜೀವನದಲ್ಲಿ ಮುನ್ನುಗ್ಗಿದೆ ಅಂತ ಅವರ ಜೀವನದ ಆ ಹೋರಾಟದ ಬಗ್ಗೆ ಮಾತನಾಡಿದ್ದಾರೆ. ತನ್ನ ಕಥೆಯನ್ನು ಹಂಚಿಕೊಂಡ ನಂತರ, ನಟಿ ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ‘ಲಿವ್ ಲವ್ ಲಾಫ್ ಫೌಂಡೇಶನ್’ ಅನ್ನು ಸ್ಥಾಪಿಸಿದರು.

ಇದನ್ನೂ ಓದಿ: Bigg Boss OTT: ಮದುವೆಯಾಗಿ ಮಗು ಇದ್ದವನ ಜೊತೆ ರಿಲೇಷನ್​​ಶಿಪ್​ನಲ್ಲಿ ಇದ್ದ ಮಾರಿಮುತ್ತು ಮೊಮ್ಮಗಳು

ಹಲವಾರು ಸಂದರ್ಭಗಳಲ್ಲಿ, ನಟಿ ತನ್ನ ಮಾನಸಿಕ ಯೋಗಕ್ಷೇಮದ ಬಗ್ಗೆ ಮನಸ್ಸು ಬಿಚ್ಚಿ ಮಾತಾಡಿದ್ದಾರೆ. ಇತ್ತೀಚೆಗೆ, ಕಾರ್ಯಕ್ರಮವೊಂದರಲ್ಲಿ, ನಟಿ ದೀಪಿಕಾ ಹಿಂದೊಮ್ಮೆ ಖಿನ್ನತೆಯೊಂದಿಗೆ ಹೋರಾಡುವಾಗ 'ಕೆಲವೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಆಲೋಚನೆಗಳು ತಲೆಯಲ್ಲಿ ಬಂದಿದ್ದವು’ ಎಂದು ಬಹಿರಂಗಪಡಿಸಿದರು.

ನನಗೆ ಕೆಲವೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಬಂದಿದ್ದವು: ದೀಪಿಕಾ
ಕಾರ್ಯಕ್ರಮವೊಂದರಲ್ಲಿ ನಟಿ ದೀಪಿಕಾ ತನ್ನ ಆ ಖಿನ್ನತೆಯ ಪರಿಸ್ಥಿತಿಯಿಂದ ಹೊರ ಬರಲು ಸಹಾಯ ಮಾಡಿದ್ದು ಅವರ ತಾಯಿ ಉಜ್ಜಲಾ ಪಡುಕೋಣೆ ಅಂತ ಹೇಳಿಕೊಂಡರು. ಏಕೆಂದರೆ ದೀಪಿಕಾ ಅವರಲ್ಲಿ ಹಿಂದೆ ಖಿನ್ನತೆಯ ಲಕ್ಷಣಗಳನ್ನು ಗುರುತಿಸಿಕೊಳ್ಳಲು ಅವರ ತಾಯಿ ಸಹಾಯ ಮಾಡಿದ್ರಂತೆ. ನಂತರ ದೀಪಿಕಾಗೂ ಖಿನ್ನತೆಯ ಲಕ್ಷಣಗಳ ಬಗ್ಗೆ ಅರಿವಾದಾಗ, ತಾಯಿ ಅವರನ್ನು ವೃತ್ತಿಪರರ ಸಹಾಯವನ್ನು ಪಡೆಯಲು ಸಲಹೆ ನೀಡಿದ್ದರು ಎಂದು ಹೇಳಲಾಗುತ್ತಿದೆ.

ಖಿನ್ನತೆಗೆ ಒಳಗಾದ ಸಂದರ್ಭದಲ್ಲಿ ಏನೆಲ್ಲಾ ಮಾಡ್ತಿದ್ರು
ಏತನ್ಮಧ್ಯೆ, ಖಿನ್ನತೆಯೊಂದಿಗಿನ ತನ್ನ ಹೋರಾಟದ ಬಗ್ಗೆ ಮಾತನಾಡಿದ ನಟಿ, "ಯಾವುದೇ ಸ್ಪಷ್ಟ ಕಾರಣವಿಲ್ಲದೆ ನಾನು ಕೆಲವೊಮ್ಮೆ ಹತಾಶೆಯಾಗುತ್ತಿದ್ದೆ. ನಾನು ಮಲಗಿದ್ದವಳು ಹಾಸಿಗೆಯಿಂದ ಮೇಲೆ ಏಳಲೇಬಾರದು ಅಂತ ಅನ್ನಿಸಿದ ದಿನಗಳಿದ್ದವು, ನಾನು ಹಾಗೆಯೇ ನಿದ್ರೆ ಮಾಡುತ್ತಿದ್ದೆ, ಏಕೆಂದರೆ ನಿದ್ರೆ ಮಾಡುವುದು ನನಗೆ ಒಂದು ರೀತಿಯ ಪಲಾಯನವಾಗಿತ್ತು. ನನಗೆ ಕೆಲವೊಮ್ಮೆ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಗಳು ಬರುತ್ತಿದ್ದವು. ನನ್ನ ಪೋಷಕರು ಬೆಂಗಳೂರಿನಲ್ಲಿ ವಾಸಿಸುತ್ತಿದ್ದರು, ಆದ್ದರಿಂದ ಅವರು ನನ್ನನ್ನು ಆಗಾಗ ಭೇಟಿ ಮಾಡಲು ಬರುತ್ತಿದ್ದರು. ಈಗಲೂ ಸಹ, ನಾನು ಎಲ್ಲವೂ ಸರಿಯಾಗಿದೆ ಅಂತ ಧೈರ್ಯ ಹೇಳಿಕೊಂಡು ಮುನ್ನುಗ್ಗುತ್ತೇನೆ. ನೀವು ಯಾವಾಗಲೂ ನಿಮ್ಮ ಹೆತ್ತವರಿಗೆ ನೀವು ಚೆನ್ನಾಗಿದ್ದೀರಿ ಎಂದು ತೋರಿಸಲು ಬಯಸುತ್ತೀರಿ, ಹಾಗಾಗಿ ಅನೇಕ ವಿಷಯಗಳನ್ನು ಅವರಿಂದ ಮರೆ ಮಾಚುತ್ತೀರಿ" ಎಂದು ನಟಿ ಹೇಳಿದರು.

 ಇದನ್ನೂ ಓದಿ: Mannat: ಶಾರುಖ್​ಗಿಂತ ಮೊದಲು ಸಲ್ಮಾನ್ ಖಾನ್​ಗೆ ‘ಮನ್ನತ್’ ಖರೀದಿಸುವ ಆಫರ್ ಬಂದಿತ್ತಂತೆ! ಮತ್ಯಾಕೆ ಖರೀದಿಸಿಲ್ಲ?

ಇನ್ನೂ ಕೆಲಸದ ವಿಷಯಕ್ಕೆ ಬಂದರೆ, ದೀಪಿಕಾ ನಟ ಹೃತಿಕ್ ರೋಷನ್ ಅವರೊಂದಿಗೆ ‘ಫೈಟರ್’ ಚಿತ್ರದಲ್ಲಿ ಮತ್ತು ಶಾರುಖ್ ಖಾನ್ ಮತ್ತು ಜಾನ್ ಅಬ್ರಹಾಂ ಅವರೊಂದಿಗೆ ‘ಪಠಾನ್’ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.
Published by:Ashwini Prabhu
First published: