ಗಡ್ಡ ತೆಗೆದು ಪಂಚೆ ಕಟ್ಟಿದ್ದ ರಾಕಿಂಗ್​ ಸ್ಟಾರ್​: ರಿಲೀಸ್​ ಆಯಿತು ಮೈ ನೇಮ್​ ಇಸ್​ ಕಿರಾತಕ ಸಿನಿಮಾದ ಫಸ್ಟ್​ಲುಕ್​

news18
Updated:September 4, 2018, 1:18 PM IST
ಗಡ್ಡ ತೆಗೆದು ಪಂಚೆ ಕಟ್ಟಿದ್ದ ರಾಕಿಂಗ್​ ಸ್ಟಾರ್​: ರಿಲೀಸ್​ ಆಯಿತು ಮೈ ನೇಮ್​ ಇಸ್​ ಕಿರಾತಕ ಸಿನಿಮಾದ ಫಸ್ಟ್​ಲುಕ್​
news18
Updated: September 4, 2018, 1:18 PM IST
ನ್ಯೂಸ್​ 18 ಕನ್ನಡ 

ಸತತ 2 ವರ್ಷಗಳಿಂದ 'ಕೆಜಿಎಫ್'​ ಅಡ್ಡಾದಲ್ಲಿ ಬ್ಯುಸಿಯಾಗಿದ್ದ ಯಶ್, ಉದ್ದುದ್ದ ಕೂದಲು, ಗಡ್ಡ ಬಿಟ್ಕೊಂಡು ಒಂದೇ ಲುಕ್‍ನಲ್ಲಿ ಕಾಣಿಸಿಕೊಂಡಿದ್ದರು. ಆದರೆ 'ಮೈ ನೇಮ್ ಇಸ್ ಕಿರಾತಕ' ಚಿತ್ರಕ್ಕಾಗಿ ಗಡ್ಡ ಮತ್ತು ಕೂದಲಿಗೆ ಕತ್ತರಿ ಹಾಕಿಸಿಕೊಂಡಿರೋ ಯಶ್, ಶೂಟಿಂಗ್ ಸೆಟ್‍ಗೆ ಹಾಜರಾಗಿದ್ದಾರೆ.

ನಿನ್ನೆಯಿಂದ (ಸೆ.3)ರಿಂದ 'ಮೈ ನೇಮ್ ಇಸ್ ಕಿರಾತಕ' ಚಿತ್ರೀಕರಣ ಆರಂಭವಾಗಿದ್ದು, ಯಶ್ ಲುಕ್ ಕೂಡ ರಿವೀಲ್ ಆಗಿದೆ. ಖುದ್ದು ಯಶ್​ ತಮ್ಮ ಫೇಸ್​ಬುಕ್​ನಲ್ಲಿ ಫಸ್ಟ್​ಲುಕ್​ ಪೋಟೋ ಪೋಸ್ಟ್​ ಮಾಡಿದ್ದಾರೆ.'ಕಿರಾತಕ' ಚಿತ್ರದಲ್ಲಿ ಬೆಲ್ಸ್ ಪ್ಯಾಂಟು, ಶರ್ಟ್ ಜೊತೆಗೊಂದು ಟವೆಲ್​ನಲ್ಲಿ ಮಿಂಚಿದ್ದ ಯಶ್, 'ಮೈನೇಮ್ ಇಸ್ ಕಿರಾತಕ' ಚಿತ್ರದಲ್ಲಿ ಪಂಚೆ ಮೇಲಕ್ಕೆ ಕಟ್ಟಿ, ಕಲರ್ ಕಲರ್ ಶರ್ಟ್ ಜೊತೆಗೆ ಜಾತ್ರೆ ಕನ್ನಡಕ ಹಾಕ್ಕೊಂಡು ಶೂಟಿಂಗ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನೆಲ್ಲ ನೋಡುತ್ತಿದ್ದರೆ ಯಶ್ ಮತ್ತೆ ಮಂಡ್ಯ ಹೈದನಾಗಿ ತೊಡೆ ತಟ್ಟಿ ನಿಲ್ಲೋದು ಪಕ್ಕಾ ಅನ್ನಿಸುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ಚಿತ್ರದ ಚಿತ್ರೀಕರಣ ಕೂಡ 90% ಮಂಡ್ಯ ಸುತ್ತಮುತ್ತವೇ ನಡಿಯಲಿದೆ.

ಕಾಮಿಡಿ ಕಿಂಗ್ ಚಿಕ್ಕಣ್ಣ ಮತ್ತು ಕುರಿ ಪ್ರತಾಪ ಈ ಸಿನಿಮಾದಲ್ಲಿ ಕಾಮಿಡಿ ಬಂಚ್ ನೀಡಲು ಸಜ್ಜಾಗಿದ್ದು, ಒಂದು ದಿನದ ಚಿತ್ರೀಕರಣವನ್ನೂ ಮುಗಿಸಿದ್ದಾರೆ.
Loading...

2011ರಲ್ಲಿ ತೆರೆಕಂಡು ಸೂಪರ್ ಡೂಪರ್ ಹಿಟ್​ ಆಗಿದ್ದ 'ಕಿರಾತಕ' ಚಿತ್ರದ ಮುಂದುವರೆದ ಭಾಗ ಇದಾಗಿದ್ದು, ಚಿತ್ರದ ಮೇಲೆ ಈಗಾಗಲೇ ಸಾಕಷ್ಟು ನಿರೀಕ್ಷೆ ಕೂಡ ಇದೆ. ಅನಿಲ್ ಕುಮಾರ್ ಚಿತ್ರದ ನಿರ್ದೇಶನ ಮಾಡಿದ್ದು, ಶ್ವೇತಾ ಜೋಡಿಯಾಗಿ ಕಮಾಲ್ ಮಾಡಲಿದ್ದಾರೆ. ಉಳಿದಂತೆ 2 ಶೆಡ್ಯೂಲ್‍ನಲ್ಲಿ ಚಿತ್ರೀಕರಣ ನಡೆಯಲಿದ್ದು, ಹೊರ ದೇಶಗಳಲ್ಲಿ ಹಾಡಿನ ಚಿತ್ರೀಕರಣ ನಡೆಯಲಿದೆಯಂತೆ. ಸದ್ಯ 'ಕೆಜಿಎಫ್​' ಚಿತ್ರವನ್ನ ಕಣ್ತುಂಬಿಕೊಳ್ಳಲು ಕಾತುರರಾಗಿರೋ ಯಶ್ ಅಭಿಮಾನಿಗಳು ಇದೀಗ 'ಮೈ ನೇಮ್ ಇಸ್ ಕಿರಾತಕ' ಚಿತ್ರಕ್ಕೂ ಎಕ್ಸೈಟ್ ಆಗಿದ್ದಾರೆ.
First published:September 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...