ಅನುಪ್ರಭಾಕರ್ ವಿವಾಹವಾದ ನಂತರ ಕುಟುಂಬದ ನಿರ್ವಹಣೆಯಲ್ಲಿ ಬ್ಯುಸಿಯಾಗಿದ್ದರು. ಆದರೆ ಮತ್ತೆ ಸ್ಯಾಂಡಲ್ವುಡ್ಗೆ ಪೂರ್ಣಪ್ರಮಾಣದ ನಾಯಕಿಯಾಗಿ ಸಾರಾ ವಜ್ರ ಸಿನಿಮಾದ ಮೂಲಕ ಎಂಟ್ರಿ ಕೊಡುತ್ತಿದ್ದಾರೆ. ಈ ಚಿತ್ರದ ಟ್ರೇಲರ್ ಈಗ ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಸಂಭ್ರಮ ಡ್ರೀಮ್ ಹೌಸ್ ಬ್ಯಾನರ್ ಅಡಿ ಎಂ. ದೇವೇಂದ್ರ ರೆಡ್ಡಿ ನಿರ್ಮಿಸಿರುವ. ಸಾರಾ ವಜ್ರ ಸಿನಿಮಾವನ್ನು ಆರ್ನಾ ಸಾಧ್ಯ ಅವರು ನಿರ್ದೇಶನ ಮಾಡಿದ್ದಾರೆ. ಸಾರಾ ಅಬೂಬಕ್ಕರ್ ಅವರ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಸಾರಾ ವಜ್ರ ಚಿತ್ರತಂಡ ಟ್ರೇಲರ್ ಬಿಡುಗಡೆ ಮಾಡಿದೆ.
ಇದು ಆರ್ನಾ ಸಾಧ್ಯ (ಶ್ವೇತಾ ಶೆಟ್ಟಿ) ನಿರ್ದೇಶನದ ಎರಡನೇ ಸಿನಿಮಾ. ಇದರಲ್ಲಿ ಅನುಪ್ರಭಾಕರ್ ಜೊತೆ ರೆಹಮಾನ್ ಹಾಸನ್ ಸಹ ನಟಿಸಿದ್ದಾರೆ. ಸಾರಾ ಅಬೂಬಕ್ಕರ್ ಅವರ ಕಾದಂಬರಿ ಆಧಾರಿತ ಚಿತ್ರ ಇದಾಗಿದೆ. ಬ್ಯಾರಿ ಸಮುದಯದ ಹೆಣ್ಣು ಮಕ್ಕಳ ಜೀವನದ ಸುತ್ತ ನಡೆಯುವ ಘಟನೆಗಳೇ ಈ ಸಿನಿಮಾದ ಜೀವಾಳವಾಗಿದೆಯಂತೆ.
ಇದನ್ನೂ ಓದಿ: Neha Kakkar: ದೊಡ್ಡ ದೊಡ್ಡ ಸ್ಟಾರ್ಗಳನ್ನೇ ಹಿಂದಿಕ್ಕಿ ದಾಖಲೆ ಬರೆದ ನೇಹಾ ಕಕ್ಕರ್..!
ಪುರುಷ ಪ್ರಧಾನ ಕುಟುಂಬ ವ್ಯವಸ್ಥೆಯಲ್ಲಿ ಹಳ್ಳಿಯಲ್ಲಿ ಬೆಳೆದ ಹೆಣ್ಣು ಮಗಳು ಮದುವೆಯಾಗಿ, ಎದುರಿಸುವ ಸವಾಲು ಹಾಗೂ ಕಷ್ಟಗಳಿಂದ ಆಕೆಯ ಮನಸ್ಸಿನಲ್ಲಿ ನಡೆಯುವ ಯುದ್ಧವನ್ನು ಟ್ರೇಲರ್ನಲ್ಲಿ ತೋರಿಸಲಾಗಿದೆ.
Ranjani Raghavan: ಒಳ್ಳೆಯ ದಿನಗಳ ನಿರೀಕ್ಷೆಯಲ್ಲಿ ಪುಟ್ಟಗೌರಿ ರಂಜನಿ ರಾಘವನ್..!
ಇದನ್ನೂ ಓದಿ: ಬಾಲಿವುಡ್ ನಟಿಯೊಂದಿಗೆ ಫೋಟೋ ತೆಗೆಸಿಕೊಳ್ಳಲು ಬ್ಯಾರಿಕೇಡ್ ಜಿಗಿದಿದ್ದ ಕಾರ್ತಿಕ್ ಆರ್ಯನ್..! ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ