MungaruMale 2: ಯೋಗರಾಜ್​ ಭಟ್ರ ಅಖಾಡಕ್ಕೆ ಎಂಟ್ರಿ ಕೊಟ್ಟ ನಟಿ ಅದಿತಿ: ಯಾರೊಂದಿಗೆ ಗಾಳಿಪಟ ಹಾರಿಸಲಿದ್ದಾರೆ ಗೊತ್ತಾ..?

ಯೋಗರಾಜ್​ ಭಟ್​ ಅವರ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ಮುಂಗಾರು ಮಳೆ 2. ಈ ಚಿತ್ರದಲ್ಲಿ ತಾರೆಯರ ದೊಡ್ಡ ಬಳಗವೇ ಇದ್ದು, ಈ ಅಖಾಡಕ್ಕೆ ಈಗ ನಟಿ ಅದಿತಿ ಎಂಟ್ರಿ ಕೊಟ್ಟಿದ್ದಾರೆ.

Anitha E | news18
Updated:July 2, 2019, 6:56 PM IST
MungaruMale 2: ಯೋಗರಾಜ್​ ಭಟ್ರ ಅಖಾಡಕ್ಕೆ ಎಂಟ್ರಿ ಕೊಟ್ಟ ನಟಿ ಅದಿತಿ: ಯಾರೊಂದಿಗೆ ಗಾಳಿಪಟ ಹಾರಿಸಲಿದ್ದಾರೆ ಗೊತ್ತಾ..?
ಮುಂಗಾರು ಮಳೆ 2 ಚಿತ್ರದಲ್ಲಿ ಅದಿತಿ ಹಾಗೂ ರಿಷಿ
  • News18
  • Last Updated: July 2, 2019, 6:56 PM IST
  • Share this:
ಶಾನೆ ಟಾಪಾಗ್​ ಅವ್ಳೆ ನಮ್​ ಹುಡುಗಿ ಶಾನೆ ಟಾಪಾಗ್​ ಅವ್ಳೆ.... ಹಾಡಿನಲ್ಲಿ ಪಡ್ಡೆಗಳ ನಿದ್ದೆಗೆಡಿಸಿರುವ ಅದಿತಿ ಸದ್ಯ ಸ್ಯಾಂಡಲ್​ವುಡ್​ನಲ್ಲಿ ಬೇಡಿಕೆಯಲ್ಲಿರುವ ನಟಿ. ಈಗಾಗಲೇ 'ಧೈರ್ಯಂ' ಹಾಗೂ 'ಬಜಾರ್​' ಚಿತ್ರಗಳಲ್ಲಿ ಅಭಿನಯಿಸಿರುವ ಅದಿತಿ ನಿಜಕ್ಕೂ ಸ್ಯಾಂಡಲ್​ವುಡ್​ನಲ್ಲಿ ಸಾಲು ಸಾಲು ಸಿನಿಮಾಗಳನ್ನು ಕೈಯಲ್ಲಿಟ್ಟುಕೊಳ್ಳುವ ಮೂಲಕ ಟಾಪ್​ನಲ್ಲಿದ್ದಾರೆ.

ಯೋಗರಾಜ್​ ಭಟ್​ ಅವರ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ 'ಮುಂಗಾರು ಮಳೆ 2'. ಈ ಚಿತ್ರದಲ್ಲಿ ತಾರೆಯರ ದೊಡ್ಡ ಬಳಗವೇ ಇದ್ದು, ಈ ಅಖಾಡಕ್ಕೆ ಈಗ ನಟಿ ಅದಿತಿ ಎಂಟ್ರಿ ಕೊಟ್ಟಿದ್ದಾರೆ.

Aditi in Bramhachari Movie
'ಬ್ರಹ್ಮಚಾರಿ' ಸಿನಿಮಾದಲ್ಲಿ ಆದಿತಿ ಹಾಗೂ ನೀನಾಸಂ ಸತೀಶ್​


 

ಲೂಸಿಯಾ ನಿರ್ದೇಶಕ ಪವನ್​ ಕುಮಾರ್​, ಆಪರೇಷನ್​ ಅಲಮೇಲಮ್ಮ ಖ್ಯಾತಿಯ ರಿಷಿ ಹಾಗೂ ಶರಣ್​ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ಹಿರಿಯ ನಟ ಅನಾಥ್​ ನಾಗ್​ ಅವರು ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಶರ್ಮಿಳಾ ಮಾಂಡ್ರೆ, ಸೋನಾಲ್​ ಜತೆಗೆ ಈಗ ಅದಿತಿ ಸಹ 'ಮುಂಗಾರು ಮಳೆ 2' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಇವರು ನಾಯಕಿಯಾಗಿ ಪವನ್​ ಹಾಗೂ ರಿಷಿಯಲ್ಲಿ ಯಾರಿಗೆ ಜೊತೆಯಾಗಲಿದ್ದಾರೆ ಅನ್ನೋದು ಇನ್ನೂ ಖಚಿತವಾಗಿಲ್ಲ.

ಇದನ್ನೂ ಓದಿ: Kurukshetra Trailer: ಸದ್ದಿಲ್ಲದೆ ಬಿಡುಗಡೆಯಾಗಲಿದೆ 'ಕುರುಕ್ಷೇತ್ರ' ಸಿನಿಮಾದ ಟ್ರೈಲರ್..!​ಈ ಸಿನಿಮಾಗೆ ಅರ್ಜುನ್ಯ ಜನ್ಯ ಅವರ ಸಂಗೀತಕ್ಕೆ, ಯೋಗರಾಜ್​ ಭಟ್​ ಅವರೇ ಸಾಹಿತ್ಯವಿರಲಿದೆ. ಈಗಾಗಲೇ ಭಟ್ರು ಈ ಚಿತ್ರ ಮೊದಲ ಹಾಡಿಗೆ ಪದಗಳನ್ನು ಬರೆದಾಗಿದೆ. ಅದು ಯಾವಾಗ ಹೊರ ಬರಲಿದೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ನಟಿ ಆದಿತಿ ಸದ್ಯ ಚಿರು ಸರ್ಜಾ ಜತೆ  'ಸಿಂಗ' ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಅವರ ಅಭಿನಯದ ಶಾನೆ ಟಾಪಾಗವ್ಳೆ ಹಾಡು ಪ್ರೇಕ್ಷಕರ ಮನಸ್ಸು ಗೆದಿದೆ. ಉಳಿದಂತೆ 'ಆಪರೇಷನ್​ ನಕ್ಷತ್ರ' 'ಬ್ರಹ್ಮಚಾರಿ' ಹಾಗೂ 'ರಂಗನಾಯಕಿ' ಸಿನಿಮಾಗಳಲ್ಲೂ ಅದಿತಿ ಬ್ಯುಸಿಯಾಗಿದ್ದಾರೆ.

DBoss Darshan: ರಾಬರ್ಟ್​ ಚಿತ್ರೀಕರಣದ ನಡುವೆ ಧರ್ಮಸ್ಥಳಕ್ಕೆ ಭೇಟಿ ನೀಡಿದ ದರ್ಶನ್​
First published:July 2, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading