ಗೋಲ್ಡನ್ ಕ್ವೀನ್ ಅಮೂಲ್ಯ (Amulya) ಸದ್ಯಕ್ಕೆ ಇಬ್ಬರು ಮುದ್ದು ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದಿಂದ ದೂರ ಉಳಿದ ಬಳಿಕ ನಟಿ ಅಮೂಲ್ಯ, ಸೋಶಿಯಲ್ ಮೀಡಿಯಾದಲ್ಲಿ (Social Media) ಸಖತ್ ಆ್ಯಕ್ಟಿವ್ ಆಗಿದ್ದಾರೆ. ಮಕ್ಕಳ ಜೊತೆಗಿನ ಫೋಟೋ ಹಾಗೂ ವಿಡಿಯೋಗಳನ್ನು ಆಗಾಗೆ ಹಂಚಿಕೊಳ್ತಾರೆ. ಇದೀಗ ಇಬ್ಬರು ಮಕ್ಕಳ ಜೊತೆ ಜಾಲಿ ಟ್ರಿಪ್ (Trip) ಮಾಡ್ತಿರೋ ಅಮೂಲ್ಯ ಇದೀಗ ಮುದ್ದ ಮಕ್ಕಳ ಜೊತೆ ಮಗುವಂತೆ ಎಂಜಾಯ್ ಮಾಡ್ತಿದ್ದಾರೆ. ಪತಿ ಜಗದೀಶ್ ಹುಟ್ಟುಹಬ್ಬಕ್ಕೆ ಮಕ್ಕಳ ಕೈಯಲ್ಲಿ ವಿಶ್ ಮಾಡಿಸುವ ಪ್ರಯತ್ನ ಮಾಡಿದ್ದಾರೆ. ಇಬ್ಬರು ಮಕ್ಕಳಿಗೂ ಹ್ಯಾಪಿ ಬರ್ತ್ ಡೇ (Happy Birthay) ಹಾಡು ಹೇಳಿಕೊಟ್ಟಿದ್ದಾರೆ.
ಮನೆ, ಮಕ್ಕಳು, ಸಂಸಾರ ಅಂತಿದ್ದಾರೆ ಗೋಲ್ಡನ್ ಕ್ವೀನ್
ಚಂದನವನದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಯಾಗಿ ಮಿಂಚಿದ ಗೋಲ್ಡನ್ ನಟಿ ಅಮೂಲ್ಯ ಇದೀಗ ಇಬ್ಬರು ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿ ಆಗಿದ್ದಾರೆ. ಮನೆ, ಮಕ್ಕಳು, ಸಂಸಾರ ಅಂತ ಪಕ್ಕಾ ಗೃಹಿಣಿಯಂತಿದ್ದಾರೆ. ಇದೀಗ ಪತಿ ಜಗದೀಶ್ ಹುಟ್ಟುಹಬ್ಬ ಆಚರಿಸಲು ಮಕ್ಕಳ ಜೊತೆ ನಟಿ ಅಮೂಲ್ಯ ಟ್ರಿಪ್ ಹೋಗಿದ್ದಾರೆ. ಮಕ್ಕಳನ್ನು ಸಹ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ.
ಪತಿಗೆ ಸ್ಪೆಷಲ್ ವಿಶ್ ಮಾಡಿದ ಅಮೂಲ್ಯ
ಪತಿ ಜಗದೀಶ್ ಹುಟ್ಟುಹಬ್ಬದ ಹಿನ್ನೆಲೆ ಅಮೂಲ್ಯ ಸ್ಪೆಷಲ್ ವಿಶ್ ಮಾಡಿದ್ದಾರೆ. ಮಕ್ಕಳ ಜೊತೆ ಹ್ಯಾಪಿ ಬರ್ತ್ ಡೇ ಅಂತ ಹಾಡು ಹಾಡಿದ್ದಾರೆ. ಮಕ್ಕಳ ಕೈಯಲ್ಲಿ ಚಪ್ಪಾಳಿ ತಟ್ಟಿಸುವ ಪ್ರಯತ್ನ ಪಟ್ಟಿದ್ದಾರೆ. ಮಕ್ಕಳು ಕೂಡ ಕ್ಲ್ಯಾಪ್ಸ್ ಮಾಡಿ ಖುಷಿ ಪಟ್ಟಿದ್ದಾರೆ. ಈ ಮುದ್ದಾದ ವಿಡಿಯೋವನ್ನು ನಟಿ ಅಮೂಲ್ಯ ಶೇರ್ ಮಾಡಿದ್ದಾರೆ.
View this post on Instagram
ಅತ್ಯುತ್ತಮ ವೀಡಿಯೋಗ್ರಾಫರ್ ಗೆ ಜನ್ಮದಿನದ ಶುಭಾಶಯಗಳು, ಜಗದೀಶ್ ಚಂದ್ರ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು, ತಂದೆಯಾದ ಬಳಿಕ ಮೊದಲ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ತಿದ್ದೀರಾ ಎಲ್ಲಾ ಅದೃಷ್ಟವು ನಿಮ್ಮ ಕಡೆಯಿರಲಿ, ಜೀವನ ಉತ್ತಮವಾಗಲಿ ಎಂದು ಅಮೂಲ್ಯ ತಮ್ಮ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಬರೆದುಕೊಂಡಿದ್ದಾರೆ.
ಅಥರ್ವ್ ಮತ್ತು ಆಧವ್
ಕೆಲ ತಿಂಗಳುಗಳ ಹಿಂದೆ ಅಮೂಲ್ಯ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಇತ್ತೀಚೆಗಷ್ಟೆ ಅವಳಿ ಮಕ್ಕಳಿಗೆ ಅಮೂಲ್ಯ ಗೌಡ ನಾಮಕರಣ ಮಾಡಿದ್ದರು. ಅಮೂಲ್ಯ ತಮ್ಮ ಅವಳಿ ಮಕ್ಕಳಿಗೆ ಅಥರ್ವ್ ಮತ್ತು ಆಧವ್(Atharva & Aadhav) ಎಂದು ಹೆಸರನ್ನ ಇಟ್ಟಿದ್ದಾರೆ. ಇನ್ನೂ ಈ ಅದ್ದೂರಿ ಕಾರ್ಯಕ್ರಮಕ್ಕೆ ಸ್ಯಾಂಡಲ್‌ವುಡ್ ತಾರೆಯರು, ಆಪ್ತರು ಸಾಕ್ಷಿಯಾಗಿದ್ದಾರೆ. ಮುದ್ದಾದ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಮೂಲಕ ಫ್ಯಾನ್ಸ್ ಶುಭಹಾರೈಸಿದ್ದರು.
View this post on Instagram
ಚೈತ್ರದ ಚಂದ್ರಮ, ಶ್ರಾವಣಿ ಸುಬ್ರಮಣ್ಯಂ, ಗಜಕೇಸರಿ ಸೇರಿದಂತೆ ಇನ್ನು ಹಲವು ಕನ್ನಡ ಸಿನಿಮಾಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿ ಕನ್ನಡ ಸಿನಿಮಾರಂಗದಲ್ಲಿ ಸೈ ಎನಿಸಿಕೊಂಡಿದ್ದಾರೆ ಅಮೂಲ್ಯ. 2017 ರಲ್ಲಿ ಜಗದೀಶರನ್ನು ಮದುವೆ ಆಗಿದ್ದು, ಮಕ್ಕಳಾದ ಬಳಿಕ ಸಿನಿಮಾದಿಂದ ದೂರ ಉಳಿದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ