Amulya: ಫಸ್ಟ್ ಟೈಂ ರೀಲ್ಸ್ ಮಾಡಿದ ನಟಿ ಅಮೂಲ್ಯ, ಅಮ್ಮನಾದ ಮೇಲೆ ಹೊಸ ಲುಕ್​ನಲ್ಲಿ ಕಾಣಿಸಿದ ಗೋಲ್ಡನ್​ ಕ್ವೀನ್​

Amulya First Reels: ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿರುವ ನಟಿ ಅಮೂಲ್ಯ ಮೊದಲ ಬಾರಿ ಹಾಡಿಗೆ ಡ್ಯಾನ್ಸ್​ ಮಾಡುವ ರೀಲ್ಸ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಅಮೂಲ್ಯ ಸುಂದರವಾಗಿ ಕಾಣಿಸಿಕೊಂಡಿದ್ದು, ಫ್ಯಾನ್ಸ್​ ಸೂಪರ್ ಎಂದು ಕಾಮೆಂಟ್​ ಮಾಡಿದ್ದಾರೆ.

ನಟಿ ಅಮೂಲ್ಯ

ನಟಿ ಅಮೂಲ್ಯ

  • Share this:
ಸ್ಯಾಂಡಲ್​ವುಡ್(Sandalwood)​ನ ಗೋಲ್ಡನ್​ ಕ್ವೀನ್​(Golden Queen) ಅಮೂಲ್ಯ(Amulya) ಮಾರ್ಚ್​ನಲ್ಲಿ ಅವಳಿ ಗಂಡು ಮಕ್ಕಳಿ(Twins)ಗೆ ಜನ್ಮನೀಡಿದ್ದರು. ಈ ಬಗ್ಗೆ ಅವರ ಪತಿ ಜಗದೀಶ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು. ಆದರೆ ನಂತರ ಅಮೂಲ್ಯ ಸಾಮಾಜಿಕ ಜಾಲತಾಣದಿಂದ ಸ್ವಲ್ಪ ದೂರವಿದ್ದರು. ನಂತರ ಮಕ್ಕಳ ಕಾಲಿನ ಫೋಟೋ ಹಾಗೂ ಅವರ ಕೆಲ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಮತ್ತೆ ಆಕ್ಟೀವ್​ ಆಗಿದ್ದರು. ಇದೀಗ ಅವರು ತಮ್ಮ ಮೊದಲ ರೀಲ್ಸ್​ ಮಾಡಿ ಹಾಕಿದ್ದು, ಅಭಿಮಾನಿಗಳಿಗೆ ಬಹಳ ಇಷ್ಟವಾಗಿದೆ.  

ಮೊದಲ ರೀಲ್ಸ್ ಮಾಡಿದ ನಟಿ

ಹೌದು, ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿರುವ ನಟಿ ಅಮೂಲ್ಯ ಮೊದಲ ಬಾರಿ ಹಾಡಿಗೆ ಡ್ಯಾನ್ಸ್​ ಮಾಡುವ ರೀಲ್ಸ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಅಮೂಲ್ಯ ಸುಂದರವಾಗಿ ಕಾಣಿಸಿಕೊಂಡಿದ್ದು, ಫ್ಯಾನ್ಸ್​ ಸೂಪರ್ ಎಂದು ಕಾಮೆಂಟ್​ ಮಾಡಿದ್ದಾರೆ. ನಟಿ ಅಮೂಲ್ಯ ನಟ ಶರಣ್ ಮತ್ತು  ನಟಿ ನಿಶ್ವಿಕ ನಾಯ್ಡು ಅಭಿನಯದ 'ಗುರು ಶಿಷ್ಯರು' ಚಿತ್ರದ ಹಾಡೊಂದಕ್ಕೆ ರೀಲ್ಸ್ ಮಾಡಿ ಹಂಚಿಕೊಂಡಿದ್ದಾರೆ. ಅವರು 'ಆಣೆ ಮಾಡಿ ಹೇಳುತೀನಿ' ಎನ್ನುವ ಹಾಡಿಗೆ ರೀಲ್ಸ್ ಮಾಡಿದ್ದು, ವಿಡಿಯೋಗೆ ನನ್ನ ಮೊದಲ ರೀಲ್ಸ್​ ಇದು, ಅದರಲ್ಲೂ ಇದು ನನಗೆ ತುಂಬಾ ಇಷ್ಟವಾದ ಹಾಡು. ನಿರ್ಮಾಪಕ ತರುಣ್ ಸುಧೀರ್ ಸೇರಿದಂತೆ, ಇಡೀ ಚಿತ್ರತಂಡಕ್ಕೆ ದೊಡ್ಡ ಯಶಸ್ಸು ಸಿಗಲಿ ಎಂದು ಬರೆದುಕೊಂಡಿದ್ದಾರೆ.

actress amulya shares baby boys feet photo
ನಟಿ ಅಮೂಲ್ಯಾ


ಹೆರಿಗೆಯ ನಂತರ ಹೊರಗೆ ಎಲ್ಲೂ ಕಾಣಿಸಿಕೊಳ್ಳದ ಅಮೂಲ್ಯ, ಮಕ್ಕಳ  ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟೀವ್ ಆಗಿದ್ದ ಅಮೂಲ್ಯ, ಮಕ್ಕಳಾದ ನಂತರ ಸ್ವಲ್ಪ ದೂರವಿದ್ದರು, ಇದೀಗ ಮತ್ತೆ ಆಕ್ಟೀವ್ ಆಗಿದ್ದು, ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ತಾವು ಗರ್ಭಿಣಿ ಎನ್ನುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ಜೊತೆ ಶೇರ್ ಮಾಡಿಕೊಂಡಿದ್ದ ಅಮೂಲ್ಯ, ಬೇಬಿ ಬಂಪ್​ ಫೋಟೋಶೂಟ್​ ಮಾಡಿಸಿ ಸುದ್ದಿಯಾಗಿದ್ದರು.



ಇನ್ನು ಇತ್ತೀಚೆಗಷ್ಟೇ ಅವರ ಫೋಟೋವೊಂದನ್ನು ಹಂಚಿಕೊಂಡು ಅಭಿಮಾನಿಗಳಿಗೆ ಶಾಕ್​ ನೀಡಿದ್ದರು. ಅದರಲ್ಲಿ ಅಮೂಲ್ಯ ತೂಕ ಇಳಿಸಿಕೊಂಡಿದ್ದು, ಅಭಿಮಾನಿಗಳು ಸಹ ಅಚ್ಚರಿ ವ್ಯಕ್ತಪಡಿಸಿದ್ದರು. ಹಸಿರು ಬಣ್ಣದ ಗೌನ್​ ಧರಿಸಿರುವ ಅಮೂಲ್ಯ ಫೋಟೋಗಳು ವೈರಲ್​ ಆಗಿದ್ದವು, ಎಷ್ಟು ಸುಂದರವಾಗಿ ಕಾಣುತ್ತಿದ್ದಾರೆ ಎಂದು ಫ್ಯಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.  ಅದಕ್ಕೂ ಮೊದಲು  ಅಮೂಲ್ಯ ಮಕ್ಕಳ ಪಾದವನ್ನು ಮುದ್ದು ಮಾಡುತ್ತಿರುವ ಫೋಟೋವನ್ನು ಹಂಚಿಕೊಂಡಿದ್ದರು. ಆಗ ನೆಟ್ಟಿಗರು ಮಕ್ಕಳ ಮುಖ ತೋರಿಸಿ ಎಂದು ಕಾಮೆಂಟ್​ ಮಾಡಿದ್ದರು.

ಇದನ್ನೂ ಓದಿ: ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ನಮಿತಾ ಫುಲ್ ಮಿಂಚಿಂಗ್, ಅಂದದ ಬೊಂಬೆಗೆ ಚೆಂದದ ಸಿಂಗಾರ ಅಂದ್ರು ಫ್ಯಾನ್ಸ್








View this post on Instagram






A post shared by Amulya (@nimmaamulya)






ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್​ ಈ ಸುಂದರಿ

ಚಲುವಿನ ಚಿತ್ತಾರದ ಮೂಲಕ ಕನ್ನಡಗಿರ ಮನೆ ಮನದಲ್ಲಿ ಐಶು ಆಗಿ ಪ್ರಸಿದ್ದರಾಗಿರುವ ನಟಿ ಅಮೂಲ್ಯ. ತಮ್ಮ ಮುಗ್ಧ ಹಾಗೂ ಸಹಜ ನಟನೆಯ ಕಾರಣದಿಂದ ಗೋಲ್ಡನ್​ ಕ್ವೀನ್​ ಎಂದೇ ಹೆಸರು ಪಡೆದವರು. 2017ರಲ್ಲಿ ಜಗದೀಶ್​ ಅವರನ್ನು ಮದುವೆಯಾದ ಅಮೂಲ್ಯ, ಚಿತ್ರರಂಗದಿಂದ ದೂರವಿದ್ದರು. ಕಳೆದ ಮಾರ್ಚ್​ನಲ್ಲಿ ಅವಳಿ ಗಂಡು ಮಕ್ಕಳ ತಾಯಿಯಾಗಿದ್ದು, ಅಭಿಮಾನಿಗಳು ಮಕ್ಕಳ ಮುಖವನ್ನು ಯಾವಾಗ ತೋರಿಸುತ್ತೀರಾ ಎಂದು ಕೇಳುತ್ತಿದ್ದಾರೆ.

kannada actress amulya baby shower photos

ಇದನ್ನೂ ಓದಿ: ಅಪ್ಪನಿಗೆ ನೀನು ಬ್ಯಾಡ್​ ಬಾಯ್​ ಎಂದ ಯಥರ್ವ್, ಫುಲ್ ವೈರಲ್ ಆಗ್ತಿದೆ ಯಶ್​ ಮಗನ ಹೊಸ ವಿಡಿಯೋ

ಗರ್ಭಿಣಿಯಾಗಿದ್ದ ಅಮೂಲ್ಯಗೆ ಕನ್ನಡ ಚಿತ್ರರಂಗ ಸೇರಿ, ಅಭಿಮಾನಿಗಳು, ಸಂಬಂಧಿಗಳು ಹಾಗೂ ಕೊರೋನಾ ವಾರಿಯರ್ಸ್‌ನಿಂದಲೂ ಬಗೆ ಬಗೆಯ ಸೀಮಂತ ಕಾರ್ಯಕ್ರಮಗಳು ನಡೆದಿದ್ದವು.  ಚಿತ್ರರಂಗದಲ್ಲಿ ಯಾವ ನಟಿಗೂ ಅವಳಿ ಮಕ್ಕಳು ಆಗಿರಲಿಲ್ಲ. ಹೀಗಾಗಿ ಅಭಿಮಾನಿಗಳು ಜಗದೀಶ್‌ ಕುಟುಂಬಕ್ಕೆ ಡಬಲ್ ಧಮಾಕ ಎಂದು ಸಂತಸ ವ್ಯಕ್ತಪಡಿಸಿದ್ದರು
Published by:Sandhya M
First published: