Anitha EAnitha E
|
news18-kannada Updated:February 22, 2021, 2:54 PM IST
ಗಂಡ ಹಾಗೂ ಮಗ ಆರವ್ ಜೊತೆ ನಟಿ ಅನಿತಾ ಹಸ್ಸನಂದನಿ
ಸ್ಯಾಂಡಲ್ವುಡ್ ಸೇರಿದಂತೆ ತೆಲುಗು ಹಾಗೂ ಬಾಲಿವುಡ್ ಸಿನಿಮಾಗಳ ಜತೆಗೆ ಹಿಂದಿ ಧಾರಾವಾಹಿಗಳಲ್ಲಿ ಮಿಂಚಿದ ನಟಿ ಅನಿತಾ ಹಸ್ಸನಂದನಿ. ಸ್ಯಾಂಡಲ್ವುಡ್ನಲ್ಲಿ ಶಿವಣ್ಣ ಹಾಗೂ ಪುನೀತ್ ಜೊತೆ ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ ಈ ನಟಿ. ವೀರ ಕನ್ನಡಿಗ ಸಿನಿಮಾದಲ್ಲಿ ಅಪ್ಪು ಜೊತೆ ರೊಮ್ಯಾನ್ಸ್ ಮಾಡಿದ್ದ ನಟಿ ಅನಿತಾ ಹಸ್ಸನಂದನಿ ಇತ್ತೀಚೆಗಷ್ಟೆ ಗಂಡು ಮಗುವಿನ ತಾಯಿಯಾಗಿದ್ದಾರೆ. ಅನಿತಾ ಹಸ್ಸನಂದನಿ ಸದ್ಯ ಸಿನಿಮಾ ಹಾಗೂ ಧಾರಾವಾಹಿಗಳಿಂದ ಬ್ರೇಕ್ ಪಡೆದಿದ್ದು, ತಮ್ಮ ವೈಯಕ್ತಿಕ ಜೀವನದ ಕಡೆ ಹೆಚ್ಚಿನ ಗಮನ ಹರಿಸಲಾರಂಭಿಸಿದ್ದಾರೆ. ಆದರೆ ಅನಿತಾ ಗರ್ಭಿಣಿಯಾಗಿದ್ದಾಗ ಸಖತ್ ಹಾಟ್ ಫೋಟೋಗಳಿಗೆ ಪೋಸ್ ಕೊಡುವ ಮೂಲಕ ಸದ್ದು ಮಾಡಿದ್ದರು. ಪತಿಯ ಜೊತೆ ಅನಿತಾ ತಮ್ಮ ಬೇಬಿ ಬಂಪ್ ತೋರಿಸುತ್ತಾ ಮಾಡಿಸಿದ್ದ ಫೋಟೋಶೂಟ್ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಅನಿತಾ ಹಸ್ಸನಂದನಿ (Anita Hassanandani)ಹಾಗೂ ರೋಹಿತ್ ರೆಡ್ಡಿ (Rohit Reddy) ತಮ್ಮಮಗನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರಾದರೂ, ಮಗುವಿನ ಮುಖವನ್ನು ತೋರಿಸಿರಲಿಲ್ಲ.
ನಟಿ ಅನಿತಾ ಅವರ ಪತಿ ರೋಹಿತ್ ರೆಡ್ಡಿ ತಮಗೆ ಗಂಡು ಮಗುವಾದ ವಿಷಯವನ್ನು ಇನ್ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದರು. ಈಗ ಇದೇ ದಂಪತಿ ಇನ್ಸ್ಟಾಗ್ರಾಂನಲ್ಲಿ ಫನ್ನಿ ಹಾಗೂ ಕ್ಯೂಟ್ ವಿಡಿಯೋ ಹಂಚಿಕೊಳ್ಳುವ ಮೂಲಕ ತಮ್ಮ ಮಗುವಿನ ಪರಿಚಯ ಮಾಡಿಸಿದ್ದಾರೆ.
ಹೌದು, ಅನಿತಾ ಹಾಗೂ ರೋಹಿತ್ ರೆಡ್ಡಿ ಹಂಚಿಕೊಂಡಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಇದರಲ್ಲಿ ಗರ್ಭಿಣಿ ಅನಿತಾರ ಹೊಟ್ಟೆ ಮೇಲೆ ಬಾಂಬ್ ಇಟ್ಟು ಸಿಡಿಸುತ್ತಾರೆ ನಟಿಯ ಪತಿ ರೋಹಿತ್ ರೆಡ್ಡಿ. ನಂತರ ಈ ದಂಪತಿ ತಮ್ಮ ಮಗುವಿನೊಂದಿಗೆ ಪ್ರತ್ಯಕ್ಷವಾಗುತ್ತಾರೆ.
ಮೈಕೈಯಲ್ಲ ಮಸಿ ಮಾಡಿಕೊಂಡು ಮಗುವಿನ ಜೊತೆ ಕಾಣಿಸಿಕೊಳ್ಳುವ ಈ ದಂಪತಿಯ ಕ್ಯೂಟ್ ವಿಡಿಯೋ ನೆಟ್ಟಿಗರಿಗೆ ಇಷ್ಟವಾಗಿದೆ. ಅಲ್ಲದೆ ಮಗನ ಹೆಸರನ್ನೂ ಹಸ ಈ ಸೆಲೆಬ್ರಿಟಿ ದಂಪತಿ ಬಹಿರಂಗ ಮಾಡಿದ್ದಾರೆ. ಮಗನಿಗೆ ಆರವ್ ಎಂದು ಹೆಸರಿಟ್ಟಿದ್ದಾರೆ.
ಇದನ್ನೂ ಓದಿ: ಇಂದು ರಿಲೀಸ್ ಆಗಲಿದೆ ಹೀರೋ ಸಿನಿಮಾದ ಹಾಡು ನೆನಪಿನ ಹುಡುಗಿಯೇ..!
2013ರಲ್ಲಿ ಬ್ಯುಸಿನೆಸ್ ಮ್ಯಾನ್ ರೋಹಿತ್ ರೆಡ್ಡಿ ಜತೆ ಅನಿತಾ ವಿವಾಹವಾಗಿದ್ದರು. ಇನ್ನು ಫೆ. 9ರಂದು ಈ ಜೋಡಿ ತಮಗೆ ಗಂಡು ಮಗುವಾದ ವಿಷಯವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದರು. ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯವಾಗಿದ್ದು, ಆಗಾಗ ತುಂಬಾ ಫನ್ನಿ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇಲ್ಲಿವೆ ಈ ಜೋಡಿಯ ಕೆಲವು ಫನ್ನಿ ಹಾಗೂ ಕ್ಯೂಟ್ ವಿಡಿಯೋಗಳು.
ಅನಿತಾ ಹಾಗೂ ರೋಹಿತ್ ತಮ್ಮ ಮೊದಲ ಮಗು ಮನೆಗೆ ಬಂದಿರುವ ಸಂಭ್ರಮದಲ್ಲಿದ್ದಾರೆ. ಸದ್ಯಕ್ಕೆ ತಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿ ಮಗನ ಆರೈಕೆಯಲ್ಲಿ ತೊಡಗಿಕೊಂಡಿದ್ದಾರೆ ಈ ಜೋಡಿ.
Published by:
Anitha E
First published:
February 22, 2021, 2:54 PM IST