Yash-Hardik Pandya: ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ ಯಶ್ ಸಖತ್ ಡ್ಯಾನ್ಸ್, ವಿಡಿಯೋ ವೈರಲ್

ಹಾರ್ದಿಕ್ ಪಾಂಡ್ಯ ಮದುವೆಗೆ ಹಾಜರಾಗಿದ್ದ ನಟ ಯಶ್​, ಕಾರ್ಯಕ್ರಮದಲ್ಲಿ ಸಖತ್ ಆಗಿ ಡ್ಯಾನ್ಸ್​ ಮಾಡಿದ್ದಾರೆ. ವಿಡಿಯೋ ಇದೀಗ ವೈರಲ್​ ಆಗಿದೆ.

ಹಾರ್ದಿಕ್ ಪಾಂಡ್ಯ ಮದುವೆಗೆ ಹಾಜರಾಗಿದ್ದ ನಟ ಯಶ್​, ಕಾರ್ಯಕ್ರಮದಲ್ಲಿ ಸಖತ್ ಆಗಿ ಡ್ಯಾನ್ಸ್​ ಮಾಡಿದ್ದಾರೆ. ವಿಡಿಯೋ ಇದೀಗ ವೈರಲ್​ ಆಗಿದೆ.

ಹಾರ್ದಿಕ್ ಪಾಂಡ್ಯ ಮದುವೆಗೆ ಹಾಜರಾಗಿದ್ದ ನಟ ಯಶ್​, ಕಾರ್ಯಕ್ರಮದಲ್ಲಿ ಸಖತ್ ಆಗಿ ಡ್ಯಾನ್ಸ್​ ಮಾಡಿದ್ದಾರೆ. ವಿಡಿಯೋ ಇದೀಗ ವೈರಲ್​ ಆಗಿದೆ.

  • News18 Kannada
  • 5-MIN READ
  • Last Updated :
  • Karnataka, India
  • Share this:

ಕೆಜಿಎಫ್ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್​ ಆಗಿ ಮಿಂಚುತ್ತಿರುವ ನಟ  ಯಶ್‌ (Yash) ಹಾಗೂ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ (Hardik Pandya) ಒಳ್ಳೆಯ ಸ್ನೇಹಿತರಾಗಿದ್ದಾರೆ. ಹಾರ್ದಿಕ್ ಪಾಂಡ್ಯ ಮದುವೆಗೆ ಹಾಜರಾಗಿದ್ದ ನಟ ಯಶ್​, ಕಾರ್ಯಕ್ರಮದಲ್ಲಿ ಸಖತ್ ಆಗಿ ಡ್ಯಾನ್ಸ್​ (Dance) ಮಾಡಿದ್ದಾರೆ. ಮದುವೆಯಲ್ಲಿ (Marriage) ಯಶ್ ಮಾಡಿರುವ ಡ್ಯಾನ್ಸ್​ ವಿಡಿಯೋ ಇದೀಗ ಸೋಶಿಯಲ್​ ಮೀಡಿಯಾದಲ್ಲಿ  ಸಖತ್ ವೈರಲ್ ಆಗಿದೆ. 


 ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ ಅನೇಕ ಗಣ್ಯರು


ಫೆಬ್ರವರಿಯಲ್ಲಿ ಹಾರ್ದಿಕ್ ಪಾಂಡ್ಯ- ನತಾಶಾ ಅವರನ್ನು ಹಿಂದೂ ಮತ್ತು ಕ್ರಿಶ್ಚಿಯನ್ ಸಂಪ್ರದಾಯದ ಪ್ರಕಾರ ಮದುವೆ ಆಗಿದ್ದಾರೆ. ಉದಯಪುರದಲ್ಲಿ ನಡೆದ ಅದ್ದೂರಿ ವಿವಾಹಕ್ಕೆ ಅನೇಕ ಗಣ್ಯರು ಭಾಗಿ ಆಗಿದ್ದರು. ಕ್ರಿಕೆಟ್ ಮತ್ತು ಸಿನಿಮಾ ಗಣ್ಯರು ಸಹ ಹಾರ್ದಿಕ್ ಪಾಂಡ್ಯ ಮದುವೆಯಲ್ಲಿ ಭಾಗಿಯಾಗಿದ್ದರು.


ಹಾರ್ದಿಕ್ ಪಾಂಡ್ಯ ಜೊತೆ ಯಶ್  ಡ್ಯಾನ್ಸ್​


ರಾಕಿಂಗ್ ಸ್ಟಾರ್ ಭಾಗಿಯಾಗಿದ್ದ ವಿಡಿಯೋಗಳು ಈಗ ವೈರಲ್ ಆಗಿದೆ. ಯಶ್ ಭಾಗಿಯಾಗಿದ್ದು ಅಷ್ಟೇ ಅಲ್ಲದೇ, ಹಾರ್ದಿಕ್ ಪಾಂಡ್ಯ ಜೊತೆ ಸಖತ್ ಆಗಿ ಡಾನ್ಸ್ ಮಾಡಿದ್ದರು. ಪಾಂಡ್ಯ ಜೊತೆ ಡಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಯಶ್ ಸಖತ್ ಸ್ಟೈಲಿಶ್ ಆಗಿ ಕಾಣಿಸುತ್ತಿದ್ದರು. ಕಪ್ಪು ಬಣ್ಣದ ಶೆರ್ವಾನಿಯಲ್ಲಿ ಯಶ್ ಮಿಂಚಿದ್ದಾರೆ. ಮದುವೆಯಲ್ಲಿ ಹಾರ್ದಿಕ್-ಯಶ್ ಮಸ್ತ್ ಆಗಿ ಡಾನ್ಸ್ ಮಾಡಿದ್ರು.


ಬಿಗ್ಬ್ರೇಕ್ ಕೊಟ್ಟ ಸಿನಿಮಾಗಳು


2011ರಲ್ಲಿ ತೆರೆಗೆ ಬಂದ 'ಕಿರಾತಕ' ಚಿತ್ರ ರಾಕಿಂಗ್ ಸ್ಟಾರ್ ಯಶ್ ಗೆ ಬಿಗ್ ಬ್ರೇಕ್ ನೀಡಿತು. ಈ ಚಿತ್ರದಲ್ಲಿನ ಹಳ್ಳಿ ಹೈದನ ಪಾತ್ರ ಪ್ರೇಕ್ಷಕರಿಗೆ ತುಂಬಾ ಇಷ್ಟವಾಯಿತು. ನಂತರ ತೆರೆಗೆ ಬಂದ 'ಲಕ್ಕಿ', 'ಡ್ರಾಮಾ' ,'ಗೂಗ್ಲಿ', 'ರಾಜಾಹುಲಿ', 'ಗಜಕೇಸರಿ' ಚಿತ್ರಗಳು ಭರ್ಜರಿ ಪ್ರದರ್ಶನ ಕಂಡು ಯಶ್ ರನ್ನು ಕನ್ನಡ ಚಿತ್ರರಂಗದ ಪ್ರಮುಖ ನಟರ ಸಾಲಿನಲ್ಲಿ ನಿಲ್ಲಿಸಿದವು. 2014ರಲ್ಲಿ ತೆರೆಗೆ ಬಂದ 'Mr & Mrs ರಾಮಾಚಾರಿ' ಬಾಕ್ಸಾಫೀಸ್ ನಲ್ಲಿ ಐವತ್ತು ಕೋಟಿಗೂ ಹೆಚ್ಚು ಗಳಿಕೆ ಕಂಡು ದಾಖಲೆ ನಿರ್ಮಿಸಿತು.


ಚಿತ್ರರಂಗದಲ್ಲಿ ಇತಿಹಾಸ ನಿರ್ಮಿಸಿದ ಕೆಜಿಎಫ್!


2018 ಡಿಸೆಂಬರ್‌ ನಲ್ಲಿ ತೆರೆಕಂಡ ಯಶ್​ ಚಿತ್ರ, ಕೆಜಿಎಫ್​ ಸಿನಿಮಾ ಬಾಲಿವುಡ್, ಟಾಲಿವುಡ್​ನಲ್ಲೂ ಕಮಾಲ್​ ಮಾಡಿತು. ಬಾಲಿವುಡ್​ ಮಂದಿ ಕೂಡ ಕನ್ನಡದ ರಾಕಿ ಭಾಯ್​ಗೆ ಜೈ ಎಂದ್ರು. ರಿಲೀಸ್ ಆದ 5 ದಿನದಲ್ಲಿ ಕೆಜಿಎಫ್​ 100 ಕೋಟಿ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿತು. ಸ್ಯಾಂಡಲ್​ವುಡ್​ ಮಾತ್ರವಲ್ಲ ಬಾಲಿವುಡ್​ ಬಾಕ್ಸ್​ ಆಫೀಸ್ ಕೊಳ್ಳೆ ಹೊಡೆಯಿತು.
ಪ್ಯಾನ್ಇಂಡಿಯಾ ಸ್ಟಾರ್ ಯಶ್


ಏಪ್ರಿಲ್ 14ರಂದು 2022ರಲ್ಲಿ ತೆರೆಕಂಡ ಕೆಜಿಎಫ್​ 2 ಸಿನಿಮಾ ಕೂಡ ಭರ್ಜರಿ ಕಲೆಕ್ಷನ್ ಮಾಡಿದ್ದು, ಅನೇಕ ಸಿನಿಮಾಗಳ ದಾಖಲೆಯನ್ನು ಉಡೀಸ್​ ಮಾಡಿದೆ. 1400 ಕೋಟಿ ಕಲೆಕ್ಷನ್ ಮಾಡಿ ಕೆಜಿಎಫ್ ಸಿನಿಮಾ ಇತಿಹಾಸ ನಿರ್ಮಿಸಿದೆ. ಕೆಜಿಎಫ್ ಸಿನಿಮಾ ಮೂಲಕ ಯಶ್​ ಪ್ಯಾನ್​ ಇಂಡಿಯಾ ಸ್ಟಾರ್ ಆದ್ರು. ಇದೀಗ ಯಶ್ ಮುಂದಿನ ಚಿತ್ರಕ್ಕಾಗಿ ಇಡೀ ದೇಶವೇ ಕಾಯುತ್ತಿದೆ.

top videos
    First published: