Actress Amulya: ನಟಿ ಅಮೂಲ್ಯ ಪತಿಗೆ ಇಂದೇ ವ್ಯಾಲೆಂಟೈನ್ಸ್ ಡೇ! ಪತ್ನಿಯ ಬರ್ತ್​ಡೇಗೆ ಕ್ಯೂಟ್ ವಿಶ್

Amulya Birthday: ನಟಿ ಅಮೂಲ್ಯಗೆ ಹುಟ್ಟಿದ ಹಬ್ಬದ ಸಂಭ್ರಮ. ನಟಿಗೆ ಅವರ ಪತಿ ಕ್ಯೂಟ್ ಆಗಿ ವಿಶ್ ಮಾಡಿದ್ದಾರೆ. ಚಂದದ ವಿಡಿಯೋ ಕೂಡಾ ಶೇರ್ ಮಾಡಿದ್ದಾರೆ.

ನಟಿ ಅಮೂಲ್ಯ

ನಟಿ ಅಮೂಲ್ಯ

  • Share this:
ಸ್ಯಾಂಡಲ್​ವುಡ್ ನಟಿ ಅಮೂಲ್ಯಗೆ ಇಂದು ಹುಟ್ಟಿದ ಹಬ್ಬದ (Birthday) ಸಂಭ್ರಮ. ಚೆಲುವಿನ ಚಿತ್ತಾರ ಮೂಲಕ ಕನ್ನಡ ಸಿನಿ ಪ್ರಿಯರ ಮನಸಿನಲ್ಲಿ ಉಲ್ಲಾಸದ ಹೂಮಳೆಗರೆದ ನಟಿ ಈಗ ಫ್ಯಾಮಿಲಿ ಲೈಫ್​ನಲ್ಲಿ (Family Life) ಫುಲ್ ಬ್ಯುಸಿ. ಕನ್ನಡದಲ್ಲಿ ಹಿಟ್ ಸಿನಿಮಾಗಳನ್ನು ಕೊಟ್ಟ ನಟಿ ಈಗ ಪತಿ (Husband) ಹಾಗೂ ಮಕ್ಕಳೊಂದಿಗೆ ಚಂದದ ಸಮಯ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಅವಳಿ ಮಕ್ಕಳ ತಾಯಿಯಾದ ನಟಿ ಈಗ ಅವರ ಲಾಲನೆ, ಪಾಲನೆಯಲ್ಲಿಯೇ ಬ್ಯುಸಿಯಾಗಿದ್ದಾರೆ. ಅವರ ಪತಿಯ ನಟಿಯ ಬರ್ತ್​ಡೇ ಪ್ರಯುಕ್ತ ವಿಶೇಷವಾಗಿ ಒಂದು ವಿಡಿಯೋವನ್ನು ಶೇರ್ ಮಾಡಿ ಶುಭಾಶಯ ತಿಳಿಸಿದ್ದಾರೆ. ಈ ವಿಡಿಯೋದಲ್ಲಿ ಪತ್ನಿ ಕುರಿತು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದು, ತಮಗೆ ಹೆಂಡತಿ ಹುಟ್ಟಿದ ದಿನವೇ ವ್ಯಾಲೆಂಟೈನ್ಸ್ ಡೇ ಎಂದು ಹೊಗಳಿದ್ದಾರೆ.

ಅಮೂಲ್ಯ ಪತಿಗೆ ಇಂದೇ ವ್ಯಾಲೆಂಟೈನ್ಸ್ ಡೇ

ನಟಿ ಅಮೂಲ್ಯ ಅವರ ಪತಿಗೆ ಇಂದು ವ್ಯಾಲೆಂಟೈನ್ಸ್ ಡೇ. ಅರೆ ಫೆಬ್ರವರಿ 14ಕ್ಕೆ ವ್ಯಾಲೆಂಟೈನ್ಸ್ ಡೇ ಎಂದು ಅಚ್ಚರಿ ಪಡುತ್ತೀರಾ? ಇದು ಸ್ವಲ್ಪ ಡಿಫರೆಂಟ್. ನಟಿ ಅಮೂಲ್ಯ ಹುಟ್ಟಿದ ದಿನವೇ ಅವರ ಪತಿಗೆ ಪ್ರೇಮಿಗಳ ದಿನವಂತೆ. ಇದನ್ನು ಅವರೇ ಇನ್​ಸ್ಟಾಗ್ರಾಮ್ ವಿಡಿಯೋ ಮೂಲಕ ತಿಳಿಸಿದ್ದಾರೆ.






ವಿಡಿಯೋಗೆ ನೆಟ್ಟಿಗರಿಂದ ಹಾಗೂ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಹರಿದುಬಂದಿದೆ. ಈ ವಿಡಿಯೋಗೆ 7 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿದ್ದು 77 ಜನರು ಕಮೆಂಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.

ಇದನ್ನೂ ಓದಿ: Golden Star Ganesh: ಗೋಲ್ಡನ್ ಗಣಿ ಸಿಕ್ಸರ್ ಬಾರಿಸಲು ರೆಡಿ! ಪ್ರೀತಂ ಗುಬ್ಬಿ ಜೊತೆ ಹೊಸ ಪಯಣ

ಮೊದಲ ರೀಲ್ಸ್ ಮಾಡಿದ ನಟಿ

ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿರುವ ನಟಿ ಅಮೂಲ್ಯ ಮೊದಲ ಬಾರಿ ಹಾಡಿಗೆ ಡ್ಯಾನ್ಸ್​ ಮಾಡುವ ರೀಲ್ಸ್ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋದಲ್ಲಿ ಅಮೂಲ್ಯ ಸುಂದರವಾಗಿ ಕಾಣಿಸಿಕೊಂಡಿದ್ದು, ಫ್ಯಾನ್ಸ್​ ಸೂಪರ್ ಎಂದು ಕಾಮೆಂಟ್​ ಮಾಡಿದ್ದಾರೆ. ನಟಿ ಅಮೂಲ್ಯ ನಟ ಶರಣ್ ಮತ್ತು ನಟಿ ನಿಶ್ವಿಕ ನಾಯ್ಡು ಅಭಿನಯದ 'ಗುರು ಶಿಷ್ಯರು' ಚಿತ್ರದ ಹಾಡೊಂದಕ್ಕೆ ರೀಲ್ಸ್ ಮಾಡಿ ಹಂಚಿಕೊಂಡಿದ್ದಾರೆ.

ಅವರು 'ಆಣೆ ಮಾಡಿ ಹೇಳುತೀನಿ' ಎನ್ನುವ ಹಾಡಿಗೆ ರೀಲ್ಸ್ ಮಾಡಿದ್ದು, ವಿಡಿಯೋಗೆ ನನ್ನ ಮೊದಲ ರೀಲ್ಸ್​ ಇದು, ಅದರಲ್ಲೂ ಇದು ನನಗೆ ತುಂಬಾ ಇಷ್ಟವಾದ ಹಾಡು. ನಿರ್ಮಾಪಕ ತರುಣ್ ಸುಧೀರ್ ಸೇರಿದಂತೆ, ಇಡೀ ಚಿತ್ರತಂಡಕ್ಕೆ ದೊಡ್ಡ ಯಶಸ್ಸು ಸಿಗಲಿ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Actor Dhananjaya: ಸೌತ್​ನ ಈ ಸೂಪರ್​ಸ್ಟಾರ್ ಮದ್ವೆಯಾದ್ರೆ ತಾವೂ ಮದ್ವೆಯಾಗ್ತಾರಂತೆ ಡಾಲಿ!

ಪತಿಯ ಶುಭಾಶಯಕ್ಕೆ ನಟಿಯ ಉತ್ತರ

ಸ್ಯಾಂಡಲ್​ವುಡ್ ನಟಿ ತಮ್ಮ ಪತಿಯ ಶುಭಾಯಕ್ಕೆ ಥ್ಯಾಂಕ್ ಯೂ  ಎಂದು ಕಮೆಂಟ್ ಮಾಡಿ ಮೂರು ಹೃದಯದ ಎಮೋಜಿಗಳನ್ನು ಪೋಸ್ಟ್ ಮಾಡಿದ್ದಾರೆ. ಇನ್ನು ಅವರ ಅಭಿಮಾನಿಗಳು ಕೂಡಾ ಕಮೆಂಟ್ ಮಾಡಿ ಹ್ಯಾಪಿ ಬರ್ತ್​ಡೇ ಹೇಳಿದ್ದಾರೆ.

ನಟಿ ಮದುವೆಯಾದ ನಂತರ ನಟನೆಯಿಂದ ಸ್ವಲ್ಪ ದೂರ ಉಳಿದರೂ ಸೋಷಿಯಲ್ ಮಿಡಿಯಾ ಮೂಲಕ ಅಭಿಮಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ ಆ್ಯಕ್ಟಿವ್ ಆಗಿರುವ ನಟಿ ತಮ್ಮ ಫ್ಯಾಮಿಲಿ ಲೈಫ್, ಪತಿ ಹಾಗೂ ಮಕ್ಕಳ ಕುರಿತು, ವೆಕೇಷನ್​ಗಳ ಕುರಿತು ಮಾಹಿತಿ ಹಂಚಿಕೊಳ್ಳುತ್ತಾರೆ. ಗರ್ಭಿಣಿಯಾಗಿದ್ದಾಗ ನಟಿ ಬೇಬಿ ಬಂಪ್ ಫೋಟೋ ಶೂಟ್ ಕೂಡಾ ಮಾಡಿಸಿಕೊಂಡಿದ್ದರು.
Published by:Divya D
First published: