Bipasha and Karan: ಮೊದಲ ಮಗು ವೆಲ್ಕಮ್ ಮಾಡಲು ಸಜ್ಜಾದ ಬಿಪಾಶಾ, ಕರಣ್ ದಂಪತಿ!

ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅವರು ಪ್ರೆಗ್ನೆನ್ಸಿಯನ್ನು ಘೋಷಿಸಿದಾಗಿನಿಂದ, ದಂಪತಿಗಳು ತಮ್ಮ ಅಭಿಮಾನಿಗಳಿಗೆ ಹೊಸ ಹೊಸ ಫೋಟೋ, ವಿಡಿಯೋಗಳ ಮೂಲಕ ಸಂತೋ಼ಷ ನೀಡುತ್ತಿದ್ದಾರೆ.

ನಟಿ ಬಿಪಾಶಾ ಬಸು, ಕರಣ್ ಸಿಂಗ್ ಗ್ರೋವರ್

ನಟಿ ಬಿಪಾಶಾ ಬಸು, ಕರಣ್ ಸಿಂಗ್ ಗ್ರೋವರ್

  • Share this:
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಾಲಿವುಡ್‌ ನಟಿ ಬಿಪಾಶಾ ಬಸು (Bipasha Basu) ಮತ್ತು ಕರಣ್‌ ಸಿಂಗ್‌ ಗ್ರೋವರ್ ಸಂಭ್ರಮದಲ್ಲಿದ್ದಾರೆ. ಬಿಪಾಶಾ ಬಸು ತನ್ನ ಪ್ರೆಗ್ನೆನ್ಸಿ ಪ್ರಯಾಣವನ್ನು ಖುಷಿಯಾಗಿ ಅನುಭವಿಸುತ್ತಿದ್ದು, ಫೋಟೋಶೂಟ್‌ (Photo Shoot) ಅಂತೆಲ್ಲಾ ‌ ಪ್ರತಿಕ್ಷಣವನ್ನೂ ಸಹ ಆನಂದಿಸುತ್ತಿದ್ದಾರೆ. ಅಲ್ಲದೇ ಇನ್‌ ಸ್ಟಾಗ್ರಾಮ್‌ ನಲ್ಲೂ ಸಕ್ರೀಯರಾಗಿರುವ ಬಸು ತಮ್ಮ ಪ್ರೆಗ್ನೆನ್ಸಿ (Pregnancy) ಫೋಟೋಶೂಟ್‌ ಅನ್ನು ಆಗಾಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ಹಿಂದೆಯೂ ಸಾಕಷ್ಟು ಫೋಟೋ, ವೀಡಿಯೋ ಹಂಚಿಕೊಂಡಿದ್ದ ಬಸು ಮತ್ತೊಂದು ಹೊಸ ವಿಡಿಯೋವನ್ನು ಸದ್ಯ ಪೋಸ್ಟ್‌ ಮಾಡಿದ್ದಾರೆ. ಹೌದು ತಮ್ಮ ಬೇಬಿ ಬಂಪ್‌ ಅನ್ನು (Baby Bump) ತೋರಿಸುವ ವಿಡಿಯೋವನ್ನು ಶೇರ್‌ ಮಾಡಿಕೊಂಡ ಬಸು ವಿಡಿಯೋದಲ್ಲಿ ತುಂಬಾ ಕ್ಯೂಟಾಗಿ ಕಾಣುತ್ತಿದ್ದು, ಬಸು ಹಸಿರು ಬಣ್ಣದ ಬಟ್ಟೆಯಲ್ಲಿ ಸಾಕಷ್ಟು ಮುದ್ದಾಗಿ ಕಾಣಿಸಿಕೊಂಡಿದ್ದಾರೆ.

ಬಿಪಾಶಾ ಬಸು ಮತ್ತು ಕರಣ್ ಸಿಂಗ್ ಗ್ರೋವರ್ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.  ಅವರು ಪ್ರೆಗ್ನೆನ್ಸಿಯನ್ನು ಘೋಷಿಸಿದಾಗಿನಿಂದ, ದಂಪತಿಗಳು ತಮ್ಮ ಅಭಿಮಾನಿಗಳಿಗೆ ಹೊಸ ಹೊಸ ಫೋಟೋ, ವಿಡಿಯೋಗಳ ಮೂಲಕ ಸಂತೋ಼ಷ ನೀಡುತ್ತಿದ್ದಾರೆ.

ಬೇಬಿ ಬಂಪ್‌ ವಿಡಿಯೋ ಹಂಚಿಕೊಂಡ ಬಿಪಾಶಾ ಬಸು
ಹೊಸದಾಗಿ ಹಂಚಿಕೊಂಡ ವೀಡಿಯೋದಲ್ಲಿ ಬಿಪಾಶಾ ತಮ್ಮ ಹೊಟ್ಟೆಯ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಬೇಬಿ ಬಂಪ್‌ ಮೇಲೆ ಕೈಯನ್ನು ನೇವರಿಸುತ್ತಾ ಮಗುವನ್ನು ಮುದ್ದಾಡಿದ್ದಾರೆ. ವಿಡಿಯೋದಲ್ಲಿ ಬಸು ತುಂಬಾ ಮುದ್ದಾಗಿ ಕಾಣುತ್ತಿದ್ದು, ಅವರ ಸ್ಕಿನ್ ಸಖತ್‌ ಹೊಳೆಯುತ್ತಿದೆ. ಬಸು ಅವರ ಈ ವಿಡಿಯೋಗೆ ಸಾಕಷ್ಟು ಅಭಿಮಾನಿಗಳು ಪ್ರತಿಕ್ರಿಯಿಸಿದ್ದು, ಕಾಮೆಂಟ್‌, ಲೈಕ್ಸ್‌ ಮಾಡಿದ್ದಾರೆ. ನೀವು ತುಂಬಾ ಸುಂದರವಾಗಿ ಕಾಣುತ್ತಿದ್ದೀರಾ, ನೀವು ಹೆಣ್ಣು ಮಗುವಿಗೆ ಜನ್ಮ ನೀಡುತ್ತೀರಾ ಅಂತೆಲ್ಲಾ ಕಾಮೆಂಟ್‌ ಮಾಡಿದ್ದಾರೆ.

ಇದನ್ನೂ ಓದಿ: Viaan Raj Kundra: ಸಣ್ಣ ವಯಸ್ಸಲ್ಲೇ ಹೊಸ ಬ್ಯುಸಿನೆಸ್​ ಆರಂಭಿಸಿದ ಶಿಲ್ಪಾ ಶೆಟ್ಟಿ ಮಗ ವಿಯಾನ್!








View this post on Instagram






A post shared by Bipasha Basu (@bipashabasu)




ಬೇಬಿ ಬಂಪ್‌ ಗೆ ಹಾಡು ಹೇಳಿದ ಬಸು ಪತಿ ಕರಣ್ ಸಿಂಗ್‌
ಕೆಲವು ದಿನಗಳ ಹಿಂದೆ ಕರಣ್‌ ಸಿಂಗ್‌ ಪತ್ನಿ ಮತ್ತು ಮಗುವಿಗಾಗಿ ಹಾಡೊಂದನ್ನು ಹಾಡಿದ್ದರು. ಈ ವೀಡಿಯೋ ಕೂಡ ಸಖತ್‌ ವೈರಲ್‌ ಆಗಿತ್ತು. ಬಿಪಾಶಾ ಬಸು ತನ್ನ ಪತಿ ಕರಣ್ ಸಿಂಗ್ ಗ್ರೋವರ್, ಮಾರ್ಕ್ ವಿಲ್ಸ್ ಅವರ ಐ ಡು (ಚೆರಿಶ್ ಯು) ಎಂಬ ಹಳ್ಳಿಗಾಡಿನ ಹಾಡನ್ನು ತಮ್ಮ ಮಗುವಿನ ಬಂಪ್‌ಗೆ ಹಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದರು. ಪೋಸ್ಟ್ ಅನ್ನು ಹಂಚಿಕೊಂಡ ಅವರು, "ಡ್ಯಾಡಿ ಮೋಡ್. ಮಗುವಿಗೆ ಹಾಡುವುದು, ಮಗುವಿನೊಂದಿಗೆ ಮಾತನಾಡುವುದು, ಗರ್ಭದಲ್ಲಿರುವ ಮಗುವನ್ನು ಖುಷಿ ಪಡಿಸುವುದು" ಎಂಬ ಶೀರ್ಷಿಕೆ ಹಾಕಿ ಪೋಸ್ಟ್‌ ಮಾಡಿದ್ದರು.










View this post on Instagram






A post shared by Bipasha Basu (@bipashabasu)




ಮಗುವಿನ ನಿರೀಕ್ಷೆಯಲ್ಲಿರುವ ದಂಪತಿಗಳು ಏನು ಹೇಳಿದ್ದಾರೆ 
ದಂಪತಿಗಳು ತಮ್ಮ ಮೊದಲ ಮಗುವನ್ನು ನಿರೀಕ್ಷಿಸುತ್ತಿರುವುದಾಗಿ ಇನ್‌ ಸ್ಟಾಗ್ರಾಮ್‌ ನಲ್ಲಿ ಇತ್ತೀಚೆಗಷ್ಟೇ ಘೋಷಿಸಿದ್ದರು. 'ಹೊಸ ಸಮಯ, ಹೊಸ ಹಂತ, ಹೊಸ ಬೆಳಕು ನಮ್ಮ ಸುಂದರ ಜೀವನಕ್ಕೆ ಮತ್ತೊಂದು ಅನನ್ಯ ಛಾಯೆಯು ಸೇರ್ಪಡೆಯಾಗುತ್ತಿದೆ. ನಾವು ಹಿಂದೆಂದಿಗಿಂತಲೂ ಈಗ ತುಂಬು ಕುಟುಂಬವಾಗುತ್ತಿದ್ದೇವೆ' ಎಂದು ಬೇಬಿ ಬಂಪ್ ಪೋಟೊವನ್ನು ಬಿಪಾಶಾ ಹಂಚಿಕೊಂಡಿದ್ದರು. 'ನಾವು ಈ ಜೀವನವನ್ನು ಪ್ರತ್ಯೇಕವಾಗಿ ಪ್ರಾರಂಭಿಸಿದ್ದೇವೆ. ನಂತರ ನಾವು ಒಬ್ಬರನ್ನೊಬ್ಬರು ಭೇಟಿಯಾದೆವು ಮತ್ತು ಅಂದಿನಿಂದ ನಾವು ಇಬ್ಬರಾಗಿದ್ದೇವೆ. ಇಬ್ಬರಿಗೆ ಮಾತ್ರ ಅತಿಯಾದ ಪ್ರೀತಿಯನ್ನು ತೋರಿಸುವುದು ಸ್ವಲ್ಪ ಮೋಸವೆನಿಸುತ್ತದೆ. ಆದಷ್ಟು ಬೇಗ, ಒಮ್ಮೆ ಇಬ್ಬರಾಗಿದ್ದ ನಾವು ಈಗ ಮೂವರಾಗುತ್ತೇವೆ' ಎಂದು ಇಬ್ಬರೂ ಜಂಟಿ ಹೇಳಿಕೆಯಲ್ಲಿ ತಿಳಿಸಿ ಮಗು ಶೀಘ್ರದಲ್ಲೇ ಬರಲಿದೆ ಎಂದು ಬಸು ಮತ್ತು ಗ್ರೋವರ್ ಹೇಳಿದ್ದರು.

ಇದನ್ನೂ ಓದಿ: Sonam Kapoor: ಬಾಲಿವುಡ್ ನಟಿ ಸೋನಂ ಕಪೂರ್ ಮಗುವಿನ ಹೆಸರು ರಿವೀಲ್!

'ನಿಮ್ಮ ಪ್ರೀತಿಗಾಗಿ, ನಿಮ್ಮ ಪ್ರಾರ್ಥನೆಗಾಗಿ ಮತ್ತು ನಿಮ್ಮ ಶುಭಾಶಯಗಳಿಗಾಗಿ ಪ್ರತಿಯೊಬ್ಬರಿಗೂ ಧನ್ಯವಾದಗಳು 2015 ರಲ್ಲಿ 'ಅಲೋನ್' ಸಿನಿಮಾದಲ್ಲಿ ಮೊದಲು ಒಟ್ಟಿಗೆ ಕೆಲಸ ಮಾಡಿದ ದಂಪತಿ, 2016ರಲ್ಲಿ ವಿವಾಹವಾದರು. ಅವರು 2020ರ ವೆಬ್ ಸರಣಿ 'ಡೇಂಜರಸ್'ನಲ್ಲಿ ಸಹ ನಟಿಸಿದ್ದರು. ಪ್ರಸ್ತುತ ತಮ್ಮ ಮೊದಲ ಮಗುವಿನ ನೀರೀಕ್ಷೆಯಲ್ಲಿರುವ ದಂಪತಿಗಳು ಆ ದಿನಕ್ಕಾಗಿ‌ ಕಾತುರದಿಂದ ಕಾಯುತ್ತಿದ್ದಾರೆ.
Published by:Ashwini Prabhu
First published: