Aditi Prabhudeva: ಶೂಟಿಂಗ್ ಮುಗಿಸಿ ರಿಲೀಸ್ಗೆ ಸಿದ್ಧವಾಗಿದೆ ಅದಿತಿ ಪ್ರಭುದೇವ ನಟನೆಯ ಬಹು ನಿರೀಕ್ಷಿತ ಚಿತ್ರ ಆನ!
ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ಅದಿತಿ ಸೂಪರ್ ವುಮೇನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಸೂಪರ್ ವುಮೇನ್ ಅವತಾರದಲ್ಲಿ ಅದಿತಿ ಅದ್ಭುತವಾಗಿದ್ದಾರೆ. ಅದಿತಿ ಲುಕ್ಸ್ ಗೆ ಅಭಿಮಾನಿಗಳು ಬೋಲ್ಡ್ ಆಗಿದ್ದಾರೆ.
ಸ್ಯಾಂಡಲ್ವುಡ್ ಮಟ್ಟಿಗೆ ಮಹಿಳಾ ಮುಖ್ಯಪಾತ್ರಧಾರಿ ಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಕೆಲವೇ ನಟಿಯರಲ್ಲಿ ಅದಿತಿ ಪ್ರಭುದೇವ ಸಹ ಒಬ್ಬರು. ಆದರೆ, ಇಷ್ಟು ದಿನ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದ ಅದಿತಿ ಪ್ರಭುದೇವ ಇದೇ ಮೊದಲ ಬಾರಿಗೆ ಸೂಪರ್ ವುಮೆನ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳನ್ನು ರಂಜಿಸಲು ಮುಂದಾಗಿದ್ದಾರೆ.ನಟಿ ಅದಿತಿ ಪ್ರಭುದೇವ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಆನ ಸಿನಿಮಾ ಸದ್ಯ ಶೂಟಿಂಗ್ ಮುಗಿಸಿಕೊಂಡು ರಿಲೀಸ್ ಗೆ ಸಿದ್ಧವಾಗಿದೆ. ಇದೊಂದು ಸೂಪರ್ ವುಮೇನ್ ಸಿನಿಮಾ ಅಂತ ಚಿತ್ರತಂಡ ಪೋಸ್ಟರ್ ಮೂಲಕ ಹೇಳಿತ್ತು. ಆದ್ರೆ ಸಿನಿಮಾದ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಆದಾಗ್ಯೂ ಇದೀಗ ಈ ಸಿನಿಮಾದ ಫೋಟೋವೊಂದು ಲೀಕ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಆನ ಚಿತ್ರದ ಪೋಸ್ಟರ್.
ಶೂಟಿಂಗ್ನಲ್ಲಿ ಅದಿತಿ ಪ್ರಭುದೇವ.
ಸದ್ಯ ವೈರಲ್ ಆಗಿರುವ ಫೋಟೋದಲ್ಲಿ ಅದಿತಿ ಸೂಪರ್ ವುಮೇನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಸೂಪರ್ ವುಮೇನ್ ಅವತಾರದಲ್ಲಿ ಅದಿತಿ ಅದ್ಭುತವಾಗಿದ್ದಾರೆ. ಅದಿತಿ ಲುಕ್ಸ್ ಗೆ ಅಭಿಮಾನಿಗಳು ಬೋಲ್ಡ್ ಆಗಿದ್ದಾರೆ. ಸೂಪರ್ ವುಮೆನ್ ಅಂದ್ರೆ ನಮಗೆ ಹಾಲಿವುಡ್ ಮಂದಿ ಮಾತ್ರ ನೆನಪಾಗುತ್ತಾರೆ.
ಆದ್ರೆ ಸದ್ಯ ಲೀಕ್ ಆಗಿರುವ ಫೋಟೋ ನೋಡಿದ್ರೆ ಸೂಪರ್ ವುಮೆನ್ ಗಳಿಗೆ ಅದಿತಿ ಕೇರ್ ಆಫ್ ಅಡ್ರೆಸ್ ಆಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಇನ್ನು ಸಿನಿಮಾವನ್ನ ಯುವ ನಿರ್ದೇಶಕ ಮನೋಜ್ ಪಿ. ನಡುಲಮನೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ