• ಹೋಂ
 • »
 • ನ್ಯೂಸ್
 • »
 • ಮನರಂಜನೆ
 • »
 • The Kerala Story: ವಿವಾದ ಸುಳಿಗೆ ಸಿಲುಕಿದ 'ದಿ ಕೇರಳ ಸ್ಟೋರಿ' ಸಿನಿಮಾ ಹೇಗಿದೆ? ಹೆಣ್ಣು ಮಕ್ಕಳಿಗೆ ಹೇಳುತ್ತಾ ಜೀವನ ಪಾಠ?

The Kerala Story: ವಿವಾದ ಸುಳಿಗೆ ಸಿಲುಕಿದ 'ದಿ ಕೇರಳ ಸ್ಟೋರಿ' ಸಿನಿಮಾ ಹೇಗಿದೆ? ಹೆಣ್ಣು ಮಕ್ಕಳಿಗೆ ಹೇಳುತ್ತಾ ಜೀವನ ಪಾಠ?

ದಿ ಕೇರಳ ಸ್ಟೋರಿ

ದಿ ಕೇರಳ ಸ್ಟೋರಿ

ಕಾಶ್ಮೀರಿ ಫೈಲ್ ಚಿತ್ರದ ಹಾದಿಯಲ್ಲಿಯೇ ಈ ಚಿತ್ರ ದಾಖಲೆ ಬರೆಯಲಿದೆ ಅಂತಿದ್ಧಾರೆ ಸಿನಿ ಪಂಡಿತರು.. ಹಾಗಾದ್ರೆ ರಿಲೀಸ್ ಗೂ ಮುನ್ನವೇ ವಿವಾದ ಸೃಷ್ಟಿಸಿದ ದಿ ಕೇರಳ ಸ್ಟೋರಿಸ್, ಸಿನಿಮಾ ಹೇಗಿದೆ.. ಅದರ  ವಿಮರ್ಶೆ ಇಲ್ಲಿದೆ

 • News18 Kannada
 • 2-MIN READ
 • Last Updated :
 • Karnataka, India
 • Share this:

ಕರ್ನಾಟಕದಲ್ಲಿ ಎಲೆಕ್ಷನ್ (Karnataka Election) ಬಿಸಿ ಜೋರಾಗಿದೆ .ಇತ್ತ ಸ್ಟಾರ್ ನಟರೆಲ್ಲರೂ  ಪ್ರಚಾರದಲ್ಲಿ ಬುಸಿಯಾಗಿದ್ರೆ ಥಿಯೇಟರ್ ಗಳು ಬಿಕೋ ಅಂತಿವೆ. ಈ ವಾರ ಯಾವುದೇ ಕನ್ನಡ ಸಿನಿಮಾಗಳು ಬಿಡುಗಡೆಯಾಗಿಲ್ಲ. ಹೀಗಿರುವಾಗಲೇ ಬಾಲಿವುಡ್​ ಸಿನಿಮಾವೊಂದು ಕನ್ನಡ ನೆಲದಲ್ಲೂ ಸಂಚಲನ ಸೃಷ್ಟಿಸ್ತಾ ಇದೆ. ಕೇರಳದ (Kerala) ಕತೆಯೊಂದು ಥಿಯೇಟರ್​ಗೆ ಲಗ್ಗೆ ಇಟ್ಟಿದೆ. ಲವ್ ಜಿಹಾದ್, ಹಿಜಾಬ್, ಐಸಿಸ್ ಸಂಘಟನೆಯ ಕರಾಳ ಮುಖವನ್ನ ಬಿಚ್ಚಿಟ್ಟಿರೋ ಈ ಸಿನಿಮಾ ಎಲೆಕ್ಷನ್ ಟೈಮಲ್ಲಿ ರಿಲೀಸ್ ಆಗಿರೋದು ಜನರ ಮೇಲೆ ಯಾವ ಮಟ್ಟಿಗೆ ಪರಿಣಾಮ ಬೀರಲಿದೆ ಎಂಬ ಕುತೂಹಲ ಇದೆ. ಕಾಶ್ಮೀರಿ ಫೈಲ್ಸ್​ (Kashmir Files) ಚಿತ್ರದ ಹಾದಿಯಲ್ಲಿಯೇ ಈ ಚಿತ್ರ ದಾಖಲೆ ಬರೆಯಲಿದೆ ಅಂತಿದ್ಧಾರೆ ಸಿನಿ ಪಂಡಿತರು. ಹಾಗಾದ್ರೆ ರಿಲೀಸ್ ಗೂ ಮುನ್ನವೇ ವಿವಾದ ಸೃಷ್ಟಿಸಿದ ದಿ ಕೇರಳ ಸ್ಟೋರಿಸ್ (The Kerala Story), ಸಿನಿಮಾ ಹೇಗಿದೆ.. ಅದರ  ವಿಮರ್ಶೆ ಇಲ್ಲಿದೆ.


ನೈಜ ಘಟನೆಯೇ ದಿ ಕೇರಳ ಸ್ಟೋರಿನಾ?


ದಿ ಕೇರಳ ಸ್ಟೋರಿ ಇದು ಕಾಡುವ ಸ್ಟೋರಿ. ನೈಜ ಘಟನೆಯಾಧಾರಿತ ಸಿನಿಮಾ ಕೇರಳ ಸ್ಟೋರಿ ನಾಯಕಿಯ ವಿಚಾರಣೆಯ ದೃಶ್ಯದಿಂದ ಕಥೆ ಓಪನ್ ಆಗುತ್ತೆ. ಸಹಜ ಸುಂದರಿಯಾಗಿ  ಅದಾ ಶರ್ಮಾ ಕಾಣಿಸಿಕೊಳ್ತಾರೆ. ಐಸಿಸ್ ನ ಕಪಿಮುಷ್ಟಿಯಲ್ಲಿ ಸಿಲುಕಿ ಹೊರ ಬರಲಾರದೆ ಇವತ್ತಿಗೂ ನರಳುತ್ತಿರುವ ಕೇರಳದಲ್ಲಿಯೇ ಅತಿ ಹೆಚ್ಚಾಗಿ ಲವ್ ಜಿಹಾದ್ ಗೆ ಒಳಪಟ್ಟಿರುವ ನಿಜವಾದ ಘಟನೆಗಳ  ಮೇಲೆ ಚಿತ್ರ ಸಾಗುತ್ತೆ.


Bollywood The Kerala Story Movie Producer Vipul Amrutlal Shah Share Special Video
ದಿ ಕೇರಳ ಸ್ಟೋರಿ


ಕಳೆದ 10 ವರ್ಷದಲ್ಲಿ 30000 ಸಾವಿರಕ್ಕೂ ಹೆಚ್ಚು ಹೆಣ್ಮಕ್ಕಳ ಲವ್ ಜಿಹಾದ್ ಪ್ರಕರಣಗಳಾದ್ರೂ ಸಹ ಇದುವರೆಗೂ ಅದನ್ನ ತಡೆಯೋಕೆ ಯಾಕೆ ಆಗ್ತಿಲ್ಲ ಅನ್ನೋ ಉತ್ತರವೇ ಇಲ್ಲದ ಪ್ರಶ್ನೆಯೇ ದಿ ಕೇರಳ ಸ್ಟೋರಿ ಮುಗ್ದ ಯುವತಿಯ ಪಾತ್ರದಲ್ಲಿ ಅದಾ ಶರ್ಮ ಚಿತ್ರದ ಪಾತ್ರವ ರ್ಗದ ಬಗ್ಗೆ ಹೇಳೋದಾದ್ರೆ ಶಾಲಿನಿ ಉನ್ನಿಕೃಷ್ಣನ್ ಪಾತ್ರದಲ್ಲಿ ಅದಾ ಶರ್ಮ ಪಾತ್ರವೇ ಆಗಿ ಹೋಗಿದ್ದಾರೆ.


ಕೆಲವೊಂದು ಸನ್ನಿವೇಶದಲ್ಲಿ ಕಣ್ಣೀರು ತರಿಸುತ್ತಾರೆ. ಮೋಸ ಹೋದ ಹುಡುಗಿಯಾಗಿ, ಮದುವೆಗೆ ಮುಂಚೆ ಗರ್ಭಿಣಿಯಾಗೋ ನತದೃಷ್ಟ ಯುವತಿಯ ಪಾತ್ರದಲ್ಲಿ ನೈಜ ಅಭಿನಯದಿಂದ ಇಷ್ಟವಾಗ್ತಾರೆ. ಕ್ಲೈಮಾಕ್ಸ್ ದೃಶ್ಯವಂತೂ ಎಂತಹ ಕಲ್ಲು ಹೃದಯದವರನ್ನ ಸಹ ಕರಗಿಸುವಂತಿದೆ. ಆ ಮಟ್ಟಿಗೆ ತೀವ್ರತೆಯಿಂದ ಅಭಿನಯಿಸಿದ್ದಾರೆ ಅದಾ ಶರ್ಮ.


ಹಿಜಾಬ್ , ಲವ್ ಜಿಹಾದ್ ಐಸಿಸಿ ಕಪಿಮುಷ್ಟಿಯಲ್ಲಿ ಸಿಲುಕಿದ ಕೇರಳ  ಯುವತಿಯರ ಗೋಳಿಗೆ ನ್ಯಾಯ ಸಿಕ್ತಾ?


ನರ್ಸಿಂಗ್ ಓದಲು ನ್ಯಾಷನಲ್ ನರ್ಸಿಂಗ್ ಕಾಲೇಜಿಗೆ ಬಂದ ಶಾಲಿನಿ ಉನ್ನಿಕೃಷ್ಣನ್, ಗೀತಾಂಜಲಿ ನೀಮಾ ಮ್ಯಾಥ್ಯೂ ತಮ್ಮ ಹಾಸ್ಟೆಲ್ ಮೇಟ್ ಆಸಿಫಾಳ ಕಪಿಮುಷ್ಠಿಗೆ ಸಿಲುಕಿ ಐಸಿಸ್ ಉಗ್ರ ಸಂಘಟನೆಯ ನಂಟಿಗೆ ಹೇಗೆ ಸಿಲುಕ್ತಾರೆ? ಆ ನಂತರ ಐಸಿಸ್ ಕಪಿಮುಷ್ಟಿಯಿಂದ ಹೊರ ಬರಲು ಮಾಡುವ ಹೋರಾಟ ಎಂತದ್ದು, ಆ ಹಾದಿಯಲ್ಲಿ ಅವ್ರು ಅನುಭವಿಸೋ ನರಕ ಯಾತನೆ ಎಂತದ್ದು ಎಂಬುದನ್ನ ಸಿನಿಮಾದಲ್ಲಿ ಅನಾವರಣಗೊಳಿಸಲಾಗಿದೆ.
ತುಂಬಾ ರಿಯಲಿಸ್ಟಿಕ್ ಆಗಿ ಸಿನಿಮಾ ಮೂಡಿ ಬಂದಿದ್ದು, ಕೆಲವು ಕಡೆ ನೋಡುಗರನ್ನ ಕೆರಳಿಸುತ್ತೆ. ಹಿಂಗೆಲ್ಲಾ ಆಗಿದ್ಯಾ ಎಂಬ ಆಕ್ರೋಶ ಹುಟ್ಟಿಸುವಷ್ಟು ಹಸಿ ಹಸಿಯಾಗಿ ದೃಶ್ಯವನ್ನ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಸುದಿಪ್ಟೋ ಸೇನ್, ಅದ್ಬುತವಾದ ನಿರೂಪಣೆಯಲ್ಲಿ ಗೆದ್ದ ನಿರ್ದೇಶಕ ಆರಂಭದಲ್ಲಿ ಲವಲವಿಕೆಯಿಂದ ಪ್ರೇಕ್ಷಕರನ್ನ ಹಿಡಿದಿಟ್ಟು ಕೂರಿಸುವ ಚಿತ್ರ ಆನಂತರ ಸೂಕ್ಷ್ಮ ವಿಚಾರಗಳಿಂದ ನೋಡುಗರನ್ನ ಎಚ್ಚರಿಸೋ ಕೆಲಸ ಮಾಡುತ್ತೆ. ಚಿಂತನೆಗೆ ಹೆಚ್ಚುವಂತೆ ದೃಶ್ಯಗಳನ್ನ ಹೆಣೆಯಲಾಗಿದೆ. ಸರಳ ನಿರೂಪಣೆಯ ಮೂಲಕ ನಿರ್ದೇಶಕ ಸುದೀಪ್ತೋ ಸೇನ್ ಗೆದ್ದಿದ್ದಾರೆ.


ಇದನ್ನೂ ಓದಿ: The Kerala Story: ರೂಲಿಂಗ್ ಪಾರ್ಟಿಯಿಂದ ಸಪೋರ್ಟ್ ಇಲ್ಲ! ಪ್ರತಿಭಟನೆ ಭಯ, ಸಿನಿಮಾ ರಿಲೀಸ್​​ಗೆ ಹಿಂದೇಟು


ಹೆಣ್ಣು ಮಕ್ಕಳಿಗೆ ಜೀವನದ ಪಾಠ


ಹೆಣ್ಣು ಮಕ್ಕಳಿಗೆ ಎಚ್ಚರಿಕೆಯ ಗಂಟೆ ಈ ಸಿನಿಮಾ ಯಾರದ್ದೋ ಧಾರ್ಮಿಕ ಭಾವನೆಗೆ ಮೋಸ ಹೋಗಿ ಪ್ರೀತಿಯ ಬಲೆಗೆ ಬಿದ್ದು ಮೋಸ ಹೋಗಿ ಹೊರಗಡೆ ಬರಲಾರದ ಸ್ಥಿತಿಯಲ್ಲಿರುವ ಎಷ್ಟೋ ಹೆಣ್ಣು ಮಕ್ಕಳ ಕತೆ ಇದಾಗಿದೆ. ಒಬ್ಬರ ಭಾವನೆಗಳು ಇನ್ನೊಬ್ಬರಿಗೆ ಹೇಗೆ ಅಸ್ತ್ರವಾಗುತ್ತವೆ ಅನ್ನೋ ಸೂಕ್ಷ್ಮ ವಿಚಾರವನ್ನ ಅರಿತುಕೊಳ್ಳುವ ಅವಶ್ಯಕತೆ ಇದೆ. ಒಟ್ಟಾರೆ ಇದೊಂದು ಸಿನಿಮಾ ಅನ್ನೋದಕ್ಕಿಂತ ಹೆಣ್ಣು ಮಕ್ಕಳಿಗೆ ಜೀವನದ ಪಾಠವಾಗೋದ್ರಲ್ಲಿ ಸಂಶಯವೇ ಇಲ್ಲ

top videos


  ವರದಿ: ಗೀತಾಶ್ರೀ ಹಾಸನ್, ನ್ಯೂಸ್ 18 ಕನ್ನಡ

  First published: