Amulya: ಕಾಲೇಜು ದಿನಗಳ ಸ್ನೇಹಕ್ಕೆ 10 ವರ್ಷ ತುಂಬಿದ ಸಂಭ್ರಮದಲ್ಲಿ ಅಮೂಲ್ಯಾ ಹಂಚಿಕೊಂಡ ಅಪರೂಪದ ಚಿತ್ರ

Amulya: ನಟಿ ಅಮೂಲ್ಯಾ ಹಾಗೂ ಅಗ್ನಿಸಾಕ್ಷಿ ಧಾರಾವಾಹಿಯ ಸನ್ನಿಧಿ ಅಲಿಯಾಸ್​ ವೈಷ್ಣವಿ ಹತ್ತು ವರ್ಷಗಳ ಹಿಂದೆ ಹೇಗಿದ್ದರು ಗೊತ್ತಾ..? ಅಲ್ಲದೆ ಅಮ್ಮು ಹಾಗೂ ವೈಷ್ಣವಿ ಸ್ನೇಹ ಎಂತಹದ್ದು ಅಂತ ತಿಳಿಯೋಕೆ ಮುಂದೆ ಓದಿ...

ಹತ್ತು ವರ್ಷಗಳ ಹಿಂದಿನ ಅಮೂಲ್ಯಾ ಹಾಗೂ ವೈಷ್ಣವಿ

ಹತ್ತು ವರ್ಷಗಳ ಹಿಂದಿನ ಅಮೂಲ್ಯಾ ಹಾಗೂ ವೈಷ್ಣವಿ

  • News18
  • Last Updated :
  • Share this:
ಸಿನಿ ಸೆಲೆಬ್ರಿಟಿಗಳ ಬಾಲ್ಯದ ಹಾಗೂ ಶಾಲಾ ದಿನಗಳ ಚಿತ್ರಗಳು ನೋಡಲು ಸಿಗುವುದು ಬಹಳ ಅಪರೂಪ. ಅಂತಹ ಚಿತ್ರಗಳು ಸಿಕ್ಕರೆ ಮಾತ್ರ ಅಭಿಮಾನಿಗಳಿಗೆ ಸಂಭ್ರಮವೋ ಸಂಭ್ರಮ.

ಅವರ ವೈಯಕ್ತಿಕ ಜೀವನ ಕೆಲವು ಅಪರೂಪದ ಚಿತ್ರಗಳನ್ನು ಸಮಯ ಬಂದಾಗ ಸೆಲೆಬ್ರಿಟಿಗಳೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಾರೆ. ಈಗಲೂ ಅಷ್ಟೆ ವಿವಾಹವಾದ ನಂತರ ಸಿನಿಮಾ ರಂಗದಿಂದ ದೂರ ಉಳಿದಿರುವ ನಟಿ ಅಮೂಲ್ಯಾ ತಮ್ಮ ಕಾಲೇಜಿನ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ.

Actress Amulya
ಪಾರಿವಾಳಗಳೊಂದಿಗೆ ಅಮೂಲ್ಯಾ


ಹೌದು, ಕಾಲೇಜಿನಲ್ಲಿ ಓದುತ್ತಿದ್ದ ಸಮಯದ ಅವರ ಸ್ನೇಹಕ್ಕೆ ಈಗ ಹತ್ತರ ಸಂಭ್ರಮ. ಹತ್ತು ವರ್ಷ ತುಂಬಿದ ಸ್ನೇಹದ ನೆನಪಿಗಾಗಿ ಅವರ ಹಳೆಯ ಚಿತ್ರವನ್ನು ಅಮೂಲ್ಯಾ ತಮ್ಮ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ.

From 2009 to 2019 I just can't believe...it's been 10yrs for our friendship...we hardly meet but still the love n care amoung us have been the same ...I can say there are my soulmates ...I cherish each n every moment spent with these "carmelites" 😍 #bestfriends4ever pic.twitter.com/A33IduOoLdಅವರು ಹಂಚಿಕೊಂಡಿರುವ ಫೋಟೋದಲ್ಲಿ ಒಂದು ವಿಶೇಷವಿದೆ. ಅದು ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ಸನ್ನಿಧಿ ಅಲಿಯಾಸ್​ ವೈಷ್ಣವಿ ಸಹ ಇದ್ದಾರೆ. ಹತ್ತು ವರ್ಷಗಳ ಹಿಂದೆ ಅಮೂಲ್ಯಾ ಹಾಗೂ ವೈಷ್ಣವಿ ಹೇಗೆ ಕಾಣುತ್ತಿದ್ದರು ಎಂದು ಈ ಚಿತ್ರದಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ: Rashmika Mandanna: ಸಿನಿಮಾ ಆರಂಭಕ್ಕೂ ಮೊದಲೇ ಕೋಟಿಗೆ ಮಾರಾಟವಾಯ್ತು ರಶ್ಮಿಕಾರ ಚಿತ್ರದ ಪ್ರಸಾರ ಹಕ್ಕು​

ವೈಷ್ಣವಿ ಹಾಗೂ ಅಮೂಲ್ಯಾ ಆಪ್ತ ಸ್ನೇಹಿತೆಯರು. ಅವರ ಹತ್ತು ವರ್ಷದ ಹಳೆಯ ಚಿತ್ರದ ಜತೆಗೆ ಈಗಿನ ಒಂದು ಹೊಸ ಫೋಟೋವನ್ನು ಕ್ಲಿಕ್ಕಿಸಿಕೊಂಡು ಅಮೂಲ್ಯಾ ಟ್ವೀಟ್​ ಮಾಡಿದ್ದಾರೆ.

ಸದ್ಯ ಅಮೂಲ್ಯಾ ಜಗದೀಶ್​ ಅವರನ್ನು ವಿವಾಹವಾಗಿದ್ದು, ಸಂತೋಷದಿಂದ ಜೀವನ ನಡೆಸುತ್ತಿದ್ದಾರೆ. ಇನ್ನೂ ವೈಷ್ಣವಿ ಧಾರಾವಾಹಿ ಹಾಗೂ ಸಿನಿಮಾ ಅಂತ ಬ್ಯುಸಿಯಾಗಿದ್ದಾರೆ. ಇನ್ನು ಅಮ್ಮು ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಡುವ ಸಿದ್ಧತೆಯಲ್ಲಿದ್ದಾರೆ ಅನ್ನೋ ಟಾಕ್​ ಸಹ ಇದೆ. ಇದು ನಿಜವಾದರೆ ಮತ್ತೊಮ್ಮೆ ಅಮೂಲ್ಯಾರನ್ನು ಬೆಳ್ಳಿ ಪರದೆ ಮೇಲೆ ನೋಡುವ ಅವಕಾಶ ನಿಮ್ಮದಾಗಬಹುದು.

 

ವೈರಲ್​ ಆಗುತ್ತಿವೆ ಕ್ರೇಜಿಸ್ಟಾರ್​ ನಾಯಕಿಯಾಗಿದ್ದ ಸ್ನೇಹಾರ ಲೆಟೆಸ್ಟ್​ ಚಿತ್ರಗಳು..!

First published: