ಸೆಲೆಬ್ರಿಟಿಗಳು ಯಾವಾಗಲೂ ಫಿಟ್ ನೆಸ್ (Fitness) ಬಗ್ಗೆ ಕಾಳಜಿ ವಹಿಸ್ತಾರೆ. ಫಿಟ್ ಆಗಿ ಸುಂದರವಾಗಿ ಕಾಣೋದಕ್ಕೆ ಸಾಕಷ್ಟು ಶ್ರಮ ವಹಿಸ್ತಾರೆ. ಶರೀರವನ್ನು ಸುಂದರವಾಗಿಟ್ಟುಕೊಳ್ಳಲು, ಹೊಳಪಿನ ಚರ್ಮ (Skin) ಹೊಂದಲು ಸರಿಯಾದ ಜೀವನಶೈಲಿ ಅನುಸರಿಸ್ತಾರೆ. ಅದರಲ್ಲೂ ಬೊಜ್ಜು ಬೆಳೆಯದಿರಲು ಆಹಾರವನ್ನು ಕಟ್ಟು ನಿಟ್ಟಾಗಿ ತೆಗೆದುಕೊಳ್ತಾರೆ. ಜಂಕ್ ಫುಡ್ (Junk Food) ನಿಂದ ದೂರವೇ ಉಳಿಯುವ ಈ ಸೆಲೆಬ್ರಿಟಿಗಳು ವ್ಯಾಯಾಮ, ಯೋಗದಿಂದಾಗಿ (Yoga) ಸದಾ ಯಂಗ್ ಆಗಿ ಕಾಣಿಸ್ತಾರೆ.
ನೀವು ಹಿಂದಿ ಸೀರಿಯಲ್ ಗಳನ್ನು ನೋಡುವವರಾಗಿದ್ದರೆ ನಿಮಗೆ ದಲ್ಜೀತ್ ಕೌರ್ ಬಗ್ಗೆ ಗೊತ್ತೇ ಇರುತ್ತೆ. 'ಗುಡ್ಡನ್ ತುಮ್ಸೆ ನಾ ಹೋ ಪಾಯೇಗಾ'ದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದ ದಲ್ಜೀತ್ ಕೌರ್ ಸದ್ಯ ಕಿರುತೆರೆಯಲ್ಲಿ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ.
ವೆಬ್ ಶೋಗಳು ಮತ್ತು ಬರವಣಿಗೆಯಲ್ಲಿ ಬ್ಯುಸಿಯಾಗಿರುವ ಕೌರ್ ಸದ್ಯ ಕಿರುತೆರೆಯಿಂದ ದೂರವೇ ಉಳಿದಿದ್ದಾರೆ. ಇನ್ನು ಲಾಕ್ ಡೌನ್ ಸಮಯದಲ್ಲಿ ಒಂದೆಡರು ಕಿರುಚಿತ್ರಗಳನ್ನು ನಿರ್ಮಿಸಿದ್ದಾರೆ. ಸದ್ಯ ಒಟಿಟಿಯ ವೆಬ್ ಶೋ ವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರ ಶೂಟಿಂಗ್ ನಡೆಯುತ್ತಿದ್ದು ಶೀಘ್ರವೇ ಓಟಿಟಿಯಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗಿದೆ.
ಅನ್ನ, ರೊಟ್ಟಿಗೆ "ನೋ" ಅಂತಾರಂತೆ ನಟಿ!
ಈ ಮಧ್ಯೆ ಫಿಟ್ನೆಸ್ ಬಗ್ಗೆ ಸದಾ ಕಾಳಜಿ ವಹಿಸುವ ದಲ್ಜೀತ್ ಕೌರ್ ಇನ್ನೂ ಯಂಗ್ ಮತ್ತು ಬ್ಯೂಟಿಫುಲ್ ಆಗಿ ಕಾಣಿಸ್ತಾರೆ. ಸುಂದರವಾಗಿ ಕಾಣೋದಿಕ್ಕೆ ಅವರು ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನು ಅನುಸರಿಸ್ತಾರೆ. ಫಿಟ್ನೆಸ್ ಅನ್ನೋದು ಈಗ ಜೀವನಶೈಲಿಯಾಗಿದೆ ಅನ್ನೋದನ್ನು ನಂಬಿರುವ ಕೌರ್ ಕಾರ್ಬೋಹೈಡ್ರೇಟ್ ಆಹಾರದಿಂದ ದೂರವೇ ಇರ್ತಾರಂತೆ. ನಾನು ಜಂಕ್ ಫುಡ್ ಗಳಿಂದ ದೂರವೇ ಇರುತ್ತೇನೆ ಎನ್ನುವ ಕೌರ್ ಅನ್ನ, ರೊಟ್ಟಿಯನ್ನೂ ತಿನ್ನುವುದಿಲ್ಲ ಎನ್ನುತ್ತಾರೆ.
ಸದಾ ವ್ಯಾಯಾಮ ಮಾಡಲು ಸಾಧ್ಯವಾಗದೇ ಇರೋದ್ರಿಂದ ನಾನು ಕಾರ್ಬ್ಸ್ ಗಳಿಂದ ದೂರವೇ ಇರುವುದಾಗಿ ಅವರು ಹೇಳುತ್ತಾರೆ. ಫಿಟ್ ಆಗಿರಲು ಯಾವುದೇ ಶಾರ್ಟ್ ಕಟ್ ಗಳಿಲ್ಲದೇ ಇರೋ ಕಾರಣ ನಾನು ನನ್ನ ಜೀವನಶೈಲಿಯನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದೇನೆ ಎನ್ನುತ್ತಾರೆ ಈ ನಟಿ.
ಇದನ್ನೂ ಓದಿ: ನಿಮ್ಮ ಡ್ರಿಂಕ್ಸ್ ಜೊತೆ ಈ ಆಹಾರಗಳನ್ನು ತಿನ್ಬೇಡಿ, ಆರೋಗ್ಯ ಹಾಳಾಗುತ್ತೆ
ದಲ್ಜೀತ್ ಕೌರ್ ತಮ್ಮ ಮಗನ ಬಗ್ಗೆ ಹೇಳಿದ ಮಾತು
ಇನ್ನು ಮಗ ಜೈಡನ್ ಬಗ್ಗೆ ಹೇಳಿಕೊಳ್ಳುವ ದಲ್ಜೀತ್ ಕೌರ್, ಮುಂದಿನ ತಿಂಗಳು ಮಗನಿಗೆ 9 ವರ್ಷವಾಗಲಿದೆ. ನಿನ್ನೆ ಮೊನ್ನೆ ನನಗೆ ಮಗ ಹುಟ್ಟಿದಂತಿದೆ. ಎತ್ತರಕ್ಕೆ ಬೆಳೆಯುತ್ತಿರುವ ಮಗನನ್ನು ನೋಡೋಕೆ ಖುಷಿ ಆಗುತ್ತೆ ಅನ್ನುವ ಕೌರ್, ಮಗನಿಗೆ ನಮ್ಮ ಸಂಸ್ಕೃತಿಯನ್ನು ಹೇಳಿಕೊಡಲಾಗುತ್ತಿದೆ. ನನ್ನ ಕುಟುಂಬ ಅವನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದೆ. ನನ್ನ ಮಗನ ಬಗ್ಗೆ ನನಗೆ ಹೆಮ್ಮೆ ಇದೆ ಎನ್ನುತ್ತಾರೆ.
ಇನ್ನು, ಲಾಕ್ಡೌನ್ ಸಮಯದಲ್ಲಿ ನಾನು ಬರೆಯಲು ಪ್ರಾರಂಭಿಸಿದೆ. ಈಗಾಗಲೇ ನಾನು ಅನೇಕ ಕಥೆಗಳನ್ನು ಬರೆದಿದ್ದೇನೆ. ಅದೇ ಕಥೆಗಳಿಂದಲೇ ನಾನು ಕಿರುಚಿತ್ರಗಳನ್ನು ಮಾಡಿದ್ದೇನೆ ಎಂದಿದ್ದಾರೆ ದಲ್ಜೀತ್. ಈ ಕಥೆಗಳಲ್ಲಿ ಹೆಚ್ಚಿನವುಗಳು ತಮ್ಮ ನೆಚ್ಚಿನ ತಾರೆಯರನ್ನು ಹೊಂದಿರುವುದರಿಂದ ಅಭಿಮಾನಿಗಳು ಈಗಾಗಲೇ ಕಾಯುತ್ತಿದ್ದಾರೆ ಎಂಬ ಭಾವನೆ ನನ್ನಲ್ಲಿದೆ. ಅಭಿಮಾನಿಗಳು ಎಷ್ಟು ಕಾಯುತ್ತಿದ್ದಾರೋ ಅಷ್ಟೇ ನಾನೂ ಕೂಡ ಉತ್ಸುಕನಾಗಿದ್ದೇನೆಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಭಾಗದಲ್ಲಿ ಪೊನ್ನಿಯಿನ್ ಸೆಲ್ವನ್ ಚಿತ್ರಕ್ಕೆ ನೀರಸ ಪ್ರತಿಕ್ರಿಯೆ
ಆದರೆ ನಿರ್ಮಾಪಕಿಯಾಗಿ ನಾನು ಚಲನಚಿತ್ರಗಳನ್ನು ಪ್ರೇಕ್ಷಕರು ಮತ್ತು ಅಭಿಮಾನಿಗಳಿಗೆ ತಲುಪಲು ಪ್ರಯತ್ನಿಸುತ್ತಿದ್ದೇನೆ. ನಿರ್ಮಾಪಕರಾಗುವುದು ಕಷ್ಟ. ಆದರೆ ಇದರಲ್ಲಿ ನನಗೆ ತೃಪ್ತಿಯದೆ. ನಾನು ಖುಷಿಯಾಗಿ ಕೆಲಸ ಮಾಡುತ್ತಿದ್ದೇನೆ ಅಂತಾರೆ ದಜ್ಲೀತ್ ಕೌರ್.ಜೀವನದಲ್ಲಿ ಸದಾ ಕ್ರಿಯೇಟಿವ್ ಆಗಿರೋ ಜನರು ಬೇರೆ ಬೇರೆ ಕೆಲಸಗಳನ್ನು ಮಾಡುತ್ತಿರುತ್ತಾರೆ. ಅವರಿಗೆ ಖುಷಿ ಕೊಡುವ ಕೆಲಸಗಳನ್ನು ಹೆಚ್ಚು ಆಸಕ್ತಿ ವಹಿಸಿ ಮಾಡುತ್ತಿರುತ್ತಾರೆ. ಅದರಲ್ಲೂ ಆರೋಗ್ಯವನ್ನೂ, ಅಂದವನ್ನೂ, ಕುಟುಂಬವನ್ನೂ ಜೊತೆಗೆ ವೃತ್ತಿಯನ್ನೂ ನೋಡಿಕೊಳ್ಳೋದು ಸವಾಲಿನ ಕೆಲಸವೇ ಹೌದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ