• Home
  • »
  • News
  • »
  • entertainment
  • »
  • Karnataka Ratna for Puneeth Rajkumar: ಜೂನಿಯರ್‌ ಎನ್‌ಟಿಆರ್‌ಗೆ ರಾಜ್‌ ಕುಟುಂಬದಿಂದ ಆಹ್ವಾನ, ಬೆಂಗಳೂರಿಗೆ ಬರಲು ತೆಲುಗು ಸೂಪರ್ ಸ್ಟಾರ್ ಸಂತಸ

Karnataka Ratna for Puneeth Rajkumar: ಜೂನಿಯರ್‌ ಎನ್‌ಟಿಆರ್‌ಗೆ ರಾಜ್‌ ಕುಟುಂಬದಿಂದ ಆಹ್ವಾನ, ಬೆಂಗಳೂರಿಗೆ ಬರಲು ತೆಲುಗು ಸೂಪರ್ ಸ್ಟಾರ್ ಸಂತಸ

ಜೂ. ಎನ್‌ಟಿಆರ್‌ಗೆ ಆಹ್ವಾನ

ಜೂ. ಎನ್‌ಟಿಆರ್‌ಗೆ ಆಹ್ವಾನ

ನಾಳೆ ರಾಜ್ಯೋತ್ಸವದಂದು ಗೆಳೆಯನಿಗೆ ಸಿಗುವ ಕರ್ನಾಟಕ ರತ್ನ ಪ್ರಶಸ್ತಿಗೆ ಸಾಕ್ಷಿಯಾಗಲು ತಾರಕ್ ಒಪ್ಪಿದ್ದಾರೆ. ನಾಳೆ ವಿಧಾನ ಸೌಧದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮ ನಡೆಯಲಿದ್ದು, ಜೂನಿಯರ್ ಎನ್‌ಟಿಆರ್ ಹಾಗೂ ರಜನಿಕಾಂತ್ ಆಗಮಿಸಲಿದ್ದಾರೆ.

  • News18 Kannada
  • Last Updated :
  • Hyderabad, India
  • Share this:

ಹೈದ್ರಾಬಾದ್: ಕರುನಾಡಿನ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್‌ಗೆ (Power Star Puneeth Rajkumar) ‘ಕರ್ನಾಟಕ ರತ್ನ’ ಪ್ರಶಸ್ತಿ (Karnataka Ratna Award) ಕೊಟ್ಟು ಸನ್ಮಾನಿಸುವ ಸುವರ್ಣ ಕ್ಷಣಗಳು ಹತ್ತಿರ ಬರುತ್ತಿದೆ. ನಾಳೆ ನವೆಂಬರ್ 1ರಂದು ಕರ್ನಾಟಕ ರಾಜ್ಯೋತ್ಸವದ (Karnataka Rajyotsava) ದಿನ ‘ಯುವರತ್ನ’ನಿಗೆ (Yuvaratna) ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಸೂಪರ್‌ ಸ್ಟಾರ್ ರಜನಿಕಾಂತ್ (Super Star Rajinikanth) ಹಾಗೂ ತೆಲುಗು ಖ್ಯಾತ ನಟ ಜೂನಿಯರ್ ಎನ್‌ಟಿಆರ್‌ (Jr. NTR) ಮುಖ್ಯ ಅತಿಥಿಯಾಗಿ (Guest) ಆಗಮಿಸಲಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರ (Government) ಈಗಾಗಲೇ ಇಬ್ಬರೂ ಅತಿಥಿಗಳಿಗೂ ಅಧಿಕೃತವಾಗಿ ಆಹ್ವಾನ ನೀಡಿದೆ. ಇದೀಗ ರಾಜ್‌ ಕುಟುಂಬಸ್ಥರೆ (Rajkumar Family) ವೈಯಕ್ತಿಕವಾಗಿ ಜೂನಿಯರ್ ಎನ್‌ಟಿಆರ್‌ಗೆ ಆಹ್ವಾನ ನೀಡಿದೆ. ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಪುತ್ರ ಯುವರಾಜ್ (Yuvaraj) ಅವರೇ ಜೂನಿಯರ್ ಎನ್‌ಟಿಆರ್‌ಗೆ ಅಧಿಕೃತ ಆಹ್ವಾನ ನೀಡಿದ್ದಾರೆ.   


ಜೂನಿಯರ್ ಎನ್‌ಟಿಆರ್‌ಗೆ ರಾಜ್‌ ಫ್ಯಾಮಿಲಿಯಿಂದ ಆಹ್ವಾನ


ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮಕ್ಕೆ ಕ್ಷಣಗಣನೆ ಶುರುವಾಗಿದೆ. ನಾಳೆ ಅಂದರೆ ಕರ್ನಾಟಕ ರಾಜ್ಯೋತ್ಸವದಂದೆ ಅಪ್ಪುಗೆ ಪ್ರಶಸ್ತಿ  ನೀಡಲು ರಾಜ್ಯ ಸರ್ಕಾರ ಸಕಲ ಸಿದ್ಧತೆ ನಡೆಸಿದೆ. ಇದೀಗ ಕಾರ್ಯಕ್ರಮಕ್ಕೆ ತೆಲುಗು ಖ್ಯಾತ ನಟ ಜೂ. ಎನ್‌ಟಿಆರ್‌ಗೆ ಡಾ ರಾಜ್‌ಕುಮಾರ್ ಫ್ಯಾಮಿಲಿ ಆಹ್ವಾನ ನೀಡಿದೆ.


ಆಹ್ವಾನ ನೀಡಿದ ನಟ ಯುವರಾಜ್


ರಾಘವೇಂದ್ರ ರಾಜ್‌ಕುಮಾರ್ ಪುತ್ರ, ನಟ ಯುವರಾಜ್ ಅವರು ಜೂನಿಯರ್ ಎನ್‌ಟಿಆರ್‌ಗೆ ಅಧಿಕೃತ ಆಹ್ವಾನ ನೀಡಿದ್ದಾರೆ. ಹೈದ್ರಾಬಾದ್‌ನಲ್ಲಿರುವ ಜೂನಿಯರ್ ಎನ್‌ಟಿಆರ್‌ ನಿವಾಸಕ್ಕೆ ತೆರಳಿದ ಯುವರಾಜ್, ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.


ಇದನ್ನೂ ಓದಿ: Jr NTR Wishes: ಕನ್ನಡಿಗರಿಗೆ 'ಕನ್ನಡ ರಾಜ್ಯೋತ್ಸವ'ದ ಶುಭಾಶಯ ತಿಳಿಸಿದ ಜೂನಿಯರ್ ಎನ್‍ಟಿಆರ್


ಕಾರ್ಯಕ್ರಮಕ್ಕೆ ಬರುವುದಕ್ಕೆ ಜೂ. ಎನ್‌ಟಿಆರ್‌ ಸಂತಸ


ನಾಳೆ ನಾಡ ಹಬ್ಬದಂದು ಗೆಳೆಯನಿಗೆ ಸಿಗುವ ಕರ್ನಾಟಕ ರತ್ನ ಪ್ರಶಸ್ತಿಗೆ ಸಾಕ್ಷಿಯಾಗಲು ತಾರಕ್ ಒಪ್ಪಿದ್ದಾರೆ. ನಾಳೆ ವಿಧಾನ ಸೌಧದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮ ನಡೆಯಲಿದ್ದು, ಜೂನಿಯರ್ ಎನ್‌ಟಿಆರ್ ಹಾಗೂ ರಜನಿಕಾಂತ್ ಆಗಮಿಸಲಿದ್ದಾರೆ.


ಕನ್ನಡಿಗರಿಗೆ 'ಕನ್ನಡ ರಾಜ್ಯೋತ್ಸವ' ಶುಭಾಶಯ


ಜೂನಿಯರ್ ಎನ್‍ಟಿಆರ್ ಅವರು ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದಾರೆ. ರಜನಿಕಾಂತ್ ಸಹ ಕಾರ್ಯಕ್ರಮಕ್ಕೆ ಬರುವುದಾಗಿ ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. 'ಪುನೀತ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಗೌರವ ಸಲ್ಲುತ್ತಿರುವಾಗ ನಾನು ಅಲ್ಲಿ ಇರುವುದು ನನ್ನ ಪಾಲಿಗೆ ಹೆಮ್ಮೆಯ ಕ್ಷಣ. ಅಲ್ಲದೇ ಅದು ನನ್ನ ಕರ್ತವ್ಯ ಕೂಡ ಹೌದು. ಕರ್ನಾಟಕ ಸರ್ಕಾರ ಏರ್ಪಡಿಸಿರುವ ಈ ಕಾರ್ಯಕ್ರಮದಲ್ಲಿ ನನ್ನ ಉಪಸ್ಥಿತಿ ಇರುತ್ತದೆ ಎಂಬುದನ್ನು ಈ ಮೂಲಕ ಖಚಿತ ಪಡಿಸುತ್ತೇನೆ' ಎಂದು ಪತ್ರ ಬರೆದಿದ್ದಾರೆ.


ವಿಧಾನಸೌಧದ ಸುತ್ತ ಪೊಲೀಸ್ ಸರ್ಪಗಾವಲು


ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಿನ್ನೆಲೆಯಲ್ಲಿ ವಿಧಾನಸೌಧ ಸುತ್ತಮುತ್ತ ಬಿಗಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.


ಇದನ್ನೂ ಓದಿ: Puneeth Rajkumar: ಗಂಧದಗುಡಿ ನೋಡಿ ಭಾವುಕಳಾದ ಪುನೀತ್ ಪುತ್ರಿ, ಅಪ್ಪನನ್ನು ನೆನೆದು ಧೃತಿ ಮಾಡಿದ್ದೇನು?


ಡಿಸಿಪಿ ನೇತೃತ್ವದಲ್ಲಿ ಭದ್ರತೆ


ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ್ ಗೌಡ ಭಧ್ರತೆಯಲ್ಲಿ ನೇತೃತ್ವದಲ್ಲಿ ಭಧ್ರತೆ ಒದಗಿಸಲಾಗಿದೆ. ಭದ್ರತೆಗೆ 7 ಜನ ಎಸಿಪಿ, 16 ಜನ ಇನ್ಸ್ಪೆಕ್ಟರ್, 25 ಪಿಎಸ್ ಐ 300 ಜನ ಕಾನ್ಸ್ಟೇಬಲ್ ಗಳನ್ನು ನಿಯೋಜಿಸಲಾಗಿದೆ. 6 ಕೆಎಸ್ಆರ್ ಪಿ ತುಕಡಿ ನಿಯೋಜನೆ ಮಾಡಲಾಗಿದೆ. ಸಂಚಾರ ಡಿಸಿಪಿ ಕಲಾಕೃಷ್ಣಸ್ವಾಮಿ ನೇತೃತ್ವದಲ್ಲಿ ಸಂಚಾರ ನಿರ್ವಹಣೆಗೆ 500 ಕ್ಕೂ ಹೆಚ್ವು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಇನ್ನು ವಿಧಾನಸೌಧ ಮತ್ತು ಹೈಕೋರ್ಟ್ ಮಧ್ಯೆ ಸಂಪೂರ್ಣ ರಸ್ತೆ ಕ್ಲೋಸ್ ಮಾಡುವ ಸಾಧ್ಯತೆ ಇದೆ.

Published by:Annappa Achari
First published: