Yashas Surya: ಭಟ್ಟರ 'ಗರಡಿ'ಯಲ್ಲಿ ಯಶಸ್ ಸೂರ್ಯ ಕಸರತ್ತು! ಪಾತ್ರಕ್ಕಾಗಿ ನಡೆಯುತ್ತಿದೆ ಭರ್ಜರಿ ತಯಾರಿ

ಕುಸ್ತಿ ಅಖಾಡದಲ್ಲಿ 'ಗರಡಿ' ಚಿತ್ರ ತಂಡ ಬ್ಯುಸಿಯಾಗಿದೆ. ಗರಡಿ ಚಿತ್ರದಲ್ಲಿ ಸೂರಿ ಪಾತ್ರ ನಿರ್ವಹಿಸುತ್ತಿರುವ ನಟ ಯಶಸ್ ಸೂರ್ಯ ಚಿತ್ರದಲ್ಲಿ ಕುಸ್ತಿಪಟುವಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಕುಸ್ತಿಪಟುವಿನ ಪಾತ್ರಕ್ಕಾಗಿ ಯಶಸ್ ಸೂರ್ಯ ಇನ್ನಿಲ್ಲದ ಕಸರತ್ತುಗಳನ್ನು ನಡೆಸಿ ಬಾಡಿ ಬಿಲ್ಡ್ (Body Build) ಮಾಡಿದ್ದು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.

'ಗರಡಿ' ಸಿನಿಮಾದಲ್ಲಿ ಯಶಸ್ ಸೂರ್ಯ

'ಗರಡಿ' ಸಿನಿಮಾದಲ್ಲಿ ಯಶಸ್ ಸೂರ್ಯ

 • Share this:
  ಸ್ಯಾಂಡಲ್‌ವುಡ್‌ನ (Sandalwood) ಖ್ಯಾತ ನಿರ್ದೇಶಕ ಯೋಗರಾಜ್ ಭಟ್ (Director Yogaraj Bhat) ಅವರ ಮುಂಬರುವ ಬಹು ನಿರೀಕ್ಷಿತ ‘ಗರಡಿ’ ಸಿನಿಮಾದಲ್ಲಿ (Garadi Movie) ನಾಯಕ ನಟ ಯಶಸ್ ಸೂರ್ಯ (Yashas Surya) ಕುಸ್ತಿಪಟುವಿನ ಪಾತ್ರ ನಿರ್ವಹಿಸುತ್ತಿರುವ ಬಗ್ಗೆ ಈಗಾಗ್ಲೇ ಮಾಹಿತಿಗಳು ಹೊರಬಿದ್ದಿವೆ. ಗರಡಿ ಚಿತ್ರದಲ್ಲಿ ಇಂತಹ ಹಲವಾರು ವಿಶೇಷತೆಗಳಿದ್ದು, ‘ಕೌರವ’ ಖ್ಯಾತಿಯ, ಸಚಿವ ಬಿ.ಸಿ.ಪಾಟೀಲ್ (B.C. Patil) ಅವರು ಅಭಿನಯಿಸುತ್ತಿರುವುದು ಇನ್ನೊಂದು ವಿಶೇಷ. ಚಿತ್ರದ ಚಿತ್ರೀಕರಣ (Shooting) ಭರದಿಂದ ಸಾಗುತ್ತಿದ್ದು, ಕುಸ್ತಿ ಅಖಾಡದಲ್ಲಿ ಚಿತ್ರ ತಂಡ ಬ್ಯುಸಿಯಾಗಿದೆ. ಗರಡಿ ಚಿತ್ರದಲ್ಲಿ ಸೂರಿ ಪಾತ್ರ ನಿರ್ವಹಿಸುತ್ತಿರುವ ಶಿಶಿರ, ಚಿಂಗಾರಿ, ಕುರುಕ್ಷೇತ್ರ, ಒಡೆಯ ಸಿನಿಮಾದ ಖ್ಯಾತಿಯ ನಟ ಯಶಸ್ ಸೂರ್ಯ ಚಿತ್ರದಲ್ಲಿ ಕುಸ್ತಿಪಟುವಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಕುಸ್ತಿಪಟುವಿನ ಪಾತ್ರಕ್ಕಾಗಿ ಯಶಸ್ ಸೂರ್ಯ ಇನ್ನಿಲ್ಲದ ಕಸರತ್ತುಗಳನ್ನು ನಡೆಸಿ ಬಾಡಿ ಬಿಲ್ಡ್ (Body Build) ಮಾಡಿದ್ದು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.

  ಕುಸ್ತಿಪಟುವಿನ ಪಾತ್ರದಲ್ಲಿ ಯಶಸ್ ಸೂರ್ಯ

  ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾಹಿತಿ ಬಿಚ್ಚಿಟ್ಟ ಯಶಸ್ ಸೂರ್ಯ, “ನಾನು ಗರಡಿ ಸಿನಿಮಾದಲ್ಲಿ ಕುಸ್ತಿಪಟು ಸೂರಿ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಮೊದಲಿಗೆ ನಾನು ಕುಸ್ತಿಪಟುಗಳಿಗೆ ಊಟವನ್ನು ತಯಾರಿಸುವ ಬಾಣಸಿಗನಾಗಿ ಕೆಲಸ ಮಾಡುತ್ತೇನೆ ಮತ್ತು ನಂತರ ನಾನು ಕುಸ್ತಿ ಅಖಾಡಕ್ಕೆ ಹೇಗೆ ಎಂಟ್ರಿ ನೀಡುತ್ತೇನೆ ಎಂಬುದು ಸಿನಿಮಾದ ಕಥಾ ವಸ್ತುವಾಗಿದೆ ಎಂದು ಯಶಸ್ ಸೂರ್ಯ ಚಿತ್ರದ ಬಗೆಗಿನ ಆಸಕ್ತಿಯನ್ನು ಹೆಚ್ಚಿಸಿದರು.

  ಮೈ ಗಟ್ಟಿ ಮಾಡಿಕೊಳ್ಳಲು ಭರ್ಜರಿ ತಯಾರಿ

  “ನಾವು ಹಲವಾರು ಸಾಂಪ್ರದಾಯಿಕ ಗರಡಿ ಮನೆಗಳ ತವರು ಮೈಸೂರಿನಲ್ಲಿ ಸುಮಾರು ಒಂದು ತಿಂಗಳು ತಂಗಿದ್ದೆವು ಮತ್ತು ನಾನು ಕುಸ್ತಿಪಟು ದೇಸಿ ಗೌಡ್ರು ಅವರ ಬಳಿ ತರಬೇತಿ ಪಡೆದಿದ್ದೇನೆ. ನಾನು ಬೆಳಗ್ಗೆ 2 ಗಂಟೆ ಜಿಮ್‌ನಲ್ಲಿ ತೊಡಗಿಸಿಕೊಂಡಿದ್ದೇನೆ ಮತ್ತು ಸಂಜೆ ಕುಸ್ತಿ ತಯಾರಿ ನಡೆಸಿದೆ ಎನ್ನುತ್ತಾರೆ.

  ಇದನ್ನೂ ಓದಿ: HBD Meghana Raj: ಇಂದು ನಟಿ ಮೇಘನಾ ರಾಜ್ ಹುಟ್ಟುಹಬ್ಬ, 'ಜಿರಂಜೀವಿ' ಭವ ಎಂದು ಹಾರೈಸಿದ ಅಭಿಮಾನಿಗಳು

  ಕುಸ್ತಿ ಮನೆಯಲ್ಲಿ ದಿನನಿತ್ಯ ಕಸರತ್ತು

  ಕುಸ್ತಿ ಮಾಡುವ ಮೊದಲು ನಾವು ಮತ್ತಿ ಎಂಬ ಮಣ್ಣಿಗೆ ಮತ್ತು ಬಟ್ಟೆಗಳಿಗೆ ಪೂಜೆ ಮಾಡುತ್ತೇವೆ. ಮಣ್ಣನ್ನು ತಯಾರಿಸುವ ಪ್ರಕ್ರಿಯೆಯು ಬಹಳ ಸಮಯ ತೆಗೆದುಕೊಳ್ಳುತ್ತದೆ. ಏಕೆಂದರೆ ಅವರು ನಿರ್ದಿಷ್ಟ ರೀತಿಯ ಮಣ್ಣನ್ನು ಎಣ್ಣೆ ಮತ್ತು ತುಪ್ಪದೊಂದಿಗೆ ಬೆರೆಸಿ ಅದು ಕುಸ್ತಿಗೆ ಯೋಗ್ಯವಾಗಿದೆ ಎಂದು ಖಚಿತಪಡಿಸಿಕೊಳ್ಳುತ್ತಾರೆ. ಇನ್ನೊಂದು ಕುತೂಹಲಕಾರಿ ಅಂಶವೆಂದರೆ ನಾವು ಗರಡಿ ಮನೆಯಲ್ಲೇ ಸ್ನಾನ ಮಾಡಬೇಕಿತ್ತು. ಕುಸ್ತಿ ನಡೆಯುವ ಮೊದಲು ನಾವು ಅದನ್ನು ಸಡಿಲಗೊಳಿಸಲು ಮಣ್ಣನ್ನು ಅಗೆಯುತ್ತೇವೆ ಎಂದು ತಮ್ಮ ವ್ಯಾಯಾಮ, ಕುಸ್ತಿ ಕಲಿತ ಬಗ್ಗೆ ವಿವರಿಸಿದರು.

  ಯಶಸ್ ಸೂರ್ಯ ಏನೇನು ತಿನ್ನುತ್ತಾರೆ?

  ಕುಸ್ತಿ ಪಟುವಿಗೆ ಬೇಕಾದ ಆಹಾರದ ಬಗ್ಗೆ ಮಾತನಾಡುತ್ತಾ, “ಪ್ರೋಟೀನ್‌ಗೆ ಆದ್ಯತೆ ನೀಡಲಾಯಿತು ಮತ್ತು ಮಸಾಲೆಯುಕ್ತ ಆಹಾರದಿಂದ ಆದಷ್ಟು ದೂರವಿದ್ದೆ. ಕುಸ್ತಿ ಪಟುವಿನ ಲುಕ್ ಪಡೆಯಲು ನಾನು ಬಹಳಷ್ಟು ಆವಿಯಲ್ಲಿ (ಸ್ಟೀಮ್) ಬೇಯಿಸಿದ ಆಹಾರವನ್ನು ತಿನ್ನುತ್ತಿದ್ದೆ ಎಂದಿದ್ದಾರೆ.

  ಕುಸ್ತಿ ದೃಶ್ಯಕ್ಕಾಗಿ ವಿಶೇಷ ಸೆಟ್

  ಚಿತ್ರದ ಪ್ರಮುಖ ಅಂಶವಾಗಿರುವ ಕುಸ್ತಿ ದೃಶ್ಯಗಳನ್ನು ಸೆರೆಹಿಡಿಯಲು ತಂಡವು ಈಗಾಗ್ಲೇ ವಿಶೇಷ ಸೆಟ್ ಅನ್ನು ನಿರ್ಮಿಸಿದೆ. ಗರಡಿ ಸಿನಿಮಾದಲ್ಲಿ ನಾಯಕಿಯಾಗಿ ಸೋನಾಲ್ ಮಾಂಟೆರೋ ಅಭಿನಯಿಸುತ್ತಿದ್ದಾರೆ, ಇನ್ನು ಬಹಳ ವರ್ಷಗಳ ನಂತರ ಸಚಿವ ಹಾಗೂ ನಟ ಬಿ.ಸಿ ಪಾಟೀಲ್ ಕುಸ್ತಿಪಟುವಾಗಿ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಈ ಸಿನಿಮಾದಲ್ಲಿ. ಸಚಿವ ಎಸ್. ಟಿ ಸೋಮಶೇಖರ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ನಿರ್ದೇಶಕ ಯೋಗರಾಜ್ ಭಟ್ ಹೇಳಿದ್ದಾರೆ.

  ಇದನ್ನೂ ಓದಿ: 777 Charlie ಗೆ ತೆಲುಗು ನಟ ರಾಣಾ ದಗ್ಗುಬಾಟಿ ಸಾಥ್​! ರಕ್ಷಿತ್​ ಶೆಟ್ಟಿ ಸಿನಿಮಾ ನೋಡಿ 'ಬಲ್ಲಾಳದೇವ' ಫಿದಾ!

  ನೈಜ ಕುಸ್ತಿಪಟುಗಳಿಂದ ಅಭಿನಯ

  ನಿರ್ದೇಶಕ ಯೋಗರಾಜ್ ಭಟ್ ಮಾತನಾಡಿ, “ಈ ಚಿತ್ರಕ್ಕೆ ಬೇರೆ ಶೀರ್ಷಿಕೆ ಇಟ್ಟಿದ್ದೆವು. ಆದರೆ, ನಾವು ಬಾದಾಮಿಯಲ್ಲಿ ಲೊಕೇಶನ್‌ಗಳನ್ನು ಹುಡುಕುತ್ತಿದ್ದಾಗ, ಗರಡಿಯು ಸೂಕ್ತವಾದ ಶೀರ್ಷಿಕೆ ಎಂದು ನಾವು ಭಾವಿಸಿದೆವು. ಕುಸ್ತಿಪಟು ದೇಸಿಗೌಡ್ರು ಚಿತ್ರಕ್ಕಾಗಿ ನಟರಿಗೆ ತರಬೇತಿ ನೀಡಿ ತೆರೆ ಮೇಲೆ ನೈಜವಾಗಿ ಕಾಣುವಂತೆ ಮಾಡಿದ್ದಾರೆ. ಕೆಲವು ನೈಜ ಕುಸ್ತಿಪಟುಗಳೂ ಸಿನಿಮಾದಲ್ಲಿ ನಟಿಸಿದ್ದಾರೆ ಎಂದಿದ್ದಾರೆ.
  Published by:Annappa Achari
  First published: