Actress Amulya: ಮುದ್ದು ಮಕ್ಕಳ ಪಾದದ ಫೋಟೋ ಹಾಕಿದ ನಟಿ ಅಮೂಲ್ಯ, ಮುಖ ತೋರಿಸಿ ಎಂದ ಫ್ಯಾನ್ಸ್

Actress Amulya Baby: ಈ ಫೋಟೋ ನೋಡಿ ಅಭಿಮಾನಿಗಳು ಕಾಮೆಂಟ್​ ಮಾಡಿದ್ದು, ಕ್ಯೂಟ್​ ಎಂದಿದ್ದಾರೆ. ಆದರೂ ಕೂಡ ಕೆಲ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕಾರಣ ಮಕ್ಕಳ ಮುಖ ತೋರಿಸಿಲ್ಲ ಎಂಬುದು.  

ನಟಿ ಅಮೂಲ್ಯಾ

ನಟಿ ಅಮೂಲ್ಯಾ

  • Share this:
ಸ್ಯಾಂಡಲ್​ವುಡ್(Sandalwood)​ನ ಗೋಲ್ಡನ್​ ಕ್ವೀನ್​(Golden Queen) ಅಮೂಲ್ಯ(Amulya) ಮಾರ್ಚ್​ನಲ್ಲಿ ಅವಳಿ ಗಂಡು ಮಕ್ಕಳಿ(Twins)ಗೆ ಜನ್ಮನೀಡಿದ್ದರು. ಈ ಬಗ್ಗೆ ಅವರ ಪತಿ ಜಗದೀಶ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು. ಆದರೆ ನಂತರ ಅಮೂಲ್ಯ ಮಕ್ಕಳ ಫೋಟೋ ರಿವೀಲ್ ಮಾಡಿರಲಿಲ್ಲ. ಆದರೆ ಇದೀಗ ಮಕ್ಕಳ ಕಾಲನ್ನು ಮುದ್ದು ಮಾಡುತ್ತಿರುವ ಫೋಟೋ ಹಾಕಿದ್ದು, ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.  ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಹಾಕಿಕೊಂಡಿರುವ ಅಮೂಲ್ಯ ಬ್ಲೆಸ್ಡ್​​ ಎಂದು ಬರೆದುಕೊಂಡಿದ್ದಾರೆ.

ಈ ಫೋಟೋ ನೋಡಿ ಅಭಿಮಾನಿಗಳು ಕಾಮೆಂಟ್​ ಮಾಡಿದ್ದು, ಕ್ಯೂಟ್​ ಎಂದಿದ್ದಾರೆ. ಆದರೂ ಕೂಡ ಕೆಲ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಅದಕ್ಕೆ ಕಾರಣ ಮಕ್ಕಳ ಮುಖ ತೋರಿಸಿಲ್ಲ ಎಂಬುದು.  ನಟಿ ಕೇವಲ ಮಕ್ಕಳ ಕಾಲಿನ ಫೋಟೋ ಹಾಕಿದ್ದು, ಯಾವಾಗ ಮಕ್ಕಳ ಮುಖ ತೋರಿಸುತ್ತಾರೆ ಎಂದು ಪ್ರಶ್ನೆ ಮಾಡಿದ್ದು, ಬೇಗ ಮುಖ ತೋರಿಸಿ ಎಂದು ಅಭಿಮಾನಿಗಳು ಕೇಳಿದ್ದಾರೆ.
View this post on Instagram


A post shared by Amulya (@nimmaamulya)


ಗರ್ಭಿಣಿಯಾಗಿದ್ದ ಅಮೂಲ್ಯಗೆ ಕನ್ನಡ ಚಿತ್ರರಂಗ ಸೇರಿ, ಅಭಿಮಾನಿಗಳು, ಸಂಬಂಧಿಗಳು ಹಾಗೂ ಕೊರೋನಾ ವಾರಿಯರ್ಸ್‌ನಿಂದಲೂ ಬಗೆ ಬಗೆಯ ಸೀಮಂತ ಕಾರ್ಯಕ್ರಮಗಳು ನಡೆದಿದ್ದವು.  ಚಿತ್ರರಂಗದಲ್ಲಿ ಯಾವ ನಟಿಗೂ ಅವಳಿ ಮಕ್ಕಳು ಆಗಿರಲಿಲ್ಲ. ಹೀಗಾಗಿ ಅಭಿಮಾನಿಗಳು ಜಗದೀಶ್‌ ಕುಟುಂಬಕ್ಕೆ ಡಬಲ್ ಧಮಾಕ ಎಂದು ಸಂತಸ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ನಯನತಾರಾ ಮದುವೆಗೆ ಬಂದು ಶಾರುಖ್ ಖಾನ್ ಟ್ರೋಲ್, ಇಷ್ಟ್​ ಬೇಗ ಕೊರೊನಾ ಹೋಯ್ತಾ ಎಂದ ನೆಟ್ಟಿಗರು
ಈ ಮೊದಲು ವಿವಿಧ ಆಹಾರ ತಿನಿಸುಗಳನ್ನು ಪಕ್ಕದಲ್ಲಿ ಇಟ್ಟುಕೊಂಡು ಜಗದೀಶ್ ಮತ್ತು ಅಮೂಲ್ಯ ಫೋಟೋ ಹಂಚಿಕೊಂಡು, ನಟಿ ಅಮೂಲ್ಯಾ ಗರ್ಭಿಣಿ ಎಂಬ ವಿಚಾರವನ್ನು ಹೇಳಿದ್ದರು. ಅಲ್ಲದೇ, ಜಗದೀಶ್ ಮನೆಯಲ್ಲಿ ಸಂಪ್ರದಾಯದಂತೆ ಅದ್ಧೂರಿಯಾಗಿ ಸೀಮಂತ ಮಾಡಿದ್ದರು. ಸಿನಿಮಾ ರಂಗದವರು ಸೇರಿದಂತೆ, ರಾಜಕೀಯ ಗಣ್ಯರೂ ಆಗಮಿಸಿ ಶುಭ ಹಾರೈಸಿದ್ದರು.

ಚಿತ್ರರಂಗದಿಂದ ಸಹ ಸೀಮಂತ ಮಾಡಲಾಗಿತ್ತು

ಅಲ್ಲದೇ, ಚಿತ್ರರಂಗದವರು ಅಮೂಲ್ಯಗೆ ಬೇಬಿ ಶವರ್ ಮಾಡಿದ್ದಾರೆ.ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ಅದ್ದೂರಿಯಾಗಿ ಪಾರ್ಟಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ನಟಿ ರಾಧಿಕಾ ಪಂಡಿತ್​, ಹಿರಿಯ ನಟಿ ಶ್ರುತಿ, ಸುಧಾರಾಣಿ, ಉಪೇಂದ್ರ, ಪ್ರಿಯಾಂಕಾ ಉಪೇಂದ್ರ ಮೊದಲಾದವರು ಪಾಲ್ಗೊಂಡಿದ್ದರು. ರಾಜಕೀಯ ಹಿನ್ನೆಲೆ ಹೊಂದಿರುವ ಜಗದೀಶ್​ ಜತೆ ಅಮೂಲ್ಯ ಮದುವೆ 2017ರಲ್ಲಿ ನೆರವೇರಿತ್ತು.

ಇದನ್ನೂ ಓದಿ: ಸಮಂತಾ ಇನ್ನು ಲೇಡಿ ಬಿಗ್ ಬಾಸ್! ಮಾಜಿ ಮಾವನಿಗೆ ಸೆಡ್ಡು ಹೊಡೆದ್ರಾ ಸೊಸೆ?

ಬಾಲನಟಿಯಾಗಿ ಗುರುತಿಸಿಕೊಂಡಿದ್ದ ಅಮೂಲ್ಯ ಚೆಲುವಿನ ಚಿತ್ತಾರ ಸಿನಿಮಾ ಮೂಲಕ ನಾಯಕಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಗೋಲ್ಡನ್​ ಕ್ವೀನ್ ಎಂದು ಫೇಮಸ್​ ಆಗಿರುವ ಅವರು ಮದುವೆಯ ನಂತರ ಚಿತ್ರರಂಗದಿಂದ ದೂರವಿದ್ದರು. ಚಿತ್ರರಂಗದಿಂದ ದೂರವಿದ್ದರೂ ಸಹ ಪತಿಯ ಜೊತೆ ಸಾಮಾಜಿಕ ಕಾರ್ಯದಲ್ಲಿ ಅಮೂಲ್ಯ ತೊಡಗಿಸಿಕೊಂಡಿದ್ದರು. ಪತಿ ಜಗದೀಶ್ ಅವರು​​ ಲಾಕ್ಡೌನ್​ ಸಮಯದಲ್ಲಿ ಅನೇಕ ಸಮಾಜಮುಖಿ ಕೆಲಸದಲ್ಲಿ ತೊಡಗಿದ್ದರು, ಅವರಿಗೆ ನಟಿ ಸಾಥ್ ನೀಡಿದ್ದರು.
Published by:Sandhya M
First published: