• Home
  • »
  • News
  • »
  • entertainment
  • »
  • Dingri Nagaraj-Rani: ಡಿಂಗ್ರಿ ನಾಗರಾಜ್ ಅಶ್ಲೀಲ ವಿಡಿಯೋ ಕಳಿಸ್ತಾರೆ ಎಂದ ನಟಿ ರಾಣಿ

Dingri Nagaraj-Rani: ಡಿಂಗ್ರಿ ನಾಗರಾಜ್ ಅಶ್ಲೀಲ ವಿಡಿಯೋ ಕಳಿಸ್ತಾರೆ ಎಂದ ನಟಿ ರಾಣಿ

ಡಿಂಗ್ರಿ ನಾಗರಾಜ್-ರಾಣಿ

ಡಿಂಗ್ರಿ ನಾಗರಾಜ್-ರಾಣಿ

ಹಿರಿಯ ನಟ ಡಿಂಗ್ರಿ ನಾಗರಾಜ್ ವಿರುದ್ಧ ನಟಿ ಆರೋಪ ಮಾಡಿದ್ದು ಅವರು ಅಶ್ಲೀಲ ವಿಡಿಯೋ ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ.

  • News18 Kannada
  • Last Updated :
  • Bangalore, India
  • Share this:

ಚಿತ್ರರಂಗದಲ್ಲಿ ಕಿರುಕುಳ ಆರೋಪ, ಕೆಟ್ಟ ನಡವಳಿಕೆ, ಅಶ್ಲೀಲ ವಿಡಿಯೋ ಲೀಕ್, ಅಶ್ಲೀಲ ಫೋಟೊ ಕೇಳುವುದು ಇಂಥಹ ಘಟನೆಗಳು ನಡೆಯುತ್ತಲೇ ಇರುತ್ತವೆ. ಅವಕಾಶಕ್ಕೆ ಲೈಂಗಿಕ ಫೇವರ್ ಕೇಳುವುದು ಅಥವಾ ಅಧಿಕಾರ ದುರ್ಬಳಕೆ ಮಾಡಿಕೊಂಡು ಇತರರನ್ನು ಬಳಸಿಕೊಳ್ಳುವಂತಹ ಘಟನೆಗಳು ವರದಿಯಾಗುತ್ತಲೇ ಇರುತ್ತದೆ. ಈಗ ಸ್ಯಾಂಡಲ್​ವುಡ್​ನಲ್ಲಿ (Sandalwood) ಅಂಥಹ ಆರೋಪದ ಘಟನೆಯೊಂದು ವರದಿಯಾಗಿದೆ. ರಂಗಭೂಮಿ ಹಾಗೂ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಮಿಂಚಿದ್ದ ಡಿಂಗ್ರಿ ರಾಜ್ (Dingri Raj) ವಿರುದ್ಧ ಆರೋಪ ಒಂದು ಕೇಳಿ ಬಂದಿದೆ. ಅವರು ನನಗೆ ಅಶ್ಲೀಲ ವಿಡಿಯೋ (Video) ಕಳುಹಿಸಿದ್ದಾರೆ ಎಂದು ನಟಿ ರಾಣಿ (Rani) ಆರೋಪಿಸಿದ್ದಾರೆ.


ರವಿ ಶಿಕಾರಿಪುರ ಸೇರಿ ಹಲವರು ನೊಂದಿದ್ದಾರೆ. ಸಂಘದಲ್ಲಿ ಆಗುವ ವಿಚಾರಗಳಿಗೆ ಡಿಂಗ್ರಿ ನಾಗರಾಜ್, ಪ್ರಧಾನ ಕಾರ್ಯದರ್ಶಿ ಆಡುಗೊಡಿ ಶ್ರೀನಿವಾಸ್ ಅವರು ಸರಿಯಾಗಿ ಉತ್ತರಿಸುವುದಿಲ್ಲ. ನಾವು ಏನು ಪ್ರಶ್ನೆ ಮಾಡಿದರೂ ಅವರಿಗೆ ಬೇಕಾದಂತೆ ಉತ್ತರಿಸುತ್ತಾರೆ, ಪ್ರತಿ ವಿಚಾರದಲ್ಲಿ ಕಮಿಟಿ ಒಳಗೆ ಮುಚ್ಚುಮರೆ ಮಾಡುತ್ತಾರೆ. ಏಕವಚನದಲ್ಲಿ ಮಾತನಾಡುತ್ತಾರೆ. ಮಹಿಳೆಯರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾರೆ ಎಂದಿದ್ದಾರೆ.


ಏನಾದರೂ ಪ್ರಶ್ನೆ ಮಾಡಿದರೆ ಸಂಘದಿಂದ ಡಿಸ್ಮಿಸ್


ನಾನು ಪೋಷಕರ ಕಲಾವಿದರ ಸಂಘದ ವಿರುದ್ಧ ಮಾತನಾಡುತ್ತಿಲ್ಲ. ಡಿಂಗ್ರಿ ನಾಗರಾಜ್ ಹಾಗೂ ಆಡುಗೊಡಿ ಶ್ರೀನಿವಾಸ್ ವಿರುದ್ಧ ನನ್ನ ಆರೋಪ. ನನ್ನನ್ನು ಹೇಗೆ ಡಿಸ್ಮಿಸ್ ಮಾಡಿದ್ದಾರೋ ಹಾಗೆಯೇ ಲೆಕ್ಕಪತ್ರದ ಬಗ್ಗೆ ಕೇಳಿದಾಗ ಅವರನ್ನೂ ಡಿಸ್ಮಿಸ್ ಮಾಡಿದ್ದಾರೆ. ಕಮಿಟಿಯಲ್ಲಿ 17 ಜನ ಪದಾಧಿಕಾರಿಗಳಿದ್ದಾರೆ. ಯಾವುದೇ ವಿಚಾರ ಚರ್ಚೆ ಮಾಡುವಾಗ ಎಲ್ಲರ ಜೊತೆ ಚರ್ಚೆ ಮಾಡಬೇಕು. ಆದರೆ ಇಲ್ಲಿ ಅವರಿಬ್ಬರೇ ಚರ್ಚೆ ಮಾಡಿ ನಿರ್ಧಾರ ಮಾಡುತ್ತಾರೆ. ಏಕವಚನದಲ್ಲಿ ಮಾತನಾಡುತ್ತಾರೆ. ಅವರ ನಿರ್ಧಾರ ಪ್ರಶ್ನಿಸಿದರೆ ಇಷ್ಟವಿದ್ದರೆ ಇರು, ಇಲ್ಲವಾದರೆ ಹೋಗಿ ಎಂದು ಏಕವಚನದಲ್ಲಿ ಮಾತನಾಡಿ ನಿಂದಿಸುತ್ತಾರೆ.


ಇದನ್ನೂ ಓದಿ: Actor Jaggesh: ಜಗ್ಗೇಶ್ ಹೇಳಿದ ಪರಿಮಳದ ಕತೆ! ಪತ್ನಿ ಬಗ್ಗೆ ಹೆಮ್ಮೆಯಾಗ್ತಿದೆ ಎಂದ ನಟ


ಲೆಕ್ಕ ಪತ್ರಗಳೆಲ್ಲ ಸುಳ್ಳು


ಲೆಕ್ಕ ಪತ್ರಗಳ ಬಗ್ಗೆ ವಿಚಾರಿಸಿದರೆ ನಿಂದಿಸಿ ಕಳುಹಿಸುತ್ತಾರೆ. ಪ್ರಶ್ನೆ ಮಾಡುವಂತೆಯೇ ಇಲ್ಲ. ಅವರೇ ಚರ್ಚಿಸಿ ಅವರೇ ನಿರ್ಧಾರಗಳನ್ನು ಮಾಡುತ್ತಾರೆ. ಸಂಘದಲ್ಲಿ ಅಷ್ಟೊಂದು ಜನರಿದ್ದರೂ ಯಾರೊಬ್ಬರ ಅಭಿಪ್ರಾಯವನ್ನೂ ಕೇಳುವುದಿಲ್ಲ ಎಂದು ನಟಿ ಆರೋಪಿಸಿದ್ದಾರೆ.


ನಟಿ ರಾಣಿ ಜೊತೆಗೆ ಇನ್ನಿಬ್ಬರು ಹಿರಿಯ ಕಲಾವಿದರನ್ನು ಕೂಡಾ ಡಿಸ್ಮಿಸ್ ಮಾಡಲಾಗಿದೆ. ಅವರು ಈ ವಿಚಾರಗಳನ್ನು ಸುದ್ದಿಗೋಷ್ಠಿಯಲ್ಲಿ ರಿವೀಲ್ ಮಾಡಿದ್ದಾರೆ.

Published by:Divya D
First published: