ರಾಕಿಂಗ್ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗುತ್ತಿದ್ದಂತೆಯೇ ಯಶ್ ಅದೃಷ್ಟ ಬದಲಾಗಿ ಹೋಯಿತು. ಕನ್ನಡದ ಸಿನಿಮಾದ ಇತಿಹಾಸದಲ್ಲೇ ಹೊಸ ದಾಖಲೆಗಳನ್ನು ಸೃಷ್ಟಿಸಿದ ಚಿತ್ರ ಕೆಜಿಎಫ್. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಎರಡು ವರ್ಷಗಳ ಹಿಂದೆ ಅಂದರೆ, 2018ರಲ್ಲಿ ತೆರೆ ಕಂಡಿತ್ತು. ಈ ಚಿತ್ರ ಯಶಸ್ಸಿಗೆ ನಿರ್ದೇಶಕರ ಜೊತೆಗೆ ಯಶ್ ಸಹ ಕಾರಣವಾಗಿದ್ದರು. ರಾಕಿಂಗ್ ಸ್ಟಾರ್ ಅಭಿನಯ ಅಭಿಮಾನಿಗಳನ್ನು ಹುಚ್ಚೆಬ್ಬಿಸಿತ್ತು. ಜೊತೆಗೆ ಪಾತ್ರಕ್ಕೆ ತಕ್ಕಂತೆ ಇದ್ದ ಖಡಕ್ ಡೈಲಾಗ್ಗಳು ಈ ಚಿತ್ರ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗುವಂತೆ ಮಾಡಿತ್ತು. ಕೇವಲ ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ಆಗಿದ್ದ ಯಶ್ ಈ ಸಿನಿಮಾದ ನಂತರ ನ್ಯಾಷನಲ್ ಸ್ಟಾರ್ ಆಗಿ ಬಡ್ತಿ ಪಡೆದರು. ಇನ್ನು ಕನ್ನಡದ ಸ್ಟಾರ್ಗಳು ದೊಡ್ಡ ಬ್ರ್ಯಾಂಡ್ಗಳ ರಾಯಭಾರಿಗಳಾಗುವುದು ತೀರಾ ವಿರಳ. ಆದರೆ ಯಶ್ಗೆ ಈಗ ಅದೃಷ್ಟ ಖುಲಾಯಿಸಿದೆ.
ಕೆಜಿಎಫ್ ಸಿನಿಮಾದ ಯಶಸ್ಸಿನ ನಂತರ ಯಶ್ಗೆ ಸಾಕಷ್ಟು ದೊಡ್ಡ ದೊಡ್ಡ ಬ್ರ್ಯಾಂಡ್ಗಳು ಹುಡುಕಿಕೊಂಡು ಬಂದು ಆಫರ್ ಕೊಡುತ್ತಿದ್ದಾರೆ. ಈಗಾಗಲೇ ಯಶ್ ಬಿಯರ್ಡ್ ಪ್ರಾಡಕ್ಟ್ ಬ್ರ್ಯಾಂಡ್ ಒಂದಕ್ಕೆ ರಾಯಭಾರಿಯಾಗಿದ್ದಾರೆ. ಇದರ ಜೊತೆಗೆ ಸಾಕಷ್ಟು ದೊಡ್ಡ ದೊಡ್ಡ ಬ್ರ್ಯಾಂಡ್ಗಳ ಪ್ರಾಡಕ್ಟ್ಗಳ ಜಾಹೀರಾತಿಗೆ ಸಹಿ ಮಾಡಿದ್ದಾರಂತೆ.
View this post on Instagram
View this post on Instagram
View this post on Instagram
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ