Bollywood Actors: ಬಾಲಿವುಡ್​ನಲ್ಲಿ ಯಶಸ್ಸು ಕಾಣಲು ಹೆಸರನ್ನೇ ಬದಲಾಯಿಸಿಕೊಂಡ ನಟರಿವರು, ನಂತರ ಕುದುರಿದ್ದು ಅದೃಷ್ಟ!

ಹಲವಾರು ತಾರೆಗಳು ತಮ್ಮ ನಟನೆಯಿಂದ ಮತ್ತು ಅದೃಷ್ಟದಿಂದ ಬಹುಬೇಗನೆ ಯಶಸ್ಸನ್ನು ಸಾಧಿಸಿದರೆ, ಇನ್ನೂ ಕೆಲವರಿಗೆ ಆ ಯಶಸ್ಸು ಎನ್ನುವುದು ದೂರದ ಬೆಟ್ಟದಂತೆ ಆಗಿರುತ್ತದೆ. ಅದಕ್ಕಾಗಿ ತಮ್ಮ ಹೆಸರನ್ನೇ ಬದಲಿಸಿಕೊಂಡು ಯಶಸ್ಸು ಕಂಡ ಬಾಲಿವುಡ್ ನಟರಿದ್ದಾರೆ. ಯಾರ್ಯಾರು ಅನ್ನೋದನ್ನು ನೋಡೋಣ..

ಹೆಸರು ಬದಲಾಯಿಸಿಕೊಂಡ ನಟರು

ಹೆಸರು ಬದಲಾಯಿಸಿಕೊಂಡ ನಟರು

  • Share this:
ಕೆಲವರು ತಮ್ಮ ವೃತ್ತಿ ಜೀವನದಲ್ಲಿ ಅಷ್ಟೊಂದು ಯಶಸ್ಸು (Success) ಪಡೆಯದೇ ಇದ್ದಾಗ ತಮ್ಮ ಹೆಸರುಗಳನ್ನು ಬದಲಾಯಿಸಿಕೊಳ್ಳುವುದನ್ನು ನಾವು ನೋಡಿರುತ್ತೇವೆ. ಇದು ಬಾಲಿವುಡ್ ನಟರಿಗೆ (Bollywood Actors) ಹೆಚ್ಚಾಗಿ ಅನ್ವಯಿಸುವ ಹಾಗೆ ಇದೆ. ಯಾಕೆಂದರೆ ಹಲವಾರು ಬಾಲಿವುಡ್ ನಟರು ಯಶಸ್ಸು ಮತ್ತು ಖ್ಯಾತಿಯನ್ನು ಪಡೆಯಲು ತಮ್ಮ ಮೂಲ ಹೆಸರುಗಳನ್ನು ಬದಲಾಯಿಸಿಕೊಂಡಿದ್ದಾರೆ. ಹೌದು.. ಹಲವಾರು ತಾರೆಗಳು ತಮ್ಮ ನಟನೆಯಿಂದ (Acting) ಮತ್ತು ಅದೃಷ್ಟದಿಂದ ಬಹುಬೇಗನೆ ಯಶಸ್ಸನ್ನು ಸಾಧಿಸಿದರೆ, ಇನ್ನೂ ಕೆಲವರಿಗೆ ಆ ಯಶಸ್ಸು ಎನ್ನುವುದು ದೂರದ ಬೆಟ್ಟದಂತೆ ಆಗಿರುತ್ತದೆ. ಆದ್ದರಿಂದ ಅನೇಕ ಜನ ನಟರು ನಟನಾ ಉದ್ಯಮದಲ್ಲಿ ತಮ್ಮ ಅದೃಷ್ಟವನ್ನು (Luck) ಪರೀಕ್ಷಿಸಲು ತಮ್ಮ ಮೂಲ ಹೆಸರುಗಳನ್ನೇ ಬದಲಾಯಿಸಿಕೊಂಡಿರುವುದನ್ನು ನಾವು ನೋಡಬಹುದು.

ನಟ ಅಜಯ್ ದೇವಗನ್, ಸೈಫ್ ಅಲಿ ಖಾನ್, ಟೈಗರ್ ಶ್ರಾಫ್, ಅಮೀರ್ ಖಾನ್ ಮತ್ತು ಹೆಚ್ಚಿನ ನಟರು ತಮ್ಮ ವೃತ್ತಿಪರ ವೃತ್ತಿ ಜೀವನಕ್ಕಾಗಿ ಹೊಸ ಹೆಸರುಗಳನ್ನು ಇರಿಸಿಕೊಂಡಿದ್ದಾರೆ ಮತ್ತು ಅವರು ಹಾಗೆ ಮಾಡಿದ ನಂತರ ಅವರಿಗೆ ಬಾಲಿವುಡ್ ನಲ್ಲಿ ಭಾರಿ ಯಶಸ್ಸು ಸಿಕ್ಕಿರುವುದನ್ನು ನಾವು ನೋಡಬಹುದು.

ಅಕ್ಷಯ್ ಕುಮಾರ್
ನಟ ಅಕ್ಷಯ್ ಕುಮಾರ್ ಅವರ ನಿಜವಾದ ಹೆಸರು ರಾಜೀವ್ ಹರಿ ಓಂ ಭಾಟಿಯಾ. ಆದರೆ ಅವರು ತಮ್ಮ ಹೆಸರನ್ನು ಬದಲಾಯಿಸಿಕೊಂಡರು ಮತ್ತು ಬಾಲಿವುಡ್ ನಲ್ಲಿ ಅಪಾರ ಖ್ಯಾತಿಯನ್ನು ಗಳಿಸಿದರು.

ಸೈಫ್ ಅಲಿ ಖಾನ್
ನಟ ಸೈಫ್ ಅಲಿ ಖಾನ್ ಅವರ ನಿಜವಾದ ಹೆಸರು ಸಾಜಿದ್ ಅಲಿ ಖಾನ್. ಆದರೆ ನಟ ತನ್ನ ಕೂಲ್ ಇಮೇಜ್ ಗೆ ತಕ್ಕಂತೆ ಸೈಫ್ ಎಂಬ ಹೆಸರನ್ನು ಸೇರಿಸಿಕೊಂಡಿದ್ದಾರೆ.

ಅಜಯ್ ದೇವಗನ್
ನಟ ಅಜಯ್ ದೇವಗನ್ ಅವರನ್ನು ಮೊದಲು ವಿಶಾಲ್ ದೇವಗನ್ ಎಂದು ಕರೆಯುತ್ತಿದ್ದರು. ಆದರೆ ಈ ನಟ ಚಿತ್ರೋದ್ಯಮಕ್ಕೆ ಕಾಲಿಟ್ಟ ನಂತರ ತನ್ನ ಹೆಸರನ್ನು ಬದಲಾಯಿಸಿಕೊಂಡರು. ಇಷ್ಟೇ ಅಲ್ಲದೆ ಅವರ ಸರ್ ನೇಮ್ ನಿಂದ 'ಎ' ಎಂಬ ಅಕ್ಷರವನ್ನು ಸಹ ತೆಗೆದು ಹಾಕಿದರು.

ಟೈಗರ್ ಶ್ರಾಫ್
‘ಹೀರೋಪಂತಿ 2’ ಚಿತ್ರದ ನಟ ಟೈಗರ್ ಶ್ರಾಫ್ ಅವರ ಮೂಲ ಹೆಸರು ಜೈ ಹೇಮಂತ್ ಶ್ರಾಫ್. ಆದರೆ ನಟ ಅದನ್ನು ಬಾಲಿವುಡ್ ಗೆ ಬಂದ ನಂತರದಲ್ಲಿ ಬದಲಾಯಿಸಿಕೊಂಡರು. ಟೈಗರ್ ಎಂಬ ಹೆಸರು ಅವರಿಗೆ ಚೆನ್ನಾಗಿ ಹೊಂದಿಕೆಯಾಗುತ್ತದೆ.

ಆಯುಷ್ಮಾನ್ ಖುರಾನಾ
‘ಬಧಾಯಿ ಹೋ’ ಚಿತ್ರದ ನಟ ಆಯುಷ್ಮಾನ್ ಖುರಾನಾ ಅವರ ಮೂಲ ಹೆಸರು ನಿಶಾಂತ್ ಖುರಾನಾ ಎಂದು. ಆದರೆ ಅವರು ನಟನೆಗೆ ಬಂದ ನಂತರ ತಮ್ಮ ಹೆಸರನ್ನು ಬದಲಾಯಿಸಿಕೊಂಡರು. ನಟ ಈಗ ತನ್ನ ಅಭಿನಯದಿಂದ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ: Avatar: ಚಿತ್ರಮಂದಿರಗಳಲ್ಲಿ ಮತ್ತೆ ಅವತಾರ್ ದರ್ಶನ! ಚಿತ್ರದ ಹೊಸ ಟ್ರೇಲರ್ ಹೇಗಿದೆ?

ಅನ್ನು ಕಪೂರ್
ನಟ ಮತ್ತು ಟಿವಿ ನಿರೂಪಕ ಅನ್ನು ಕಪೂರ್ ಅವರ ನಿಜವಾದ ಹೆಸರು ಪುಕಾರ್.  ಅವರ ಹೊಸ ಹೆಸರು ಉದ್ಯಮಕ್ಕೆ ಬಂದ ನಂತರ ಬಂದಿದ್ದು ಎಂದು ಹೇಳಬಹುದು.

ಬಾಬಿ ಡಿಯೋಲ್
ನಟ ಸನ್ನಿ ಡಿಯೋಲ್ ಅವರ ಸಹೋದರ ಬಾಬಿ ಡಿಯೋಲ್ ಕೂಡ ತಮ್ಮ ಹೆಸರನ್ನು ವಿಜಯ್ ಸಿಂಗ್ ಡಿಯೋಲ್ ನಿಂದ ಬದಲಾಯಿಸಿಕೊಂಡಿದ್ದಾರೆ.

ಸನ್ನಿ ಡಿಯೋಲ್
ಬಾಲಿವುಡ್ ನಟ ಸನ್ನಿ ಡಿಯೋಲ್ ಅವರ ಮೊದಲ ಹೆಸರು ಅಜಯ್ ಸಿಂಗ್ ಡಿಯೋಲ್. ಆದರೆ ಅವರು ಅದನ್ನು ನಂತರ ಬದಲಾಯಿಸಿಕೊಂಡರು.

ಜಾಕಿ ಶ್ರಾಫ್
ಟೈಗರ್ ಶ್ರಾಫ್ ಅವರ ತಂದೆ ಜಾಕಿ ಶ್ರಾಫ್ ಅವರು ಜೈ ಕಿಶನ್ ಕಾಕುಭಾಯ್ ಶ್ರಾಫ್ ಆಗಿ ಜನಿಸಿದ್ದರು. ಆದರೆ ಅವರು ಚಿತ್ರೋದ್ಯಮಕ್ಕೆ ಕಾಲಿಟ್ಟ ನಂತರ ಜಾಕಿ ಶ್ರಾಫ್ ಆಗಿ ಅವರ ಹೆಸರನ್ನು ಬದಲಾಯಿಸಿಕೊಂಡರು.

ಚಂಕಿ ಪಾಂಡೆ
ನಟ ಚಂಕಿ ಪಾಂಡೆ ಅವರ ಮೊದಲ ಹೆಸರು ಸುಯಶ್ ಪಾಂಡೆ ಆಗಿತ್ತು ಎಂಬುದು ಬಹುತೇಕ ಅಭಿಮಾನಿಗಳಿಗೆ ತಿಳಿದಿರಲಿಕ್ಕಿಲ್ಲ.

ವಿವೇಕ್ ಒಬೆರಾಯ್
ಬಾಲಿವುಡ್ ನ ಹಿರಿಯ ನಟ ಸುರೇಶ್ ಒಬೆರಾಯ್ ಅವರ ಮಗ ವಿವೇಕ್ ಒಬೆರಾಯ್ ಅವರ ಮೊದಲ ಹೆಸರು ವಿವೇಕಾನಂದ ಒಬೆರಾಯ್ ಅಂತ. ಆದರೆ ಅವರು ತಮ್ಮ ಹೆಸರನ್ನು ಚಿಕ್ಕದಾಗಿ ಮಾಡಿಕೊಂಡು ವಿವೇಕ್ ಮಾಡಿಕೊಂಡರು.

ಅಶೋಕ್ ಕುಮಾರ್
ದಿವಂಗತ ಲೆಜೆಂಡರಿ ಸ್ಟಾರ್ ಅಶೋಕ್ ಕುಮಾರ್ ಕುಮುದ್ ಲಾಲ್ ಗಂಗೂಲಿಯಾಗಿ ಜನಿಸಿದರು. ಅವರು ನಟ ಮತ್ತು ಗಾಯಕ ಕಿಶೋರ್ ಕುಮಾರ್ ಅವರ ಹಿರಿಯ ಸಹೋದರರಾಗಿದ್ದರು.

ಇದನ್ನೂ ಓದಿ: Akshay Kumar-Twinkle Khanna: ಮಕ್ಕಳ ಶಿಕ್ಷಣಕ್ಕಾಗಿ ಗಂಡನ ಬಳಿ ದುಡ್ಡು ಕೇಳಲ್ವಂತೆ ನಟಿ ಟ್ವಿಂಕಲ್!

ನಾನಾ ಪಾಟೇಕರ್
ನಾನಾ ಪಾಟೇಕರ್ ಅವರು ಹಿಂದಿ ಚಿತ್ರೋದ್ಯಮದಲ್ಲಿ ಒಬ್ಬ ಯಶಸ್ವಿ ನಟ, ಬರಹಗಾರ ಮತ್ತು ನಿರ್ದೇಶಕರಾಗಿದ್ದಾರೆ. ಅವರು 1951 ರಲ್ಲಿ ಜನಿಸಿದ್ದು, ಅವರ ಮೊದಲ ಹೆಸರು ವಿಶ್ವನಾಥ್ ಪಾಟೇಕರ್ ಆಗಿತ್ತು.
Published by:Ashwini Prabhu
First published: