Aditi Prabhudeva: ಸಂಕ್ರಾಂತಿಗೆ ಭರ್ಜರಿ ಶಾಪಿಂಗ್ ಮಾಡಿದ ಅದಿತಿ ಪ್ರಭುದೇವ, ಏನೇನು ಕೊಂಡಿದ್ದಾರೆ ವಿಡಿಯೋ ನೋಡಿ

ಅಭಿಮಾನಿಗಳಿಗೆ ತನ್ನ ಮಾರ್ನಿಂಗ್ ಡ್ರಿಂಕ್ ಬಗ್ಗೆ ಹೇಳಿದ್ದಾರೆ. ಇದರ ಜೊತೆಗೆ ತಾನು ಹಬ್ಬಕ್ಕೆ ಏನೇನು ಶಾಪಿಂಗ್ ಮಾಡ್ದೆ ಅಂತ ತೋರಿಸಿದ್ದಾರೆ, ಇದರ ವಿಡಿಯೋ ಇಲ್ಲಿದೆ ನೋಡಿ...

ಅದಿತಿ ಪ್ರಭುದೇವ

ಅದಿತಿ ಪ್ರಭುದೇವ

  • Share this:
ಸ್ಯಾಂಡಲ್ ವುಡ್ (Sandalwood)ನ ಜನಪ್ರಿಯ ನಟಿ ಅದಿತಿ ಪ್ರಭುದೇವ್ (Aditi Prabhudeva) ವರ್ಷದ ಮೊದಲ ಹಬ್ಬ ಸಂಕ್ರಾಂತಿ (Sankranti)ಗೆ ಭರ್ಜರಿ ತಯಾರಿ ನಡೆಸಿದ್ದಾರೆ. ಎಂಗೇಜ್ (Engagement) ಆಗಿರೋ ಖುಷಿಯಲ್ಲಿರೋ ಅದಿತಿ ಈ ಬಾರಿ ಹಬ್ಬಕ್ಕೆ ಭರ್ಜರಿಯಾಗಿಯೇ ಶಾಪಿಂಗ್ ಮಾಡಿದ್ದಾರೆ. ರಾಜ್ಯದಲ್ಲಿ ಕೊರೊನಾ ಹೆಚ್ಚಾಗಿರೋದಕ್ಕೆ ಅದಿತಿ ಆನ್ ಲೈನ್ ಶಾಪಿಂಗ್ (Online shopping) ಮೊರೆ ಹೋಗಿದ್ದಾರೆ. Myntra, Flipkart, Amazon ವೆಬ್ ಸೈಟ್ ಗಳನ್ನ ಜಾಲಾಡಿ ಬರ್ತ್ ಡೇ (Birthday)ಗೆ ಬ್ಯುಟಿಫುಲ್ ಡ್ರೆಸ್ ಖರೀದಿಸಿದ್ದಾರೆ. ಪಿಂಕ್ ಅಂಡ್ ಅರೆಂಜ್ ಬಣ್ಣದ ಅನಾರ್ಕಲಿ ಡ್ರೆಸ್ ನನ್ನು ಹುಟ್ಟು ಹಬ್ಬಕ್ಕೆ ಶಾಪಿಂಗ್ ಮಾಡಿದ್ದಾರೆ. ಇನ್ನು ಈ ಬಗ್ಗೆ ಮಾತಾಡಿದ ಅದಿತಿ ಯಾವ ವರ್ಷ ಕೂಡ ಬರ್ತಡೇಗೆ ಅಂತ ಹೊಸ ಬಟ್ಟೆ ಖರೀದಿಸಿಲ್ಲ. ಇದೆ ಮೊದಲು ಅಂತ ಹೇಳಿದ್ದಾರೆ. ಡ್ರೆಸ್ ಗೆ ಮ್ಯಾಚ್ ಆಗೋ ಬೆಲ್ಟ್ (Belt) ಕೂಡ ಆನ್ ಲೈನ್ ನಲ್ಲೇ ಶಾಪ್ ಮಾಡಿದ್ದಾರೆ.

ಸೀರೆಯಲ್ಲಿ ಅದಿತಿ ಮಿಂಚಿಂಗ್

ಶ್ಯಾನೆ ಟಾಪಾಗಿರೋ ನಮ್ಮ ಅದಿತಿಗೆ ಸೀರೆ ಸಖತ್ ಆಗಿಯೇ ಸೂಟ್ ಆಗುತ್ತೆ. ಹಾಗಾಗಿ ಅದಿತಿ ಹಬ್ಬಕ್ಕೆಂದು ಗ್ರೀನ್ ಕಲರ್ ಸೀರೆಯನ್ನು ಸೆಲೆಕ್ಟ್ ಮಾಡಿದ್ದಾರೆ. ಸಿಂಪಲ್ ಅಂಡ್ ಸೂಪರ್ ಆಗಿರೋ ಈ ಸೀರೆ ಅದಿತಿಗೆ ಸಖತ್ ಇಷ್ಟ ಆಗಿದೆಯಂತೆ. ಹಬ್ಬಕ್ಕೆ ತಂದ ಸೀರೆಯನ್ನೇ ಟಿವಿ ಕಾರ್ಯಕ್ರಮದ ಸಂದರ್ಶನಕ್ಕೆ ಹಾಕಿಕೊಂಡು ಫೋಟೋಶೂಟ್ ಕೂಡ ಮಾಡಿಸಿಕೊಂಡಿದ್ದಾರೆ. ಇಷ್ಟೆ ಅಲ್ಲದೇ ತನ್ನ ಸ್ನೇಹಿತೆ ಹುಟ್ಟುಹಬ್ಬಕ್ಕೆ ಗಿಫ್ಟ್ ಕೊಡಲು ಕುರ್ತಾ ಸೆಟ್ ಖರೀದಿಸಿದ್ದಾರೆ ಅದಿತಿ.

ಇದನ್ನೂ ಓದಿ: Aditi Prabhudeva Birthday: ಹ್ಯಾಪಿ ಬರ್ತ್​ಡೇ ಅದಿತಿ.. ಶಾನೆ ಟಾಪಾಗವಳೆ.. ನಮ್ಮ ಕನ್ನಡದ ಹುಡುಗಿ!

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿರೋ ಅದಿತಿ ಪ್ರಭುದೇವ, ಆಗಾಗೆ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡ್ತಿರ್ತಾರೆ. ಆ ಮೂಲಕ ಹೆಲ್ತ್ ಹಾಗೂ ಬ್ಯೂಟಿ ಟಿಪ್ಸ್ ಗಳನ್ನ ನೀಡ್ತಾರೆ. ಇವತ್ತು ಸಹ ಅಭಿಮಾನಿಗಳಿಗೆ ತನ್ನ ಮಾರ್ನಿಂಗ್ ಡ್ರಿಂಕ್ ಬಗ್ಗೆ ಹೇಳಿದ್ದಾರೆ. ಉಗುರುಬೆಚ್ಚಗಿನ ನೀರಿಗೆ ನಿಂಬೆ ರಸ ಬೆರಸಿ ಕುಡಿದ್ರೆ ಇಡೀ ದಿನ ಆಕ್ಟೀವ್ ಆಗಿರ್ತಿರಾ ಅಂತ ಅದಿತಿ ಪ್ರಭುದೇವ ಹೆಲ್ತ್ ಟಿಪ್ಸ್ ಸಹ ನೀಡಿದ್ದಾರೆ. ಇದರ ವಿಡಿಯೋ ಇಲ್ಲಿದೆ ನೋಡಿ...ಕನ್ನಡಿಗರ ಮನ ಗೆದ್ದಿರೋ ದಾವಣಗೆರೆಯ ಸುಂದರಿ ಅದಿತಿ ಪ್ರಭುದೇವ (Aditi Prabhudeva) ಕಿರುತೆರೆಯ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ರು. ಗುಂಡ್ಯಾನ್ ಹೆಂಡ್ತಿ ಧಾರಾವಾಹಿ ಮೂಲಕ ಪ್ರೇಕ್ಷಕರಿಗೆ ಪರಿಚಯವಾದ್ರು. ಬಳಿಕ 2017ರಲ್ಲಿ ಧೈರ್ಯಂ ಚಿತ್ರದಲ್ಲಿ ಅಭಿನಯಿಸಿ ಅಭಿಮಾನಿಗಳ ಮನ ಗೆದ್ದಿದ್ರು. ಚಿತ್ರರಂಗಕ್ಕೆ ಕಾಲಿಟ್ಟ ಬಳಿಕವು ನಾಗಕನ್ನಿಕೆ ಧಾರಾವಾಹಿಯಲ್ಲಿ ನಟಿಸಿ ಕಿರುತರೆ ಅಭಿಮಾನಿಗಳ ಮನದಲ್ಲಿ ನಾಗಕನ್ನಿಕೆಯಾಗಿ ಉಳಿದಿದ್ದಾರೆ.

ಸುನಿ ನಿರ್ದೇಶನದ ಬಜಾರ್ ನಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು. ಬಳಿಕ ಚಿರುಸರ್ಜಾ ಜೊತೆ ಮಾಡಿದ ಸಿಂಗಂ ಚಿತ್ರ ಅದಿತಿಗೆ ಗ್ಯ್ರಾಂಡ್ ಸಕ್ಸಸ್ ತಂದು ಕೊಡ್ತು. ‘ಶ್ಯಾನೆ ಟಾಪಗವ್ಳೆ’ ಸಾಂಗ್ ಸೂಪರ್ ಹಿಟ್ ಆಗ್ತಿದ್ದಂತೆ ಅದಿತಿ ಕೂಡ ಸ್ಯಾಂಡಲ್ ವುಡ್ ನಲ್ಲಿ ಟಾಪ್ ನಟಿ ಆಗಿದ್ದಾರೆ.

ಅದಿತಿ ಕೈಯಲ್ಲಿ ಹಲವು ಚಿತ್ರ

ಅದಿತಿ ನಟಿಸಿದ ರಂಗನಾಯಕಿ ಚಿತ್ರಕ್ಕೆ ಹಲವರಿಂದ ಪ್ರಶಂಸೆ ಕೇಳಿ ಬಂದಿದೆ. ಇನ್ನು ನಿನಾಸಂ ಜೊತೆ ಬ್ರಹ್ಮಚಾರಿ ಚಿತ್ರದಲ್ಲಿ ಅದಿತಿ ನಟನೆಗೂ ಪ್ರೇಕ್ಷಕರು ಫಿದಾ ಆಗಿದ್ದಾರೆ. ‘ಒಂಭತ್ತನೇ ದಿಕ್ಕು’ ಹಾಗೂ ‘ದಿಲ್ ಮಾರೋ’ ಚಿತ್ರಕ್ಕೆ ಅದಿತಿಯೇ ನಾಯಕಿಯಾಗಿದ್ದಾರೆ. ಅವ್ರ ಮುಂದಿನ ಚಿತ್ರ ತೋತಾಪುರಿ ಮೇಲೆ ಭಾರೀ ನಿರೀಕ್ಷೆ ಇದೆ.

ಎಂಗೇಜ್ ಆದ್ರು ಅದಿತಿ ಪ್ರಭುದೇವ

ಚಿಕ್ಕಮಗಳೂರಿನ ಕಾಫಿ ತೋಟದ ಮಾಲೀಕ ಯಶಸ್ ಜೊತೆ ಅದಿತಿ ಎಂಗೇಜ್ ಮೆಂಟ್ ಆಗಿದೆ. ಸೋಶಿಯಲ್ ಮೀಡಿಯದಲ್ಲಿ ಫೋಟೋ ಹಾಕಿ ಅವ್ರೇ ಅಧಿಕೃತವಾಗಿ ಹೇಳಿಕೊಂಡಿದ್ದಾರೆ. ಹೀಗಾಗಿ ಈ ಬಾರಿಯ ಹಬ್ಬಗಳೆಲ್ಲ ಅದಿತಿಗೆ ಫುಲ್ ಸ್ಪೆಷಲ್.
Published by:Soumya KN
First published: