ಸ್ಯಾಂಡಲ್​ವುಡ್​ನಲ್ಲಿ ಈಗ ಲಾಲಿ ಹಾಡಿನ ಸೀಸನ್​: ಮುದ್ದಾದ ಮಕ್ಕಳಿಗೆ ಜನ್ಮ ನೀಡಿದ ಅನು ಪ್ರಭಾಕರ್​ ಹಾಗೂ ನಂದಿತಾ..!

news18
Updated:August 17, 2018, 4:19 PM IST
ಸ್ಯಾಂಡಲ್​ವುಡ್​ನಲ್ಲಿ ಈಗ ಲಾಲಿ ಹಾಡಿನ ಸೀಸನ್​: ಮುದ್ದಾದ ಮಕ್ಕಳಿಗೆ ಜನ್ಮ ನೀಡಿದ ಅನು ಪ್ರಭಾಕರ್​ ಹಾಗೂ ನಂದಿತಾ..!
news18
Updated: August 17, 2018, 4:19 PM IST
ನ್ಯೂಸ್​ 18 ಕನ್ನಡ 

ಚಂದನವನದಲ್ಲಿ ಈಗ ಲಾಲಿ ಹಾಡಿನ ಸೀಸನ್​ ನಡೆಯುತ್ತಿದೆ. ಇತ್ತೀಚೆಗಷ್ಟೆ ರಾಕಿಂಗ್​ ಸ್ಟಾರ್​ ಯಶ್​ ಹಾಗೂ ರಾಧಿಕಾ ತಾವು ಡಿಸೆಂಬರ್​ ಹೊತ್ತಿಗೆ ಅಪ್ಪ-ಅಮ್ಮ ಆಗುತ್ತಿರುವುದಾಗಿ ಸಿಹಿ ಸುದ್ದಿ ನೀಡಿದ್ದರು.

ಇನ್ನೂ ಈ ಹಿಂದೆಯೇ ಹೊಸ ಅಥಿತಿಯ ಆಗಮನಕ್ಕಾಗಿ ಮನೆ ಸಿಂಗಾರಗೊಳ್ಳುತ್ತಿದೆ ಎಂದು ಮಾರ್ಮಿಕವಾಗಿ ನಟ ರಘು-ಮುಖರ್ಜಿ ಹಾಗೂ ಅನುಪ್ರಭಾಕರ್​ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು. ಈಗ ಈ ಸೆಲೆಬ್ರಿಟಿ ಜೋಡಿಗೂ ಮುದ್ದಾದ ಹೆಣ್ಣು ಮಗುವಾಗಿದೆ. ಈ ಬಗ್ಗೆ ಅವರೇ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡುವ ಮೂಲಕ ಖುಷಿ ಹಂಚಿಕೊಂಡಿದ್ದಾರೆ.
Loading...

Super thrilled to let u all know that we are blessed with a baby girl ...... baby and anu doing great .Thank you all for your wishes and prayers


A post shared by Raghu Mukherjee (@raghumukherjee) on


ಕನ್ನಡದ ಕೋಗಿಲೆ ನಂದಿತಾ ರಾಕೇಶ್​ ಸಹ ಆಗಸ್ಟ್​ 15ರಂದು  ಗಂಡು ಮಗುವಿಗೆ ಜನ್ಮ ನೀಡೋ ಮೂಲಕ ತಾಯಿಯಾಗಿದ್ದಾರೆ. ತಾಯಿ ಮಗು ಇಬ್ಬರೂ ಕೂಡ ಆರೋಗ್ಯವಾಗಿದ್ದು, ಇನ್ನು ಈ ವಿಚಾರವನ್ನು ಸ್ವತಃ ನಂದಿತಾ ತಮ್ಮ ಫೇಸ್​​ಬುಕ್​​ ಖಾತೆಯಲ್ಲಿ ಶೇರ್​​ ಮಾಡಿದ್ದಾರೆ.

First published:August 17, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...