• Home
  • »
  • News
  • »
  • entertainment
  • »
  • Anushka Shetty Marriage: ಶುಭಯೋಗ ಕೂಡಿ ಬಂತಮ್ಮ, ಅನುಷ್ಕಾ ಶೆಟ್ಟಿ ಮದ್ವೆಯಂತಮ್ಮ! ಕನ್ನಡತಿ ಕೈ ಹಿಡಿಯೋ ವರ ಇವರೇ!

Anushka Shetty Marriage: ಶುಭಯೋಗ ಕೂಡಿ ಬಂತಮ್ಮ, ಅನುಷ್ಕಾ ಶೆಟ್ಟಿ ಮದ್ವೆಯಂತಮ್ಮ! ಕನ್ನಡತಿ ಕೈ ಹಿಡಿಯೋ ವರ ಇವರೇ!

ನಟಿ ಅನುಷ್ಕಾ ಶೆಟ್ಟಿ

ನಟಿ ಅನುಷ್ಕಾ ಶೆಟ್ಟಿ

Anushka Shetty Marriage News: ನಟಿ ಅನುಷ್ಕಾ ಶೆಟ್ಟಿ ಮದುವೆ ಆಗುತ್ತಿದ್ದಾರಂತೆ. ಹೀಗಂತ ತುಂಬಾ ವರ್ಷಗಳಿಂದ ಮಾತುಗಳು ಕೇಳಿ ಬರುತ್ತಾನೇ ಇವೆ. ಅನುಷ್ಕಾ ಶೆಟ್ಟಿ ಹಾಗೂ ನಟ ಪ್ರಭಾಸ್ ಪ್ರೀತಿಸುತ್ತಿದ್ದಾರಂತೆ, ಇನ್ನೇನು ಮದುವೆ ಆಗುತ್ತಾರಂತೆ ಅಂತೆಲ್ಲ ಮಾತುಗಳು ಆಗಾಗ ಕೇಳಿ ಬರುತ್ತಾನೆ ಇರುತ್ತದೆ. ಆದರೆ ಈ ಬಾರಿ ಅನುಷ್ಕಾ ಮದುವೆ ವಿಚಾರ ಸತ್ಯ ಅಂತಿದೆ ಟಾಲಿವುಡ್ ಮೂಲಗಳು! ಹಾಗಿದ್ರೆ ಹುಡುಗ ಇವರಾ? ಅವರಾ?

ಮುಂದೆ ಓದಿ ...
  • Share this:

ಸಿನಿಮಾ ರಂಗದಲ್ಲಿ (Film Industry) ಇದೀಗ ಮದುವೆಯ ಸುದ್ದಿ (Marriage News) ಜೋರಾಗಿ ಸದ್ದು ಮಾಡುತ್ತಿದೆ. ಮದುವೆ ಸುದ್ದಿ ಟಾಲಿವುಡ್‌ನಲ್ಲಿ (Tollywood) ಕೇಳಿ ಬಂದಿದ್ದರೂ, ಕನ್ನಡಿಗರು (Kannadigas) ಈ ಮದುವೆ ಸುದ್ದಿ ಕೇಳಿ ಖುಷಿಗೊಂಡಿದ್ದಾರೆ. ಅಷ್ಟಕ್ಕೂ ಟಾಲಿವುಡ್‌ನಲ್ಲಿ ಬರುತ್ತಿರುವ ಮದುವೆ ಸುದ್ದಿ ಬೇರೆ ಯಾರದ್ದೋ ಅಲ್ಲ, ತೆಲುಗಿನ ಖ್ಯಾತ ನಟಿ, ಕನ್ನಡತಿ ಅನುಷ್ಕಾ ಶೆಟ್ಟಿ (Anushka Shetty) ಅವರದ್ದು! ಹೌದು, ನಟಿ ಅನುಷ್ಕಾ ಶೆಟ್ಟಿ ಮದುವೆ ಆಗುತ್ತಿದ್ದಾರಂತೆ. ಹೀಗಂತ ತುಂಬಾ ವರ್ಷಗಳಿಂದ ಮಾತುಗಳು ಕೇಳಿ ಬರುತ್ತಾನೇ ಇವೆ. ಅನುಷ್ಕಾ ಶೆಟ್ಟಿ ಹಾಗೂ ನಟ ಪ್ರಭಾಸ್ (Prabhas) ಪ್ರೀತಿಸುತ್ತಿದ್ದಾರಂತೆ, ಇನ್ನೇನು ಮದುವೆ ಆಗುತ್ತಾರಂತೆ ಅಂತೆಲ್ಲ ಮಾತುಗಳು ಆಗಾಗ ಕೇಳಿ ಬರುತ್ತಾನೆ ಇರುತ್ತದೆ. ಆದರೆ ಈ ಬಾರಿ ಅನುಷ್ಕಾ ಮದುವೆ ವಿಚಾರ ಸತ್ಯ ಅಂತಿದೆ ಟಾಲಿವುಡ್ ಮೂಲಗಳು. ಅಂದಹಾಗೆ ಅನುಷ್ಕಾ ಕೈ ಹಿಡಿಯುತ್ತಿರೋದು ನಟ ಪ್ರಭಾಸ್ ಅವರನ್ನು ಅಲ್ವಂತೆ! ಹಾಗಿದ್ರೆ ಅನುಷ್ಕಾ ಮನಗೆದ್ದ ಹುಡುಗ ಯಾರು? ನಿಮ್ಮ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ…


ನಟಿ ಅನುಷ್ಕಾ ಶೆಟ್ಟಿ ಮದುವೆಯಂತೆ!


ದಕ್ಷಿಣ ಭಾರತದ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಮದುವೆ ಆಗುತ್ತಿದ್ದಾರಂತೆ. ಈ ಸುದ್ದಿ ಇದೀಗ ತೆಲುಗು ಫಿಲ್ಮ್ ಇಂಡಸ್ಟ್ರಿಯಲ್ಲಿ ಸಂಚಲನ ಮೂಡಿಸುತ್ತಿದೆ. ಹುಡುಗಿಯರ ವಯಸ್ಸು ಕೇಳಬಾರದು ಅಂದರೂ ಅನುಷ್ಕಾ ಫ್ಯಾನ್ಸ್ ತಮ್ಮ ನೆಚ್ಚಿನ ನಟಿ ವಯಸ್ಸು 40 ಅಂತ ಕಂಡು ಹಿಡಿದಿದ್ದಾರೆ! ಹೀಗಾಗಿ ಅನುಷ್ಕಾ ಯಾಕೆ ಮದ್ವೆಯಾಗಿಲ್ಲ ಅಂತ ಅಭಿಮಾನಿಗಳು ಶ್ಯಾನೆ ಫೀಲ್ ಮಾಡ್ಕೊಂಡಿದ್ರು. ಇದೀಗ ಅನುಷ್ಕಾ ಫ್ಯಾನ್ಸ್‌ಗೆ ಗುಡ್ ನ್ಯೂಸ್ ಸಿಕ್ಕಿದೆ.


ಶೀಘ್ರವೇ ಅರುಂಧತಿ ಕಲ್ಯಾಣೋತ್ಸವ!


ಅನುಷ್ಕಾ ಶೆಟ್ಟಿ ಶೀಘ್ರವೇ ಮದುವೆ ಆಗಲಿದ್ದಾರೆ ಅಂತ ತೆಲುಗು ಸಿನಿಮಾ ಮೂಲಗಳು ಹೇಳುತ್ತಿವೆ. ಆದರೆ ಅಧಿಕೃತ ಮಾಹಿತಿ ಇನ್ನಷ್ಟೇ ಅವರ ಕುಟುಂಬದ ಮೂಲಗಳಿಂದ ತಿಳಿದು ಬರಬೇಕಿದೆ.


ಇದನ್ನೂ ಓದಿ: Prabhas: ಅಭಿಮಾನಿಗಳಿಗಾಗಿ ಔತಣಕೂಟ ಬಡಿಸಿದ ಪ್ರಭಾಸ್! ಏನೆಲ್ಲಾ ಐಟಂ ಇದ್ವು?


ಅನುಷ್ಕಾ ಕೈ ಹಿಡಿಯುವ ಗಂಡು ಪ್ರಭಾಸ್ ಅಲ್ಲ!


ಅಂದಹಾಗೆ ಅನುಷ್ಕಾ ಕೈ ಹಿಡಿಯುತ್ತಿರುವುದು ನಟ ಪ್ರಭಾಸ್ ಅವರನ್ನು ಅಲ್ವಂತೆ. ಇವರಿಬ್ಬರೂ ತುಂಬಾ ವರ್ಷಗಳಿಂದ ಪ್ರೀತಿಸುತ್ತಿದ್ದಾರೆ, ಮದುವೆ ಆಗುತ್ತಿದ್ದಾರೆ ಅನ್ನೋ ರೂಮರ್ಸ್ ಕೇಳಿ ಬರುತ್ತಲೇ ಇತ್ತು. ಆದ್ರೆ ಇದೀಗ ಅನುಷ್ಕಾ ಶೆಟ್ಟಿ ಮದುವೆಯಾಗುತ್ತಿರುವ ಹುಡುಗ ನಟ ಪ್ರಭಾಸ್ ಅಲ್ಲವಂತೆ!


ಹಿಟ್ ಸಿನಿಮಾಗಳಲ್ಲಿ ಮಿಂಚಿದ್ದ ಜೋಡಿ


'ಬಿಲ್ಲಾ', 'ಮಿರ್ಚಿ', 'ಬಾಹುಬಲಿ' ಸೇರಿದಂತೆ ಹಲವು ಹಿಟ್ ಸಿನಿಮಾಗಳಲ್ಲಿ ಪ್ರಭಾಸ್ ಹಾಗೂ ಅನುಷ್ಕಾ ಶೆಟ್ಟಿ ಜೋಡಿ ನಟಿಸಿ, ಅಭಿಮಾನಿಗಳ ಮನ ಗೆದ್ದಿತ್ತು. ನಂತರ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಇಬ್ಬರೂ ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಆನ್‌ಸ್ಕ್ರೀನ್ ಸೂಪರ್ ಹಿಟ್ ಜೋಡಿಯನ್ನು ನಿಜ ಜೀವನದಲ್ಲೂ ಒಟ್ಟಿಗೆ ನೋಡಲು ಅಭಿಮಾನಿಗಳು ಇಷ್ಟಪಡುತ್ತಾರೆ. ಆದರೆ ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್, ನಮ್ಮ ನಡುವೆ ಲವ್ ಇಲ್ಲ ಅಂತ ಇಬ್ಬರೂ ಹೇಳಿದ್ದರು.


ಖ್ಯಾತ ಉದ್ಯಮಿ ಕೈ ಹಿಡಿಯುತ್ತಾರಾ ಸ್ವೀಟಿ?


ಸ್ವೀಟಿ ಶೆಟ್ಟಿ ಅಲಿಯಾಸ್ ಅನುಷ್ಕಾ ಶೆಟ್ಟಿ ಹೈದ್ರಾಬಾದ್ ಮೂಲದ ಖ್ಯಾತ ಉದ್ಯಮಿಯೋರ್ವರನ್ನು ವಿವಾಹವಾಗುತ್ತಿದ್ದಾರಂತೆ. ಆತ ಚಿನ್ನದ ವ್ಯಾಪಾರಿಯಾಗಿದ್ದು, ಸಾಕಷ್ಟು ಚಿನ್ನದ ಅಂಗಡಿಗಳ ಒಡೆಯ ಎನ್ನಲಾಗ್ತಿದೆ. ಅವರೊಂದಿಗೆ ಅನುಷ್ಕಾ ಶೆಟ್ಟಿ ಶೀಘ್ರವೇ ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ.


ಇದನ್ನೂ ಓದಿ: Madhuri Dixit: ಧಕ್ ಧಕ್ ಬೆಡಗಿ ಮಾಧುರಿ ಹೊಸ ಲುಕ್! ಚೋಲಿ ಕೆ ಪೀಚೆ ಕ್ಯಾ ಹೇ ಎಂದ್ರು ಫ್ಯಾನ್ಸ್


ಅನುಷ್ಕಾ ಮುಂದಿನ ಸಿನಿಮಾ ಯಾವುದು?


ಸದ್ಯ ಅನುಷ್ಕಾ ಶೆಟ್ಟಿ ನಿರ್ಮಾಪಕ ಮಹೇಶ್ ಪಿ ಅವರ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ನವೀನ್ ಪೋಲಿಶೆಟ್ಟಿ ನಾಯಕನಾಗಿ ನಟಿಸಲಿದ್ದಾರೆ. ಸದ್ಯ ಈ ಯೋಜನೆಯ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. UV ಕ್ರಿಯೇಷನ್ಸ್ ಈ ಚಿತ್ರವನ್ನು ನಿರ್ಮಿಸುತ್ತಿದ್ದು, ತಾತ್ಕಾಲಿಕವಾಗಿ ಅನುಷ್ಕಾ 48 ಎಂದು ಶೀರ್ಷಿಕೆ ಇಡಲಾಗಿದೆ.

Published by:Annappa Achari
First published: