‘ಕಾಂತಾರಾ’ ಸಿನಿಮಾ (Kantara Cinema) ಅಬ್ಬರ ಮುಂದುವರೆದಿದೆ. ಕನ್ನಡದಲ್ಲಿ (Kannada) ಯಶಸ್ವಿ ಪ್ರದರ್ಶನ ಕಾಣುತ್ತಿರುವ ಕಾಂತಾರಾ ಸಿನಿಮಾ, ಈಗ ಹಿಂದಿಯಲ್ಲೂ (Hindi) ಅಬ್ಬರಿಸುತ್ತಿದೆ. ಅತ್ತ ತೆಲುಗಿನಲ್ಲೂ (Telugu) ಕಾಂತಾರದ ಬಗ್ಗೆ ಟಾಕ್ಸ್ ಜೋರಾಗಿದೆ. ಮಲಯಾಳಂನಲ್ಲೂ (Malayalam) ಕಾಂತಾರ ರಿಲೀಸ್‌ಗೆ ಹೊಂಬಾಳೆ ಫಿಲ್ಮ್ (Hombale Films) ಪ್ಲಾನ್ ಮಾಡಿದೆ. ಈ ನಡುವೆ ಭಾರತೀಯ ಚಿತ್ರರಂಗದ ಗಣ್ಯರು ಕಾಂತಾರ ಸಿನಿಮಾ ನೋಡಿ, ಕಥೆ, ರಿಷಬ್ ಶೆಟ್ಟಿ (Rishab Shetty) ಅಭಿನಯ, ನಿರ್ದೇಶನ, ಒಟ್ಟಾರೆ ಕಾಂತಾರ ಸಿನಿಮಾದ ಬಗ್ಗೆ ಮೆಚ್ಚುಗೆಯ ಮಾತನ್ನಾಡುತ್ತಿದ್ದಾರೆ. ನಟರಾದ ಧನುಷ್ (Dhanush), ಪೃಥ್ವಿರಾಜ್ (Prithviraj), ಪ್ರಭಾಸ್ (Prabhas) ಸೇರಿದಂತೆ ಹಲವರು ಕಾಂತಾರಕ್ಕೆ ಫಿದಾ ಆಗಿದ್ದಾರೆ. ಇದೀಗ ಖ್ಯಾತ ನಟಿ, ಕರ್ನಾಟಕ ಮೂಲದ ಅನುಷ್ಕಾ ಶೆಟ್ಟಿ (Anushka Shetty) ಕೂಡ ಕಾಂತಾರದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ.
ಕಾಂತಾರಾ ಸಿನಿಮಾ ವೀಕ್ಷಿಸಿದ ಅನುಷ್ಕಾ ಶೆಟ್ಟಿ
ಕಾಂತಾರ ಸಿನಿಮಾ ತೆಲುಗಿನಲ್ಲೂ ರಿಲೀಸ್ ಆಗಿದೆ. ಹೈದ್ರಾಬಾದ್ ಸೇರಿದಂತೆ ತೆಲಂಗಾಣ ಹಾಗೂ ಆಂಧ್ರದ ಪ್ರಮುಖ ನಗರಗಳ ಚಿತ್ರ ಮಂದಿರಗಳಲ್ಲಿ ಕಾಂತಾರ ಉತ್ತಮ ಪ್ರದರ್ಶನ ಕಾಣುತ್ತಿದೆ. ತೆಲುಗು ಚಿತ್ರರಂಗದ ಅನೇಕ ನಟ, ನಟಿಯರು ಕಾಂತಾರ ವೀಕ್ಷಿಸಿ, ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಸಾಲಿಗೆ ನಟಿ ಅನುಷ್ಕಾ ಶೆಟ್ಟಿ ಕೂಡ ಸೇರಿದ್ದಾರೆ.
Watched #kantara ..totally totally loved it❤️Congratulations to whole team…u all we’re amazing😊thanks for all the experience @shetty_rishab @VKiragandur @hombalefilms @HombaleGroup @gowda_sapthami @AJANEESHB @actorkishore @KantaraFilm #KantaraInCinemasNow ..don’t miss it😊😊🧿 pic.twitter.com/RU68jiTnhY
— Anushka Shetty (@MsAnushkaShetty) October 16, 2022
ನಟಿ ಅನುಷ್ಕಾ ಶೆಟ್ಟಿ ಹೈದ್ರಾಬಾದ್‌ನಲ್ಲಿ ಕಾಂತಾರ ಸಿನಿಮಾ ವೀಕ್ಷಿಸಿದ್ದಾರಂತೆ. ಅನುಷ್ಕಾ ಶೆಟ್ಟಿ ಹೇಳಿ ಕೇಳಿ ಕರಾವಳಿ ಮೂಲದವರು. ದಕ್ಷಿಣ ಕನ್ನಡದಲ್ಲೇ ಹುಟ್ಟಿ ಬೆಳೆದ ಅವರಿಗೆ ಭೂತ ಕೋಲ, ಕಂಬಳ ಇತ್ಯಾದಿ ಕರಾವಳಿ ಸಂಪ್ರದಾಯ, ಧಾರ್ಮಿಕತೆಯ ಬಗ್ಗೆ ಗೊತ್ತೇ ಇದೆ. ಹೀಗಾಗಿ ಅವರೂ ಕೂಡ ಕಾಂತಾರ ಸಿನಿಮಾಕ್ಕೆ ಫಿದಾ ಆಗಿದ್ದಾರೆ.
ಇದನ್ನೂ ಓದಿ: Rishab Shetty-Shankar Nag: ಕಾಂತಾರ ಎಂಬ ಒಂದು ಮುತ್ತಿನ ಕಥೆ! ರಿಷಬ್ ಗೆಲುವಿನಲ್ಲಿ ಶಂಕರ್ ನೆನಪಾಗಿದ್ದೇಕೆ?
ಕಾಂತಾರ ಬಗ್ಗೆ ಅನುಷ್ಕಾ ಶೆಟ್ಟಿ ಹೇಳಿದ್ದೇನು?
ಕಾಂತಾರಾ ಸಿನಿಮಾವನ್ನು ವೀಕ್ಷಣೆ ಮಾಡಿದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಅನುಷ್ಕಾ ಶೆಟ್ಟಿ ಪೋಸ್ಟ್ ಹಾಕಿದ್ದಾರೆ. 'ಕಾಂತಾರ ಸಿನಿಮಾ ವೀಕ್ಷಿಸಿದೆ. ನನಗೆ ಈ ಸಿನಿಮಾ ತುಂಬಾ ತುಂಬಾ ಇಷ್ಟವಾಯಿತು... ಈ ಸಿನಿಮಾದ ಪ್ರತಿಯೊಬ್ಬ ಕಲಾವಿದರು, ನಿರ್ಮಾಪಕರು, ತಂತ್ರಜ್ಞರಿಗೆ ಅಭಿನಂದನೆಗಳು. 'ಕಾಂತಾರ' ಇಡೀ ತಂಡ ಅದ್ಭುತವಾಗಿದೆ. ನಮಗೆ ಈ ಅದ್ಭುತ ಅನುಭವ ನೀಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು. ರಿಷಬ್ ಶೆಟ್ಟಿ ನೀವು ಅದ್ಭುತ... ದಯವಿಟ್ಟು ಥಿಯೇಟರ್‌ನಲ್ಲಿ ಈ ಚಿತ್ರವನ್ನು ನೋಡಿ..' ಎಂದು ಅನುಷ್ಕಾ ಶೆಟ್ಟಿ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.
ರಿಷಬ್ ಶೆಟ್ಟಿ, ಜ್ಯೂ ಎನ್‌ಟಿಆರ್ ನಡುವೆ ಇದೆಯಾ ಫ್ರೆಂಡ್‌ಶಿಪ್?
ಕಾಂತಾರ ಇತ್ತೀಚೆಗಷ್ಟೇ ಈ ಸಿನಿಮಾ ತೆಲುಗಿನಲ್ಲೂ ಬಿಡುಗಡೆಯಾಗಿದ್ದು, ಉತ್ತಮ ಪ್ರದರ್ಶನ ಕಾಡುತ್ತಿದೆ. ಈ ವೇಳೆ ಸಿನಿಮಾದ ನಾಯಕ, ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಹಾಗೂ ಜ್ಯೂನಿಯರ್ ಎನ್‌ಟಿಆರ್ ನಡುವಿನ ಫ್ರೆಂಡ್‌ಶಿಪ್ ಬಗ್ಗೆ ಮಾತನಾಡಿದ್ದಾರೆ. ಜ್ಯೂನಿಯರ್ ಎನ್‌ಟಿಆರ್ ಅಂದರೆ ನನಗಿಷ್ಟ ಅಂತ ರಿಷಬ್ ಹೇಳಿದ್ದಾರೆ. ಮೇಲಾಗಿ ತಮ್ಮ ನಡುವೆ ಬಾಂಧವ್ಯವಿದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. ಜ್ಯೂನಿಯರ್ ಎನ್‌ಟಿಆರ್ ತಾಯಿ ಶಾಲಿನಿ ತಮ್ಮ ಹಳ್ಳಿಯಲ್ಲಿ ಹುಟ್ಟಿ ಬೆಳೆದವರು ಎಂದಿದ್ದಾರೆ. ನಿಮ್ಮ ನಿರ್ದೇಶನದಲ್ಲಿ ಜೂನಿಯರ್ ಎನ್.ಟಿ.ಆರ್ ಜೊತೆ ಸಿನಿಮಾ ಬರಲಿದೆಯೇ ಎಂದು ಸುದ್ದಿಗಾರರು ಕೇಳಿದಾಗ ಅಂತಹ ಯೋಚನೆ ನನಗಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: Rishab Shetty-Jr NTR: ರಿಷಬ್ ಶೆಟ್ಟಿ, ಜ್ಯೂ ಎನ್‌ಟಿಆರ್ ನಡುವೆ ಇದೆಯಾ ಫ್ರೆಂಡ್‌ಶಿಪ್? ಇಬ್ಬರ ನಡುವಿದೆಯಾ ಕುಂದಾಪುರದ ನಂಟು?
ಭರ್ಜರಿ ಕಲೆಕ್ಷನ್ ಮಾಡುತ್ತಿರುವ ಕಾಂತಾರಾ
ಕಾಂತಾರ ಸಿನಿಮಾ ವೀಕೆಂಡ್ನಲ್ಲಿ ಭರ್ಜರಿ ಗಳಿಕೆ ಮಾಡಿದೆ. ಸಿನಿಮಾ ರಿಲೀಸ್ ಆಗಿ 16ನೇ ದಿನ ಅತ್ಯಧಿಕ ಕಲೆಕ್ಷನ್ ಆಗಿರುವುದನ್ನು ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ. ಕಾಂತಾರ ಸಿನಿಮಾ ಈಗಾಗಲೇ ಹಲವು ರೆಕಾರ್ಡ್ಗಳನ್ನು ಸೃಷ್ಟಿಸಿದೆ. ಎರಡನೇ ಸೋಮವಾರ ಕೆಜಿಎಫ್2ಗಿಂತ ಹೆಚ್ಚು ಗಳಿಸಿದ ಹಿರಿಮೆ ತನ್ನದಾಗಿಸಿದ ಸಿನಿಮಾ ಈಗ ಮತ್ತೊಂದು ಹೆಜ್ಜೆ ಇಟ್ಟಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ