ಸಿನಿಮಾಗೆ ಬಟ್ಟೆ ಬಿಚ್ಚಿದ್ದ ಈ ಸ್ಯಾಂಡಲ್​ವುಡ್ ನಟಿ ನಿಜ ಜೀವನದಲ್ಲೂ ಬೆತ್ತಲಾಗಿದ್ದೇಕೆ?

Amala Paul: ಆಡೈ ಸಿನಿಮಾದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೊಳಗಾಗಿತ್ತು. ಆಡೈ ಸಿನಿಮಾದ ಟೀಸರ್, ಟ್ರೈಲರ್​ನಲ್ಲೂ ಮೈ ತುಂಬ ಚಾಟಿಯ ಗಾಯಗಳಾಗಿ, ಬರಿಮೈಯಲ್ಲಿ ಮುದುಡಿ ಕುಳಿತಿದ್ದ ಅಮಲಾ ಪೌಲ್ ಅವತಾರ ನೋಡಿದವರು ದಂಗಾಗಿದ್ದರು.

news18-kannada
Updated:November 7, 2019, 7:37 PM IST
ಸಿನಿಮಾಗೆ ಬಟ್ಟೆ ಬಿಚ್ಚಿದ್ದ ಈ ಸ್ಯಾಂಡಲ್​ವುಡ್ ನಟಿ ನಿಜ ಜೀವನದಲ್ಲೂ ಬೆತ್ತಲಾಗಿದ್ದೇಕೆ?
Amala Paul: ಆಡೈ ಸಿನಿಮಾದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೊಳಗಾಗಿತ್ತು. ಆಡೈ ಸಿನಿಮಾದ ಟೀಸರ್, ಟ್ರೈಲರ್​ನಲ್ಲೂ ಮೈ ತುಂಬ ಚಾಟಿಯ ಗಾಯಗಳಾಗಿ, ಬರಿಮೈಯಲ್ಲಿ ಮುದುಡಿ ಕುಳಿತಿದ್ದ ಅಮಲಾ ಪೌಲ್ ಅವತಾರ ನೋಡಿದವರು ದಂಗಾಗಿದ್ದರು.
  • Share this:
ಕೇರಳದ ಮಲೆಯಾಳಿ ಕುಟ್ಟಿ ಅಮಲಾ ಪೌಲ್ ಮಾಲಿವುಡ್, ಸ್ಯಾಂಡಲ್​ವುಡ್, ಟಾಲಿವುಡ್, ಕಾಲಿವುಡ್​ನಲ್ಲಿ 40ಕ್ಕೂ ಅಧಿಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಕಿಚ್ಚ ಸುದೀಪ್ ಜೊತೆಗೆ 'ಹೆಬ್ಬುಲಿ' ಸಿನಿಮಾದಲ್ಲಿ ನಟಿಸಿದ್ದ ಅಮಲಾ ಪೌಲ್ ಕಳೆದ ವರ್ಷ ತೆರೆಕಂಡ ತಮಿಳಿನ 'ಆಡೈ' ಸಿನಿಮಾದಲ್ಲಿ ಬೆತ್ತಲಾಗಿ ನಟಿಸಿದ್ದರು. ಆದರೆ, ಇದೀಗ ನಿಜ ಜೀವನದಲ್ಲೂ ಬೆತ್ತಲಾಗಿ ಮತ್ತೆ ಸುದ್ದಿಯಾಗಿದ್ದಾರೆ.

ಅಮಲಾ ಪೌಲ್ ಬೆತ್ತಲಾಗಿದ್ದ 'ಆಡೈ' ಸಿನಿಮಾದ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೊಳಗಾಗಿತ್ತು. 'ಆಡೈ' ಸಿನಿಮಾದ ಟೀಸರ್, ಟ್ರೈಲರ್​ನಲ್ಲೂ ಮೈ ತುಂಬ ಚಾಟಿಯ ಗಾಯಗಳಾಗಿ, ಬರಿಮೈಯಲ್ಲಿ ಮುದುಡಿ ಕುಳಿತಿದ್ದ ಅಮಲಾ ಪೌಲ್ ಅವತಾರ ನೋಡಿದವರು ದಂಗಾಗಿದ್ದರು. ಜೈಲಿನಲ್ಲಿ ವಿಚಾರಣೆ ವೇಳೆ ಪೊಲೀಸರು ವಿವಸ್ತ್ರಗೊಳಿಸಿ ಥಳಿಸುವ ದೃಶ್ಯಕ್ಕಾಗಿ ಅಮಲಾ ಪೌಲ್ ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದರು.

amala paul naked photo
ಬಾಲಿಯಲ್ಲಿ ಅಮಲಾ ಪೌಲ್


ಇದೀಗ ಎರಡು ತಮಿಳು ಸಿನಿಮಾ, ಒಂದು ಮಲೆಯಾಳಂ, ಒಂದು ತೆಲುಗು ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿಯಾಗಿರುವ ಅಮಲಾ ಪೌಲ್ ಶೂಟಿಂಗ್ ನಡುವೆ ಬಿಡುವು ಮಾಡಿಕೊಂಡು ಇಂಡೋನೇಷ್ಯಾದ ಬಾಲಿ ದ್ವೀಪದ ಪ್ರವಾಸದಲ್ಲಿದ್ದಾರೆ. ನಟಿ ಅಮಲಾ ಪೌಲ್ ಅಲ್ಲಿನ ಹೋಟೆಲ್​ನ ರೂಮ್​​ನ ಬಾತ್​ಟಬ್​ನಲ್ಲಿ ಬೆತ್ತಲಾಗಿ ಮಲಗಿರುವ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಬಾಲಿಯ ದಟ್ಟ ಕಾಡಿನ ಪಕ್ಕದಲ್ಲಿರುವ ಕಾರಿಡಾರ್​ನಲ್ಲಿ ಬಾತ್​ಟಬ್​ನಲ್ಲಿ ಹೂವಿನ ಪಕಳೆಗಳನ್ನು ಹಾಕಿಕೊಂಡು ಬೆತ್ತಲಾಗಿ ಕುಳಿತಿರುವ ಅಮಲಾ ಪೌಲ್ ಟ್ಯಾಟೂ ಹಾಕಿದ ತಮ್ಮ ಬೆನ್ನಿನ ಬೆತ್ತಲೆ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋ ಈಗ ವೈರಲ್ ಆಗಿದ್ದು, ಇನ್ನೊಂದು ಫೋಟೋದಲ್ಲಿ ಕುತ್ತಿಗೆಯವರೆಗೆ ಮುಳುಗಿ ತಮ್ಮ ಮುಖ ಮಾತ್ರ ಕಾಣುವಂತೆ ಪೋಸ್ ಕೊಟ್ಟಿದ್ದಾರೆ.

First published:November 7, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading