• Home
  • »
  • News
  • »
  • entertainment
  • »
  • Alia Bhatt - Ranbir Kapoor: ಹೆಣ್ಣುಮಗುವಿಗೆ ಜನ್ಮ ನೀಡಿದ ಆಲಿಯಾ ಭಟ್

Alia Bhatt - Ranbir Kapoor: ಹೆಣ್ಣುಮಗುವಿಗೆ ಜನ್ಮ ನೀಡಿದ ಆಲಿಯಾ ಭಟ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Alia Bhatt and Ranbir Kapoor blessed with baby girl: ಏಪ್ರಿಲ್ 14 ರಂದು ಮದುವೆಯಾದ ಬಾಲಿವುಡ್ ದಂಪತಿಗಳು ಹೆಣ್ಣು ಮಗುವಿನ ತಂದೆ-ತಾಯಿಯಾಗಿದ್ದಾರೆ. ಭಾನುವಾರ ಬೆಳಗ್ಗೆ, ಮುಂಬೈನ ಗಿರ್ಗಾಂವ್‌ನಲ್ಲಿರುವ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಮುಂದೆ ಓದಿ ...
  • Share this:

ಬಾಲಿವುಡ್​ ತಾರಾ (Bollywood Star couple) ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ (Alia Bhatt And Ranbir Kapoor) ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡಿದ್ದು,  ಏಪ್ರಿಲ್ 14 ರಂದು ಮದುವೆಯಾದ ಬಾಲಿವುಡ್ ದಂಪತಿಗಳು ಹೆಣ್ಣು ಮಗುವಿನ (Baby Girl) ತಂದೆ-ತಾಯಿಯಾಗಿದ್ದಾರೆ. ಭಾನುವಾರ ಬೆಳಗ್ಗೆ, ಮುಂಬೈನ ಗಿರ್ಗಾಂವ್‌ನಲ್ಲಿರುವ ಎಚ್‌ಎನ್ ರಿಲಯನ್ಸ್ ಫೌಂಡೇಶನ್ ಆಸ್ಪತ್ರೆಯಲ್ಲಿ ಆಲಿಯಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.ಇನ್ನು  ಜೂನ್‌ನಲ್ಲಿ, ಆಲಿಯಾ ತನ್ನ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ರಣಬೀರ್ ಜೊತೆ ಇರುವ ಫೋಟೋದೊಂದಿಗೆ ತಾನು ಗರ್ಭಿಣಿ ಎಂದು ಘೋಷಿಸುವ ಮೂಲಕ ಸಂತಸದ ಸುದ್ದಿಯನ್ನು ಹಂಚಿಕೊಂಡಿದ್ದರು. ರಣಬೀರ್ ಮತ್ತು ಆಲಿಯಾ ಮದುವೆಯಾದ ಕೆಲವೇ ತಿಂಗಳುಗಳ ನಂತರ ಈ ವಿಚಾರವನ್ನು ಹಂಚಿಕೊಂಡು ಫ್ಯಾನ್ಸ್​ಗೆ ಅಚ್ಚರಿ ಮೂಡಿಸಿದ್ದರು.


ಇತ್ತೀಚೆಗೆ ನಡೆದಿದ್ದ ಸೀಮಂತ ಕಾರ್ಯಕ್ರಮ


ಈ ಜೋಡಿ ಇತ್ತೀಚೆಗೆ ಬೇಬಿ ಶವರ್ ಅಂದರೆ ಸೀಮಂತ ಶಾಸ್ತ್ರವನ್ನು ಸಹ ಆಯೋಜಿಸಿದ್ದರು, ಆಲಿಯಾ ಅವರ ಸಹೋದರಿ ಶಾಹೀನ್ ಭಟ್, ರಣಬೀರ್ ಅವರ ತಾಯಿ ನೀತು ಕಪೂರ್, ಅವರ ಸಹೋದರಿ ರಿದ್ಧಿಮಾ ಕಪೂರ್ ಸಾಹ್ನಿ, ಸೋದರಸಂಬಂಧಿ ಕರಿಷ್ಮಾ ಕಪೂರ್ ಮತ್ತು ಶಮ್ಮಿ ಕಪೂರ್ ಅವರ ಪತ್ನಿ ನೀಲಾ ದೇವಿ ಮುಂಬೈನ ಪಾಲಿ ಹಿಲ್ ಪ್ರದೇಶದಲ್ಲಿರುವ ತಮ್ಮ ವಾಸ್ತು ಮನೆಯಲ್ಲಿ ಬಹಳ ಸರಳವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


ಈ ವರ್ಷದ ಏಪ್ರಿಲ್ 14ರಂದು ಸಪ್ತಪದಿ ತುಳಿದಿದ್ದ ಜೋಡಿ ಅಭಿಮಾನಿಗಳಿಗೆ ಮತ್ತೊಂದು ಗುಡ್​ ನ್ಯೂಸ್​ ನೀಡಿತ್ತು. ಆಲಿಯಾ ಮತ್ತು ರಣಬೀರ್ ಮದುವೆಯ ಸಂಬಂಧ ಬಹಳಷ್ಟು ಖಾಸಗಿತನವನ್ನು ಕಾಪಾಡಿಕೊಳ್ಳಲಾಗಿತ್ತು, ಮಾಧ್ಯಮಗಳಿಗೆ ಸಹ ಮದುವೆಯ ದಿನಾಂಕವನ್ನು ಜೋಡಿ ಅಧಿಕೃತವಾಗಿ ಹೇಳಿರಲಿಲ್ಲ. ಅಲ್ಲದೇ ಮದುವೆಯಲ್ಲಿ ಸಹ ಹೆಚ್ಚಿನ ಜನರಿಗೆ ಆಹ್ವಾನ ನೀಡಿರಲಿಲ್ಲ.  ಬಾಲಿವುಡ್ ತಾರೆಯರು ರಣಬೀರ್-ಆಲಿಯಾ ಅವರ ಮದುವೆಗೆ ಹಾಜರಾಗಿದ್ದು, ಅದರಲ್ಲಿ ಸೈಫ್ ಅಲಿ ಖಾನ್, ಕರೀನಾ ಕಪೂರ್, ಕರಿಷ್ಮಾ ಕಪೂರ್, ಕರಣ್ ಜೋಹರ್ ಭಾಗಿಯಾಗಿದ್ದರು.


ಇದನ್ನೂ ಓದಿ: ಮುಂಬೈನ ಈ ಆಸ್ಪತ್ರೆಯಲ್ಲಿಯೇ ಮಗುವಿಗೆ ಜನ್ಮ ನೀಡಲಿದ್ದಾರಂತೆ ನಟಿ ಆಲಿಯಾ


ಡೆಲಿವರಿ ದಿನಾಂಕದ ಬ್ಗಗೆ ಸಹ ಮೂಡಿತ್ತು ಕುತೂಹಲ 


ಕೆಲ ಮೂಲಗಳ ಪ್ರಕಾರ, ನವೆಂಬರ್ 28 ರಂದು ಆಲಿಯಾ ಅವರ ಸಹೋದರಿ ಶಾಹೀನ್ ಅವರ ಹುಟ್ಟುಹಬ್ಬವಿದೆ. ಆ ಡೆಲಿವರಿ ದಿನಾಂಕದ ಹತ್ತಿರದ ಯಾವುದಾದರೂ ದಿನದಲ್ಲಿ ಆಲಿಯಾ ಅವರು ತಮ್ಮ ಮಗುವಿಗೆ ಜನ್ಮ ನೀಡಬಹುದು ಅಂತ ಹೇಳಲಾಗುತ್ತಿತ್ತು.  ನವೆಂಬರ್ 28 ರಂದೇ ಆಲಿಯಾ ಅವರ ಮಗು ಸಹ ಹುಟ್ಟಿದರೆ ಅದೇ ದಿನ ಇಬ್ಬರ ಹುಟ್ಟುಹಬ್ಬಗಳನ್ನು ಒಟ್ಟಿಗೆ ಆಚರಿಸಬಹುದು ಎಂದು ಆಲಿಯಾ ಕುಟುಂಬದ ಲೆಕ್ಕಾಚಾರವಾಗಿತ್ತು ಎನ್ನುವ ಮಾತು ಸಹ ಕೇಳಿ ಬಂದಿತ್ತು.


ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ಮದುವೆ


ಆಲಿಯಾ ಮತ್ತು ರಣಬೀರ್ ನಡುವೆ ‘ಬ್ರಹ್ಮಾಸ್ತ್ರ’ ಸಿನಿಮಾದ ಶೂಟಿಂಗ್ ಮಧ್ಯೆ ಪ್ರೀತಿ ಚಿಗುರಿತ್ತು. 2017ರಿಂದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಡೇಟಿಂಗ್ ಮಾಡಲು ಪ್ರಾರಂಭಿಸಿದರು. ಮೇ 2018ರಲ್ಲಿ ನಟಿ ಸೋನಮ್ ಕಪೂರ್ ಅವರ ವಿವಾಹದ ಆರತಕ್ಷತೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡಾಗ ಅವರು ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದ್ದರು.




ಇನ್ನು ಮದುವೆಯಲ್ಲಿ ಆಲಿಯಾ ಧರಿಸಿದ್ದ ಸೀರೆ, ಒಡವೆ ಹಾಗೂ ಮಾಂಗಲ್ಯ ಸರ ಕೂಡ ಅಭಿಮಾನಿಗಳಿಗೆ ಇಷ್ಟವಾಗಿತ್ತು, ಅದರ ಡಿಸೈನ್ ಬೆಲೆ ಎಲ್ಲಾವೂ ಹೆಚ್ಚು ಸುದ್ದಿ ಮಾಡಿತ್ತು ಇನ್ನು ಆಲಿಯಾ ಮದುವೆಯ ದಿನದ ಸಿಂಪಲ್ ಮೇಕಪ್ ಲುಕ್ ಹಾಗೂ ಸಿಂಪಲ್ ಮೆಹೆಂದಿ ಕೂಡ ಹೊಸ ಟ್ರೆಂಡ್​ ಸೃಷ್ಟಿ ಮಾಡಿತ್ತು.




ಇದನ್ನೂ ಓದಿ: ಆಲಿಯಾ ಭಟ್ ಗರ್ಭಿಣಿ, ಶುಭ ಸುದ್ದಿ ಹಂಚಿಕೊಂಡ ದಂಪತಿ


ಕೆಲಸದ ವಿಚಾರಕ್ಕೆ ಬಂದರೆ, ಅಯಾನ್ ಮುಖರ್ಜಿ ನಿರ್ದೇಶನದ 'ಬ್ರಹ್ಮಾಸ್ತ್ರ' ಸಿನಿಮಾದಲ್ಲಿ ಆಲಿಯಾ ಹಾಗೂ ರಣಬೀರ್ ಕಾಣಿಸಿಕೊಂಡಿದ್ದು, . 2023 ರಲ್ಲಿ ಬಿಡುಗಡೆಯಾಗಲಿರುವ ಗಾಲ್ ಗಡೋಟ್-ಸ್ಟಾರರ್ 'ಹಾರ್ಟ್ ಆಫ್ ಸ್ಟೋನ್' ನೊಂದಿಗೆ ಆಲಿಯಾ ಹಾಲಿವುಡ್ ಪ್ರವೇಶ ಮಾಡಲಿದ್ದಾರೆ. ಇತ್ತೀಚೆಗೆ ಅವರು ಇದಮಾಮಾ ಎಂಬ ಹೆಸರಿನ ಹೆರಿಗೆ ಉಡುಗೆಯ ಬ್ಯುಸಿನೆಸ್ ಸಹ ಪ್ರಾರಂಭಿಸಿದ್ದಾರೆ.

Published by:Sandhya M
First published: